*ನಾಯಿಗೆ ಕೂಡಲು ಪುರುಸೊತ್ತು ಇಲ್ಲ, ಮಾಡಲು ಏನೂ ಕೆಲಸವಿಲ್ಲ.....*

*ನಾಯಿಗೆ ಕೂಡಲು ಪುರುಸೊತ್ತು ಇಲ್ಲ, ಮಾಡಲು ಏನೂ ಕೆಲಸವಿಲ್ಲ.....*

ಏನು ಹೇಳಿದರೂ ನನಗೆ ಸಮಯವೇ ಇಲ್ಲ, ನಾನು ತುಂಬ ಬ್ಯುಸಿ, ನನ್ನಿಂದಾಗದು, ಈ ಮಾತುಗಳನ್ನು ಅನೇಕ ಕಡೆ ಕೇಳಿರುತ್ತೇವೆ.

ನನಗೆ ಸಮಯ ಬೇಕಾದಷ್ಟು ಇದೆ, ಸಮಯದ ಕೊರತೆ ಇಲ್ಲ ಎಂದು ಹೇಳುವವರು ತುಂಬಾ ವಿರಳ. ಆದರೆ "ಟೈಮೇ ಇಲ್ಲ- ಸಮಯವಿಲ್ಲ" ಎಂದು ಹೇಳುವವರೇ ಎಲ್ಲರು.  ಮುಂಬಯಿ ಅಲ್ಲಿರುವಾಗ ನನಗೊಬ್ಬರು "ಮುಂಬಯಿಯಲ್ಲಿ ಯಾರಿಗೂ ಸಮಯ ಇಲ್ಲ. ಏನು ಮಾಡುತ್ತೇವೆ ಎಂದು ಕೇಳಬೇಡ" ಎಂದು ಹೀಗೆ ಹೇಳಿದ ಮಾತು ಕೇಳಿದ  ನೆನಪು. ಹಾಗೆ ನೋಡಿದರೆ ನಾವೂ ಏನೂ ಮಾಡುತ್ತಿಲ್ಲ, ಸಮಯ ಮಾತ್ರವಿಲ್ಲ. ಅಂತಹವರಿಗಾಗಿಯೇ....

"ನಾಯಿಗೆ ಕೂಡಲು ಪುರುಸೊತ್ತು ಇಲ್ಲ, ಮಾಡಲು ಏನೂ ಕೆಲಸವಿಲ್ಲ"  ಈ ಗಾದೆ ಮಾತು...

ಹೀಗೆಂದ ಮಾತ್ರಕ್ಕೆ ಏನೂ ಮಾಡುವದೇ ಇಲ್ಲ ಎಂದು ಹೇಳಲು ಹೊರಟಿಲ್ಲ. ಏನೇನೋ ಮಾಡುತ್ತೇವೆ. ಯಾವುದು ಉಪಯುಕ್ತ, ಎಷ್ಟು ಉಪಯುಕ್ತ, ಯಾವದು ಅನುಪಯುಕ್ತ ಎಂಬುವದರ ಕಡೆ ಗಮನವಿರುವದಿಲ್ಲ. ಹೆಚ್ಚು ಅನುಪಯುಕ್ತಗಳನ್ನೇ ಮಾಡುತ್ತಿರುತ್ತೇವೆ. "ಉಪಯುಕ್ತ ಅನುಪಯುಕ್ತ ಯಾವದು ಎಂದು ವಿಂಗಡಿಸಿಕೊಂಡರೆ ಸಮಯವ ಅವಶ್ಯವಾಗಿ ಸಿಕ್ಕೇ ಸಿಗುವದು."

*ಅನುಪಯುಕ್ತ ಕೆಲಸವೇ ಅಪ್ಯಾಯಮಾನ...*

ಕೆಲವೊಮ್ಮೆ ಅನುಪಯುಕ್ತ ಕೆಲಸವೇ ಅತ್ಯಂತ ಆಪ್ಯಾಯಮಾನವಾಗಿರುತ್ತದೆ. ಅಂತೆಯೇ ಅದರಲ್ಲಿ ತುಂಬ ತೊಡಗಿಕೊಳ್ಳುತ್ತೇವೆ. ಅಲ್ಲಿಯೇ ತುಂಬ ಸಮಯ ಹೋಗಿಬಿಡುತ್ತದೆ.

ಮೋಬೈಲು ವಿನಾಕಾರಣ ಸ್ವೈಪ್ ಮಾಡ್ತಾ ಕೂಡುವದು, ಟಿ ವಿ ಚಾನೆಲ್ಲುಗಳನ್ನು ಚೇಂಜ್ ಮಾಡ್ತಾ ಕೂಡುವದು ಹೀಗೆ ಏನೇನೋ ಕೆಲಸ ನಡೀತಾ ಇರುತ್ತವೆ "ಇವುಗಳಿಂದ ನನಗೆ ತೊಂದರೆ ಇದೆ ಎಂದು ಅಂತರ್ಧ್ವನಿ ಎಚ್ಚರಿಸುತ್ತಾ ಇರುತ್ತದೆ, ಆದರೆ ಅದನ್ನು ಅದುಮಿಟ್ಟು ನಮ್ಮ ಕೆಲಸದಲ್ಲಿ ಮಗ್ನರಾಗುರುತ್ತೇವೆ. 

*ಮತ್ತೆ ಕೆಲವುಗಳನ್ನು ಮುಂದೂಡುವದು.....*

ಕಲ ಕೆಲಸಗಳು ಅನಿವಾರ್ಯವಾಗಿರುತ್ತವೆ. *ಸಂಧ್ಯಾವಂದನೆ/ ಗಾಯತ್ರೀ ಜಪ/ ದೇವರ ಪೂಜೆ/ ರಾಮಕೃಷ್ಣ ಮಂತ್ರ ಜಪ/ ಓದುವದು/ ವ್ಯಾಯಾಮ ಯೋಗ/ ವಾಕಿಂಗ್* ಇವೆಲ್ಲ ಅನಿವಾರ್ಯ. ನಮಗೆ ಗೊತ್ತು. ಆದರೆ ಮಾಡಲು ಮನಸ್ಸಿಲ್ಲ. ವಿನಾಕಾರಣ ಮುಂದೂಡುತ್ತಿರುತ್ತೇವೆ. 

*ನಮ್ಮ ಸಮಯ ಎಂದರೆ ಕೆಲವರಿಗೆ ಖುಶಿ.....*

ಕೆಲವರಂತೂ ಅದ್ಭುತ ಇರುತ್ತಾರೆ. ಅವರಿಗೆ ನಮ್ಮ ಸಮಯ ಅಂದರೆ ಖುಶಿಯೋ ಖುಶಿ. ತಮ್ಮ ಕೆಲಸ ನೆನಪಾಗುವವರೆಗೆ ನಮ್ಮ ಸಮಯ ಕದಿತಾ ಇರುತ್ತಾರೆ. ಅದು ಗಂಟೆಗಳು ಆಗಬಹುದು, ದಿನಗಳು ಆಗಬಹುದು, ವರ್ಷವರ್ಷಗಳೇ ಆಗಬಹುದು.  "ನಮ್ಮ ಸಮಯವಿರುವದೇ ಅವರ ಸದ್ಬಳಕೆಗಾಗಿ" ಎಂದು ಅವರೇ ನಿರ್ಧರಿಸಿಕೊಂಡಿರುತ್ತಾರೆ. 

ಈ ಎಲ್ಲ ತರಹದ ಉಪಯುಕ್ತ ಅನುಪಯುಕ್ತ ವಿಷಯಗಳನ್ನು ವಿಂಗಡಿಸಿಕೊಂಡಾಗ ನಮಗೆ ಸಮಯವೂ ಸಿಗತ್ತೆ, ಮಾಡಲು ಉಪಯುಕ್ತ ಕೆಲಸಗಳೂ ದೊರೆಯುತ್ತವೆ. ಆ ಗಾದೆ ಮಾತೂ ನಮ್ಮ ತಂಟೆಗೂ ಬರುವದಿಲ್ಲ. 

ಬೇಳಿಗ್ಗೆ ಎಂಟರಿಂದ ರಾತ್ರಿ ಎಂಟರ ವರೆಗೆ ಒಂದುದಿನ ನಮ್ಮ ದಿನನಿತ್ಯದ ಕೆಲಸಗಳನ್ನು ಮಾಡುತ್ತಾ, "ಮೊಬೈಲು, ಟೀವಿ, ಹಗಲು ನಿದ್ರೆ, ವಿನಾಕಾರಣ ಹರಟೆ" ಈ ಮೂರನ್ನು ಬಿಟ್ಟು  ನೋಡೋಣ, ರಾತ್ರಿ ಮಲಗಿದಾಗ ದಿನದ ಅನುಭವವನ್ನು ಅವಲೋಕಿಸೋಣ...... 😊😊

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*