*ನನ್ನ ಭಾಗ್ಯದ ದೇವರು.....*


*ನನ್ನ ಭಾಗ್ಯದ ದೇವರು.....*

ಆದಿಗುರು ಆದ ದೇವ ಕೇಳಿದ್ದನ್ನೂ ಕೇಳದಿರುವದನ್ನೂ ಎಲ್ಲವನ್ನೂ ಕೊಟ್ಟಾನು. ಆದರೆ ಮೋಕ್ಷಕ್ಕೆ ದಾರಿಯಾದ *ಶುದ್ಧ ಗುರು, ಪರಿಶುದ್ಧ ತತ್ವಜ್ಙಾನ* ಅನಾಯಾಸೇನ ಕೊಡಲಾರ. ಇವುಗಳು ದೊರೆಯಬೇಕಾದರೆ ಅಪಾರ ಪುಣ್ಯದ ರಾಶಿ ಇರಬೇಕು. ಯೋಗ್ಯತೆ ಅತ್ಯುತ್ತಮವಾಗಿರಬೆಕು, ಭಗವತ್ಕೃಪಾಪಾತ್ರರೂ ಆಗಿರಬೆಕು. ಆಗ ದೊರೆಯಬಹುದೇನೋ.... ನಾ ಹುಟ್ಟುವದಕ್ಕೂ ಮೂವತ್ತು ವರ್ಷಗಳ ಮುಂಚೆಯೇ ಗುರುಗಳನ್ನು ಭುವಿಗಿಳಿಸು ಅನುಗ್ರಹ ಕರುಣೆ ಮಾಡಿದ ಆ ದೇವನಿಗೆ ನನ್ನ ಅನಂತ ನಮನಗಳು.

*ಇಂದು ನಮ್ಮ ಗುರುಗಳ ಜನ್ಮದಿನ*

ಸರಿಯಾಗಿ ಆರವತ್ತು ವರ್ಷಗಳ ಹಿಂದೆ ೧೯೬೦ ನೇಯ ಮಾಘ ಮಾಸ, ಕೃಷ್ಣಪಕ್ಷದ ಸಪ್ತಮಿಯದಿನ  ನಾಸ್ತಿಕತೆ, ಅಜ್ಙಾನ, ಅಧರ್ಮಗಳ ಅಂಧಕಾರದಲ್ಲಿ ಮುಳುಗಿದ ಮುಂಬಯಿ ಮಹಾನಗರದಲ್ಲಿ,  ಆಸ್ತಿಕತೆಯ ತತ್ವಜ್ಙಾನಗಳ ಪ್ರಖರ ಕಿರಣಗಳಿಂದ ಕೂಡಿದ ಸೂರ್ಯನ ಉದಯವಾಯಿತು. ಆ ಸೂರ್ಯನೇ ನಮ್ಮ ಇಂದಿನ ಮಾಹಾ ಗುರುಗಳು. *ಪರಮ ಪೂಜ್ಯ ಮಾಹುಲೀ ಆಚಾರ್ಯರು.*

ಸವನತ್ರಯಾತ್ಮಕ ೧೨೦ ವರ್ಷಗಳ ಭವ್ಯ ಜೀವನದಲ್ಲಿ, ಮೊದಲನೇಯ ಸವನದಲ್ಲಿ, ತಂದೆಯವರಾದ ಪರಮಪೂಜ್ಯ ಮಾಹಲೀ ಪರಮಾಚಾರ್ಯರ ಬಳಿಯೇ  ನಿರಂತರ ಅಧ್ಯಯನ ನಡಿಸಿ, ೧೯೭೯ ನೇಯ ಇಸ್ವಿಯಲ್ಲಿ ಅರ್ಥಾತ್ ತಮ್ಮ ಹತ್ತೊಂಭತ್ತನೇಯ ವಯಸ್ಸಿಗೇನೆ  ಶ್ರೀಮನ್ಯಾಸುಧಾ ಮಂಗಳವಾಗಿಸಿಕೊಂಡರು.

*ಅಧ್ಯಯನ*

 ಸಾಹಿತ್ಯ, ಅಲಂಕಾರ ಶಾಸ್ತ್ರ, ಬಾಧಾಂತ ತರ್ಕ, ವ್ಯಾಸತ್ರಯ, ಶ್ರೀಮನ್ಯಾಯ ಸುಧಾ, ತತ್ವಪ್ರಕಾಶಿಕಾ,  ಸರ್ವಮೂಲ, ಮೊದಲಾದ ಸಮಗ್ರ ಮಾಧ್ವ ವೇದಾಂತ.
ಮೀಮಾಂಸಾ, ಅದ್ವೈತ, ಫಲ ಜ್ಯೋತಿಷ, ಧರ್ಮಶಾಸ್ತ್ರ, ವೇದ, ನಿರುಕ್ತ, ಸಾಂಖ್ಯ, ಯೋಗ, ಬೌದ್ಧ, ದಾಸ ಸಾಹಿತ್ಯ, ಯಾಜ್ಙಿಕ ಭಾಗ, ವಿಶಿಷ್ಟಾದ್ವೈತ, ಕನ್ನಡ ಸಾಹಿತ್ಯ, ಮುಂತಾದ ನಾನಾ ಶಾಸ್ತ್ರಗಳ ಕೂಲಂಕುಷ ಅಧ್ಯಯನ ಮುಗಿದಿತ್ತು.   ಇದೆಲ್ಲದರ ಮೇಲೆ ಪಾಶ್ಚಿಮಾತ್ಯ ಅನೇಕ ಸಿದ್ಧಾಂತಗ್ರಂಥಗಳ ಪರಿಚಯವೂ ಅತ್ಯಂತ ಗಾಡವಾಗಿತ್ತು. ನಿತ್ಯ ಕನಿಷ್ಠ ಹದಿನಾರು ಗಂಟೆಗಳಂತೆ ೨೩ ವರ್ಷದವರೆಗೂ ಅಧ್ಯಯನ ಅತ್ಯಂತ ವೈಭವದಿಂದಲೇ ಸಾಗಿತ್ತು. ಈ ಕ್ರಮದಲ್ಲಿ ಪ್ರಾತಃಸವನ ಅತ್ಯಂತ ವೈಭವದಿಂದ ಸಾಗಿ, ಸಾರ್ಥಕವಾಗಿತ್ತು. ಇನ್ನುಮೇಲೆ  ದ್ವಿತೀಯ ಸವನವಾದ ಮಾಂಧ್ಯಂದಿನ ಸವನದ ಆರಂಭ.

ಸರಿಯಾಗಿ ಇಪ್ಪತ್ತುಮೂರು ಮುಗಿದು ಇಪ್ಪತ್ತನಾಲಕನೇಯ ವರ್ಷಕ್ಕೆ ಕಾಲಿಟ್ಟ ದಿನಗಳಲ್ಲಿಯೇ ವಿದ್ಯಾಪೀಠದ ಸಮಗ್ರ ಜವಾಬ್ದಾರಿ ಹೊತ್ತು, ಈ ಕಾಲದ ಅತ್ಯಂತ ಪ್ರಾಚೀನ ವಿದ್ಯಾಪೀಠವಾದ, ಗುರುಕುಲಕ್ರಮದಲ್ಲಿಯೇ ಇಂದಿಗೂ ಸಾಗುತ್ತಿರುವ, ಇಂದಿನ ಗುರುಕುಗಳಿಗೆ ಆದರ್ಶದಂತಿರುವ *ಶ್ರೀಸತ್ಯಧ್ಯಾನ ವಿದ್ಯಾಪೀಠ* ದ ಕುಲಪತಿಗಳಾಗಿ  ವಿದ್ಯಾಪೀಠದ  ವಿದ್ಯಾರ್ಥಿಗಳಿಗೆ ಪಾಠಗಳಲ್ಲಿ, ವಿದ್ಯಾರ್ಥಿಗಳ ತಾಯಾರು ಮಾಡುವಲ್ಲಿ ತಮ್ಮನ್ನು ತಾವು ಪೂರ್ಣ ತೊಡಗಿಸಿಕೊಂಡಂತಹವರು ನಮ್ಮ ಗುರುಗಳು.

*ಅಂದಿನಿಂದ ಇಂದಿನ ವರೆಗೆ ಇರುವ ದಿನಚರಿ..*

ಪೂಜ್ಯ ಆಚಾರ್ಯರ ರೂಮಿನಲ್ಲಿ *ದೀಪ* ಆರಿಸಿದ ಸಮಯವೆಂದರೆ ರಾತ್ರಿ ಹನ್ಬೆರಡು ಒಂದರಿಂದ ಬೆಳಿಗ್ಗೆ ಮೂರು ಮೂರುವರೆಗೆ ಮಾತ್ರ. ಏಳುವದು ಬೆಳಿಗ್ಗೆ ಸರಿಯಾಗಿ ಮೂರು ಗಂಟೆಗೇ.

ಸ್ನಾನ ಮುಗಿಸಿ, ಎರಡು ಗಂಟೆ ಅಷ್ಟಮಹಾಮಂತ್ರ, ವೇದವ್ಯಾಸ ಕೃಷ್ಣ ನರಸಿಂಹ ಮೊದಲಾದ ಎಲ್ಲ ಮಂತ್ರಗಳ ಜಪ. ನಂತರವೇ ಪಾಠಗಳು ಆರಂಭ.
ನಾಲಕು ಗಂಟೆಗೆ ಪಾಠಗಳು ಆರಂಭವಾದರೆ ಹನ್ನೊಂದುವರೆ ಹನ್ನೆರಡವರೆಗೆ ನಿರಂತರ ಪಾಠಗಳು.
ಹನ್ನೊಂದುವರೆ ಇಂದ ಹನ್ನೆರಡು ವರೆವರೆಗೆ ತಾವೇ ಸ್ವತಃ ಪೂಜೆ ನೆರವೇರಿಸಬೇಕು. ಹನ್ನೆರಡು ವರೆಗೆ ವಿದ್ಯಾರ್ಥಿಗಳಿಗೆ ಭೋಜನ. ಆ ಸಮಯದಲ್ಲಿ ಪೂ. ಆಚಾರ್ಯರ ಜಪ, ವಿದ್ಯಾರ್ಥಿಗಳ ಪರೀಕ್ಷೆ ಅನುವಾದ.... ಭೋಜ ಸ್ವಲ್ಪ ವಿಶ್ರಾಂತಿ, ನಮಗೆ ಅವರಿಗಲ್ಲ...


ಸರಿಯಾಗಿ ಎರಡು ಗಂಟೆ ಇಂದ ಐದುವರೆ ವರೆಗೆ ವಿದ್ಯಾರ್ಥಿಗಳ ಚಿಂತನೆಗೆ ಕರೆದು, ಚಂತನೆ ಮಾಡಿಸುವದು, ಪರೀಕ್ಷೆ ಕೇಳುವದು.
ಪುನಃ ಆರುವರೆ ಇಂದ ಚಿಂತನೆ, ಪರೀಕ್ಷೆ, ಲೌಕಿಕ ಜನರ ಯೋಗಕ್ಷೇಮ, ವಿದ್ಯಾಪೀಠದ ವಿಚಾರಗಳು, ಮೀಟಿಂಗಗಳು, ಒಂಭತ್ತು ಒಂಭತ್ತು ರವರೆಗೆ ಸಾಗಬೇಕು. ನಂತರ ಅಲ್ಪೋಪಹಾರ, ಮತ್ತೆ ಹನ್ನೆರಡುವರೆ ವರೆಗೆ ಅಧ್ಯಯನ. ಇದು ನಮಗೆ ದೈಹಿಕವಾಗಿ  ತೋರಿದ ದಿನಚರಿ. ಮಾನಸಿಕವಾಗಿ ಏಕಕಾಲಕ್ಕೆ ಎಷ್ಟೆಲ್ಲ ಆಗುತ್ತಿದ್ದವೊ ನನಗೆ ತಿಳಿಯದು. 

*ನೆರೆವೇರಿಸಿದ ಸುಧಾಮಂಗಳಗಳು*

ಇಲ್ಲಿವರೆಗೆ ಹದಿಮೂರು ಸುಧಾಮಂಗಳಗಳನ್ನು ನೆರೆವೇರಿಸಿದ್ದಾರೆ, ಅದರಲ್ಲಿ ಉತ್ತರಾದಿ ಮಠಾಧೀಶರಾದ, ಅಧುನಾ ಪೀಠದಲ್ಲಿ ವಿರಾಜಮಾನರಾದ  *ಶ್ರೀಶ್ರೀ ಸತ್ಯಾತ್ಮ ತೀರ್ಥರ* ಅರ್ಥಾತ್ ಪೂರ್ವಾಶ್ರಮದ *ಪಂ. ಪೂ. ಸರ್ವಜ್ಙಾಚಾರ್ಯ ಗುತ್ತಲ* ಇವರ ಸುಧಾಮಂಗಳವೂ ಒಂದು. ಇದೊಂದು ಅತ್ಯಂತ ವೈಭವವೇ ಸರಿ.

*ಉದ್ಯೇಶ್ಯ....*

ಸಮಾಜದ ಸ್ವಾಸ್ಥ್ಯ, ನಂಬಿದ ಜನರಿಗೆ ಪರಿಶುದ್ಧ ತತ್ವಜ್ಙಾನ, ಧರ್ಮಾಭಿವೃದ್ಧಿ, ಧರ್ಮದಲ್ಲಿ- ದೇವರಲ್ಲಿ- ಶಾಸ್ತ್ರ- ಗುರುಗಳಲ್ಲಿ ಅಚಲವಾದ ಶ್ರದ್ಧೆ ಹಾಗೂ ನಿಷ್ಠೆಗಳು ಬೆಳಿಸುವದು. ಇದೆಲ್ಲದರ ಮೇಲೆ ನನ್ನ ಹನಿ ಹನಿ ರಕ್ತವೂ *ತತ್ವ ಜ್ಙಾನಕ್ಕಾಗಿಯೇ ಸುಡಬೇಕು, ಗುರು ಭಕ್ತಿ, ವಿಷ್ಣುಭಕ್ತಿಯಲ್ಲಿಯೇ ಇಂಗಬೇಕು, ಮೋಕ್ಷಕ್ಕೆ ಅನುವಾಗಿರಬೇಕು* ಅದಕ್ಕಾಗಿ ನನ್ನದೆಲ್ಲ ಪರಿಶ್ರಮ. ಇದುವೇ ನನ್ನ ಧ್ಯೇಯ.

*ಸಾಮಾಜಿಕ ಕಳಕಳಿ*

 ವೈಷ್ಣವರು ಎಲ್ಲಿದ್ದರೂ ನಿರಂತರ ತತ್ವಜ್ಙಾನ ಬೆಳೆಯಲಿ, ವಿಷ್ಣು ಭಕ್ತಿ ದೃಢವಾಗಲಿ ಎಂಬ ಉದ್ಯೇಶ್ಯದೊಂದಿಗೆ *ನಾಲಕು ತಿಂಗಳಿನಲ್ಲಿ ಸಂಪೂರ್ಣ ಮಹಾಭಾರತ, ಹತ್ತುವರ್ಷದಿಂದ ನಡೆಯುತ್ತಿರುವ ಮಹಾಭಾರತ,  ರಾಮಾಯಣ, ಯಾದುಪತ್ಯ ಸಹಿತ ಭಾಗವತ,  ತಾತ್ಪರ್ಯ ನಿರ್ಣಯ, ಗೀತಾಭಾಷ್ಯ, ಭಾಗವತದ ಬಿಡಿಭಾಗಗಳು, ಸರ್ವಮೂಲದಲ್ಲಿ ಬಂದ ವಾಯುಮಹಿಮೆ, ಪ್ರತ್ಯೇಕವಾದ ರಿಸರ್ಚಿನ ನೂರಾರು ವಿಷಯಗಳು, ಗುರುಭಕ್ತಿ, ವಿಜಯರಾಯರ  ಸುಳಾದಿಗಳು, ಕನಕದಾಸರ ಹರಿಭಕ್ತಿಸಾರ ಹೀಗೆ  ನಾನಾ ಗ್ರಂಥಗಳ*  ಉಪನ್ಯಾಸ ಕನಿಷ್ಠ ನಾಲಕು  ಸಾವಿರ ಗಂಟೆಗಳ ಉಪನ್ಯಾಸದ audeo cd ಗಳನ್ನು ಮಾಡಿ ಜಗತ್ತಿಗೆ ಉಪಕಾರ ಮಾಡಿದ ಮಹಾ ಗುರುಗಳು ಆಚಾರ್ಯರು.    ಭಾರತದಾದ್ಯಂತ ಪ್ರತಿ ಊರುಗಳಲ್ಲಿ, ಅನೇಕ ಊರುಗಳಲ್ಲಿ ಇಬ್ಬರು ಮೂವರಂತೆ ವಿದ್ವಾಸರುಗಳನ್ನು ಇಟ್ಟು ಇಂದಿಗೂ ಧರ್ಮ ಉಳಿಸುವಂತೆ ಬೆಳಿಸುವಂತೆ ಮಾಡಿದ ಸಾಮಾಜಿ ಚಿಂತಕರೂ ನಮ್ಮ ಗುರುಗಳು. 

*ಮಾಹಾ ದಾನಿ*

ದಾನಗಳಲ್ಲಿ ಅತ್ಯುತ್ತಮದಾನಗಳು ಅನ್ನ ವಸತಿ, ವಸ್ತ್ರಗಳು. ಎಲ್ಲಕ್ಕಿಂತಲೂ ಉತ್ತಮೋತ್ತಮವಾದದ್ದು *ವಿದ್ಯಾದಾನ* ಈ ಎಲ್ಲ ದಾನಗಳೂ ನಮ್ಮ ಗುರುಗಳಲ್ಲಿ ಎಳೆಳೆಯಾಗಿ ಕುಳಿತಿವೆ.   *ನಿತ್ಯ ಕನಿಷ್ಠ ನೂರೈವತ್ತು ಜನರಿಗೆ ಎರಡೂ ಹೊತ್ತು ಅನ್ನ ದಾನ. ವಸ್ತ್ರದಾನ. ನಿರಂತರ ವಿದ್ಯಾದಾನ* ಒಂದೂ ದಿನ ತಪ್ಪದೇ ನಡೆಯುವ ದಾನಗಳು.

ವಜ್ರಖಚಿತ ಪದಕಗಳು, ಸ್ವರ್ಣದ ಮಾಲೆ, ಉಂಗುರುಗಳು, ಬೆಳ್ಳಿಯ ಪೀಠಗಳು, ಪಂಡಿತರಿಗೆ ಜ್ಙಾನಿಗಳಿಗೆ ಕೈತುಂಬ ಸಂಭಾವನೆ, ನೂರಾರು ಪಂಡಿತರ, ಅನೇಕ  ವಿದ್ಯಾರ್ಥಿಗಳ ಪಾಲಕರಿಗೆ ಮಾಸಾಶನ‌. ಲೌಕಿಕರಿಗೂ ಪ್ರತಿ ತಿಂಗಲೂ ಇಪ್ಪತ್ತು ಮೂವ್ವತ್ತು ಜನರಿಗೆ ಧಾನ್ಯಗಳನ್ನು ಕಳುಹಿಸುವದು ಇಂದಿಗೂ ನೋಡುತ್ತೇವೆ. ಇದು ದಾನ.

ವೈಯಕ್ತಿಕವಾಗಿ ಅತ್ಯಂತ ಮುಖ್ಯವಾಗಿ ನನ್ನನ್ನು ತಿದ್ದಿ, ತಿಳಿಸಿ, ಬೆಳಿಸಿ, ಸಾಕಿ ಸಲಹಿ,  ಸಂಸ್ಕಾರ ಕೊಟ್ಟು, ಅತ್ಯಮೂಲ್ಯ ತತ್ವ ಜ್ಙಾನಕೊಟ್ಟು, ಶ್ರದ್ಧೆ ವಿಶ್ವಾಸ ಮೂಡಿಸಿ, ದೇವರು - ಗುರುಗಳಲ್ಲಿ ಮನಸ್ಸು ಅಚಲವಾಗಿರುವಂತೆ ಮಾಡಿ, ನನ್ನ ಉದ್ಧರಿಸುವ ಪಣತೊಟ್ಟಂತೆ ಇರುವ - ಬೇಡಿದರೂ ಬೇಡದಿದ್ದರೂ ಸೇವಿಸಿದರೂ ಸೇವಿಸದೇ ಇದ್ದರೂ ನಿರಂತರ ಅನುಗ್ರಹದ ಮಹಾಪೂರವನ್ನೇ  ಸುರಿಸುವ ಅತ್ಯಂತ ಕರುಣಾಳುಗಳಾದ  *ನನ್ನ ಸ್ವರೂಪೋದ್ಧರಕ ಗುರುಗಳ ಅಡೆದಾವರೆಗಳಲ್ಲಿ ಅನಂತ ನಮಸ್ಕಾರಗಳನ್ನು ಮಾಡುವದು ಬಿಟ್ಟು ಇನ್ಬೇನಿಲ್ಲ.*

*ಎನ್ನ ಭಾಗ್ಯದ ದೇವರು -ಗುರೂ ಮಾಹುಲೀ ಆಚಾರ್ಯರು* ಎಂದೇ ನಂಬಿದ...

*ಆಚಾರ್ಯ ಪಾದಪದ್ಮಾರಾಧಕ*
ನ್ಯಾಸ... ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*