*ಊಟ - ನಿದ್ರೆ ಮಾಡಲು ಬರುತ್ತದೆಯಾ..... ???*

*ಊಟ - ನಿದ್ರೆ ಮಾಡಲು ಬರುತ್ತದೆಯಾ..... ???*

"ಊಟ - ನಿದ್ರೆ ಮಾಡಲು ಬರುತ್ತದೆಯಾ..... ???ಬರತ್ತೆ ಎಂದೆ. ಹಾಗಾದರೆ ನಿನಗೆ ಊಟ ನಿದ್ರೆ ಕಲಿಸುವ ಕಾಲ ಸನ್ನಿಹಿತವಾಗಿದೆ ಎಂದರು." ನನಗೋ  ಈ ಮಾತಿಗೆ ಏನು ಉತ್ತರಿಸಬೇಕೋ ಸ್ವಲ್ಪ ಗೊಂದಲವಾಯಿತು. "ಮಾತಾಡಿ ಅವಮಾನಕ್ಕೆ ಗುರಿಯಾಗುವದಕ್ಕಿಂತಲೂ, ಮಾತಾಡದೇ ಗೌರವ ಉಳಿಸಿಕೊಳ್ಳುವದು ಲೇಸು" ಎಂದು ಭಾವಿಸಿ ಸುಮ್ಮನಾದೆ. 

ಅಂದಿನಿಂದ ಅನೇಕ ದಿನಗಳವರೆಗೆ "ಊಟ - ನಿದ್ರೆ ಮಾಡಲು ಕಲೆತೆಯಾ..... ???" ತಲೆಯಲ್ಲಿ ಕೊರಿತಾ ಇದೆ. ಮೊನ್ನೆ ಉಡಪಿಯಲ್ಲಿ ಉಥತರಾದಿ ಮಠ ಶ್ರೀಗಳನ್ನು ಹಾಗೂ ಫಲಿಮಾರು ಮಠ ಶ್ರೀಗಳನ್ನು ನೋಡಿದಾಗ ಉತ್ತರ ಸಿಕ್ಕಿತು.  ಉತ್ತರ ಕೊನೆಗೆ ತಿಳಿಯೋಣ... 

ಊಟ ಹಾಗೂ ನಿದ್ರೆಯೇ ಜೀವನದ ಉದ್ಯೇಶ್ಯ ಆದರೆ ಇಂದು ನಮಗೆ ಅಕ್ಷರಶಃ ಊಟ ಹಾಗೂ ನಿದ್ರೆ ಮಾಡಲೇ ಬರುವದಿಲ್ಲ. ಇಂದಿನ ಯುವಕರಿಗೆ ಈ ಎರಡನ್ನೂ ಚೆನ್ನಾಗಿ ಕಲಿಸುವದು ಅನಿವಾರ್ಯ. 

"ಊಟ ಮಾಡುವದು ಪುಷ್ಟನಾಗಿ ಇರಲು. ನಿದ್ರೆ ಮಾಡುವದು  ಆಯಾಸ ದಣಿವು ಕಳೆದುಕೊಳ್ಳಲು." ಆದರೆ ಇಂದು ಊಟ ಹೀಗಾಗಿರತ್ತೆ ಎಂದರೆ ಊಟವಾದ ಕ್ಷಣಕ್ಕೆ ತುಂಬಾ ಆಯಾಸು ದಣಿವಾಗಿ, ಕಣ್ಣು ಮುಚ್ಚಲೇ ಆರಂಭಿಸಿರುತ್ತದೆ. ನಿದ್ರೆ ಆವರಿಸಿಯೇ ಬಿಡುತ್ತದೆ. ದಿನದ ದಣಿವು ನಿವಾರಿಸಿಕೊಳ್ಳಲು ನಿದ್ರೆ ಅನಿವಾರ್ಯ. ಎಂಟು ಗಂಟೆ ಮಾಲಗಿ ಎದ್ದರೂ, ಎದ್ದಾಕ್ಷಣ ಲವಲವಿಕೆ ಇರದೇ,  ಇನ್ನೂ ಆಯಾಸ ದಣಿವು ನಿದ್ರೆಗಣ್ಣಲ್ಲಿ ಸೂಸುತ್ತಿರುತ್ತದೆ. ಆದರೆ....

*ಊಟ...*

ಊಟ ಮೊದಲಿಗೆ ದೇವರ ನೈವೆದ್ಯವಾಗಿರಬೇಕು. ದೇಹ ಮನಸ್ಸುಗಳಿಗೆ ಎಷ್ಟು ಹಿತವೋ ಅಷ್ಟೇ ಊಟವಾಗಿರಬೇಕು. ಮನೆಯ ಊಟ ತುಂಬ ಪ್ರಶಸ್ತ. ಯಾವ ಅಡಿಗೆ ಶಾಸ್ತ್ರವಿಹಿತವೋ ಅದೇ ಅಡಿಗೆಯಾಗಿರಬೇಕು. ರೋಗ ನಿರೋಧಕ ಅನೇಕ ಅಡುಗೆಗಳಿರಬೇಕು. ಇನ್ನೂ ಸ್ವಲ್ಪ ಹಸಿವು ಉಳಿದಿದೆ ಎಂದಾದಾಗ ಊಟ ಮುಗುದಿರಬೇಕು. *ಊಟವಾದ ಮೇಲೆ ದಣಿವಾಗದೇ, ಅತ್ಯಂತ ಲವವಿಕೆಯಿಂದಿರುವಂತಾಗಬೇಕು.*  ಹೀಗಾದಾಗ ಊಟ ಸಾರ್ಥಕವಾಗತ್ತೆ. ಹೀಗೆ ಊಟದ ಪರಿಕಲ್ಪನೆ ಸಾಗುತ್ತದೆ..

*ನಿದ್ರೆ...*

ದಿನದ ಮಾನಸಿಕ ದೈಹಿಕ ಐಂದ್ರಿಯಕ ನೂರಾರು ತರಹದ ದಣಿವನ್ನು ನಿವಾರಿಸಲೇ *ನಿದ್ರೆ* ಮಾಡುವದು. ನಿದ್ರೆ ಆದಮೇಲೂ ದಣಿವಿದೆ ಎಂದರೆ ಅದು ನಿದ್ರೆಯೆಂದಾಗದು. ಅದೊಂದು ಕ್ರಿಯೆ ಕಾರ್ಯ ಎಂದಾಗುತ್ತದೆ ಅಷ್ಟೆ. 

ದೇವರನ್ನು ನೆನೆದು, ದೇವರ ಅದ್ಭುತ ಕರುಣೆಯನ್ನು ಅನುಭವಿಸಿ, ನಿದ್ರೆಯನ್ನೇ ಸೃಷ್ಟಿ ಮಾಡಿರಲಿಲ್ಲ ಎಂದರೆ ಎನ್ನವಸ್ಥೇ ಏನಾಗಬಹುದಿತ್ತು ಎಂದು ಊಹಿಸಿ, ಹತ್ತು ನಿಮಿಷ ಕಣ್ಣುಮುಚ್ಚಿ ಏಕಾಗ್ರದಿಂದ ಧೇನಿಸಿ, ಮನಸದಸಿನಲ್ಲಿ ಕಳವಳಕಾರಿಯಾದ,  ಗೊಂದಲವೆಬ್ಬಿಸುವ, ಕೋಪ, ಹತಾಶೆ, ಮಾತ್ಸರ್ಯ, ಹಗೆ, ಟೆನ್ನಶೆನ್, ಈ ತರಹದ ಎಲ್ಲವನ್ನೂ ಮನಸ್ಸಿನಿಂದ ಹೊರಗೆ ಹಾಕಿ, ನಾಳೆಯ ಗುರಿ -  ನಿರ್ಧಾರಗಳನ್ನು ಯೋಚಿಸಿ, ಪ್ರಶಾಂತವಾದ ಸ್ಥಳದಲ್ಲಿ  ಅತ್ಯಂತ ಪ್ರಶಾಂತವಾಗಿ ನಾಲಕೈದು ಗಂಟೆ ನಿದ್ರೆಯಾದರೂ ಸಾಕು ಮತ್ತೆ ಇಪ್ಪತ್ತುನಾಲ್ಕು ಗಂಟೆ ಲವಲವಿಕೆ ತುಂಬಿ ತುಳುಕುತ್ತಿರುತ್ತದೆ... ಹೀಗೆ ನಿದ್ರೆ ಆಗುವದು ಅನಿವಾರ್ಯ. 

*ದೊರೆತ ಉತ್ತರ....* 

ಶ್ರೀಗಳವರು ಎಷ್ಟು ಊಟ ಮಾಡುತ್ತಾರೆ ತಿಳಿಯದು, ಎಷ್ಟು ನಿದ್ರೆ ಮಾಡುತ್ತಾರೋ ಅದೂ ತಿಳಿಯದು. ಶ್ರೀಗಳವರುಗಳಿಂದ ನಾನಂತೂ ತುಂಬ ದೂರದವ.  ಹಾಗಾಗಿ ಏನೂ ಗೊತ್ತಿಲ್ಲದವ. ಆದರೆ ಊಟವಾದಮೇಲಿನ, ನಿದ್ರೆ ಇಂದ ಎದ್ದಮೇಲಿನ ಅವರ ಅವಸ್ಥೆಯನ್ನು ಗಮನಿಸಿದಾಗ ಒಂದಂತೂ ಅನಿಸುತ್ತದೆ *ಊಟ - ನಿದ್ರೆ*  ಮಾಡಿದರೆ ಇವರ ಹಾಗೆ ಮಾಡಬೇಕು ಎಂದು. 

*ಏನಿದೆ ಅವರ ಊಟ ನಿದ್ರೆಯಲ್ಲಿ...??*

ಮೇಲನದೇ ಏನಿದೆ ಗೊತ್ತಿಲ್ಲ. ಆದರೆ ಊಟವಾದಮೇಲಿನ ಅವರ ಲವಲವಿಕೆ ಎಂಥ ಯುವಕರಿಗೂ ಮಾರ್ಗದರ್ಶನ. ಊಟದ ನಂತರ ಸಾವಿರಾರು ಜನರಿಗೆ ಮುದ್ರೆ ಮಂತ್ರಾಕ್ಷತೆ ಕೊಡಬೇಕು ಎಂದರೆ ಅವರ ಊಟಕ್ಕೇ ನಮೋ... 
ನಿದ್ರೆಯೂ ಅಷ್ಟೆ. "ಮಲಗುವದೂ ಹನ್ಬೆರಡ ನಂತರ, ಏಳುವದು ನಾಲಕರ ಒಳಗೆ" ಹೀಗಿದ್ದರೂ ಎದ್ದ ಕ್ಷಣಕ್ಕೇನೆ ಒಂದರನಂತರ ಒಂದರಂತೆ ಕ್ಷಣಬಿಡದೆ ಆರಂಭ ಅಧ್ಯಯನ, ಪಾಠ, ಜಪ, ಆಹ್ನೀಕ, ಪೂಜೆ, ಪಾದಪೂಜೆ, ಮುದ್ರಾಧಾರಣೆ ಹೀಗೆ ಸಾಗುತ್ತಾ ಹೋಗುತ್ತವೆ. ಇದರಿಂದ ತಿಳಿಯಿತು ಫ್ರೆಶ್ ನಿದ್ರೆ ಆಗಬೇಕಾದರೆ, ಹೀಗೆ ನಿದ್ರೆ ಮಾಡುವದು ಅನಿವಾರ್ಯ ಎಂದು.

ಇದನ್ನು ಗಮನಿಸಿದಾಗ ನನಗಂತೂ ಒಂದನಿಸಿತು "ನನಗೆ ನಿದ್ರೆ - ಊಟಗಳನ್ನು ಮಾಡಲು ಬರುವದಿಲ್ಲ" ಎಂದು. ಇವುಗಳು  ನೂರರಷ್ಟು ಸರಿಯಾಗಿ ಆಗಬೇಕಾದರೆ ಪುಣ್ಯವಿರಬೇಕು. ಆ ಪುಣ್ಯಕ್ಕಾಗಿ ಪುರುಷರೆಲ್ಲರೂ *ಸಂಧ್ಯೆ/ ಜಪ/ ಪೂಜೆ* ಇವುಗಳನ್ನು ತಪ್ಪದೇ ಆಚರಿಸೋಣ. ಸ್ತ್ರೀಯರೆಲ್ಲರೂ *ರಾಮ ಕೃಷ್ಣ/ ಅಚ್ಯುತಾನಂತಗೋವಿಂದ* ಜಪ ತಪ್ಪದೇ ಮಾಡುವಂತಾಗಿ ನಾವೆಲ್ಲರೂ ಸರಿಯಾದ ಊಟ ನಿದ್ರೆಮಾಡುವದು ಕಲಿಯೋಣ...

*✍🏽✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*