*ಅಳಲೂ ಆಗದ, ಆಳಲೂ ಆಗದ ಅವಸ್ಥೆ ಅವಲೋಕನದಲ್ಲಿ.....*

*ಅಳಲೂ ಆಗದ, ಆಳಲೂ ಆಗದ ಅವಸ್ಥೆಯ ಅವಲೋಕನದಲ್ಲಿ.....*

"ಆಳಲೂ ಆಗದ, ಆಳಲೂ ಆಗದ ಅವಸ್ಥೆ" ಇದೊಂದು ವಿಚಿತ್ರ ಅವಸ್ಥೆ. ಈ ಅವಸ್ಥೆ ಮುಕ್ತಿಯೋಗ್ಯರೆಲ್ಲರೂ ಪಡೆಯುವ ಅವಸ್ಥೆ. 

ಆಳಲು ಬಾರದ ಮನುಷ್ಯ ಅಳುವ, ಆಳ್ವಿಕೆಯಲ್ಲಿ ಒಳಗಾದ ಮನುಷ್ಯ ಅಳುವ. ಅಳು ಪರಿಹರಿಸಿಕೊಳ್ಳಲು ಆಳಲು ತೊಡಗುವ. ಆಳುವದರಲ್ಲಿ ವಿಫಲನಾದಾಗ, ಆಳ್ವಿಕೆಯಲ್ಲಿ ಸಿಗುವ, ಮತ್ತೆ ಅಳು, ಹೀಗೆಯೇ ಸಂಸಾರದ ಸ್ಥಿತಿಗತಿ... 

ಗೊಂದಲದ ನಿರ್ಧಾರಗಳಿಂದ ವ್ಯಸನಗಳ ಗೂಡು ಆಗುವ. ವ್ಯಸನಗಳಿರುವಾಗ ನಗು ಮುಖವಾಡವಾಗಿರುತ್ತದೆಯೆ ಹೊರತು ನೈಜವಾಗಿರುವದಿಲ್ಲ. ನೈಜ ನಗು ನಮ್ಮದಾಗಲು ಗೊಂದಲಗಳೆಲ್ಲವನ್ನೂ ಹೊರಹಾಗಿ ಮನಸದಸನ್ನು ಹಸ ಮಾಡುವದು ಅನಿವಾರ್ಯ. 

ಮನಸ್ಸಿನಲ್ಲಿ ಗೊಂದಲಗಳು ಇರುವಾಗ ನಿರ್ಣಯಗಳೆಲ್ಲವೂ ಎಡವಟ್ಟು ಆಗಿರುತ್ತವೆ. ಎಡವಟ್ಟು ನಿರ್ಣಯಗಳಿಂದ ಇಂದಿಲ್ಲ ನಾಳೆ ಅಳುವದಂತೂ ತಪ್ಪಿದ್ದಲ್ಲ.  ಅಳುವವನಿಗೆ ಆಳುವದು ಎಂದಿಗೂ ಬರುವದಿಲ್ಲ. ಆಳುವವನಿಗೆ ಅಳು ಬಿಟ್ಟಿದ್ದಲ್ಲ. ಆಳುವದರಿಂದ ದೂರಾದವ ಅಳುವನ್ನು ಕಳೆದುಕೊಳ್ಳುವದರ ಜೊತೆಗೆ ಹರಿಗೆ ಪ್ರಿಯನೂ ಆಗುವ. ಅಳುವಿಲ್ಲದ ಹರಿಪ್ರಿಯನಿಗೆ ಮುಕ್ತಿಯೊಂದೇ ಮಾರ್ಗ.... 

ಸರಿಯಾದ ನಿರ್ಣಯಕ್ಕೆ ಬೇಕು ನಿರ್ಮಲ, ಶುದ್ಧ, ಸ್ವಚ್ಛ, ಕಲಬೆರಿಕೆಯಿಲ್ಲದ  ಮನಸ್ಸು.  ಶುದ್ಧ ಸ್ವಚ್ಛ ಕಲಬೆರಿಕೆ ರಹಿತ ಮನಸ್ಸಿಗೆ *ಏಕಾಗ್ರತೆ* ಅನಿವಾರ್ಯ. ಏಕಾಗ್ರತೆ ಬರುವದು ಹೇಗೆ.. ?? 

