*ಶ್ರೀಮದಾಚಾರ್ಯರು....೨*
*ಶ್ರೀಮದಾಚಾರ್ಯರು....೨*
ವೇದವೇದ್ಯರಾದ, ನಿರ್ದುಷ್ಟ, ಸ್ಪಷ್ಟ, ಪೂರ್ಣಜ್ಙಾನವುಳ್ಳವರು ಆಗದ, ವೇದವ್ಯಾಖ್ಯಾನ, ವೇದಾರ್ಥನಿರ್ಣಯ ಮಾಡುವಂತಹ ವೇದಪ್ರವಚನಾಚಾರ್ಯರು ನಮ್ಮ ಶ್ರೀಮದಾಚಾರ್ಯರು.
ಅಂದಿನ ಕಾಲದಲ್ಲಿ ವೇದಗಳ ಮೇಲೆ ನೇರ ಧಾಳಿಗಳು ಆದಾಗ ವೇದಗಳ ರಕ್ಷಣೆಗೆ ಓಡಿ ಬಂದವರು ಅನೇಕರು. ಆದರೆ ವೇದಾರ್ಥಗಳ ರಕ್ಷಣೆ ಮಾತ್ರ ಶ್ರೀಮದಾಚಾರ್ಯರೇ ಮಾಡಿರುವಂತಹದ್ದು. ಒಂದರ್ಥದಲ್ಲಿ ಹೇಳುವದಾದರೆ "ಶ್ರೀಮದಾವಾರ್ಯರದ್ದೇ ಮೊನಾಪಲಿ" ಅಂದರೆ ತಪ್ಪಾಗ್ಲಿಕ್ಕಿಲ್ಲ.
ವೇದಗಳು ನಿರ್ದುಷ್ಟ, ಅಪೌರುಷೇಯ, ಪರಮ ಪ್ರಾಮಾಣಿಕ, ಪ್ರತಿಶತಃ ನೂರರಷ್ಟು ಫಲಪ್ರದ, ಭಗವದ್ಗುಣ ಪ್ರತಿಪಾದಕವಾಗಿವೆ ಎಂಬುವದೇ ಅನಾದಿ ಸತ್ಸಂಪ್ರದಾಯ. ಆ ಭವ್ಯ ಸಂಪ್ರದಾಯವನ್ನು ಸ್ಥಾಪನೆ ಮಾಡುವ ಮುಖಾಂತರ ವೈಷ್ಣವ ಸಿದ್ಧಾಂತ ಸ್ಥಾಪಿಸಿದವರು ಶ್ರೀಮದಾಚಾರ್ಯರು.
ಗೋಮತೀ ತೀರದಲ್ಲಿ ವಿಶ್ವಜ್ಙರಾದ, ಸರ್ವಜ್ಙರಾದ ಸರ್ವಜ್ಙಾಚಾರ್ಯರ ಬಳಿ ಒಬ್ಬರಾಜ ವಾಕ್ಯಾರ್ಥಕ್ಕೆ ಬರುತ್ತಾನೆ.
ಅಪೌರುಷೇಯವಾಗಿವೆ, ಫಲಪ್ರದವಾಗಿವೆ ವೇದ. ಆದ್ದರಿಂದ ಪರಮಪ್ರಾಮಾಣಿಕ ಎಂದು ಸಮರ್ಥಸಿಬೇಕು. ವೇದಗಳು ಪೂರ್ಣ ಫಲಪ್ರದವಾಗಿದ್ದರೆ *ಓಷಧ ಮಂತ್ರವನ್ನು ಪಠಿಸಿದಾಗ ವೇದದ ಪ್ರಭಾವದಿಂದ ಆ ಕ್ಷಣಕ್ಕೇನೆ ಗಿಡವಾಗಿ ಬೆಳೆಯಬೇಕು* ಹಾಗೆ ಆಗುವದಿಲ್ಲ. ಆದ್ದರಿಂದ ಫಲಪ್ರದವಲ್ಲ. ಆದ್ದರಿಂದ ಅಪ್ರಾಮಾಣಿಕ ವೇದಗಳು ಎಂದು ವಾಕ್ಯಾರ್ಥ ಮಾಡುತ್ತಾನೆ ರಾಜ....
ಶ್ರೀಮದಾಚಾರ್ಯರು ಅಲ್ಲಿಯೇ ಇರುವ ಒಂದು ಬೀಜವನ್ನು ಸ್ವೀಕರಿಸಿ *ಆದಾಯವ್ಯತನುತ ಬೀಜಮೌಷಧೀನಾಂ ಸೂಕ್ತೇನಾಂಕುರ ದಲ ಪುಷ್ಪ ಬೀಜ ಸೃಷ್ಟಿಂ* ಎಂದು ಹೇಳಿದಂತೆ, ಬೀಜವನ್ನು ಕೈಯಲ್ಲಿ ಇರಿಸಿಕೊಂಡು, ಓಷಧಿ ಮಂತ್ರವನ್ನು ಪಠಿಸುತ್ತಿರುವಾಗಲೇ, ಬೀಜ ಒಡೆದು, ಚಿಗುರೊಡೆದು, ಅಂಕುರವಾಗಿ, ಎಲೆ ಬಿಟ್ಟು, ಹೂವಾಗಿ, ಹಣ್ಣುಗಳನ್ನೂ ಉದರಿಸುತ್ತದೆ ಆ ಬೀಜ. ಹೀಗೆ ವೇದ ಫಲಪ್ರದವಾಗಿದೆ ಆದ್ದರಿಂದ ಪೂರ್ಣ ಪ್ರಮಾಣವೇ ಆಗಿದೆ ಎಂದು ಶ್ರೀಮದಾಚಾರ್ಯರು ಸಂಸ್ಥಾಪನೆ ಮಾಡಿ ತೋರಿಸುತ್ತಾರೆ.
ಅದೇ ಬೀಜ, ಅದುವೇ ಮಂತ್ರಗಳು,ರೀಮದಾರ್ಯರಿಂದ ಉಚ್ಚರಿಸಲ್ಪಟ್ಟಾಗ ಫಲಕೊಟ್ಟಿತು, ರಾಜನಿಗೇಕೆ ಫಲ ಕೊಡಲಿಲ್ಲ.. ?? ಶ್ರೀಮದಾಚಾರ್ಯರು ಮಾಯ ಮಂತ್ರವೇನಾದರೂ ಮಾಡಿದರೇ..?? ಎಂದು ಒ್ರಶ್ನೆ ಬಂದರೆ..
*ವೇದೋಕ್ತಂ ಫಲಮಲಮಾಪ್ಯತೇಧಿಕಾರಾತ್* ಎಂದು ನಾರಾಯಣ ಪಂಡಿತಾಚಾರ್ಯರು ಸೊಗಸಾಗಿ ಉತ್ತರ ಕೊಡುತ್ತಾರೆ. ವೇದಗಳ ಉಚ್ಚಾರಣೆ ಎಲ್ಲರಿಗೆ ಅಲ್ಲ. ಅದು ಕೇವಲ ಯೋಗ್ಯ ಅಧಿಕಾರಿಗಳಿಗೆ ಮಾತ್ರ. ಅಧಿಕಾರಿವರ್ಗದವರು ಪಠಿಸಿದಾಗ ಮಾತ್ರ ಪೂರ್ಣ ಫಲಕಾರಿಯಾಗುತ್ತದೆ ಇಲ್ಲವಾದಲ್ಲಿ ಸರ್ವಥಾ ಫಲಕಾರಿಯಾಗುವದಿಲ್ಲ.
ಉದಾ..) ಒಂದು ಮನೆ, ರಾತ್ರಿಯಾಗಿದೆ, ಕಳ್ಳರು ಧಾಳಿ ಮಾಡಲು ಕಾಯ್ತಿದಾರೆ. ಆ ಪ್ರಸಂಗದಲ್ಲಿ ಮನೆಯ ಯಜಮಾನ ಊರಿನಿಂದ ಬಂದ. ಯಜಮಾನ ಬರುವದನ್ನು ಮೇಲೆನಿಂತು ಗಮನಿಸುತ್ತಾ ಇದ್ದಾರೆ ಕಳ್ಳರು.
ಯಜಮಾನ..) ಏನೇ...!! ಬಾಗಿಲ ತಗಿ.... ಎಂದು ಕೂಗಿದ. ಬಾಗಿಲ ತೆಗೆದಳು ಯಜಮಾನತಿ. ನೀರು ಕೊಟ್ಟಳು. ಬಿಸಿಬಿಸಿ ಚಹ ಕೊಟ್ಟಳು. ಊಟಕ್ಕೆ ಹಾಕಿದಳು. ಇತ್ಯಾದಿ ಇತ್ಯಾದಿ ಎಲ್ಲ ಉಪಚಾರ ಮಾಡಿದಳು. ಇದೆಲ್ಲವನ್ನೂ ದೂರದಿಂದಿಂದ ಗಮನಿಸಿದ ಕಳ್ಳರು. ನಾಳೆಯ ದಿನ ಬಂದರಾಯ್ತು ಎಂದು ತಿರುಗಿ ಹೋದರು.
ಮರುದಿನ.. ಕಳ್ಳರು ದೀರ್ಘವಾಗಿ ಯೋಚಿಸುತ್ತಾ, ಒಂದು ನಿರ್ಧಾರ ಮಾಡಿಕೊಂಡು...
ಕಳ್ಳರು...) ಏನೇ....!!! ಬಾಗಿಲು ತಗಿ...!! ಎಂದು ಕೂಗಿದರು.
ಯಜಮಾನತಿ...) ವಿಚಾರ ಮಾಡುತ್ತಾಳೆ ಈ ಧ್ವನಿ ನನ್ನ ಪ್ರಿಯಕರನದು ಅಲ್ಲ. ಇದು ಯಾರದೋ ಧ್ವನಿ ಇದೆ ಎಂದು ಗುರುತಿಸಿ, ಕಿಡಕಿಯಿಂದ ಇಣುಕಿ ನೋಡಿ, ಕಳ್ಳರು ಇದ್ದಾರೆ ಎಂದು ಗಮನಿಸಿ, ಪೋಲೀಸರಿಗೆ ತಿಳಿಸುತ್ತಾಳೆ.
ಪೋಲಿಸರು ಬಂದು ಕಳ್ಳರನ್ನು ಬಂಧಿಸಿ ಎಳೆದೊಯ್ಯುತ್ತಾರೆ. ಜೇಲಿನಲ್ಲಿ ಹಾಕಿ ನಾಲಕ್ಕು ಚೆನ್ನಾಗಿ ಒದಿತಾರೆ. ಕಳ್ಳರು ಕೇಳುತ್ತಾರೆ... *ಏನೇ ಬಾಗಿಲು ತಗಿ..!!* ಎಂದು ನಿನ್ನ ಬಂದವನು ಕೂಗಿದ, ಬಾಗಿಲು ತಗಿದು ಉಪಾಚಾರ ಮಾಡಿದಳು ಅವಳು, ಇಂದು ನಾವು ಕೂಗಿದರೆ ಪೋಲೀಸರಿಗೆ ಒಪ್ಪಿಸಿದಳು... ಹೀಗ್ಯಾಕೆ...?? ಎಂದು ಕೇಳಿದರು. *ಈ ಲೇಖನ ಓದುತ್ತಿರುವ ನೀವೇ ಪೋಲೀಸರಾಗಿದ್ದರೆ ಏನುತ್ತರ ಕೊಡುವವರಾಗುತ್ತಿದ್ದಿರಿ...??* ಅದೇ ಉತ್ತರ ವೇದಗಳ ವಿಷಯದಲ್ಲಿಯೂ. *ಏನೇ...!!!* ಎಂದು ಕೂಗುವ ಕರಿಯುವ ಅಧಿಕಾರ ಕಳ್ಳರಿಗಿಲ್ಲ, ಅಧಿಕಾರ ಇರುವದು ಕೇವಲ ಯಜಮಾನನಿಗೆ ಮಾತ್ರ.
ಹಾಗೆಯೇ ವೇದ ಓದುವ, ಓದಿ ಅರ್ಥ ತಿಳಿಯುವ, ತಿಳಿದ ಅರ್ಥದ ಪೂರ್ಣ ಫಲಕಾರಿಯಾಗಿ ಮಾಡಿಕೊಳ್ಳುವ ಅಧಿಕಾರ ಯಾರಿಗಿದೆಯೋ ಅವರಿಗೆ ಮಾತ್ರ ಪೂರ್ಣ ಫಲಸಿಗತ್ತೆ, ಅನಧಿಕಾರಿಗಳು ಹೇಳಿದರ, ಕಳ್ಳರಂತೆ ವಿಪರೀತ ಫಲವೇ ಸಿಗುತ್ತದೆ.....
ವೇದವಾಚ್ಯರಾದ, ವೇದಪ್ರತಿಪಾದ್ಯರಾದ, ವೇದಾರ್ಥನಿರ್ಣಾಯಕರಾದ ಶ್ರೀಮದಾಚಾರ್ಯರಿಗೆ, ಹಾಗೂ ಶ್ರೀಮಾದಾಚಾರ್ಯರ ಅನುಯಾಯಿಗಳಾದ ವೈಷ್ಣವರೆಲ್ಲರಿಗೆ ವೇದಾರ್ಥತಿಳಿಯುವ ಅಧಿಕಾರವಿದೆ, *ಯಾತಯಾಮವಾಗದೇ* ನಿತ್ಯ ಪಠಿಸಿ ವೇದಗಳನ್ನು ಸಿದ್ಧಮಾಡಿಕೊಂಡ ಅಧಿಕಾರಿಗಳಿಗೆ ಪೂರ್ಣ ಫಲಪ್ರದವೂ ಆಗಿದೆ. ಫಲಪ್ರದವಾದದ್ದರಿಂದ ಅತ್ಯಂತ ಪ್ರಾಮಾಣಿಕವೂ ಆಗಿದೆ ಎಂದು ಸಾಧಿಸಿ ಕೊಡುತ್ತಾರೆ, *ಅನಾದಿ ಸತ್ಸಂಪ್ರದಾಯ ಪರಂಪರಾಪ್ರಾಪ್ತ ಶ್ರೀಮದ್ವೈಷ್ಣವ ಸಿದ್ದಾಂತ ಪ್ರತಿಷ್ಠಾಪನಾಚಾರ್ಯರಾದ ಶ್ರೀಶ್ರೀಮದಾಚಾರ್ಯರು.* ಆ ಮಧ್ವಾಚಾರ್ಯರ ಅಡೆದಾವರೆಗಳಲ್ಲ ಅನಂತಾನಂತ ನಮಸ್ಕಾರಗಳನ್ನು ಸಲ್ಲಿಸುತ್ತಾ *ಎನಗೆ ದೊರೆತ ಗಾಯತ್ರೀ ಮೊದಲಾದ ವೇದ, ಮಂತ್ರಗಳನ್ನು ಯಾತಯಾಮವಾಗದಂತೆ ಉಳಿಸಿ, ರಕ್ಷಿಸಿ, ಸಂರಕ್ಷಿಸಿ* ಎಂದು ಪ್ರಾರ್ಥಿಸುವೆ.
*✍🏽✍🏽✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments