*ಶ್ರದ್ಧೆಯಿಂದ ಸಿದ್ಧಿ.....*

*ಶ್ರದ್ಧೆಯಿಂದ ಸಿದ್ಧಿ.....*

ಯಾವುದೇ ಕಾರ್ಯ ನೂರರಷ್ಟು ಪ್ರತಿಫಲ‌ ನೀಡಬೇಕಾದರೆ ಅವನ ಬೆನ್ನಿಗೆ ಆ ಕರ್ಯದ ವಿಷಯದಲ್ಲಿ ನಿತರಾಂ ಶ್ರದ್ಧೆ ಇರಬೇಕು. *ಶ್ರದ್ಧಾವಾನ್ ಲಭತೇ ಪೂರ್ಣಂ* ಹೀಗೆ ಅನೇಕ ಮಾತುಗಳು ಶ್ರದ್ಧೆಯ ವಿಷಯದಲ್ಲಿ ತೋರಿ ಬರುತ್ತವೆ. 

ಶ್ರದ್ಧೆಯಿಂದಲೇ ಜೀವನ, ಶ್ರದ್ಧೆಯಿಂದಲೇ ಜೀವನ ಸಾರ್ಥಕ, ಶ್ರದ್ಧೆಯೇ ಜೀವನದ ತಳಹದಿ, ಶ್ರದ್ಧೆಯೇ ಆಧ್ಯಾಥಮಿಕ ಸೌಧದ ಅಡಿಪಾಯ, ಶ್ರದ್ಧೆಯೇ ದೇವರ ದರ್ಶನ ಕೃಪೆ ಪಡೆಯಲು ಇರುವ ದಿವ್ಯ ಸಾಧನ. ಶ್ರದ್ಧೆಯಿದ್ದರೆ ಎಲ್ಲವೂ ಸಾಧ್ಯ. ಅಸಾಧ್ಯವೆಂಬ ಮಾತೇ ಬರುವದಿಲ್ಲ. 

*ಅಮೂಲ್ಯವಾದ ಶ್ರದ್ಧೆ ಒಂದೇ ದಿನದಲ್ಲಿ ದೊರಕುವದೇ....*

ಶ್ರದ್ಧೆಗಾಗಿ ಅನ್ನ ನೀರು ತೊರೆಯಬೇಕು, ಎದ್ದು ಬಿದ್ದು ಆತನನ್ನು ಸ್ಮರಿಸುತ್ತಾ, ವಿದ್ಯೆ ವಿನಯಗಳನ್ನು ಗಳಿಸಿಕೊಂಡು, ಸಹನ ಮೊದಲಾದ ಅನೇಕ ಗುಣಗಳನ್ನು ರೂಢಿಸಿಕೊಂಡಾಗ, ಆ ದಾರಿಯಲ್ಲಿ ತುಂಬ ಪಯಣಿಸಿದಾಗ ಶ್ರದ್ಧೆ ಮೈಗೂಡುವದು. 

*ಈಜಲು ಕಲಿಯಲು ನೀರಿಗೆ ಇಳಿಯಲೇಬೇಕು.....*

ನದಿ ಭಾವಿ ಇವುಗಳ ಹೊರಗೆ ನಿಂತು ಈಜಲು ಕಲಿಯುವೆ ಅಂದರೆ ಅಸಾಧ್ಯದ ಮಾತೇ, ಹಾಗೆಯೇ ಆದ್ಯಾತ್ಮಿಕ ಮಾರ್ಗದಲ್ಲಿಳಿಯದೇ ಶ್ರದ್ಧೆಯನ್ನು ಮೈಗೂಡಿಸಿಕೊಳ್ಳುತ್ತೆವೆ ಎಂಬುವದು ಅಷ್ಟೇ ಅಸಾಧ್ಯದ ಮಾತು. 

ನೀರಿಗಿಳಿದ ಮೇಲೆ ಅಂಜುತ್ತಾನೆ. ಒಂದೆರಡು ಬಾರಿ ವಿಫಲನೂ ಆಗುತ್ತಾನೆ. ಹಾಗೆಂದು ಈಜುವ ಪ್ರಯತ್ನವನ್ನೇ ಬಿಟ್ಟರೆ ಆ ದಡ ಎಂದಿಗೂ ಸೇರಲಾರ ಅದೇರೀತಿಯಾಗಿ ಆಧ್ಯಾತ್ಮಿಕ ರಾಜ್ಯದಲ್ಲಿ ಪ್ರಯತ್ನಬೇಕು. ಒಂದೆರೆಡು ಬಾರಿ ಅಲ್ಲ ಎಷ್ಟುಬಾರಿ ವಿಫಲನಾದರೂ ಇನ್ನೂ ಹೆಚ್ಚಿನ ಪ್ರಯತ್ನಬೇಕು. 

ಕೊಳದಲ್ಲಿ ಈಜು ಕಲಿತವ, ಸಮುದ್ರದಲ್ಲಿ ಈಜಲಾರ, ಹಾಗೇಯೇ ಅಲ್ಪಸ್ವಲ್ಪ ಶ್ರದ್ಧೆಯಿಟ್ಟವ ಎಂದಿಗೂ ದೇವರನ್ನು ಕಾಣಲಾರ, ದೇವರ ಕೃಪೆಗೆ ಪಾತ್ರನೂ ಆಗಲಾರ. ದೇವರ ಕೃಪೆಗೆ ಪಾತ್ರನಾಗಬೇಕು ಎಂದಾದರೆ, ಪರಿಪೂರ್ಣ ಶ್ರದ್ಧೆ ಇಡುವದು ಅನಿವಾರ್ಯ. *ಅಲ್ಲ ಶ್ರದ್ಧಾನ್ವಿತರಿಂದ ಅಲ್ಒಸ್ವಲ್ಪ ಕಾರ್ಯಗಳು ಆದಾವೇ ಹೊರತು, ಮಹತ್ಕಾರ್ಯಗಳೇನೂ ಆಗಲಾರವು* ಆ ನಿಟ್ಟಿನಲ್ಲಿ ನಮ್ಮ ಗುರಿ ಸೇರುವವರೆಗೂ ಶ್ರದ್ಧೆ ಬೆಳಿಸಿಕೊಳ್ಳುತ್ತಾ ಸಾಗಬೇಕು. 

ಪ್ರತಿಕಾರ್ಯದಲ್ಲಿಯೂ ನಾನಾತರಹದ ವಿಶ್ರಾಂತಿಯ ಭಾವವನ್ನು ಬೇಕಾದರೆ ಬಳಿಸಿಕೊಳ್ಳೋಣ. ಆದರೆ ಆಧ್ಯಾತ್ಮಿಕ ಪಥದಲ್ಲಿ ಶ್ರದ್ಧೆಯಿಂದ, ಶ್ರದ್ಧೆಬೆಳಿಸಿಕೊಳ್ಳುತ್ತಾ ಸಾಗಿದಾಗ ಮಾತ್ರ ದಿವ್ಯವಾದ ಶಾಂತಿ, ಅದ್ಭುತವಾದ ಆನಂದ, ಸಂತೃಪ್ತಿ, ದೇವರ ಕಾರುಣ್ಯ  ಇವುಗಳನ್ನು ಪಡೆಯಬಹುದು. ಎಲ್ಲತರಹದ ದುಃಖ, ಒತ್ತಡ, ಚಿಂತೆ, ಇವುಗಳಿಂದ ಪಾರಾಗಲೂ ಬಹುದು. 

*ಆತ್ಮ ಶ್ರದ್ಧೆ, ಭಗವಂತನಲ್ಲಿಯ ಶ್ರದ್ಧೆ, ಇವುಗಳೇ ನಮ್ಮ ವಿಜಯದ ಕೀಲಿಕೈ* ಈ ಕೀಲಿಕೈ ತೆರೆದಾಗಲೇ ಎಲ್ಲ ತರಹದ ಸಿದ್ಧಿಗಳು ದೊರೆಯುವವು. ಶ್ರದ್ಧೆ ಬೆಳಿಸಿಕೊಳ್ಳೋಣ.   ಇಂದಿನಿಂದಲೇ ಆರಂಭಿಸೋಣ.

*✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*