*ರೋಗಾನುಭವವೆಲ್ಲ ಉಗ್ರ ತಪವೋ.....*
*ರೋಗಾನುಭವವೆಲ್ಲ ಉಗ್ರ ತಪವೋ.....*
ರೋಗಗಳನ್ನು ಕೊಡುವವ ದೇವರು. ಪರಿಹರಿಸಿ ಆರೋಗ್ಯ ಕೊಡುವವನೂ ದೇವರು. ಆಪತ್ತಿನಲ್ಲಿ "ಔಷಧ" ನಾಮಕನಾಗಿ ಔಷಧಿ ರೂಪದಿಂದ ಬಂದೊದುಗವವನೂ ದೇವರೇ ಎಂದು ನಿನ್ನೆ ತಿಳಿದೆವು.
ರೋಗ ಪರಿಹಾರ ಮಾಡುವದೇ ಉದ್ಯೆಶ್ಯವಾಗಿದ್ದರೆ ರೋಗಗಳನ್ನು ಕೊಡಬೇಕು ಯಾಕೆ....?? ಎಂದು ಸಂಶಯ ಬರತ್ತೆ.
ಮಾನವ ಜನ್ಮದಲ್ಲಿ ಬಂದ ಮನುಷ್ಯನಿಗೆ *ತಪಸ್ಸೇ* ಮೂಲ. ತಪಸ್ಸನ್ನು ಬಿಟ್ಟ ನಮಗೆ ರೋಗಗಳನ್ನಾದರೂ ತಪಸ್ಸು ಎಂದು ಭಾವಿಸಿ ಎಂದು ಸೂಚಿಸಲು ರೋಗ ಕೊಡುತ್ತಾನೆ ಎಂದೆನಿಸುತ್ತದೆ. ಅಂತೆಯೆ ದಾಸರಾಯರು *ರೋಗಾಗುನುಭವವೆಲ್ಲ ಉಗ್ರ ತಪವೋ* ಎಂದಿರಬಹುದು.
*ತಪಸ್ಸು* ಎಂದರೆ ದೇವರನ್ನು ನೆನೆಯುವದು, ಪುಣ್ಯದ ಸಂಪಾದನೆಯಾಗುವದು, ಪಾಪಗಳು ಘಟಿಸದೇ ಇರುವದು, ಇರುವ ಪಾಪಗಳನ್ನು ಕಳೆದುಕೊಳ್ಳುವದು. ಈ ನಾಲಕೂ ರೋಗವಿದ್ದಲ್ಲಿ ಸುಲಭವಾಗಿ ನಡೆಯುತ್ತವೆ.
ದೇಹ ಇಂದ್ರಿಯ ಮನಸ್ಸು ಇವುಗಳೆಲ್ಲವನ್ನೂ ಆರೋಗ್ಯವಂತನ್ನಾಗಿ ಇಟ್ಟುಕೊಂಡ ವ್ಯಕ್ತಿ ಸಾಮಾನ್ಯವಾಗಿ ಆರೋಗ್ಯಭಾಗ್ಯ ಒದಗಿಸಿದ ದೇವರನ್ನು ನೆನೆಸುವದಿಲ್ಲ. ಅದುವೇ ರೋಗಿ ನಿರಂತರ ದೇವರೆ !!! ನಾರಾಯಣ !! ನರಹರೇ !!! ಅಂತ ವಟವಟಾ ಅಂತಿರ್ತಾನೆ, ಮನಸ್ಸು ಹದವಾಗಿಸಿಕೊಂಡು ಬಾಗಿಸಿ ನಿರಂತರ ದೇವರನ್ನು ನೆನೆಯುತ್ತಾ ಇರುತ್ತಾನೆ.
ರೋಗ ಪರಿಹಾರಕ್ಕಾಗಿ ನಾನಾವಿಧ ನಾಮಗಳನ್ನು ಜಪ ತಪಗಳನ್ನು ಮಾಡುತ್ತಾನೆ, ಯಜ್ಙ ಯಾಗಗಳೆನ್ನುತ್ತಾನೆ, ದಾನ ವೆನ್ನುತ್ತಾನೆ ಹೀಗೆ ನಾನಾ ಕ್ರಮಕಗಳಲ್ಲಿ ದೇವರನ್ನು ನೆನೆಯುವ ರೋಗಿ, ಅಂತೆಯೇ *ಸಂಕಟಬಂದಾಗ ವೆಂಕಟರಮಣ* ಅಂದರು ಹಿರಿಯರು. ಹೀಗೆ ಒಂದಿಲ್ಲ ಒಂದುತರಹದ ಪುಣ್ಯ ಸಂಪಾದನೆ ಸಾಗುತ್ತಾ ಇರುತ್ತದೆ.
ರೋಗ ಅನುಭವಿಸುತ್ತಿರುವಾಗ ದಾರಿದ್ರ್ಯದಲ್ಲಿರುವಾಗ ಸಾಮಾನ್ಯವಾಗಿ ಪಾಪಕರ್ಮಗಳನ್ನು ಮಾಡುವದಿಲ್ಲ. ಒಂದು ಮನವರಿಕೆ ಆಗಿರುತ್ತದೆ, "ನಾ ಮಾಡಿದ ಕರ್ಮದ ಫಲವೇ ನಾ ಉಣ್ಣುತ್ತಿರುವದು" ಎಂದು. ಹಾಗಾಗಿ ಮತ್ತೆ ಪಾಪ ಕರ್ಮಗಳನ್ನು ಮಾಡಲಾರ. ಹಾಗಾಗಿ ಹೊಸ ಪಾಪಕರ್ಮಗಳು ಘಟಿಸುವದು ಕುಂಠಿತವಾಗುತ್ತದೆ.
ರೋಗ ಅನುಭವಿಸುತ್ತಿರುವದು ಎಂದರೆ ಹಿಂದು ಸಂಪಾದಿಸಿಟ್ಟ ಪಾಪದ ಪರಿಹಾರವೇ ಎಂದರ್ಥ. ಘಳಿಸಿಟ್ಟ ಪಾಪಗಳ ಪರಿಹಾರ ಒಂದೆಡೆ ಆದರೆ, ರೋಗಿ ಸುಖ ಅನುಭವಿಸುತ್ತಿಲ್ಲ ಹಾಗಾಗಿ ಹಿಂದಿನ ಪುಣ್ಯ ಸೇಫ್ ಆಗಿ ಉಳಿದಿದೆ. ಹೀಗೆ ಪಾಪಕಳೆದುಕೊಳ್ಳುವ, ಪುಣ್ಯ ಉಳಿಸಿಕೊಳ್ಳುವವ.
ಒಟ್ಟಾರೆಯಾಗಿ ಹೇಳುವದಾದರೆ ರೋಗಿ *ನಿರಂತರ ದೇವರನ್ನು ನೆನೆಯುವ- ಇಂದು ಹೊಸ ಪಾಪ ಮಾಡ- ಪುಣ್ಯ ಸಂಪಾದಿಸುವ - ಪಾಪ ಕಳೆದುಕೊಳ್ಳುವ* ಹೀಗೆ ತಪಸ್ವಿಗಳಲ್ಲಿ ಆಗುವ ಎಲ್ಲ ಕ್ರಿಯೆಗಳೂ ರೋಗಿಯಲ್ಲೂ ಆಗುತ್ತವೆ. ಅಂತೆಯೆರ *ರೋಗಾನುಭವವವೆಲ್ಲ ಉಗ್ರತಪವೋ* ಎಂದಿರಬಹುದು.
*ರೋಗಗಳು ಬಂದಾಗ ದುಃಖಪಡದೇ, ಪರರಿಗೆ ಬರದ ರೋಗ ನನಗೆ ಬಂದಿದೆ, ಇದೊಂದು ದೇವರನ್ನು ನೆನೆಸಲು, ಪಾಪ ಪರಿಹರಿಸಿಕೊಳ್ಳಲು, ಪುಣ್ಯಸಂಪಾದಿಸಿಕೊಳ್ಳಲು, ಘಳಿಸಿದ ಪುಣ್ಯ ಉಳಿಸಿಕೊಳ್ಳಲು ಎನಗೆ ಕೊಟ್ಟ ಒಂದು ಸೌಭಾಗ್ಯ* ಎಂದೇ ತಿಳಿದು ದೆವರಿಗೆ ಕೃತಜ್ಙರಾಗಿರುವದೇನಿದೆ ಇದುವೂ ಒಂದು ಸಾಧನೆ. ಬಂದ ಹಾಗೂ ಬರುವ ರೋಗ ಪರಿಹರಿಸಿಕೊಳ್ಳಲೂ ಇದೊಂದು ಸುಲಭ ಉಪಾಯ ಎಂದೆನಿಸುತ್ತದೆ.
*✍🏽✍🏽ನ್ಯಾಸ*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments