*ಮಾಡು ಧರಣಿಯಾ ಬೇಡು ವರಗಳ.....*
*ಮಾಡು ಧರಣಿಯಾ ಬೇಡು ವರಗಳ.....*
ವರಗಳನ್ನು ಬೇಡುವವರು ನಾವು. ಬೇಡುವ ಹಕ್ಕು ಬರುವದು, ವರ ಪಡೆಯಲು ಬೇಕಾದ ಶ್ರೀಹರಿ ತೃಪ್ತಿಯನ್ನು ಮಾಡಿಸಿದಾಗ, ವರ ಕೊಡುವ ಶ್ರೀಹರಿಯ ಮಾತು ಕೇಳಿದಾಗ. ದೇವರ ಈ ಸರ್ಕಾರದಲ್ಲಿ, ಮಾತು ಕೇಳದೆ, ದೇವರನ್ನು ತುಷ್ಟಿಗೊಳಿಸದೇ, ದೇವರ ವಿರುದ್ಧವಾಗಿಯೇ ನಡೆದರೆ ಏನೂ ಪಡೆಯಲು ಸಾಧ್ಯವಿಲ್ಲ.
*ಅನಂತ ಅಪರಾಧ ಎನ್ನಲ್ಲಿ ಇರಲಾಗಿ ಬಿನ್ನಹಕೆ ಬಾಯಿಲ್ಲವಯ್ಯ*
ಶ್ರೀಹರಿ ಹೇಳಿದ್ದು ಕೇಳದೆ, ವಿಧಿಸ್ಸದ್ದೆಲ್ಲವನ್ನೂ ಗಾಳಿಗೆ ತೂರಿ, ಮನಸ್ಸಿಗೆ ಬಂದ ಹಾಗೆ ವರ್ತಿಸುತ್ತಿರುವ ಕಾರಣ, ಅನಂತ ಅಪರಾಧ ಎದುರಿಸಿದಾಗ ಫಲಕೊಡುವ ದೇವರಿಗೆ ನಮ್ಮ ಮುಖ ತೋರಿಸುವ / ದೇವರೆದುರಿಗೆ ಬಿನ್ನೈಸುವ ಯೋಗ್ಯತೆಯನ್ನೇ ಕಳೆದುಕೊಂಡಿದ್ದೇವೆ.
*ಮಾಡು ಧರಣಿ, ಬೇಡು ವರ*
ಅಪೇಕ್ಷಿತವಾದದನ್ನು ಪಡೆಯಲು *ಧರಣಿ* ಮಾಡುವದು ಅಂದಿನಿಂದ ಕಂಡು ಬಂದ ವಿಧಾನ. ಧರಣಿ strike ಮಾಡಿ ಪಡೆಯುವದು ಸೂಕ್ತ ವಿಧಾನ. ಆದರೆ ಧರಣಾ ಕೂಡುವದು ಏನಿದೆ "ಒಂದು ಅನ್ಯಾಯ ನಡೆದಾಗ, ಇನ್ನೊಂದು ನಾನು ಸರಿ ಮಾರ್ಗದಲ್ಲಿ ಇದ್ದೇನೆ, ನನಗೆ ಮೋಸ ವಾಗ್ತಿದೆ" ಎಂಬ ಸ್ಥಿತಿ ಬಂದಾಗ. ಇಲ್ಲದಿದ್ದರೆ ನಮ್ಮ ಧರಣಿಗೆ ಬಿಡಿಕಾಸಿನ ಕಿಮ್ಮತ್ತೂ ಸಿಗುವದಿಲ್ಲ. ದೇವರ ಈ ಸರ್ಕಾರದಲ್ಲಿ ಅನ್ಯಾಯವೆಂಬುವದು ಇಲ್ಲ. "ನಾನು ಮಾಡಿದ್ದೇನೆ ಆದರೆ ಪಡೆದಿಲ್ಲ" ಎಂಬ ಮೋಸವೂ ಸರ್ವಥಾ ಇಲ್ಲ. "ನಾ ಏನು ಮಾಡಿದ್ದೇನೆ ಅದನ್ನೇ ಪಡೆಯುತ್ತಿದ್ದೇನೆ..." ಆದರೆ ದೇವರು ಹೇಳಿದ್ದು ಕೇಳಿ, ಅಪೇಕ್ಷಿತ ಯೋಗ್ಯ ಹಿತ ಪಡೆಯದಿದ್ದಾಗ ಅವಶ್ಯವಾಗಿ ದೇವರ ಎದುರಿಗೆ ಧರಣಿ ಕೂಡುವ ಹಕ್ಕು ನಮಗಿದ್ದೇ ಇದೆ...
*ಧರಣಿ strike ಪುರಾಣಕಾದಲ್ಲಿ ಇತ್ತೆ.....?*
ದೆವರ ಮಾತು ಕೇಳಿ, ಪಡೆಯದಿದ್ದಾಗ ಧರಣಾ ಕುಳಿತು strike ಮಾಡಿ ಒಡೆದ ಉದಾಹರಣೆಗಳು ಅನೇಕ ಸಿಗುತ್ತವೆ. ಪ್ರಸಿದ್ಧವಾದ ಒಂದು ಕಥೆ ಉದಾಹರಿಸುತ್ತೇನೆ...
ಒಂದು ತಿಂಗಳಿನಲ್ಲಿ ಸೀತೆಯನ್ನು ಹುಡುಕಿ, ಇಲ್ಲವಾದಲ್ಕಜ ಕಠಿಣ ಶಿಕ್ಷೆ ಇದೆ ಎಂದು ಶ್ರೀರಾಮನ ಸೇವೆಯ ವಿಷಯದಲ್ಲಿ ಸುಗ್ರೀವನ ಸುಗ್ರೀವಾಜ್ಙೆ. ಆಜ್ಙೆ ಹೊತ್ತ ಕಪಿಗಳು ಕಾಡು ಮಢೆಡು ಊರು ವನ ನಾಡು ಎಲ್ಲೆಡೆ ಹುಡುಕಲು ಆರಂಭಿಸಿದರು.
ದಕ್ಷಿಣದ ಕಡೆ ಬಂದ ಕಪಿಗಳಿಗೆ ತಿಂಗಳು ಕಳಿತು, ಸೀತೆ ಸಿಗಲಿಲ್ಲ, ಸುಗ್ರೀವ ತಲೆ ತಗಿತಾನೆ ಎಂಬ ಭಯ, ಹೀಗೆ ವಿಚಾರಿಸುತ್ತಿರುವಾಗಲೇ ಒಂದದ್ಭುತ ಗುಹೆ ದೊರೆಯತ್ತೆ, ಇಲ್ಕಿಯೇ ವಾಸಮಾಡೋಣ ಎಂದು ಅಂಗದ ಜಾಂಬವಂತ ಮೊದಲಾದವರ ನಿರ್ಧಾರ. ಈ ನಿರ್ಧಾರ ಕೇಳಿದ ಹನುಮಂತ "ಶ್ರೀರಾಮನ ಸೇವೆಯಲ್ಲಿ ಕಿಂಚಿತ್ತೂ ಕಡಿಮೆಯಾದರೆ ನಿಮ್ಮ ತಲೆ ನಾ ತಗಿಯುವೆ" ಎಂಬುವದಾಗಿ ಹನುಮಂತನ ದೃಢ ನಿರ್ಧಾರ.
*ಧರಣಿ ಮಾಡು, ವರ ಪಡೆ*
ಸೀತೆಯನ್ನಜ ಹುಡುಕದೆ ಅಲ್ಕಿ ಹೋದರೆ ಸುಗ್ರೀವ ಕೊಲ್ತಾನೆ, ಇಲ್ಲಿಯೇ ಇರುವದಾದರೆ ಹನುಮಂತ ಕೊಲ್ತಾನೆ "ಅತ್ತ ದರಿ ಇತ್ತ ಪುಲಿ" ಈ ಅವಸ್ಥೆ ಕಪಿಗಳದ್ದು. ಆಜ್ಙಾ ಪಾಲನೆ ಮಾಡಿದ್ದೇವೆ, ಫಲ ಸಿಕ್ಕಿಲ್ಲ, ಈಗಿರುವ ಉಪಾಯ ದೇವರಿಗೇ ಮೊರೆ ಹೋಗುವದು. ಹಾಗಾದರೆ ಏನು ಮಾಡುವದು... ??
*ಧರಣಿ ಕೂಡುವದು strike ಮಾಡುವದು*
ಹನುಮಂತನಿಂದ ಆರಂಭಿಸಿ ಎಲ್ಲ ಕಪಿಗಳು ಉಪವಾಸ ಸತ್ಯಾಗ್ರಹಕ್ಕೆ ಧರಣಿ ಮಾಡಲು ಕುಳಿತು ಬಿಡುತ್ತಾರೆ. ಧರಣಿ ಕೂತಾಗ ಶ್ರೀರಾಮಬಿಗೆ ಧಿಕ್ಕಾರ ಕೂಗುವದು ಅಲ್ಲ. ಶ್ರೀರಾಮನಾಮ ಮಹಿಮೆ ಕೊಂಡಾಡಲು ಆರಂಭಿಸಿದರು. ಶ್ರೀರಾಮನಾಮ ಮಹಿಯ ಪ್ರಭಾವದಿಂದ ಸೀತೆಯ ಹುಡುಕುದಕ್ಕೆ ಇರುವ ಎಲ್ಲ ಅಡ್ಡಿ ಅತಂಕಗಳು ದೂರಾದವು. ಸಂಪಾತಿಯ ಕಿವಿಗೆ ಶ್ರೀರಾಮನಾಮ ಕಥೆ ಬಿದ್ದಿತು, ಸುಟ್ಟ ರೆಕ್ಕೆ ಪುನಹ ಬಂದವು, ಸೀತೆ ಎಲ್ಲಿದ್ದಾಳ ಎನ್ನುವದು ಮೇಲೇ ಹಾರಿ ತಿಳಿದ, ಒಂದೇ ಒಂದೇ ದಿನದಲ್ಲಿಯೇ ಹನುಮ ಲಂಕೆಗೆ ಹಾರಿ ಸೀತೆಯನ್ನು ಕಂಡು, ಉಂಗುರ ಕೊಟ್ಟು, ಚೂಡಾಮಣಿ ಶ್ರೀರಾಮನ ಕಾಲಿಗೆ ಅರ್ಪಿಸಿದ.
*ಇಂದು ನಾವೇಕೆ ಧರಣಿ ಕೂಡಬಾರದು....*
ದೇವರ ಸ್ಪಷ್ಟ ಆದೇಶರೂಪವಾದ, ಆಜ್ಙೆರೂಪವಾದ *ಸಂಧ್ಯಾವಂದನೆ/ ಗಾಯತ್ರೀಜಪ/ ದೇವರ ಪೂಜೆ/ ರಾಮಕೃಷ್ಣ ಮಂತ್ರ/ ಅಚ್ಯುತಾನಂತಗೋವಿಂದ ಜೊ/ ಏಕಾದಶೀ ಉಪವಾಸ* ಮೊದಲಾದ ಈ ಎಲ್ಲ ಸಾಧನೆಗಳನ್ನು ಮಾಡುತ್ತಿರುವ ನಾವೆಲ್ಲರೂ ಪಡೆದದ್ದು ಕಡಿಮೆ, ಪಡೆಯಲು ಈ ಇಂದಿನ ಏಕಾದಶಿಯ ಈ ಕಟ್ಟುನಿಟ್ಟಾದ ಉಪವಾಸವನ್ನು ದೇವರೆದುರಿಗೆ ಕೂಡುವ *ಸತ್ಯಾಗ್ರಹ / ಧರಣಿ* ಎಂದು ಭಾವಿಸಿ ಭಾರತ ರಾಮಾಯಣ ಭಾಗವತ ಇವುಗಳನ್ನು ಆಲಿಸಿ ಎಲ್ಲವನ್ನೂ ಪಡೆಯಬಹುದಲ್ಲವೆ...
*ಏಕಾದಶಿಯ ಉಪವಾಸವನ್ನು ಮಾಡುವ ಎಲ್ಲರಿಗೂ ಅಭಿನಂದನೆಗಳು, ಧರಣಾ ರೂಪವಾಗಿ ಮಾಡೋಣ, ವರಪೇಯೋಣ..*
*✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments
ರ ಗಳು ವಿಷಯ ಬಹಳ ಚನ್ನಾಗಿದೇ
Is that this a paid topic or did you modify it yourself?
Either way keep up the nice high quality writing, it is rare
to look a nice weblog like this one today.