*ನಾಳೆ ಬಾ....... ಎಂದು ಸತ್ಯಪೂರ್ಣರೇ ಬರಿಯಬೇಕು*
"ನಾಳೆ ಬಾ" ಎಂದು ಸತ್ಯಪೂರ್ಣರೇ ಬರಿಯಬೇಕು
"ನಾಳೆ ಬಾ" ಎಂದು ಮನೆಯ ಬಾಗಿಲಿಗೆ ಬರೆದಿರುವದನ್ನು ನಾವು ಹಿಂದೇ ನೋಡಿದ್ದೇವೆ. ಪುನಹ ಇಂದು ನೋಡೊದಾಗ ಮತ್ತೆ ನೆನಪಾಯ್ತು. ಯಾಕೆ ಹಾಗೆ ಬರೆದಿರುತ್ತಾರೆ ಎಂದರೆ, ಮನೆಗೆ ನಿತ್ಯವೂ ಮಾರಿ ಬರುತ್ತಾಳೆ, ಒಳಬಂದರೆ ಅವಳು ತುಂಬ ಪೀಡೆ ಕೊಡುತ್ತಾಳೆ, "ನಾಳೆ ಬಾ" ಎಂದು ಬರೆದಾಗ ಅದನ್ನು ಓದಿ ತಿರುಗಿ ಹೋಗುತ್ತಾಳೆ. ಪುನಹ ನಾಳೆ ಬಂದಾಗ ಅದೇರೀತಿ ಇರುತ್ತದೆ. ಅಂತೂ ಆ ಮಾರಿ ಒಳಬರಲು ಬಿಡಬಾರದು ಎಂದು "ನಾಳೆ ಬಾ" ಎಂದು ಬರೆಯುವ ರೂಢಿ. ಇದು ಇರಲಿ..
*ಈ ತರಹದ ಮಾರಿ ಗಳು ಇಂದು ಅನೇಕ ಇವೆ..*
ನಮ್ಮ ಮೇಲೆ ಧಾಳಿ ಮಾಡಿ, ನಮ್ಮನ್ನು ಉನ್ನತಿಗೆ ಏರಿಸದಂತೆ ಮಾಡಿ ನಿಂತ ಸ್ಥಳದಿಂದ ಕದಲಿಸದ ಸ್ಥಿರವಾಗಿ ನಿಲ್ಲಿಸುವ ಅಥವಾ ಇನ್ನೂ ಕೆಳಗೆ ಇಳಿಸುವ ಅನೇಕ ಮಾರಿಗಳಲ್ಲಿ ಒಂದು ಮಾಹಾಮಾರಿ ಅದು *ನಾಳೆ ಮಾಡುವೆ* ಎಂಬ ಆಲಸ್ಯ.
ಸಂಧ್ಯಾವಂದನೆ ಮಾಡು "ನಾಳೆಯಿಂದ ಆರಂಭಿಸುವೆ. ಜಪ ಮಾಡು ನಾಳೆ. ದೇವರ ಪೂಜೆ ಮಾಡು ನಾಳೆ. ಓದು ನಾಳೆಯಿಂದ ಪಕ್ಕ. ಇನ್ನೇನೋ ಕೆಲಸ ಮಾಡು ನಾಳೆ ಇಂದ ನಿಶ್ಚಿತ. ಏಕಾದಶಿ ಮಾಡು ನಾಳೆ. ಧರ್ಮಕರ್ಮ ಆರಂಭಿಸು ನಾಳೆ. ಹೀಗೆ ಪ್ರತಿಯೊಂದೂ ನಾಳೆ ಇಂದ ಅಂತ ಅಂದು ಕೊಂಡರೆ "ನಾಳೆಯ ದಿನ ಇಂದು ಆದಾಗ, ಪುನಹ ನಾಳೆ ಎಂಬ ವರಲು ಮಾತು ಬರುವದು ಸಹಜ" ಹೀಗೆ ಪ್ರತಿಯೊಂದು ಸಾಧನೆಯನ್ನೂ ಮುಂದೂಡುತ್ತಾ ಸಾಗಿಸುವದು ಆಲಸ್ಯ.
*ನಾಳೆಯಿಂದ ಮಾಡುವೆನು" ಎಂಬುವದು ತೀರ ನಿರರ್ಥಕವೇನಲ್ಲ.....*
"ನಾವು ಸಾಧನೆಯ ಮಾರ್ಗದ ಉತ್ತುಂಗಕ್ಕೆ ಹೋಗಬೇಕಾದರೆ ನಾವು ಬದಲಾಗಬೇಕು" ಎಂಬ ತಿಳುವಳಿಕೆ ಇದು ದೃಢವಾಗಿದೆ ಎಂದರ್ಥ. ಈ ತಿಳುವಳಿಕೆ ಒಂದರ್ಥದಲ್ಲಿ ನಮ್ಮನ್ಮು ಎಚ್ಚರವನ್ನಾಗಿಸುತ್ತದೆ. "ನಮ್ಮ ಸಾಮರ್ಥ್ಯವನ್ನು ನಾವು ಪೂರ್ಣ ಬಳಿಸುತ್ತಿಲ್ಲ ಎಂಬ ಅರಿವನ್ನೂ ತರಿಸುತ್ತದೆ.
ಈ ತರಹದ ಸನ್ನಿವೇಶ " ಏನಾದರೂ ಮಾಡಬೇಕು" ಎಂಬ ಹುರುಪನ್ನು ತಂದೊದಗಿಸುತ್ತದೆ. ಈ ಹುರುಪು ಬಿಸಿ ಆಗಿರುವಾಗಲೇ ಆರಂಭಿಸಬೇಕು. ಆರಂಭಿಸಿಲ್ಲ ಎಂದಾದರೆ ನಮ್ಮ ಗೆಳೆಯ *ಆಲಸ್ಯ* ಓಡಿ ಬರುತ್ತಾನೆ *ನಾಳೆಯಿಂದ ಆರಂಭಿಸು* ಎಂದು ಸಲಹೆ ಕೊಡುತ್ತಾನೆ. "ನಾಳೆ ಅಂದರೆ ಮನೆ ಹಾಳು" ಎಂಬಂತಾಗಿ ಮತ್ತದೆ ರಾಗ ಅದೇ ಮಾತು ಅದೆ ಸ್ಥಾನ ಹೀಗೆ ನಮ್ಮ ದುರವಸ್ಥೆ.
*ಆಲಸ್ಯ ಯಾವಾಗ ಬರುವದು... ??*
ಹೊರಗಿನ ನಮ್ಮದಲ್ಲದ ನಮ್ಮ ಹಿತ ಕೆಡಿಸುವ ಯಾವ ವಸ್ತುವೂ ನಮ್ಮಲ್ಲಿ ಬರಬೇಕಾದರೆ ನಾವೇ ಮೂಲ ಕಾರಣ. ಸ್ಥಳ ಮಾಡಿಕೊಟ್ಟವರು ನಾವು. ಯಾರು ಪೂರ್ಣರೋ ಅವರಲ್ಲಿ ಮತಗತೆ ಹೊರಗಿನದ್ದು ಪ್ರವೇಶಿಸಲು ಸ್ಥಳವಿರದು. ಯಾರು ಎಷ್ಟೆಲ್ಲ ಅಪೂರ್ಣರೋ ಅಷ್ಟೆಲ್ಲ ಸ್ಥಳ ಸಿಗತ್ತೆ, ಹೊರಗಿನ ವಸ್ತುಗಳು ಧಾಳಿ ಮಾಡುತ್ತವೆ, ಇಲ್ಲವೋ ನಾವೇ ಪ್ರೀತಿಯಿಂದ ಬರ ಮಾಡಿಕೊಳ್ಳುತ್ತೇವೆ. ಹಾಗೆಯೇ ಅಲಸ್ಯ ನಮ್ಮದಲ್ಲ, ಹೊರಗಿನ ವಸ್ತುವೇ. ನಾವು ಅಪೂರ್ಣರು ಆಗಿರುವದರಿಂದ, ನಮ್ಮಲ್ಲಿ ಕ್ಷುದ್ರ ವಸ್ತುಗಳು ಇಡಲು ಸ್ಥಳವಿರುವದರಿಂದ "ಆಲಸ್ಯ ಮೊದಲಾದವುಗಳು ಬರುತ್ತವೆ, ನಮ್ಮನ್ನು ಕೆಡಿಸಿ ಹಾಕುತ್ತವೆ."
ನಾವು ಪೂರ್ಣರು ಆಗಬೇಕು ಎಂಬ ಬಯಕೆ ಇದ್ದರೆ, ಅನಂತ ಗುಣ ಪರಿಪೂರ್ಣರಾದ ದೇವರನ್ನು, ಗುಣಪೂರ್ಣ ವಾಯುದೇವರನ್ನು ನಿರಂತರ "ಸಂಧ್ಯಾವಂದನೆ/ ಜಪ/ ಪೂಜೆ/ ರಾಮಕೃಷ್ಣ ಜಪ/ ಅಚ್ಯುತಾನಂತಗೋವಿಂದ ಜಪ" ಇವುಗಳನ್ನು ಮಾಡುವ ಮುಖಾಂತರ ನಾವು ಪೂರ್ಣರಾಗುವದು ಅನಿವಾರ್ಯ.
ಈ ಮಹಾಮಹಿಮರೆಲ್ಲರ ಚಿಂತೆನೆಯ ಪ್ರಭಾವದಿಂದಲೇ ಜ್ಙಾನಾದಿ ಸದ್ಗುಣಗಳಿಂದ ಪೂರ್ಣರೂ ಆದ "ಶ್ರೀ ಶ್ರೀ ಸತ್ಯಪೂರ್ಣರ ಆರಾಧನ ಮಾಹೋತ್ಸವ" ಇಂದಿದೆ. ವಿಶೇಷವಾಗಿ ಆರಾಧಿಸೋಣ. *ಆಲಸ್ಯವನ್ನು ಹೊರ ಓಡಿಸಲು "ನಾಳೆ ಬಾ" ಎಂದು ನನ್ನ ಮನದ ಭಿತ್ತಿಯ ಮೇಲೇ ನೀವೇ ಬರಿಯರಿ. ಎಂದು ಪ್ರಾರ್ಥಸುತ್ತಾ ಎಲ್ಲ ಮಹನೀಯರುಗಳ ಅನುಗ್ರಹದಿಂದ ನಮ್ಮ ಯೋಗ್ಯತಾನುಸಾರ ಪೂರ್ಣರಾಗಿ "ಆಲಸ್ಯ ಮೊದಲಾದ ಮಾರಿಗಳನ್ನು ನಾಳೆ ಬಾ" ಎಂದು ದೂರ ಓಡಿಸೋಣ...
ಅಕ್ಷೋಭ್ಯ !! ಎನ್ನ ಒಂದನೆಗಳು*
ಕ್ಷೋಭೆ ಇಲ್ಲದ ಭಭಗವಂತನಿಗೆ ಅಕ್ಷೋಭ್ಯ ಎಂದು ಕರಿಯುವದು ಶಾಸ್ತ್ರ. ಕ್ಷೊಭೆಗೆ ತುತ್ತಾದ ಅಂತೆಯೇ ಪ್ರಕ್ಷುಬ್ಧನಾದ ವ್ಯಕ್ತಿಗೆ ಸಾರಾಸಾರ ವಿವಿಕವೇ ಇರದು. ಸರಿಯಾದ ನಿರ್ಣಯ ತೆಗೆದುಕೊಳ್ಳಲೇ ಆಗದು.
ಪ್ರಶಾಂತಮನಸ್ಕನ ವಿಚಾರಧಾರೆಗಳು, ನಿರ್ಣಯಗಳು ಸರಿಯಾದ ಮಾರ್ಗದಲ್ಲಿಯೇ ಇರುತ್ತದೆ. ಹೊಸ ಮನೆಯ ವಾಸ್ತುಶಾಂತಿ ಹತ್ತಿರಬಂದಿರತ್ತೆ ಆದರೆ ಮನೆ ಹೇಗಿರಬೇಕು ಎಂಬುವ ಸ್ಪಷ್ಟತೆ ಕೆಲವರಿಗೆ ಇರುವದೇ ಇಲ್ಲ. ಏಕೆಂದರೆ ಅವನ ಮನಸ್ಸು ಪ್ರಶಾಂತವಾಗಿರದೆ ಪ್ರಕ್ಷುಬ್ಧವಾಗಿದೆ ಆದ್ದರಿಂದ.
ಪ್ರಕ್ಷುಬ್ಧವಾದ ಅಥವಾ ಕುದಿಯುವ ನೀರಿನಲ್ಲಿ ನಮ್ಮ ಮುಖ ಕಾಣುವದಿಲ್ಲ, ಹಾಗೆಯೇ ಕಲುಶಿತ ಅಥವಾ ಪ್ರಕ್ಷುಬ್ಧವಾದ ಮನಸ್ಸಿದ್ದರೆ ಏನೂ ತೋಚದು.
ಪ್ರಕ್ಷುಬ್ಧತೆ ಬರುವದೆಲ್ಲಿ... ??
"ತುಂಬಿದ ಕೊಡ ತುಳಕದು" ಎಂಬುದೊಂದು ಗಾದೆ, ಹಾಗೆಯೇ ಪೂರ್ಣನಾದ ವ್ಯಕ್ತಿ ಎಂದಿಗೂ ಪ್ರಕ್ಷುಬ್ಧನಾಗಲಾರ. ಪರಿಪೂರ್ಣತೆ ಇಲ್ಲದ ವ್ಯಕ್ತಿಯ ಮನಸ್ಸು ಎಂದಿಗೂ ಪ್ರಕ್ಷುಬ್ಧವಾಗಿಯೇ ಇರುವಂತಹದ್ದು..
ಶ್ರೀಹರಿಯ ಮೂಲ ರೂಪವೂ ಪೂರ್ಣ, ನಮ್ಮಲ್ಲಿಯ ರೂಪವೂ ಪೂರ್ಣ, ಪೂರ್ಣವಾದ ಮೂಲ ರೂಪದಿಂದ ಅಭಿವ್ಯಕ್ತವಾದ ರಾಮಕೃಷ್ಣಾದಿ ರೂಪಗಳೂ ಪೂರ್ಣ. ಎಲ್ಲ ಮೂಲರೂಪಗಳನ್ನು ತನ್ನಲ್ಲಿಯೇ ಐಕ್ಯಮಾಡಿಕೊಂಡು ಕೊನೆಗೆ ಉಳಿಯುವ ರೂಪವೂ ಪೂರ್ಣ... ಹೀಗೆ ಶ್ರೀಹರಿ ಪೂರ್ಣ. ಪೂರ್ಣನಾದದ್ದರಿಂದಲೇ ಕ್ಷೋಭೆ ಸರ್ವಥಾ ರಹಿತ. ಕ್ಷೋಭೆರಹಿತನಾಗಿರುವದರಿಂದಲೇ ಭಗವಂತ ಅಕ್ಷೋಭ್ಯ.
ಪೂರ್ಣ ಹಾಗೂ ಅಕ್ಷೋಬ್ಯ ನಾಮಕ ಹರಿಯ ದಿವ್ಯ ಉಪಾಸನೆಯ ಬಲದಿಂದ, ಪೂರ್ಣ ಅಕ್ಷೋಭ್ಯ ನಾಮಕ ಹರಿಯ ಸನ್ನಿಧಾನ ಇರುವದರಿಂದಲೇ ಶ್ರೀಮಟ್ಟೀಕಾಕೃತ್ಪಾದರೋ, ರಘೂತ್ತಮರೋ, ರಾಯರೋ, *ಇಂದಿನ ಕಥಾನಾಯಕರಾದ ಶ್ರೀಸತ್ಯಪೂರ್ಣರೋ* ಅಥವಾ ಪುರಂದರ ವಿಜಯದಾಸರೋ, ನಮ್ಮ ಪರಮಗುರುಗಳಾದ ಮಹುಲೀ ಪರಮಾಚಾರ್ಯರೋ ಅಥವಾ ಇನ್ಯಾವದೇ ಜ್ಙಾನಿಗಳದ್ದೋ ಮನಸ್ಸು ಕ್ಷಣದಲ್ಲಿಯೂ ಎಂದಿಗೂ ಎಂಥೆಂಥಾ ಆಪತ್ತುಗಳು ಒದಗಿ ಬಂದರೂ ಪ್ರಕ್ಷುಬ್ಧವಾಗಲೇ ಇಲ್ಲ.
ಗುರ್ವನುಗ್ರಹದ ಸಾಕಾರ ಮೂರ್ತಿವೆತ್ತ ಪ್ರತಿಮೆ ಎಂಬಂತಿರುವ ಶ್ರೀಸತ್ಯಾಭಿನವ ಶ್ರೀಪಾದಂಗಳವರೆಂಬ ಕ್ಷೀರಸಾಗರದಲ್ಲಿ ಉದ್ಭವಿಸಿದ *ಶ್ರೀ ಶ್ರೀಸತ್ಯಪೂರ್ಣತೀರ್ಥರೆಂಬ ಚಂದ್ರನು* ನಮಗೆ ಗುರ್ವನುಗ್ರಹ ಮುಖಾಂತರ ಸಕಲ ಕ್ಷೋಭೆಗಳನ್ನು ಕಳೆದು, ನಮ್ಮ ಯೋಗ್ಯತಾನುಸಾರ ಪೂರ್ಣರನ್ನಾಗಿ ಮಾಡಿ, ಎಲ್ಲ ಸಂತಾಪಗಳನ್ನು ಪರಿಹರಿಸಿ ರಕ್ಷಿಸಲಿ ಪೋಶಿಸಲಿ.
ಸತ್ಯಾಭಿನವ ದುಗ್ಧಾಬ್ಧೇಃ
ಸಂಜಾತಃ ಸರ್ವಕಾಮದಃ |
ಶ್ರೀಸತ್ಯಪೂರ್ಣತೀರ್ಥೇಂದುಃ
ಸಂತಾಪಾನ್ ಹಂತು ಸಂತತಮ್ ||
ಈ ಚರಮಶ್ಲೋಕದ ಮುಖಾಂತರ ಪ್ರಾರ್ಥಿಸುತ್ತಾ, ಆ ಗುರುಗಳ ಅಂತರ್ಯಾಮಿ *ಪೂರ್ಣನಾದ ಅಕ್ಷೋಭ್ಯರೂಪಿ ಭಗವಂತನಿಗೆ* ಅನಂತ ವಂದನೆಗಳನ್ನೂ ಸಲ್ಲಿಸೋಣ....

*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments
Namo namah