*ಬೆಳಕನ್ನು ಹೊರದಬ್ಬಿದರೆ ಕತ್ತಲು ಒಳ ಸೇರೀತು..
*ಬೆಳಕನ್ನು ಹೊರದಬ್ಬಿದರೆ ಕತ್ತಲು ಒಳ ಸೇರೀತು......*
ಕತ್ತಲು ಹಾಗೂ ಬೆಳಕು ಇವೆರಡೂ ಒಂದು ಇದ್ದಲ್ಲಿ ಇನ್ನೊಂದು ಇರದು. ಪರಸ್ಪರ ವಿರೋಧಿಗಳು. ಆದರೆ ಶತ್ರುಗಳು ಅಲ್ಲ. ಬೆಳಕು ಬಂದಲ್ಲಿ ಕತ್ತಲಿಗೆ ಹೋಗಬೆಕೆಂಬ ಬೇಸರಿಲ್ಲ. ಹಾಗೆಯೇ ಬೆಳಕು ಬಂದಾಗ ಕತ್ತಲಿಗೆ ಬೇಸರಿಲ್ಲದೆ ಹೋಗತ್ತೆ. ಆದರೆ ಕೂಡಿ ಇರುವದಿಲ್ಲ. ಒಂದಿದ್ದಲ್ಲಿ ಇನ್ನೊಂದು ಇರುವದಿಲ್ಲ. ಆದರೆ ಇವೆರಡರಲ್ಲಿ ಆರಿಸಿಕೊಳ್ಳುವದು ನಮಗೆ ಬಿಟ್ಟಿದ್ದು ಕತ್ತಲು ಬೇಕಾ ಬೆಳಕನ್ನು ಹೊರಗಟ್ಟು, ಬೆಳಕು ಬೇಕೇ ಕತ್ತಲನ್ನು ಹೊರಗಟ್ಟಬೇಕು. ಅಂತೂ ಯಾವದನ್ನು ಒಳಗೆ ಸೇರಿಸಬೇಕು ಎಂಬುವದು ಮಾತ್ರ ನಮಗೆ ಬಿಟ್ಟಿರೋದು.
ಬೆಳಕು ಹಾಗೂ ಕತ್ತಲಿನ ತರಹದ ಅನೇಕ ಗುಣ ಪದಾರ್ಥಗಳನ್ನು ನಾವು ಪಡೆಯುತ್ತೇವೆ. ಆಶಿಸಿ ಹಂಬಲಿಸಿ ಪಡೆದುಕೊಳ್ಳುತ್ತೇವೆ. ಅವುಗಳಲ್ಲಿ ಜ್ಙಾನ-ಅಜ್ಙಾನ, ಗುಣಗಳು-ದೋಷಗಳು, ಹಿತೈಷಿ ಸ್ನೆಹಿತರು-ಅಹಿತಮಾಡುವ ಮಿತ್ರರು, ಧರ್ಮ-ಅಧರ್ಮ, ಭಕ್ತಿ- ದ್ವೇಶ, ನಾಸ್ತಿಕತೆ-ಶ್ರದ್ಧೆ ಇವೆಲ್ಲವೂ ಒಂದು ಇರುವಲ್ಲಿ ಇನ್ನೊಂದು ಇರುವದಿಲ್ಲ. ಪರಸ್ಪರ ವಿರೋಧಿಗಳೂ ಹೌದು. ಒಂದನ್ನು ಪಡೆಯ ಬೇಕಾದರೆ ಇನ್ನೊಂದನ್ನು ಹೊರ ಹಾಕಲೇಬೇಕು. ಧರ್ಮವನ್ನೂ ಮಾಡುತ್ತೇನೆ, ಅಧರ್ಮವನ್ನೂ ಬಿಡುವದಿಲ್ಲ ಎಂದಾಗಲು ಸಾಧ್ಯವೇ ಇಲ್ಲ.
ಧರ್ಮ ಮಾಡುತ್ತೀಯಾ ಖಂಡಿತ ಮಾಡು. ಆದರೆ ಲೋಕಕ್ಕೆ ಅಧರ್ಮವೇ ರುಚಿ ಎಂದು ಭಾವಿಸಿ ಅಧಾರ್ಮಿಕ ಮುಖವಾಡ ಹಾಕಿಕೊಂಡು, ಒಳೊಗೊಳಗೆ ಧರ್ಮವನ್ನು ಸರ್ವಥಾ ಮಾಡಬೇಡ. ಅವೆರಡೂ ಒಂದೆಡೆ ಸೇರುವದೇ ಇಲ್ಲ. ಧರ್ಮದ ಪ್ರಭಾವ ಹೆಚ್ಚಿದ್ದರೆ ಧರ್ಮವಾದೀತು, ಅಧರ್ಮದ ಪ್ರಭಾವ ಹೆಚ್ಚಿದ್ದರೆ ಅಧರ್ಮವಾದೀತು. ಮೇಲೆ ಹೇಳಿದ ಎಲ್ಲದರಲ್ಲಿಯೂ ಹಾಗೆಯೇ ಆಗುವದು.....
ಒಂದೋ ನಾಸ್ತಿಕನಾಗು, ಇಲ್ಲವೋ ಆಸ್ತಿಕನಾಗು. ಎರಡೂ ಆಗ್ತೇನೆ ಅಂದರೆ ಆ ವ್ಯಕ್ತಿಗೆ ಯಾವದರ ಮೇಲೆಯೂ ದೃಢವಾದ ನಂಬುಗೆ ಇಲ್ಲ ಎಂದೇ ಅರ್ಥ. ಒಂದನ್ನು ದೃಢವಾಗಿ ನಂಬದವ ಸ್ನೇಹವನ್ನೂ ಮಾಡುತ್ತಾನೆ, ದ್ವೇಶವನ್ನೂ ಬಿಡಲಾರ. "ಭೀಷ್ಮಾಚಾರ್ಯ ಪಾಂಡವರ ಸ್ನೇಹವನ್ನೂ ಮಾಡಿದರು, ದುರ್ಯೋಧನನಿಗೆ ಸಾಹಾಯ ಮಾಡುವದನ್ನೂ ನಿಲ್ಲಸಲಿಲ್ಲ" ಹಾಗೆ ಆಗಲೇ ಬಾರದು. ಭೀಮನ ಹಾಗೆ ಪ್ರೀತಿಯನ್ನೇ ಮಾಡು ಇಲ್ಲವೋ ಜರಾಸಂಧನಂತೆ ದ್ವೇಶವನ್ನಾದರೂ ಸಾಧಿಸು. ಅದೂ ಇಲ್ಲ ಇದೂ ಇಲ್ಲ ಎಂದಾದರೆ ಯಾರಿಗೂ ಪ್ರಿಯನಾಗಲಾರಿ. ನಿಷ್ಠಾವಂತನೆಂದೆನಿಸಿಕೊಳ್ಳಲಾರಿ.
ಗುಣವಂತಿಕೆಯನ್ನು ದೂರ ಸರಿಸಿದರೆ, ದೋಷಗಳು ಮೈಗೂಡಿಸಿಕೊಳ್ಳುತ್ತವೆ. ಅಧ್ಯಯನದಿಂದ ವಿಮುಖನಾದರೆ, ಅಜ್ಙಾನ ತಾಂಡವವಾಡುತ್ತದೆ. ಭಕ್ತಿ ಕುಂಠಿತವಾದರೆ ದ್ವೇಶ ವೇಗ ಹೆಚ್ಚಿಸಿಕೊಳ್ಳತ್ತೆ. ಸಂಶಯಗಳು ಮನ ಮನೆ ಸೇರಿದಾಗ ವಿಶ್ವಾಸಕ್ಕೆ ಅಲ್ಲಿ ಅಸ್ಪದವಿರುವದಿಲ್ಲ. ತನ್ನ ದೃಢವಾದ ಶಕ್ತಿಯನ್ನೂ ಕಳೆದುಕೊಳ್ಳುತ್ತದೆ ವಿಶ್ವಾಸ. ಮೈಗಳ್ಳ ಆಲಸಿಯಾದರೆ, ಕ್ರಿಯಾಶೀಲತೆಗೆ ಕಡಿವಾಣ. ಆ ಪಕ್ಷದಲ್ಲಿಯೂ ಹೀಗೆಯೇ...
ನಮಗೇನು ಬೇಕು, ನಮಗೇನು ಹಿತ, ನಮಗ್ಯಾವದು ಅಹಿತ, ನಮಗ್ಯಾವದು ಬೇಡ ಎನ್ನುವದನ್ನು ನಾನು ಇಂದು ನಿಶ್ಚಯ ಮಾಡಿಕೊಂಡಿದ್ದೇನೆ ಎಲ್ಲವೂ ಅದರ ಮೇಲೆ ಅವಲಂಬಿಸಿದೆ.
ಬೇಳಕು ಬೇಕೇ... ?? ಕತ್ತಲು ಬೇಕೆ... ?? Chois ನನ್ನ ಕೈಯಲ್ಲಿ ಇದೆ. ಒಂದನ್ನು ಬಿಗದಪ್ಪಿಕೊಂಡರಾಯ್ತು ಇನ್ನೊಂದು ತಾನಾಗಿಯೇ ಹೊರಹೋಗುತ್ತದೆ.....
ಅಧರ್ಮವನ್ನು, ಅಜ್ಙಾನವನ್ನು, ದ್ವೇಶ ಶತ್ರುತಾಗಳನ್ನು, ಅಸಹನೆ ಮಾತ್ಸರ್ಯಗಳನ್ನು, ಸಂಶಯ ವಿಪರ್ಯಯಗಳನ್ನು, ನಾಸ್ತಿಕತೆಗಳೆಂಬ ಕಗ್ಗತ್ತಲನ್ನು ಹೊರ ದಬ್ಬೋಣ. ಆಗ ಧರ್ಮ ಜ್ಙಾನ ಭಕ್ತಿ, ಗುಣವಂತಿಕೆ ಸ್ನೇಹ ಪ್ರೀತಿಗಳೆಂಬ ಹದವಾದ ಬೆಳಕು ನಮ್ಮಸುತ್ತಲೂ ಹರಿದಾಡುತ್ತಿರುತ್ತದೆ.....
*✍🏽✍🏽✍🏽ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments