*ಅತೀ ಹೆಚ್ಚು ಬಳಿಕೆಯಲ್ಲಿ ಬರುವ ಆಧ್ಯಾತ್ಮಿಕ ಪದ ಎಂದರೆ "ದೇವರು" ಪದ..*
*ಅತೀ ಹೆಚ್ಚು ಬಳಿಕೆಯಲ್ಲಿ ಬರುವ ಆಧ್ಯಾತ್ಮಿಕ ಪದ ಎಂದರೆ "ದೇವರು" ಪದ..*
ಅತೀ ಹೆಚ್ಚು ಬಳಿಕೆಗೆ ಬರುವ ಅಧ್ಯಾತ್ಮಿಕ ಪದ ಯಾವದು ಎಂದು ನನಗೆ ಒಬ್ಬರು ಪ್ರಶ್ನೇ ಕೇಳಿದರು. *ದೇವರು* ಎಂಬ ಪದ ಎಂದು ನನ್ನ ಉತ್ತರವಾಗಿತ್ತು.
"ದೇವರು" ಎಂಬ ಪದ ಶ್ರೇಷ್ಠ ಪದ. ಕ್ರೀಡಾದಿ ಅನೇಕ ಗುಣಗಳಿಯುಕ್ತನಾದವ ನಮ್ಮ ಸ್ವಾಮಿ ಎಂದು ನಾರಾಯಣನನ್ನು ಕರೆಯುವ ಉತ್ತಮ ಪದ *ದೇವ* ಕನ್ನಡದಲ್ಲಿ ಆ ಪದವೇ *ದೇವರು* ಎಂದು ಚಾಲತಿಯಲ್ಲಿ ಬಂದಿದೆ.
"ದೇವರು" ನಮ್ಮ ಕೆಲಸಕ್ಕೆ ಅತ್ಯುಪಯುಕ್ತವಾದ ಪದ. ಈ ಪದಕ್ಕಿಂತಲೂ ಉತ್ತಮ ಪದತ್ತೊಂದು ಸಿಗಲಾರದು. ಬೇರೆಯ ಪದಗಳು ಸಿಕ್ಕಿವೆ ಎಂದರೆ ಆ ಎಲ್ಲ ಪದಗಲೂ ದೇವರದ್ದೇ ಆಗಿರುತ್ತವೆ.
ಮಾನವ ಕೋಟಿಯ ಆಕಾಂಕ್ಷೆಗಳು ಈಡೇರಿಸುವ, ಭರವಸೆ ಕೊಡುವ, ಸಂತೋಷ ಪ್ರದವಾದ, ನೆಮ್ಮೆದಿಯನ್ನು ಸುರಿಸುವ ಪದ *ದೇವರು* ಎಲ್ಲವೂ ಯಾವೊಂದರಲ್ಲಿ ಇದೆ ಆ ಪದವೇ *ದೇವರು* ಏಕೆಂದರೆ ದೇವರೇ ಅಲ್ಲವೆ *ದೇವರು* ಎಂಬ ಹೆಸರಿನಿಂದ ಕರೆಸಿಕೊಳ್ಳುವವನು. ಈಗ ಈ ಪದವನ್ನು ಬದಲಾಯಿಸಲಿಕ್ಕೇ ಸಾಧ್ಯವೇ ಇಲ್ಲ. ಏಕೆಂದರೆ....
"ದೇವ" ಎಂಬ ಈ ಪದ, ಪದದ ಮತವಾದ ಭಾವಾರ್ಥ, ಅದನ್ನು ತಿಳಿದು, ಪದದಿಂದ ವಾಚ್ಯ ಶ್ರೀಹರಿಯನ್ನು ಸಾಕ್ಷಾತ್ಕಾರ ಮಾಡಿಕೊಂಡವರೇ ಈ ಪದದ ಅಭಿವ್ಯಕ್ತಿಗೆ ಕಾರಣರಾದರು. ಹೀಗೆ ಜ್ಙಾನಿಗಳಿಂದ ಅಭಿವ್ಯಕ್ತವಾದ ಈ ಪದ ಕ್ರಮವಾಗಿ ಅಜ್ಙಾನಿಗಳಲ್ಲೂ ಪ್ರಸಿದ್ದಿಗೊಂಡಿತು.
ಶ್ರೀಹರಿಯನ್ನು *ದೇವ* ಎಂದು ಚಿಂತಿಸಿದ ಕಾರಣವೇ ಮೂರುಕೋಟಿ ಜನರು ದೇವತೆಗಳು ಆದರು.