*ಹಗ್ಗದ ಮೇಲೆ ನಡೆ.....*

ಹಗ್ಗದ ಮೇಲೆ ನಡಿಯುವದು ಸೂಕ್ಷ್ಮವಾದ ಒಂದು ವ್ಯಾಯಾಮ. ಅತ್ಯಂತ ಸೂಕ್ಷ್ಮ ಧ್ಯಾನದ ವಿಧಾನವೂ ಹೌದು. ಹಗ್ಗದ ಮೇಲೆ ನಡಿಯಲು ಆರಂಭಿಸಿದಾಗ ಒಂದೊಂದು ಹೆಜ್ಹೆ ಕ್ರಮಿಸಿದಾಗಲೂ ಮನೋ ಗೊಂದಲಗಳು ದೂರಾಗುವವು ಜೊತೆಗೆ ಮನಸ್ಸು ಏಕಾಗ್ರವೂ ಆಗುವದು. 

ಹಗ್ಗದ ನೇಲಿರುವಾಗ ಆಲೋಚನೆಯೇ ಇಲ್ಲವಾಗುತ್ತವೆ, ಏಕೆಂದರೆ ನಾವು ಅತ್ಯಂತ ಗಂಡಾಂತರದ ಘೋರ ಸ್ಥಿತಿಯಲ್ಲಿರುತ್ತೇವೆ. ಯೋಚಿಸಲು ಅವಕಾಶವೇ ಇರದು. ಯೋಚಿಸಲು ಶುರು ಮಾಡಿದರೆ ಪ್ರಾಣಾಪಾಯವೇ..

ಪ್ರತಿಕ್ಷಣವೂ ಎಚ್ಚರದಿಂದ ಇರಬೇಕಾಗುತ್ತದೆ. ಸಮತೋಲನ ಸದಾ ಅವಶ್ಯವಾಗುತ್ತದೆ. ತಾನು ಸುರಕ್ಷಿತ ಎಂಬ ಭ್ರಾಂತಿಯನ್ನೂ ಬಿಡಬೇಕಾಗುತ್ತದೆ. ಏಕೆಂದರೆ ಅಲ್ಲಿ ಸುರಕ್ಷೆಯಿಲ್ಲ, ಅಪಾಯವೇ ಇದೆ. ಯಾವ ಕ್ಷಣದಲ್ಲಿಯೂ ಕೆಳಗೆ ಬೀಳಬಹುದು, ಸಾವು ಕಾಯ್ತಾ ಇದೆ. ಮನಸದಸಲ್ಲಿ ತಾನೂ ಇರದೆ, ತನ್ನರಿವೂ ಇಟ್ಟುಕೊಳ್ಳದೇ ದೇವರನ್ನು ಮಾತ್ರ ಇಟ್ಟುಕೊಂಡಿರುತ್ತಾನೆ. ದೇವರೊಬ್ಬನೇ ಇರುವಾಗ ಆಳುವದು ಇರುವದಿಲ್ಲ. ಆಳುವದು ಇಲ್ಲದಾದಾಗ ಅಳುವೂ ಇರುವದಿಲ್ಲ.....  

ಮನಸ್ಸು  ನಿರ್ಮಲ ಗೊಂದಲಗಳೂ ಇಲ್ಲ, ನಿರ್ಣಯಗಳೆಲ್ಲವೂ ಸರಿಯಾದದ್ದೇ ಸಿಗತ್ತೆ. ಒಂದೂ ಎಡವಟ್ಟು ಆಗುವದಿಲ್ಲ. ಎಡವಟ್ಟುಗಳೇ ಇಲ್ಲದಾದಾಗ ಅಳುವದು ದೂರದ ಮಾತೇ...... 

ಆಳುವದನ್ನು ತೊರೆಯಲು *ಪೂಜೆ* ಏಕಾಗ್ರತೆಯನ್ನು ಅಳವಡಿಸಲು  *ಸಂಧ್ಯೆ/ ಜಪ* ಇವುಗಳನ್ನು ನಿತ್ಯ ಅಳವಡಿಸಿಕೊಂಡಾಗ ಅಳು ತರುವ ನಿರ್ಧಾರವೋ, ಅಳುವ ಪ್ರಸಂಗವೋ ಇಲ್ಲದಾಗುತ್ತದೆ. 

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*