*ಭೂಮಿ ಹಾಗೂ ಜಲ.. ನಮ್ಮವರು*
*ಭೂಮಿ ಹಾಗೂ ಜಲ.. ನಮ್ಮವರು*
ಭೂಮಿ ಹಾಗೂ ಜಲ (ನೀರು) ಇವುಗಳ ಅನ್ಯೋನ್ಯತೆ, ಇವುಗಳಲ್ಲಿಯ ಹೊಂದಾಣಿಕೆ ಉತ್ತಮವಾಗಿರುವಂತಹದ್ದು. ಅಂತೆಯೆ ಭೂ ಜಲ ಗಳು ಸೃಷ್ಟಿಯಾದಾಗಿನಿಂದ ಕೂಡಿ ಇದ್ದರೂ ಒಂದರೆಕ್ಷಣ ವೈ ಮನಸ್ಯವಿಲ್ಲ. ಪರಸ್ಪರ ಉಪಕಾರ ಪ್ರತ್ಯುಪಕಾರಗಳ ಪ್ರತಿಸ್ಪಂದನೆಯಿಂದ ಈ ವಿಶಿಷ್ಟ ತರಹದ ಅನ್ಯೋನ್ಯತೆ ಗಾಢತೆ ನಿಗೂಢವಾಗಿಯೇ ಉಳಿಸಿಕೊಂಡಿವೆ. ಪೃಥ್ವಿಜಲಗಳಂತೆಯೇ ನಾವು ಇರುವದು ತುಂಬ ಉತ್ತಮ ಎಂದೆನಿಸುತ್ತದೆ.
*ಭೂಮಿಗೆ ಜಲ ಹೊಂದಿಕೊಂಡಿದ್ದೇ ಹೆಚ್ಚು...*
ನೀರಿನ ಸ್ವಭಾವ ಹರಿಯುವದು. ಆ ಹರಿಯುವಿಕೆಗೆ ಸ್ಥಳ ಕೊಟ್ಟಿರುವದು ಭೂಮಿ. ಹೀಗಿರುವಾಗ ಭೂಮಿ ಹೇಗೆಲ್ಲ ಸ್ಥಳಕೊಟ್ಟಿದೆ ಹಾಗೆ ಹರಿಯುತ್ತಾ ಸಾಗುತ್ತದೆ. ಅಂಕವಂಕಾಗಿ ಹರಿಯಬಹುದು, ನೇರವಾಗಿಯೂ ಹರಿಯಬಹುದು. ಪೃಥಿವಿ ಎತ್ತರವಾಗಿದ್ದರೆ ತಿರುಗಿ ಉಲ್ಟಾ ಹರಿಯುತ್ತದೆ, ಹದವಾಗಿದ್ದರೆ ಇಂಗಿ ಹೋಗತ್ತೆ.. ಅಂತೂ ಪೃಥ್ವಿ ಹೇಗಿರತ್ತೆ ಹಾಗೆ ಹೊಂದಿಕೊಂಡು ಹೋಗತ್ತೆ ಅಂತೆಯೆ ತನ್ನ ಗಮ್ಯವನ್ನು ತಾನು ಸಹಜವಾಗಿ ಸೇರುತ್ತದೆ. *ತನ್ನ ಗಮ್ಯ ಸೇರುವದೇ ಜಲಕ್ಕೆ ಅತಿಮುಖ್ಯವೇ ಹೊರತು, ಈ ಪೃಥ್ವಿ ಸರಿಯಾಗಿ ಯಾಕೆ ಹಾದಿಕೊಟ್ಟಿಲ್ಲ ಎಂದು ಜಗಳ ಮಾಡ್ತಾ ಕೂಡುವದು ಅಲ್ಲ.* ಹಾಗೆಯೇ...
ನಮಗೆ ನಮ್ಮ ಗಮ್ಯ ಸ್ಥಾನ ತಲುಪುವ ಉದ್ದೇಶ್ಯವಿದ್ದರೆ ನಿನ್ನವರೊಟ್ಟಿಗೆ ನೀನು ಹೊಂದಿಕೊಂಡು ಅವರು ಹೇಗಿರುತ್ತಾರೆಯೋ ಹಾಗೆ ಅವರೆದುರಿಗೆ ತಗ್ಗಿ ಬಗ್ಗಿ, ಮಾರ್ಗಾಂತರಗಳನ್ನು ಹುಡುಕಿ ನಿನ್ನ ಗಮನ ನೀ ಹೊಂದುವದು ಅತ್ಯಂತ ಸೂಕ್ತ.
ಪೃಥ್ವಿಯಂತೆ ಸರಿಯಾಗಿ ನೇರವಾಗಿ ಹರಿಯಲು ಉತ್ತಮ ದಾರಿ ಕೊಡಬಹುದು, ಹೊಟ್ಟೆಯುರಿಯಿಂದ, ಹರಿತವಾದ ಮಾತುಗಳಿಂದ ಅಂಕವಂಕಾಗಿ ಹರಿಯುವಂತೆ ಮಾಡಬಹುದು. ಬ್ಯುಸಿ ಎಂದು ತಾತ್ಸಾರ ಮಾಡಲೂ ಬಹುದು. ಕೋಪ ದ್ವೇಶದಿಂದ ಎದುರಾಗಿ ಎತ್ತರವಾಗಿ ಅಡ್ಡವಾಗಿ ನಿಲ್ಲಲೂ ಬಹುದು. ಅಥವಾ ಪ್ರೀತಿಯಿಂದ ತಮ್ಮಲ್ಲಿ ಇಂಗಿಸಿಕೊಳ್ಳಲೂಬಹುದು. ಆದರೆ ನಾವು ಮಾತ್ರ ಅದ್ಯಾವದಕ್ಕೂ ತಲೆಕೆಡೆಸಿಕೊಳ್ಳದೆ ನಮ್ಮ ಗಮ್ಯದೆಡೆಗೆ ನಮ್ಮ ನಡಿಗೆ ನಿರಂತವಾಗಿರಬೆಕು.
ಒಬ್ಬರಿಂದಲೇ ಒಮ್ಮೆ ನೇರ, ಇನ್ನೊಮ್ಮೆ ಅಂಕವಂಕ, ಮುಗುದೊಮ್ಮೆ ಎದುರಾಗಿ, ಮತ್ತೊಮ್ಮೆ ಹದವಾಗಿ ಹೇಗೂ ಬರಬಹುದು. ಇವುಗಳಲ್ಲಿ ವಿಪರೀತವೂ ಆಗಬಹುದು. ಕ್ರಮ ವ್ಯತ್ಯಾಸವೂ ಆಗಬಹುದು. ಅಥವಾ ಒಬ್ಬೊಬ್ಬರು ಒಂದೊಂದಾಗಿಯೂ ಬರಬಹುದು, ಇವೆಲ್ಲವುಗಳು ಎದುರಾದರೂ ಹರಿಯುವದು ಮಾತ್ರ ನಿಲ್ಲಿಸದೆ ತನ್ನ ಗಮ್ಯ ತಲುಪಲು ಮುಂದೊರೆಯಬೇಕು.
*ನಾವು ನೀರಿನಂತಾಗಿರಬೇಕು..*
ಭೂಮಿಯಲ್ಲಿ ನೀರು ಇಂಗಿದರೆ ಬೆಳೆಬರುವದು. ನೀರಿದ್ದರೆ ಪೃಥ್ವಿ ಫಲವತ್ತಾಗಿರುತ್ತದೆ. ನೀರಿದ್ದರೆ ಪೃಥ್ವಿ ಸ್ವಚ್ಛವಾಗಿಯೂ ಶುದ್ಧವಾಗಿಯೂ ಇರುತ್ತದೆ. ನಿರಿದ್ದರೆ ಪೃಥ್ವಿ ಲವಲವಿಕೆಯಿಂದ ಇರುತ್ತದೆ ಇಷ್ಟೆಲ್ಲ ಪೃಥ್ವಿಗೆ ನೀರಿನಿಂದ ಲಾಭವಿದ್ದರೂ ಜಲವೇ ಪೃಥ್ವಿಗೆ ಹೊಂದಿಕೊಂಡಿರುವಂತೆ, ನಾವೂ ಎಲ್ಲರೊಟ್ಟಿಗೆ "ಸರಾಗಾವಾಗಿ ಹರಿಯಲು ಬಿಟ್ಟರೂ, ಅಂಕವಂಕಾಗಿದ್ದರೂ, ಇಂಗಿಸಿಕೊಂಡರೂ, ಎದುರೇಬಂದರೂ" ಅಡ್ಜಸ್ಟ ಆಗಿ ಹೊಂದಿಕೊಂಡು ಹೇಗಿದ್ದಾರೆಯೋ ಹಾಗೆಯೇ ಇದ್ದು ಹೆಚ್ಚು ತಲೆಕೆಡಿಸಿಕೊಳ್ಳದೇ ಹೊಂದಿಕೊಂಡಿರುವಂತಹ ಮನಸ್ಸು ನಮ್ಮದಾಗಲಿ.
ಜಲ ಪೃಥ್ವಿಗೆ ಎಲ್ಲದಕ್ಕೂ ಹೊಂದಿಕೊಂಡರೂ, ಬರುವ ಬಂದ ಅಡೆತಡೆಗಳಿಗೆ ತಲೆಬಿಸಿ ಮಾಡಿಕೊಳ್ಳದೇ ತನ್ನ ಗಮ್ಯವನ್ನು ಸರಾಗವಾಗಿ ಹೊಂದಿದಂತೆ, ನಾವೂ ನಮ್ಮ ಗಮ್ಯದೆಡಗೂ ಗಮನ ಕೊಡುವಂತಾಗಬೇಕು, ಸರಾಗವಾಗಿ ಗಮ್ಯವನ್ನು ಹೊಂದುವಂತಾಗಿರಬೇಕು.
ನೀರನ್ನೂ ಉಳಿಸೋಣ, ಪೃಥ್ವಿಯನ್ನೂ ಪ್ರೀತಿಸೋಣ. ನಮ್ಮವರಾದ ದೇವ ದೇವತೆಗಳಿಂದ ಆರಂಭಿಸಿ ಎಲ್ಲರನ್ನೂ ಉಳಿಸಿಕೊಳ್ಳೋಣ.
*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.
Comments
piece of writing on building up new weblog. I could
not resist commenting. Very well written! I could not resist commenting.
Perfectly written! http://Cspan.org/