*ಕುತ್ತಿಗೆಯ ವರೆಗೆ ನೀರಿನಲ್ಲಿ ಮುಳುಗಿದ್ದೇವೆ, ಆದರೂ ನೀರುಬೇಕು ಎಂದು ಅರಚುತ್ತಿದ್ದೇವೆ..*
*ಕುತ್ತಿಗೆಯ ವರೆಗೆ ನೀರಿನಲ್ಲಿ ಮುಳುಗಿದ್ದೇವೆ, ಆದರೂ ನೀರುಬೇಕು ಎಂದು ಅರಚುತ್ತಿದ್ದೇವೆ..*
"ಕುತ್ತಿಗೆಯ ವರೆಗೆ ನೀರಿನಲ್ಲಿ ಮುಳುಗಿದ್ದೇವೆ, ಆದರೂ ನೀರುಬೇಕು ಎಂದು ಅರಚುತ್ತಿದ್ದೇವೆ" ನೀರಿನಲ್ಲಿಯೇ ನಾವು ಇದ್ದೇವೆ ಆದರೆ ಮತ್ತೂ ನೀರಡಿಕೆ ನೀರು ಬೇಕು ಎಂದರಚಿದರೆ ನಮ್ಮನ್ನು ನಾಲ್ಕು ಜನ ಏನನಬಹುದು... ?? ಹೀಗಿದೆ ಇಂದಿನ ನಮ್ಮ ಅವಸ್ಥೆ.
ಮಾನವನ ಬದುಕು ಸುಖಕ್ಕಾಗಿ. ಸುಖವಿರುವದು ಎಮ್ಮಲ್ಲಿಯೇ. ಆದರೆ ಹುಡುಕುತ್ತಿರುವದು ಮಾತ್ರ ಜಗತ್ತಿನಲ್ಲೆಲ್ಲ.
ಸುಖ ಕೊಡುವವ ದೇವ. ಸ್ವಯಂ ಸುಖ ಪೂರ್ಣನಾಗಿ ನಮ್ಮಲ್ಲಿಯೇ ಇದ್ದಾನೆ ಆದರೂ ಆ ಸುಖ ಕೊಡುವ, ಸುಖಪೂರ್ಣ ದೇವರನ್ನು ಅವಜ್ಙೆ ಮಾಡಿ, ತಿರಸ್ಕರಿಸಿ, ಮರೆತು ಬಾಹ್ಯ ನೂರಾರು ಪದಾರ್ಥಗಳಿಂದ ಸುಖವನ್ನು ಹಂಬಲಿಸುತ್ತಿದ್ದೇವೆ. ಇಂತಹ ನಮ್ಮನ್ಮು ಮೂರ್ಖ ಅನ್ನದೆ ಏನ್ನೇನು ತಾನೆ ಹೇಳಿಯಾರು...
ಸರ್ವ ಸಮೃದ್ಧಿ ಕೊಡುವ ಗಾಯತ್ರಿ ಇದೆ. ದೇವತೆಗಳು ಇದ್ದಾರೆ. ತತ್ವಜ್ಙಾನವಿದೆ. ಭಕ್ತಿ ಇದೆ ,ಸ್ವಯಂ ದೇವರು ಇದ್ದಸನೆ ಇವಗಳನ್ನು ಗಾಳಿಗೆ ತೂರಿ ಏಂಟಾರು ಗಂಟೆ ದುಡಿದರೂ ಹಣ ಬಂದೀತು ಸುಖ ಸಮೃದ್ಧಿ ವೈಭವ ಸಂತೋಷ ಬಾರದು.
*ಸುಖ ಸಿಗುವದು ಉಚಿತವೇ ಹೊರತು ಹಣದಿಂದ ಸಿಗುವದಿಲ್ಲ*
"ಯಾವದು ಉಚಿತವೋ ಅದು ಕಿಮ್ಮತ್ತು ಕಳೆದುಕೊಳ್ಳುತ್ತದೆ. ಯಾವುದಕ್ಕೆ ಬೆಲೆ ಇದೆಯೋ ಅದಕ್ಕೆ ತುಂಬ ಬೇಡಿಕೆ" ಅಂತೆಯೆ ಹಿತ್ತಲ ಗಿಡ ಮದ್ದಲ್ಲ ಅಂದಿರೋದು ಹಿರಿಯರು.
ದೇವರು ಕದಾಚಿತ್ ಹಣಕ್ಕೆ ಸಿಗುವವನು ಆಗಿದ್ದರೆ ದೇವರನ್ನು ಕೊಂಡುಕೊಳ್ಳುವವರು ಕೋಟಿ ಕೋಟಿ ಜನ ಹುಟ್ಟಿಕೊಳ್ಳುತ್ತಿದ್ದರು. ಆದರೆ ದೇವರನ್ನು ಕೊಳ್ಳಲು ದುಡ್ಡಿಲ್ಲ ಆದುದರಿಂದಲೇ ದೇವರು ಯಾರಿಗೂ ಸಿಗದೆ ಉಳಿದು ಬಿಟ್ಟಿದಾನೆ.
*ಸುಖ ಇರುವದು ಸಿಗುವದು ದೇವರಿಂದಲೇ*
ದೇವರೇ ಬೆಲೆಗೆ ಇಲ್ಲ ಎಂದಾದರೆ ದೇವರಿಂದ ಬರುವ, ದೇವರದ್ದೇ ಆದ ಸೌಖ್ಯ ಸಮೃದ್ಧಿ ಮೊದಲಾದವುಗಳೂ ಉಚಿತವೇ. ಉಚಿತ ವಸ್ತುಗಳಿಂದಲೇಸಿಗುತ್ತವೆ.
ಹಣದಿಂದ ದೇವರನ್ನು ಪಡೆಯದಿದ್ದರೂ ದೇವರದೇ ಆದ ನಮ್ಮ ಸುಖವನ್ನು ನಾನಾ ತರಹದ ನೂರಾರು ಸಾವಿರಾರು ದುಡ್ಡು ಸುರಿದು ಪಡೆಯಲು ಹಂಬಲಿಸಿದರೆ ಸಿಗುವದು ಚಿಂತೆ ಸಂತಾಪ ದುಃಖಗಳೇ ಹೊರತು ಸುಖ ಸಿಗದು, ಸುಖಕೊಡುವ ದೇವರೂ ಸಿಗರು.
*ಸುಖ ದೇವರು ನಮ್ಮ ಬಳಿ ಇದ್ದರೂ ತಿಳಿದಾಗದು...*
ಹಣತೆತ್ತು ಬಿಸ್ಲೇರಿ ನೀರು ಕುಡಿಯುವ ಮನುಷ್ಯನಿಗೆ ಕುತ್ತಿಗೆಯ ವರೆಗೆ ನೀರಿನಲ್ಲಿ ಮುಣಗಿದ್ದರೂ ಮತ್ತೇ ನೀರಡಿಕೆಯಾಗಿದೆ ನೀರುಕೊಡಿ ಎಂದು ಅರಚುವಂತೆ, ಹಣ ತೆತ್ತೇ ಸುಖ ಪಡೆಯುವೆ ಎಂಬ ಹಂಬಲದಲ್ಲಿ ಸಿಕ್ಕ ಮಾನವ, *ನನ್ನ ದೇಹದಲ್ಲಿಯೇ ಇರುವ ದೆವರ ಬಳಿ ತೆರಳಿ ಉಚಿತವಾಗಿ ಸುಖ ಪಡೆಯಲಾರ, ಜಪ ಅಧ್ಯಯನ ದಾನ ಧರ್ಮ ಮಾಡಿ ಸುಖ ಪಡೆಯಲಾರ.* ಹೊರಗಿನ ಯಾವ ಪದಾರ್ಥದಿಂದ ಸುಖ ದೊರಕೀತೋ, ಎಷ್ಟು ಹಣ ಖರ್ಚಾದಿತ್ತೋ ಎಂದೇ ಯೋಚಿಸುತ್ತಾ ಇರುವ. ಸುಖಪಡಯದಾದ, ದುಃಖವೇ ನೂರ್ಮಡಿ ಆಯಿತು. ಈ ದುರಸ್ಥೆಯನ್ನು ನೋಡಿದ ಜ್ಙಾನಿಗಳಿಗೆ ನಗು ತಡಿಯಲೇ ಆಗಲಿಲ್ಲ.
ಈ ತರಹದ ಅವಸ್ಥೆಗೆ ಈಡಾಗದೆ, *ಸಂಧ್ಯೆ/ ಜಪ / ಪೂಜೆ/ ರಾಮಕೃಷ್ಣ - ಅಚ್ಯುತಾನಂತಗೋವಿಂದ/ ಇತ್ಯಾದಿಗಳ ಜಪ ಆರಿಸೋಣ. ಉಚಿತವಾಗಿಯೇ ಸಕಲವಿಧ ಸೌಭಾಗ್ಯವನ್ನೂ ಪಡೆಯೋಣ.
*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments