*ಅತೀ ಹೆಚ್ಚು ಬಳಿಕೆಯಲ್ಲಿ ಬರುವ ಆಧ್ಯಾತ್ಮಿಕ ಪದ ಎಂದರೆ "ದೇವರು" ಪದ..*
  *ಅತೀ ಹೆಚ್ಚು ಬಳಿಕೆಯಲ್ಲಿ ಬರುವ ಆಧ್ಯಾತ್ಮಿಕ ಪದ ಎಂದರೆ "ದೇವರು" ಪದ..*      ಅತೀ ಹೆಚ್ಚು ಬಳಿಕೆಗೆ ಬರುವ ಅಧ್ಯಾತ್ಮಿಕ ಪದ ಯಾವದು ಎಂದು ನನಗೆ ಒಬ್ಬರು ಪ್ರಶ್ನೇ ಕೇಳಿದರು. *ದೇವರು* ಎಂಬ ಪದ ಎಂದು ನನ್ನ ಉತ್ತರವಾಗಿತ್ತು.      "ದೇವರು" ಎಂಬ ಪದ ಶ್ರೇಷ್ಠ ಪದ. ಕ್ರೀಡಾದಿ ಅನೇಕ ಗುಣಗಳಿಯುಕ್ತನಾದವ ನಮ್ಮ ಸ್ವಾಮಿ ಎಂದು ನಾರಾಯಣನನ್ನು ಕರೆಯುವ ಉತ್ತಮ ಪದ *ದೇವ* ಕನ್ನಡದಲ್ಲಿ ಆ ಪದವೇ *ದೇವರು* ಎಂದು ಚಾಲತಿಯಲ್ಲಿ ಬಂದಿದೆ.      "ದೇವರು" ನಮ್ಮ ಕೆಲಸಕ್ಕೆ ಅತ್ಯುಪಯುಕ್ತವಾದ ಪದ.  ಈ ಪದಕ್ಕಿಂತಲೂ ಉತ್ತಮ ಪದತ್ತೊಂದು ಸಿಗಲಾರದು. ಬೇರೆಯ ಪದಗಳು ಸಿಕ್ಕಿವೆ  ಎಂದರೆ ಆ ಎಲ್ಲ ಪದಗಲೂ ದೇವರದ್ದೇ ಆಗಿರುತ್ತವೆ.      ಮಾನವ ಕೋಟಿಯ ಆಕಾಂಕ್ಷೆಗಳು ಈಡೇರಿಸುವ, ಭರವಸೆ ಕೊಡುವ, ಸಂತೋಷ ಪ್ರದವಾದ, ನೆಮ್ಮೆದಿಯನ್ನು ಸುರಿಸುವ ಪದ *ದೇವರು* ಎಲ್ಲವೂ ಯಾವೊಂದರಲ್ಲಿ ಇದೆ ಆ ಪದವೇ *ದೇವರು*  ಏಕೆಂದರೆ ದೇವರೇ ಅಲ್ಲವೆ *ದೇವರು* ಎಂಬ ಹೆಸರಿನಿಂದ ಕರೆಸಿಕೊಳ್ಳುವವನು.   ಈಗ ಈ ಪದವನ್ನು ಬದಲಾಯಿಸಲಿಕ್ಕೇ ಸಾಧ್ಯವೇ ಇಲ್ಲ. ಏಕೆಂದರೆ....     "ದೇವ" ಎಂಬ ಈ ಪದ, ಪದದ ಮತವಾದ ಭಾವಾರ್ಥ, ಅದನ್ನು ತಿಳಿದು, ಪದದಿಂದ ವಾಚ್ಯ ಶ್ರೀಹರಿಯನ್ನು ಸಾಕ್ಷಾತ್ಕಾರ ಮಾಡಿಕೊಂಡವರೇ ಈ ಪದದ ಅಭಿವ್ಯಕ್ತಿಗೆ ಕಾರಣರಾದರು. ಹೀಗೆ ಜ್ಙಾನಿಗಳಿಂದ ಅಭಿವ್ಯಕ್ತವಾದ ಈ ಪದ ಕ್ರಮವಾಗಿ ಅಜ್ಙಾನಿಗಳಲ್ಲೂ ಪ್ರಸಿದ್ದಿಗೊಂಡ...
 
 
 
 
 
 
 
 
