*ದೈವ ಕೃಪೆಯ ಕಾವಲು.....*

*ದೈವ ಕೃಪೆಯ ಕಾವಲು.....*

ದೈವವನ್ನು ನಂಬದ ಜನರಿಗೆ ಕಾವಲುಗಾರರನೇಕರ ಅವಶ್ಯಕತೆ ಇಂದು ಇದೆ. ಯಾರು ಪೂರ್ಣ ಮಟ್ಟದ ದೈವವನ್ನು ನಂಬಿ, ಆ ದೇವನನ್ನೇ ಕಾವಲುಗಾರನನ್ನಾಗಿ ಪಡೆದಿದ್ದಾನೆ ಅವನಿಗೆ ಮತ್ಯಾವ ಕಾವಲುಗಾರರ ಅವಶ್ಯಕತೆ ಬೀಳುವದೇ ಇಲ್ಲ. 

ಇಂದು ಕಾವಲುಗಾರ ಮನೆ ಕಾಯ್ತಿರುತ್ತಾನೆ. ಹೊರಗಿನಿಂದ ಒಳಗೆ ಯಾರೂ  ಬರದ ಹಾಗೆ ಅಥವಾ ಒಳಗಿನ ಪದಾರ್ಥ ಬೆರೊಬ್ಬ ಹೊರಗೆ ಒಯ್ಯದ ಹಾಗೆ ನೋಡಿಕೊಳ್ಳಬಹುದು. ಆದರೆ ಒಳಗೇ, ಒಳಗಿರುವವರಿಂದಲೆ ಅವಗಢಗಳು ನಡೆದಾಗ ಅವನು ಅಸಹಾಯಕ ಅಷ್ಟೇ ಅಲ್ಲ ಅನುಪಯುಕ್ತನೂ ಹೌದು. ಅಂತೆಯೇ ಟೀಜೋರಿ ಲಾಕ್ ಮಾಡುವ ಪ್ರಸಂಗ. 

ದೈವೀಕೃಪೆಯ ಅಮೋಘ ಕಾವಲನ್ನು ಪಡೆದ ವ್ಯಕ್ತಿಗೆ ಹೊರ ದಾಳಿಗಳೂ ಇರುವದಿಲ್ಲ, ಒಳಗೂ ದಾಳಿಗಳಾಗುವದಿಲ್ಲ, ಮನಸ್ಸನಲ್ಲಿಯೂ ಯಾವುದೇ ತರಹದ ಧಾಳಿಗಳೂ ಆಗುವದಿಲ್ಲ ಹಾಗೆ ದೈವೀಬಲ ನಮ್ಮನ್ನು ಸಂರಕ್ಷಿಸುತ್ತದೆ. 

*ದೈವೀ ಕೃಪೆಯ ಪರಾಕಾಷ್ಠೆ ದ್ರೌಪದಿಯಲ್ಲಿ ಕಾಣುತ್ತೇವೆ...*

ದ್ರೌಪದೀದೇವಿಯು ಗುರು ಹಿರಿಯರು ಕುಳಿತ, ಪತಿಯರು ಇರುವ ಅತ್ಯತ್ತಮ ಸಭೆಯಲ್ಲಿ ಮಾನಭಂಗವಾಗುವ ಪ್ರಸಂಗ ಎದುರಾದರೆ, ಬಲಾಢ್ಯ ಪತಿಗಳೂ ಕೈಚೆಲ್ಲಿ ಕುಳಿತ ದುರ್ಭರ ಪ್ರಸಂಗ ಎದುರಾದಾಗ ಆ ದ್ರೌಪದಿಯನ್ನು ರಕ್ಷಿಸಿರುವದು ಯಾವದು... ?? *ದೈವೀ ಕೃಪೆಯೆಂಬ ಕಾವಲುಗಾರನೇ* ರಕ್ಷಿಸಿರುವದು ಪ್ರಸಿದ್ಧವಲ್ಲವೆ....

*ಜ್ಙಾನಿಗಳ ಒಂದು ಅನುಭವ....*

ಈ ಜಗದ ಕಿತ್ತಾಟ ನೋಡಿ ಬೇಸತ್ತ ಜ್ಙಾನಿ ವನಕ್ಕೆ ತೆರಳಿದ. ನಿತ್ಯ ಮನಿಗಳಿಗೆ ಹೋಗಿ ಭಿಕ್ಷೆ ಬೇಡುವದು, ವನದಲ್ಲಿ ಘೋರ ತಪಸದಸು ಮಾಡುವದು ಆರಂಭಿಸಿದ. ವನದ ಪಕ್ಕದ ಸಮೃದ್ಧವಲ್ಲದ ಹಳ್ಳಿಗಳ ಜನರಿಗೆ ಈ ಬ್ರಾಹ್ಮಣನಿಗೆ ಒಂದೊತ್ತು ಊಟ ಕೊಡುವದು ಆಗಿಬ ಕಾಲದಲ್ಲಿ ಕಷ್ಟ ವೆನಿಸಿತು. ಇದನ್ನರಿತ ಆ ಬ್ರಾಹ್ಮಣ ಭಿಕ್ಷೆ ಬರುವದು ನಿಲ್ಕಿಸಿ ನೀರು ಕುಡಿದು ತಪಸ್ಸು ಆಚರಿಸಲು ಆರಂಭಿಸಿದ. ಎರಡು ಮೂರು ದಿನಕ್ಕೆ ಊಟ ಸಿಗಲಿಲ್ಲ ಹತಾಶನಾಗಿ ಹೋದ. ತಪಸ್ಸು ಬಿಡಲಿಲ್ಲ. 

ತಪಸ್ಸಿಗೆ ಕುಳಿತಾಗ ಒಂದು ಘೋರ ಕರಡಿ ಬಂತು. ತುಂಬ ಹಸಿದಿದೆ, ಈ ಬ್ರಾಹ್ಮಣನನ್ನು ನೋಡಿ ಗುರ್ ಗುರ್ ಗುರ್ ಅಂತಿದೆ. ಅನ್ನದ ಮಹತ್ವ ಅರಿತ ಇವನಿಗೋ ಖುಶಿ. *ನನಗೆ ಅನ್ನ ಸಿಕ್ಕಿಲ್ಲ ಬೇಡ, ನಾನು ಒಂದು ಪ್ರಾಣಿಗೆ ಅನ್ನವಾದೆನಲ್ಲ ಅಷ್ಟು ಸಾಕು* ಎಂದು.

ಈ ಕರಡಿಯನ್ನು ನಾನು ಪ್ರತಿರೋಧಿಸಲ್ಲ. ಸುಮ್ಮನೆ ಶಾಂತವಾಗಿ ಧ್ಯಾನಕ್ಕೆ ಕೂಡುವೆ. ಅದು ನನ್ನನ್ನು ಪ್ರೀತಿಯಿಂದು ತಿಂದು ಹೋಗಲಿ ಎಂದು ಈ ಬರತ್ತೆ ತಿನ್ನ ಬಹುದು ಎಂದು ಪ್ರತೀಕ್ಷಾ ಮಾಡುತ್ತಾ ಕುಳಿತ. ಆ ಕರಡಿ ಎರಡು ಹೆಜ್ಜೆ ಮುಂದಿಟ್ಟು, ನಾಲಕು ಹೆಜ್ಜೆ ಹಿಂದಿಡುತ್ತಾ ಕೆಳ ಮಾರಿ ಹಾಕಿ ಹೊರಟು ಹೋಯಿತು.... 

*ಈ ತಪಸ್ವೀ ಬ್ರಾಹ್ಮಣನನ್ನು ಆ ಕ್ರೂರ ಕರಡಿಯಿಂದ ಯಾರು ಸಂರಕ್ಷಿಸಿದರು.... ??*

ಈಗಿನ ಬುದ್ಧಿ ಇಲ್ಲದ, ಆಸ್ತಿಕತೆ ಇಲ್ಲದ ನಾಗರಿಕರಂತೆ ವರ್ತಿಸುವ ಅನಾಗರಿಕ ಜನರು ಹೇಳುವದುಂಟು *ಇದು ಆಕಸ್ಮಿಕ.. ಕಾಕತಾಳೀಯ... ಕೆಲ ಒಮ್ಮೆ ಹೀಗೆ ಆಗುತ್ತದೆ.. ಅದೇನ್ ಮಹಾ* ಈ ರೀತಿಯಾಗಿ ಹೇಳುವದುಂಟು. ಆದರೆ ಇಲ್ಲಿ "ಅನುಭವಿಗಳು, ಆನುಭಾವಿಗಳು ಅಗೋಚರ ಶಕ್ತಿಯ ಕೈವಾಡವಿದೆ ಎಂದು ನಂಬುವದಷ್ಟೇ ಅಲ್ಲ, ಸ್ವಯಂ ಅನುಭವಿಸುತ್ತಾರೆ" ಇದು ಸತ್ಯವಷ್ಟೇ ಅಲ್ಲ ಸತ್ಯಸ್ಯ ಸತ್ಯ ಎಂದರೆ ತಪ್ಪಾಗದು. 

ಇಂದು ನಾವೂ ನಮ್ಮ ಒಳಗೆ ಹೊರಗೆ ನಮ್ಮಲ್ಲಿ ನೂರಾರು ತರಹದ ನಮ್ಮನ್ನು ದೀಚುವವರು ಇರುವಾಗ ಒಬ್ಬ ಹೊರ ಕಾವಲುಗಾರನಿಂದ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳಲು ಸಾಧ್ಯವಿಲ್ಲದ ಮಾತು. ಅದಕ್ಕಾಗಿ ನಾವೆಲ್ಕರೂ ನಿತ್ಯ *ಸಂಧ್ಯಾವಂದನೆ/ ಗಾಯತ್ರೀ ಜಪ/ ದೇವರ ಪೂಜೆ* ಸ್ತ್ರೀಯರೆಲ್ಲರೂ *ರಾಮಕೃಷ್ಣ / ಅಚ್ಯತಾನಂತಗೋವಿಂದ*  ಜಪ ತಪ್ಪದೆ ಮಾಡೋಣ. ದೈವೀಕೃಪೆ ಎಂಬ ಕಾವಲುಗಾನನ್ನು ಪಡೆಯೋಣ.....

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*