*ಒಲೆಯ ಮೇಲೆ ಅಕ್ಕಿ ಇಟ್ಟು, ಹುಳಿಯಾಗಿಲ್ಲ ಎಂದು ಹತಾಶರಾದರೆ............*
*ಒಲೆಯ ಮೇಲೆ ಅಕ್ಕಿ ಇಟ್ಟು, ಹುಳಿಯಾಗಿಲ್ಲ ಎಂದು ಹತಾಶರಾದರೆ............*
"ಸಾಧನ ಶರೀರವಿದು" "ಸಾಧನೆಯ ಮಾರ್ಗದಲ್ಲಿಯೇ ಜನನ" "ಸಾಧಮನೆಯ ಮಾರ್ಗಪ್ರೇರಿಸುವ ಗುರುಗಳು" "ನಮಗೂ ಸಾಧನೆಯ ತಿಳುವಳಿಕೆ ಇದೆ" "ಸಾಧನೆಯನ್ನೂ ಮಾಡುತ್ತೇವೆ" ಇಂದಿನ ಹೊರ ಪ್ರಪಂಚವನ್ನು ಗಮನಿಸಿದಾಗ ಒಂದರ್ಥವಾಗುತ್ತದೆ "ಇಷ್ಟೆಲ್ಲ ದೊರಕಿ ಬಂದಿರುವದು ಕೇವಲ ದೇವರ ಅನಂತ ಹಾಗೂ ಅಪಾರ ಕರುಣೆಯಿಂದ ಮಾತ್ರ" ಎಂದು.
*ಸಾಧನೆ ಎಂದರೆ ಏನು....*
ಸಾಧನೆಗಳು ಇರುವದೇ ಪಡೆಯಲು ಸಾಧಿಸಲು. ಉದ್ದೇಶಿತ ಫಲ ಪಡೆಯದ ಸಾಧನೆ / ಸಿದ್ಧಿಯಾಗದ ಸಿದ್ಧಿಯನ್ನೆ ತಂದು ಕೊಡದ ಸಾಧನೆ ಸಾಧನೆಯೆಂದೇ ಅನಿಸದು.
*ಸಾಧನೆ ಮಾಡಿದ್ದೇನೆ ಸಿದ್ಧಿಸಿಲ್ಲವೇಕೆ... ???*
ತೊಗರೆ ಬೇಳೆ ವಲಿಯಮೇಲೆ ಇಟ್ಡಿದ್ದೇನೆ ಅನ್ನವೇಕಾಗಿಲ್ಲ... ?? ಎಂದು ಯೋಚಿಸಿ ಕಂಗಾಲಾಗಿ ತಲಿಕೆಡಿಸಿಕೊಂಡು ಅಡಿಗೆ ಮಾಡುವದೇ ಬಿಟ್ಡರೆ ನನ್ನಂತಹ ಮೂರ್ಖ ಇನ್ನಿಬ್ಬಿರಲಾರರು. ಅದೇರೀತಿಯಾಗಿ, ಸಂಧ್ಯಾವಂದನೆ/ ಜಪ/ ದೇವರ ಪೂಜೆ/ ಅಧ್ಯಯನ/ ಚಿಂತನೆ/ ಮೊದಲಾದ ಎಲ್ಲ ಎಲ್ಲ ಸಾಧನೆಗಳೂ "ಭಕ್ತಿ ಸಿದ್ಧಿಗೋಸ್ಕರ/ ವಿಷ್ಣು ಪ್ರೀತಿಗೋಸ್ಕರವೇ. ಆ ಎಲ್ಲ ತರಹದ ಸಾಧನೆಗಳನ್ನೂ ಮಾಡಿ" ನನ್ನ ಮಾನಸಿಕವಾದ ಕ್ಷಣಿಕವಾದ ಕಂಡ ಅಪೇಕ್ಷಗಳು ಈಡೇರಿಲ್ಲ ಎಂದು ಬೇಸರಿಸಿಕೊಂಡು ದೇವರಿಂದಲೇ ವಿಮುಖರಾದರೆ "ಆ ಸಾಧ್ಯ ಸಿದ್ಧವಾಗದ ದುರವಸ್ಥೆಗೆ" ಹೊಣೆಗಾರ ದೇವರೇಕೆ ಆಗುವ, ಆ ಎಡವಟ್ಟಿನ ಹೊಣೆಗಾರ ನಾವೇ...
*ಸಾಧ್ಯ ಸಿದ್ಧಿಗೆ ಪೂರಕವಾಗಿರಬೇಕು ಸಾಧನೆ...*
ಸಾಧನ ಶರೀರದಲ್ಲಿ ನಾವು ಮಾಡುವ ಪ್ರತೀ ಸಾಧನೆಯೂ ಸಾಧ್ಯವಾದ "ಭಕ್ತಿಗೋಸ್ಕರವೇ ಇವೆ" ಇದು ನೂರರಷ್ಟು ನಿಶ್ಚಿತ. *ಭಕ್ತ್ಯರ್ಥಾಸ್ತ್ವಖಿಲಾನ್ಯೇವ* ಎಂದು ಶ್ರೀಮದಾಚಾರ್ಯರ ದೃಢವಾದ ಸಿದ್ಧಂತಾವೂ ಹೌದು. ಹೀಗಿರುವಾಗ "ಸಾಧನೆಗೋಸ್ಕರ ಭಕ್ತಿ, ಭಕ್ತಿಗೋಸ್ಕರ ಸಾಧನೆಗಳೆಲ್ಲವು" ಎಂದಾದಾಗ, ಹುಳಿ ಮಾಡುವ ಯೋಚನೆ, ಅದಕ್ಕೆ ತಕ್ಕ ಬೇಳಿಯೇ ಇಟ್ಟಿದ್ದೇನೆ, ಆಗ ಆಗುವದು ರುಚಿರುಚಿಯಾದ ಹುಳಿಯೇ ಹೊರತು ಇನ್ನೇನೂ ಆಗುವದಿಲ್ಲ. ಹೇಗೋ ಹಾಗೆಯೇ "ಭಕ್ತಿಯ ಉದ್ದೇಶ್ಯ, ಭಕ್ತಿಗನುಗುಣ ಸಾಧನೆ, ಸಾಧನೆಯ ತಕ್ಕಂತೆ ಭಕ್ತಿಯ ಅಭಿವ್ಯಕ್ತಿ" ಹೀಗಾದಾಗ ಎಡವಟ್ಟು ಆಗುವ ಪ್ರಸಂಗವೇ ಬರದು.
*ಭಕ್ತಿನೇ ಏತಕೆ....*
*ಭಕ್ತಿರ್ಮೋಕ್ಷಾಯ ಕೇವಲಾ* ಎಂದು ಶ್ರೀಮದಾಚಾರ್ಯರು ಹೇಳಿದಂತೆ ಆನಂದ ರೂಪವಾದ ಮೋಕ್ಷಕ್ಕಾಗಿಯೇ ಭಕ್ತಿ. ಭಕ್ತಿ ಇರುವದೇ ವಿಷ್ಣು ಪ್ರೀತಿದ್ವಾರಾ ನಿತ್ಯವಾದ ಅನಂತವಾದ ಆನಂದರೂಪ ಮೋಕ್ಷಕ್ಕಾಗಿ.
ಮೋಕ್ಷ ಹಾಗೂ ವಿಷ್ಣುಪ್ರೀತಿ ರೂಪ ಫಲದ ಉದ್ಯೇಶ್ಯವೇ ಇಲ್ಲದೆ ಎಷ್ಟೆಲ್ಲ ಸಾಧನೆಮಾಡಿದರೂ ಭಕ್ತಿ ಮಾಡಿದರೂ ಸಾಧನೆ ಅಸಿದ್ಧವಾಗಿಯೇ ಉಳಿಯುತ್ತದೆ ಫಲಕಾರಿಯಾಗುವದೇ ಇಲ್ಲ. ಹಾಗಾಗಿ ಫಲ ಸಿದಾದಾಗ ಹತಾಶೆ ಸರ್ವಥಾ ಬೇಡ......
*✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments