*ಹುಚ್ಚುತನ ಗುಣಪಡಿಸಲು ಮಹಾ ಹುಚ್ಚನೇ ಆಗಬೇಕು...*
*ಹುಚ್ಚುತನ ಗುಣಪಡಿಸಲು ಮಹಾ ಹುಚ್ಚನೇ ಆಗಬೇಕು...*
ಹುಚ್ಚು ಅನೇಕವಿಧ. ಹುಚ್ಚು ಬಿಡಿಸುವ ಪ್ರಯತ್ನ ಮಾಡುವವರೂ ಅನೇಕ. ಯಶಸ್ವಿಯಾಗುವವರು ಕೆಲವರೇ. ಆ ಯಶಸ್ವೀ ಪುರುಷ ಹುಚ್ಚನಿಗಿಂತಲೂ ಮಹಾ ಹುಚ್ಚನೇ ಆಗಿರುವ.
ಒಂದು ಪಟ್ಟಣ. ಪಟ್ಟಣದಲ್ಲಿ ಸಾಮಂತರಾಜ. ಆ ರಾಜನ ಮಗನಿಗೆ ಒಂದು ವಿಚಿತ್ರ ಹುಚ್ಚು. ನಾಯಿಯ ಥರಹ ಬೌ ಬೌ ಎಂದು ಒದರುವ, ಬೆತ್ತಲೆ ಓಡಾಡುವ. ನಾಯಿ ತರಹ ಕಂಡದ್ದು ನೆಕ್ಕಿ ತಿನ್ನುವ. ಈ ತರಹ ನಾಯಿ ಹುಚ್ಚು ಬಡಿದುಕೊಂಕಡಿತ್ತು. ಯುವರಾಜನಿಗಿರುವ ಈ ಹುಚ್ಚು ಬಿಡಿಸಲು ಶತಪ್ರಯತ್ನ ಮಾಡಿದ. ನೂರಾರು ಪ್ರಸಿದ್ಧ ವೈದ್ಯರೂ ಬಂದರು. ಮಂತ್ರ- ತಂತ್ರಗಳಿಗೂ ಹುಚ್ಚು ಬಗಿಹಿರಿಯಲಿಲ್ಲ. ಕೊನೆಗೆ ಹತಾಶನಾಗಿ ಆಸೆಯೇ ಬಿಟ್ಟ.
ಒಂದು ದಿನ *ನ್ಯಾಸ* ರಾಜನ ಬಳಿ ಬಂದು ಹೇಳಿದ. "ನಿನ್ನ ಮಗನಿಗಿರುವ ಹುಚ್ಚು ನಾನು ಬಿಡಿಸುವೆ" ಎಂದು. ರಾಜನಿಗೋ ಈ ನ್ಯಾಸನನ್ನು ನೋಡಿದಾಗಲೇ ಒಂದು ತರಹ ಕಸಿವಿಸಿ. ಇವನೋ ನೋಡಲೇ ಹುಚ್ಚು ವೇಷ. ಹುಚ್ಚರ ತರಹ ಮಾತು. "ನೀನೇ ಮಹಾ ಹುಚ್ಚ ಇದ್ದಿಯಾ, ಅವನ ಹುಚ್ಚೇನು ಬಿಡಿಸುತ್ತೀ" ಎಂದು ರೇಗಿಯೇ ಬಿಟ್ಟ ರಾಜ. *ಹುಚ್ಚರ ಹುಚ್ಚುತನ ಬಿಡಿಸಲು ಮಹಾ ಹುಚ್ಚರೇ ಬೇಕು* ನನಗೊಂದು ಆಸ್ಪದ ಕೊಡು ಪ್ರಯತ್ನ ಮಾಡುವೆನೆಂದು.
ಈ ಮಹಾ ಹುಚ್ಚ, ಆ ಹುಚ್ಚನ ಬಳಿ ನಾಯಿಯ ಹಾಗೆ ಬೌ ಬೌ ಎಂದು ಒದರುತ್ತಾ ಓಡಿ ಪಕ್ಕ ಹೋಗಿ ಕುಳಿತ. ಯುವರಾಜ ಕೇಳಿದ ನೀ ಹೇಗೇಕೆ ಒದರೋದು... ?? ಎಂದು. *ಈಗಿನ ಹುಚ್ಚ ಇಂದು ನೀನಾಗಿ, ನಾನೋ ನಿನಗಿಂತಲೂ ಹಳೆಯ ಹುಚ್ಚ, ಮಹಾ ಮಹಾ ಹುಚ್ಚ* ಎಂದು. ಯುವರಾಜನಿಗೂ ಖುಶಿ...
ಕೆಲ ದಿನಗಳ ನಂತರ ಮಹಾಹುಚ್ಚ ಬಟ್ಟೆ ಹಾಕಿಕೊಂಡು ಬಂದ.. ನೋಡಿದ ಯುವ ರಾಜ "ನೀ ಏನು ಮನುಷ್ಯರ ಹಾಗೆ ಬಟ್ಟೆ ಹಾಕಿರೋದು... ?? "ಬಟ್ಟೆ ಹಾಕಿದ ಮಾತ್ರಕ್ಕೆ ನಾಯಿತನ ಏನು ಬದಲಾಗುವದಿಲ್ಲ" ನಾನು ನಾಯಿನೇ.. ನೀ ಬಟ್ಟೆ ಬೇಕಿದ್ದರೆ ಹಾಕಿಕೋ, ನೀನೂ ನಾಯಿಯಾಗಿಯೇ ಇರುವಿ" ಎಂದು. ಈ ಯುಕ್ತಿ ಚೆನ್ನಾಗನಿಸಿತು, ಬಟ್ಟೆ ಧರಿಸಿದ ಯುವರಾಜ.
ಕೆಲದಿನ ಕಳೆದ ನಂತರ ಬಾಳೆಯಲಿಯಲ್ಲಿ ಅಡಿಗೆ ಬಡಿಸಿ ಊಟಕ್ಕೆ ಸಿದ್ಧನಾದ ಮಹಾಹುಚ್ಚ. ಅದನ್ನು ಕಂಡು ಹೀಗೆ ಮನುಷ್ಯರು / ಬ್ರಾಹ್ಮಣರು ಉಣ್ಣುವವರು, ನಾವು ಹೀಗೆಲ್ಲ ಊಟ ಮಾಡುವದು ಅಲ್ಲ ಅಲ್ಲವೇ....
ಮಹಾಹುಚ್ಚ.... ಮನುಷ್ಯರು ಹಾಗೂ ಬ್ರಾಹ್ಮಣರು ತಮಗೆ ಯೋಗ್ಯವಾದ ವಿಹಿತವಾದ ತಾವು ಅನಿವಾರ್ಯವಾಗಿ ಮಾಡುವ ಆಚಾರ ವಿಚಾರಗಳನ್ನು ಅಳಿದು ತಳಿದು ಕೇವಲ ನಾನು ಮಾನವ ಬ್ರಾಹ್ಮಣ ಎಂದು ಹೇಳಿಸಿಕೊಳ್ಳುತ್ತಿರುವಾಗ, ನಾವೂ ಅವರ ಹಾಗೆಯೇ ಊಟ ಮಾಡಿ ನಾಯಿ ಎಂದು ಅನಿಸಿಕೊಳ್ಳಬಾರದೇತಕೆ... ??? ಹುಚ್ಚನಿಗೆ ಸರಿ ಅನಿಸಿತು. ಹೀಗೆ ಕ್ರಮವಾಗಿ ಮಾನವರ ನಡವಳಿಕೆಯನ್ನು ಆ ಹುಚ್ಚ ಯುವರಾಜ ತನ್ನಲ್ಲಿ ರೂಢಿಸಿಕೊಳ್ಳುತ್ತಾ, ನಾಯಿತನವನ್ನು ದೂರ ಮಾಡಿಕೊಳ್ಳಿತ್ತಾ, ಮಾನವನಾಗುತ್ತಾ ಸಾಗಿದ... ಇದು ಮಹಾ ಹುಚ್ಚರು ಹುಚ್ಚತನವನ್ನು ಬಿಡಿಸಿದ ಪರಿ.
ಅನುಭವ... ಗುರು ಗುರುವಾಗಿ ಪಾಠ ಮಾಡಿದಾಗ, ತಾನು *ಅಬ್ಬಬ್ಬಾ ಹೀಗಿದ್ದಾರಾ ನಮ್ಮ ಗುರು..* ಎಂದಿಷ್ಟೇ ಅನಿಸಿಕೊಳ್ಳ ಬಹುದು. ಶೀಷ್ಯ ಮಾತ್ರ ಧಡ್ಡನಾಗಿಯೇ ಉಳಿಯುವ. ಆದರೆ ಆ ಧಡ್ಡ ಶಿಷ್ಯನಿಗಿಂತಲೂ ಕೆಳಗಿಳಿದು, ತಾನೂ ಧಡ್ಡನಂತೆ ವರ್ತಿಸಿ, ಆ ಧಡ್ಡ ಶಿಷ್ಯನನ್ನೂ ತನ್ನಂತೆಯೇ ಮಾಡಿದ ಎಂದಾದರೆ ಆ ಗುರು ನೈಜ ಗುರು ಎಂದೆನಿಸಿಕೊಳ್ಳುತ್ತಾರೆ. ಈ ತರಹದ ಅನುಭವ ಅನೇಕ ಶಿಷ್ಯರಿಗೆ ಇದ್ದೇ ಇದೆ.
ಹಿರಿಯರು, ಗುರುಗಳು, ಯಜಮಾನರು, ಅಧಿಕಾರಿಗಳು ತಮಗಿಂತಲೂ ಕಿರಿಯರ, ಶಿಷ್ಯರ, ನೌಕರರಗಿಂತಲೂ ಕೆಳಗಿಳಿದು *(ತಾವು ಪುಸ್ತಕ ಹಿಡಿದು ಸ್ಪಷ್ಟವಾಗಿ ಸಂಧ್ಯಾವಂದನೆ / ಪೂಜೆ ಆರಂಭಿಸಿದರೆ, ಕಿರಿಯರೂ ಸ್ಪಷ್ಟವಾಗಿ ಕಲೆತು ಆರಂಭಿಸುತ್ತಾರೆ/ ನಮಗೂ ಸ್ಪಷ್ಟವಾಗುತ್ತದೆ, ಅವರೂ ಧರ್ಮಮಾರ್ಗದಲ್ಲಿ ಮೇಲೆ ಹೋಗುತ್ತಾರೆ.)* ಅವರನ್ನು ಮೇಲೆ ಪುಶ್ ಮಾಡಿದಾಗ ತನ್ನವರನ್ನೂ ಮೇಲೆ ತಂದ ವೈಭವದೊಂದಿಗೆ ತಾನೂ ಮೇಲೇರಿರುತ್ತಾನೆ....
*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments