*ಆರು ಹಿತವರು ಎನಗೆ....*
*ಆರು ಹಿತವರು ಎನಗೆ....*
"ಆರು ಹಿತವರು ಎನಗೆ" ಪುರಂದರ ದಾಸರು ಒಂದು ಸುಂದರ ಪದ. ಇದರ ಸಾರಾಂಶ ಸುಂದರ.
ಹಿತೈಷೀ ಎಂದರೆ ಪ್ರೀತ್ಯಾಸ್ಪದರಿಗೆ ತನ್ನಿಂದ ಹಿವಾದರೆ, ಮಂಗಳವಾದರೆ, ದುಃಖಕ್ಕೆ ಆಸರೆ ಆಗಿದ್ದರೆ ಹಿತೈಷೀ ಎಂದಾಗಬಹುದು. ಆದರೆ ನಮ್ಮಿಂದ ಅಹಿತವೇ ಆಗುವದಿದ್ದರೆ, ದುಃಖದ ಮಡುವಿನಲ್ಲಿಯೇ ನೂಕುವದು ಆಗಿದ್ದರೆ, ಪ್ರಾಣ ಕೀರ್ತಿ ವ್ಯಕ್ತಿತ್ವ ಇವುಗಳಿಗೆ ಕುಂದು ಬರುವದೂ ಆಗಿದ್ದರೆ ಆ ವ್ಯಕ್ತಿಗೆ ಇವನು ಹಿತೈ಼ಷೀ ಎಂದಾಗಲಾರ.
ಈ ಸಮಗ್ರವಾದ ಭವ್ಯ ಜಗತ್ತಿನಲ್ಲಿ ನಾನ್ಯಾರಿಗೆ ಹಿತೈ಼ಷೀ... ?? ನನಗಾರು ಹಿತೈಷಿಗಳು... ?? ಎಂದು ಯೋಚಿಸಿದಾಗ ಸಿಗುವದುತ್ತರ ಒಂದೆ *ದೇವರೊಬ್ಬನೇ ಪರಮ ಹಿತೈಷೀ* ಎಂದು.
ನನ್ನಿಂದ ದೆವರ ಹಿತಕ್ಕೆ ಧಕ್ಕೆಯಾಗದು. ದೇವರ ಮುಂದೆ ನಾನೇನಿಲ್ಲ. ನನ್ನಿಂದ ದೇವರಿಗೆ ಆಗಬೇಕಾದದ್ದೂ ಏನಿಲ್ಲ. ದೇವರ ಹಿತವನ್ನು ನಾನು ಬಯಸುವದೂ ಇಲ್ಲ. ದೇವರಿಗೆ ಹಿತವಾಗುವಂತೆ ನಾನಂತೂ ಇರುವದಿಲ್ಲ, ನನ್ನ ಯಾವ ಕ್ರಿಯೆಗಳೂ ಇರುವದಿಲ್ಲ. ಹಾಗಾಗಿ ನಾನಂತೂ ದೇವರ ಹಿತೈಷೀ ಎಂದಾಗಲಾರೆ....
ದೇವರೋ ನಿಜವಾಗಿ ನನ್ನ ಹಿತೈಷೀ... ನನ್ನ ನೂರಾರು ಆಪತ್ತುಗಳ ಸುಳಿಯಲ್ಲಿ ಸಿಕ್ಕುಬಿದ್ದಾಗಲೂ ನನಗೆ, ನಿಃಸ್ವಾರ್ಥವಾಗಿ ನಿಃಸ್ಪೃಹನಾಗಿ ಬೆನ್ನಲುಬಾಗಿ ನಿಲ್ಲುವವ ದೇವರೊಬ್ಬನೆ. ಅಂತೆಯೇ ಆ ದೇವರೊಬ್ಬ *ಪರಮಹಿತೈಷೀ.*
ನನಗೆ ಅನ್ನ ಕೊಟ್ಟವ ದೇವರು, ಸೂರು ಕೊಟ್ಟವ ದೇವರು, ದೇಹ ಇಂದ್ರಿಯ ಮನಸ್ಸು ಕೊಟ್ಟುವ ದೇವರು, ಧನ ಕನಕ ಕೊಟ್ಟವ ದೇವರು, ಸುಖ ನೆಮ್ಮದಿ ಶಾಂತಿ ಸಮೃದ್ಧಿಗಳನ್ನು ಕೊಟ್ಟವ ದೇವರು, ಗೆಳಯರನ್ನು ದಯೆಪಾಲಿಸಿದವ ದೇವರು, ಗುರುಗಳನ್ನು ಕೊಟ್ಟವ ದೇವರು, ಕೀರ್ತಿ ಯಶಸ್ಸು ಗಳನ್ನು ದಯಪಾಲಿಸಿದವ ದೇವರು, ಯಾವುದೇ ತರಹದ ಸೊಕ್ಕಿನಿಂದ ಉನ್ಮತ್ತತನದಿಂದ ಉರಿಯುವಾಗ ತಕ್ಕ ಶಾಸನ ಮಾಡುವವನೂ ದೇವರೆ, ಎಂಥೆಂಥ ದುಃಖದ ಮಡುವಿನಲ್ಲಿದ್ದಾಗಲೂ ಸದಾಕಾಲಕ್ಕೂ ಬೆಂಬಡದೆ ದುಃಖದುಮ್ಮಾನಗಳನ್ನು ತಾಳ್ಮೆಯಿಂದ ಆಲಿಸುವವನೂ ದೇವರೆ, ಆಲಿಸಿ ಪರಿಹಾರೋಪಾಯವನ್ನು ಹುಡುಕಿ ಅನುಗ್ರಹಿಸುವವನೂ ದೇವರೆ.
ನಿದ್ರೆ ಕೊಟ್ಟ ನೀನು, ಇಂದು ಎಬ್ಬಿಸುವದನ್ನು ಮರೆತಿದ್ದರೆ .. ?? ನಿನ್ನೆ ಹಸಿವೆ ನೀಗಿಸಿದ ನೀನು, ಇಂದು ಅನ್ನ ಕೊಡದಿದ್ದರೆ... ?? ಅನ್ನಕೊಟ್ಟ ನೀನು, ಇಂದು ಹಸಿವೆಯನ್ನೇ ಕೊಡದಿದ್ದರೆ... ?? ಒಂದೊಂದೂ ಆಶ್ಚರ್ಯತಮವಲ್ಲವೇ...
ಇಷ್ಟೆಲ್ಲ ಮಾಡುವದು ಏತಕ್ಕೆ...???
ನಾನೋ ನಿನ್ನ ಮರೆತೆನೆ, ಬಯ್ತೇನೆ, ನಿನ್ನ ವಿರುದ್ಧ ನಡೆತೇನೆ, ನಿನ್ನ ಮಾತುಗಳನ್ನು ಕೇಳುವದೇ ಇಲ್ಲ. ನನ್ನದೇನಿದೆ ಎಲ್ಲವೂ ನಿನ್ನ ವಿರುದ್ಧ. *ನಿನಗಾಗಿ ಸಮಯವೇ ಎನ್ನ ಬಳಿ ಇಲ್ಲ.* ಅಷ್ಟಿದ್ದರೂ ನನ್ನ ಹಿತಕ್ಕಾಗಿ ನೀನು ಪಣತೊಟ್ಟು ನಿಂತೀಯಲ್ಲೋ ಅದುವೇ ನಿನ್ನ ದೊಡ್ಡಸ್ತಿಕೆ. ಇದೆಲ್ಲವೂ ನನ್ನ ಮೇಲಿನ ದಯೆ, ಕರುಣೆ ಮಾತ್ರ. *ನನ್ನವರು ನನ್ನೊಟ್ಟಿಗೆ ಹೇಗಿದ್ದರೂ, ನನ್ನವರು ಮಾತ್ರ ಸುಖವಾಗಿರಬೇಕು ಇದು ನಿನ್ನ ಹೆಬ್ಬಯಕೆ. ಅಂತೆಯೇ ನೀನೇ "ಪರಮಹಿತೈಷೀ"*
ನಾನೂ ಸ್ವಾರ್ಥಿ, ಎಲ್ಲರೂ ಸ್ವಾರ್ಥಿ. ಈ ಜಗತ್ತೇ ಸ್ವಾರ್ಥಮಯ. *ನಿಃಸ್ವಾರ್ಥಿ ನೀನೊಬ್ಬನೆ.* "ನೀನು ಕೊಡುವ ಶಿಕ್ಷೆಯೂ ನನಗೆ ಹಿತವೇ ಆಗಿದೆ" ಎನ್ನುವದು ಶಾಸ್ತ್ರ ಓದುತ್ತಾ ಸಾಗಿದಾಗ ತಿಳಿದು ಬರುತ್ತದೆ. ದಿನಕಳೆದಂತೆ ದಿನಕಳೆದಂತೆ ನಮ್ಮ ಅನುಭವಕ್ಕೂ ಬರುತ್ತದೆ.
ಅಹಿತವೇ ಫಲವಾಗಿರುವಲ್ಲಿ ನಾನು ನಂಬುವಷ್ಟು, ಹಿತವನ್ನೇ ಸುರಿಸುವ ನಿನ್ನನ್ನು ನಂಬುವದಿಲ್ಲ ಇದು ನಾನು ಮಾಡುವ ಅತೀದೊಡ್ಡತಪ್ಪು. ಆದರೆ ತಪ್ಪು ತಿದ್ದಿಕೊಳ್ಳಲೂ, ತಪ್ಪನ್ನು ತಿಳಿದುಕೊಳ್ಳಲು ಎನ್ನಿಂದ ಆಗದು. ಒಂದು ನಿಶ್ಚಿತ *ನೀನೇ ಪರಮ ಹಿತೈ಼ಷೀ- ನೀನು, ನಿನ್ನ ಭಕ್ತಿ, ನಿನ್ನ ಧರ್ಮ, ನಿನ್ನ ತತ್ವಜ್ಙಾನ ಇವುಗಳೆ ಎನ್ನ ಹಿತವರು.* "ಇವುಗಳನ್ನುಳಿದು, ಬೆರೆಲ್ಲ ಹಿತಗಳೂ ಅಹಿತಗಳ ಸರಮಾಲೆಗೆ ದಾರವಾಗುವದು, ಅಹಿತಗಳ ಫಲಗಳಿಗೆ ಬೀಜವಾಗುವವು" ಇದು ಅತ್ಯಂತ ನಿಶ್ಚಿತ.
ಪರಮ ಹಿತೈಷಿಯಾದ ನಿನ್ನನ್ನು ನಿರಂತರ ಜಪಿಸುವ, ನೆನೆಸುವ, ನಿನಗೋಸ್ಕರ ಸಮಯ ಮೀಸಲಿಡುವ, ನಿನ್ನನ್ನಲ್ಲಿಯೇ ನಲೆದಾಡುವ, ನಿನ್ನ ಹೊಗಳಿ ಕೊಂಡಾಡುವ, ನಿನ್ನ ತಿಳಿಯುವ, ನಿನ್ನಲ್ಲಿ ಭಕ್ತಿ ಪ್ರೀತಿ ಮಾಡುವ ಮಹಾ ಸೌಭಾ ಕರುಣಿಸು. ಇನ್ನೂ ಹೆಚ್ಚು ಪ್ರಚೋದಿಸು. *ನಿನ್ನ ಭಕ್ತನಾಗಿ ಬಾಳುವದಕ್ಕೆ ಎಂಥ ಬೆಲೆ ಕಟ್ಟಲೂ ನಾನು ಸಿದ್ಧ.* (ಈ ಲೇಖನದಲ್ಲಿ ಬಂದ *ನಾನು* ನಾನು ಮಾತ್ರನಲ್ಲ. ಓದುವ ನಾವೆಲ್ಲರೂ *ನಾನು* )
*✍🏽✍🏽✍🏽ನ್ಯಾಸ..*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
9449644808

Comments