*ಜ್ಙಾನಿಗಳು ಸಾಕ್ಷಾತ್ಕರಿಸಿಕೊಂಡರು, ಅಜ್ಙಾನಿಗಳು ಕೆಲೊಮ್ಮೆ ಮೂಢವಾಗಿ ನಂಬಿದರು.*
ಜಗತ್ತಿನಲ್ಲಿ ಏನಿದೆ ಅದೆಲ್ಲವೂ "ದೇವರು" ಎಂಬ ಪದದೊಂದಿಗೆ ಸಂಬಂಧಿಸಿರುವದೇ ಆಗಿದೆ. ಸ್ವಾಮಿ ಭೃತ್ಯ. ನಿಯಮ್ಯ ನಿಯಾಮಕ. ಅಂತರ್ಯಾಮಿ ಅಧಿಷ್ಠಾನ ಹೀಗೆ ಒಂದಿಲ್ಲ ಒಂದು ಸಂಬಂಧಕ್ಕೆ ಸಿಲುಕಿದೆ. ದೇವರಿದ್ದಾನ ನೋಡು ಎಂದರೆ ದುಷ್ಟ ಹೆದರುತ್ತಾನೆ. ದೇವರಾಣೆ ಎಂದರೆ ಶಿಷ್ಟ ನಂಬುತ್ತಾನೆ.
"ಅಣುರೇಣು ತೃಣಕಾಷ್ಠ" ಗಳಲ್ಲಿ ವ್ಯಾಪ್ತ ಹಾಗೂ ಪರಿಪೂರ್ಣ ಈ ಆತ್ಮಾ. ಆ ಆತ್ಮನನ್ನು ಗುರುತಿಸುವ ಒಂದು ಪದ *ದೇವರು* ಎಂಬ ಪದ. ಅಂತೆಯೇ ಅನೇಕ ಕಡೆಗೆ ದೇವರು ಸ್ವಯಂ ತಾನು ಅನಂತವಾದ ಪ್ರೀತಿಯನ್ನು, ಕಾಮಧೇನುವಿನ ಕೊಡಗೆಚ್ಚಲಂತೆ ತುಂಬಿ ತುಳಿಕಿಸಿ, ಹಾಲುಣಿಸಿ ಸಂರಕ್ಷಿಸಿರುವದನ್ನು ಕಾಣುತ್ತೇವೆ. ಶಾಸ್ತ್ರಗಳಲ್ಲಿ ಈ ತರಹದ ಕಾರುಣ್ಯದ ಸಿಂಚನವನ್ನು ಮಾಡಿಯೇ ದೇವರೆಡೆಗೆ ನಮ್ಮ ಮನಸ್ಸಿನ್ನು ವಿಕಾಸ ಪಡಿಸಿ, ದೇವರಲ್ಲಿಯ ಭರವಸೆ ವಿಶ್ವಾಸಗಳು ಹೆಮ್ಮರವಾಗಿ ದೃಢವಾಗಿ ಬೆಳೆಯುವಂತೆ ಮಾಡುತ್ತದೆ.
"ಎಲ್ಲರಲ್ಲಿಯೂ ದೇವರು ಇದ್ದಾನೆ ಎಂಬ ಅರಿವೇ, ಎಲ್ಲರಲ್ಲಿಯೂ ಪ್ರೀತಿ ಗೌರವ ಅಭಿಮಾನಗಳನ್ನು ಬೆಳಿಸುತ್ತದೆ." ಎಲ್ಲರೂ ದೇವರ ದಾಸರು ಎಂಬ ಭಾವವೇ ನಾವೆಲ್ಲ ಒಂದೇ ಎಂಬ ಮನೋಭಾವ ಹುಟ್ಟತ್ತೆ" ಅಂತೆಯೇ ದೇವರನ್ನು ಹೊಂದುವದೇ ನಮ್ಮೆಲ್ಲರ ಗುರಿ ಆಗಿದೆ ಎಂದೂ ತಿಳಿಸುತ್ತದೆ. ಅಂತರ್ಯಾಮಿ ದೇವರಂತೆ, ನಮ್ಮ ಯೋಗ್ಯತಾನುಸಾರ ನಾವೂ ಸುಖಪೂರ್ಣರಾಗಲು ಯಾಕೆ ತಪಿಸಬಾರದು ಎಂಬ ಭಾವವನ್ನೂ ಹುಟ್ಟಿಸುತ್ತದೆ.
ಆ ಕಾರಣದಿಂದಲೋ ಏನೋ *ದೇವರು* ಎಂಬ ಪದ ದೃಢವಾಗಿದೆ, ಅಂದಿನಿಂದ ಮರೆಯಲಾಗಿಲ್ಲ. ಬೆರೆಯದೇ ಆದ ಪದವನ್ನು ಬಳಿಸಲೂ ಆಗುವದಿಲ್ಲ. ಬಳಿಸಿದ್ದೆವೆ ಎಂದಾದರೆ ದೇವರದ್ದೇ ಆಗಿರುತ್ತದೆ. ಅಂತೆಯೇ ಆಡುಭಾಷೆಗಳಲ್ಲಿಯೂ, ನಮ್ಮೆಲ್ಲರ ಮನೆ ಮನಗಳಲ್ಲಿಯೂ *ದೇವರು* ಎಂಬ ಪದ ಹಾಸುಹೊಕ್ಕಾಗಿದೆ...
*✍🏻✍🏻✍🏻ನ್ಯಾಸ*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ
Comments