*ಶ್ರೀಮದಾಚಾರ್ಯರು.....*
*ಶ್ರೀಮದಾಚಾರ್ಯರು.....*
*ಜಗದ್ಧೀತಾಯ ಮಧ್ವಾಯ ಆನಂದಾಯ ಚ ನಮೋ ನಮಃ* ಜಗತ್ತುನ ಹಿತಕ್ಕಾಗಿ, ಕ್ಷೇಮಕ್ಕಾಗಿ, ಮಂಗಳವನ್ನು ಉಂಟುಮಾಡಲೇ ಭುವಿಗೆ ಇಳಿದು ಬಂದ, ಮಧ್ವಾಚಾರ್ಯರಿಗೆ ಆನಂದತೀರ್ಥರಿಗೆ ನಮೋ ನಮಃ.
ಅವತಾರದ ಹಿನ್ನಲೆ....
ಜಗತ್ತಿಗೆ ಬೆಳಕು ಕೊಡುವ ಮುಖಾಂತರ ಬದುಕನ್ನು ಕೊಡುವ ದೊರೆ ಸೂರ್ಯನಾದರೆ, ಹೃದಯದ ಗಾಢಾಂಧಕರವನ್ನು ನಾಶಮಾಡಿ ವಿಜ್ಙಾನ ಬೆಳಕನ್ನು ಕೊಡುವ ಹೆದ್ದೊರೆ ಎಂದರೆ *ಭೀಮಸೇನದೇವರಿಂದ ಸಂಸ್ಥಾಪಿಸಲ್ಪಟ್ಟ ವಿಜ್ಙಾನವೆಂಬ ಸೂರ್ಯ.* ಭೀಮಸೇನದೇವರು ಪರಂಧಾಮಕ್ಕೆ ಹೋದ ತರುವಾಯ, ಅವರಿಂದ ಸಂಸ್ಥಾಪಿತವಾದ *ತತ್ವಜ್ಙಾನ* ವೆಂಬ ಸೂರ್ಯ ನಾಲಕು ಸಾವಿರ ವರ್ಷಗಳವರೆಗೆ ನಿರಂತರ ಪ್ರಜ್ವಲಿಸುತ್ತಿದ್ದ. ಸಮಯ ಕಳೆದ ಹಾಗೆ *ತತ್ವಜ್ಙಾನ* ವೆಂಬ ಸೂರ್ಯ ಮುಣುಗಿದನೋ ಆಗ ಜಗತ್ತಿನ ಆನಂದಮಾರ್ಗದ ಬದುಕೇ ಅಸ್ತಂಗತವಾದಂತೆ ಆಯಿತು.
*ವಿಜ್ಙಾನವೆಂಬ ಸೂರ್ಯ* ಅಸ್ತಂಗತನಾದಾಗ ಜ್ಙಾನದ ಬೆಳಕು ಕಾಣದ, ಮುಕ್ತಿಯೋಗ್ಯ ಮಹಾಭಾಗವತೋತ್ತಮರಾದ ಎಲ್ಲ ಋಷಿ ಮುನಿಗಳು ತುಂಬ ನೊಂದು, ಬೆಂದು, ಹತಾಶರಾಗಿ ದೇವತೆಗಳ ಮುಖಾಂತರ ದೇವರಿಗೆ ಶರಣು ಹೋಗುತ್ತಾರೆ.
ಸರ್ವಜ್ಙ, ಸರ್ವೋತ್ತಮ, ಜಗತ್ತಿನ ಸೃಷ್ಟ್ಯಾದಿಕರ್ತೃ, ಶರಣಾಗತ ವತ್ಸಲನಾದ ದೇವ ಉತ್ತಮ ಉಪಾಯವನ್ನೇ ಮಾಡಿ, ನಾನು ಮೂರು ಯುಗದಲ್ಲಿ ಮಾತ್ರ ಅವತರಿಸುವೆ, ಕಲಿಯುಗದಲ್ಕಿ ನಾನು ಅವತಾರ ಮಾಡಲಾರೆ. ಬ್ರಹ್ಮದೇವರಿಗಂತೂ ಭೂಮಿಯಲ್ಲಿ ಅವತಾರವೇ ಇಲ್ಲ. ಆದ್ದರಿಂದ *ಸ್ವಕಾರ್ಯವೀರ್ಯಮ್* ತನ್ನ (ಭಗವಂತನ) ಕಾರ್ಯವನ್ನು ಪ್ರತಿಶತಃ ನೂರರಷ್ಟು ಉತ್ತಮರೀತಿಯಲ್ಲಿ ಮಾಡುವ ದೇವತೆಗಳಲ್ಲಿ ಸರ್ವೋತ್ತಮರಾದ, ದಕ್ಷರಾದ, ಸರ್ವಸಮರ್ಥರಾದ, ಅಜ್ಙಾನ- ವಿಪರೀತಜ್ಙಾನ- ಮೋಹ- ಭ್ರಾಂತಿ ಇತ್ಯಾದಿ ಯಾವ ದೋಷಗಳೂ ಇಲ್ಲದ, ಅನಂತಗುಣಪೂರ್ಣರೂ ಆದ ಅಂತೆಯೇ ಜೀವೋತ್ತಮರಾದ *ವಾಯುದೇವರನ್ನು* ನೋಡಿ ಆದೇಶಿಸುತ್ತಾನೆ ಶ್ರೀಹರಿ.
*ತತ್ವಜ್ಙಾನ* ವೆಂಬ ಸೂರ್ಯ ಗ್ರಸ್ತನಾಗಿದ್ದಾನೆ. ಆ ಗ್ರಹಣವನ್ನು ದೂರೋಡಿಸಿ, ಎಂದೂ ಅಸ್ತಂಗತವಾಗದ *ತತ್ವಜ್ಙಾನ* ವೆಂಬ ಸೂರ್ಯನ ಪ್ರಕಾಶವನ್ನು, "ವೇದಾಂತಮಾರ್ಗದಿಂದ ದೂರಾದ, ಅತ್ಯಂತ ದೀನರಾದ, ದೈವ ಭಕ್ತರಾದ, ಶರಣರು ಇಲ್ಲದೇ ನೊಂದು ಹೋಗಿರುವ, ಆಪತ್ತಿನಲ್ಲಿ ಇರುವ, ಏನೆಲ್ಲ ಸದ್ಭಕ್ತರು ಇದ್ದಾರೆಯೋ ಅವರೆಲ್ಲರ ಜೀವನ ಸುಗಮವಾಗಿಸು, ಅನಂದ ಮರ್ಗದಲ್ಲಿರಿಸು, ಮುಕ್ತಿಮಾರ್ಗ ದೊರೆಯುವಂತೆ ಮಾಡಿ ಆ ಎಲ್ಲರನ್ನೂ *ಆನಂದದಲ್ಲಿರಿಸು."* ಎಂದು ದೇವರು ಆದೇಶಮಾಡುತ್ತಾನೆ. *ಇದುವೇ ನಮ್ಮ ಬಗ್ಗೆ ಇರುವ ಅತ್ಯಂತ ಕಳಕಳಿ. ಅಂತೆಯೇ ದೇವರು ನಮಗೆ "ಅತಿಹಿತ."*
ದೇವರ ಕಳಕಳಿ, ಆಚಾರ್ಯರ ದಯೆಯ ಕೂಸುಗಳೇ *ಸರ್ವಮೂಲ ಗ್ರಂಥಗಳು.*
ಮೋಕ್ಷಮಾರ್ಗತೋರುವ, ದೇವರನ್ನೇ ತಂದು ಮನದಲ್ಲಿ ಮನೆಯಲ್ಲಿ ತಂದು ಕೂರಿಸುವ, ಜೀವನದ ಕೈಗನ್ನಡಿಯಾದ, ಸಮಾಧಾನ- ಶಾಂತಿ - ಸಮೃದ್ಧಿ- ಐಶ್ವರ್ಯ ಇವುಗಳನ್ನು ನಿರಂತರ ದಯಪಾಲಿಸುವ, ನಮ್ಮೆಲ್ಲರ ಜೀವನದ ಸಾರ್ಥಕತೆಯೇ ಮೂಲೋದ್ದೇಶ್ಯವಾದ, ನಮಗೋಸ್ಕರವೇ ರಚಿತವಾದ *ಸರ್ವಮೂಲಗ್ರಂಥಗಳನ್ನು* ನಾಡದ್ದು ವಸಂತ ಪಂಚಿಮಿ. ಅಂದಿನಿಂದ ಆರಂಭಿಸಿ ದಿನಕ್ಕೆ ಹತ್ತು ನಿಮಿಷವಾದರೂ ಸಾಕ್ಷಾತ್ ಗುರುಗಳಲ್ಲಿ ಪೋಗಿ, ಅಥವಾ phone, whatsapp, ಇತ್ಯಾದಿಗಳ ಮುಖಾಂತರವಾದರೂ ಅಡ್ಡಿಯಿಲ್ಲ, ಅಧ್ಯಯನವನ್ನು ಆರಂಭಿಸಿಯೇ ಬಿಡೋಣ. ಆ ತರಹದ ಪ್ರೇರಣೆಯನ್ನು *ಸಕಲ ಜೀವಪ್ರೇರಕರಾದ ಶ್ರೀಮದಾಚಾರ್ಯರೇ ಪ್ರೇರಿಸಲಿ* ಎಂದು ಪ್ರಾರ್ಥಿಸುತ್ತಾ ಅನಂತ ನಮನಗಳನ್ನು ಸಲ್ಲಿಸೋಣ....
*✍🏽✍🏽✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments