*ಶ್ರೀಮದಾಚಾರ್ಯರು......೧*
*ಶ್ರೀಮದಾಚಾರ್ಯರು......೧*
"ಸ್ಮೃತಿಕೀರ್ತನ ಪ್ರಣತಿಭಿರ್ವಿಮುಕ್ತಯೇ" ಎಂದು ಹೇಳಿದಂತೆ ದೇವರ ಲಕ್ಷ್ಮಿದೇವಿಯ ಹಾಗೂ ಶ್ರೀಮದಾಚಾರ್ಯರ ಸ್ಮರಣೆ, ಕೀರ್ತನೆ ನಮಸ್ಕಾರ ಮೊದಲಾದವುಗಳು ಎಲ್ಲವೂ ಮುಕ್ತಿಗೆ ನೇರ ಕಾರಣ.
ಶ್ರೀಮದಾಚಾರ್ಯರ ಪ್ರತಿನಡೆಯ ಚಿಂತನೆಯೂ ನಮ್ಮ ವೈಯಕ್ತಿಕ ಸಾಧನೆಗೆ ಅನುಕೂಲ.
ಪುಟ್ಟ ಹಸುಗೂಸು ವಾಸುದೇವ. ಆ ಕೂಸಿಗೆ ಹೊಟ್ಟೆಗೆ ಉಣಿಸಿ, ಮಲಗಿಸಿ ಹಿರಿಯ ಮಗಳಿಗೆ ಒಪ್ಪಿಸಿ ಹೊರ ಕೆಲಸಗಳಿಗೆ ತೆರಳುತ್ತಾಳೆ ತಾಯಿ. ಬರುವದು ತಡವಾಗತ್ತೆ, ಕೂಸು ಅಳುವದಕ್ಜೆ ಆರಂಭಿಸುತ್ತದೆ. ಆ ಹಿರಿಯ ಅಕ್ಕಳಿಗೆ ಏನು ಮಾಡುವದಕ್ಕೂ ತೋಚುವದಿಲ್ಲ. ತೋಚದ ಆ ಪುಟ್ಟ ಬಾಲಕಿ *"ಪ್ರಾಭೋಜಯತ್ ಕುಲಿತ್ಥಕುಲಂ ಪ್ರಪಕ್ವಮ್" ಶ್ರೀಮದಾಚಾರ್ಯರು ವಾಸುದೇವನಾಗಿ ಪುಟ್ಟ ಕೂಸಾಗಿರುವಾಗ, ಅಕ್ಕ ಆಕಳಿಗೆ ತಿನಿಸುವ ಹುರುಳೀಕಾಳುಗಳನ್ನು ತಿನಿಸಿದಳು. ತಿಂದು ತೇಗಿದ ಆ ಕೂಸು ಜೀರ್ಣಮಾಡಿಕೊಂಡು ಸುಖವಾಗಿ ಆಟವಾಡುತ್ತಾ ಇತ್ತು ಕೂಸು* ಹೀಗೆ ಒಂದೊಂದು ಸುಂದರ ಕಥೆ ಮಹಿಮೆಯನ್ನು ಕೇಳುತ್ತೇವೆ.
ಇಂದು ನಮ್ಮ ಅವಸ್ಥೆ ತುಂಬ ವಿಚಿತ್ರ. *ತೀರ್ಥ ತೆಗೆದುಕೊಂಡರೆ ಶೀತವಾಗತ್ತೆ, ಮಂಗಾಳರತೆ ತೆಗೆದುಕೊಂಡರೆ ಕಾವಾಗತ್ರೆ" ಏನ್ನೋ ಸ್ವಲ್ಪ ತಿಂದರೆ ಆರೋಗ್ಯಕ್ಕೆ ಏರುಪೇರು. ಆರೋಗ್ಯಕ್ಕೆ ನೇರ ಹೊಡೆತ. ನೀರು ಬದಲಾದರೂ ಆರೋಗ್ಯಕ್ಕೇ ಹೊಡೆತ. ವಾತಾವರಣ ಬದಲಾದರೂ ಅಷ್ಟೆ ಅವಸ್ಥೆ. ಅಂತೆಯೇ ಮಠಮಾನ್ಯಗಳಿಗೆ ಊಟಕ್ಕೆ ತೆರುಳುವಾಗ bisleri ನೀರನ್ನು ತೆಗೆದೊಯ್ಯುವ ಮಹಾತ್ಮರನ್ನೂ ಕಾಣುತ್ತೇವೆ. (ತೀರ್ಥ ತೆಗೆದುಳ್ಳುವಾಗ ಏನು ಮಾಡುತ್ತಾರೋ ತಿಳಿಯದು) ಈ ತರಹದ ಸಮಸ್ಯೆಗಳು ಒಂದಾದರೆ, "ಅವರು ಮಾಡಿಸಿದರು, ಗೋಲಿ ಹಾಕಿದರು" ಇತ್ಯಾದಿಗಳೂ ಒಂದು ದೊಡ್ಡ ಸಮಸ್ಯೆ. ಈ ತರಹದ ನೂರಾರು ಸಮಸ್ಯೆಗಳು. ಈ ಎಲ್ಲ ಸಮಸ್ಯೆಗಳಿಂದ ಪಾರಾಗಿ, ದೇವರ ನೈವೇದ್ಯವನ್ನು ಜೀರ್ಣ ಮಾಡಿಕೊಳ್ಳುವ ಕಲೆಗೆ ಸುಲಭೋಪಾಯವೆಂದರೆ ಮೇಲಿನ ಸುಂದರ ಕಥೆಯ ಚಿಂತನೆ.
ಇದೇ ವಾಸುದೇವ ಮುಂದೊಂದು ದಿನ ಶ್ರೀಮದಾಚಾರ್ಯರು ಎಂದಾದಾಗ ಊಟವಾದ ಮೇಲೆ "೨೦೦ ಕ್ಕೂ ಅಧಿಕವಾದ ಕೇರಳ ಬಾಳೆಹಣ್ಣುಗಳನ್ನು ತಿನ್ನುತ್ತಾರೆ. ಮೂವತ್ತಕ್ಕೂ ಅದಿಕ ಕೊಡಗಳ ಹಾಲನ್ನೂ ಕುಡಿತಾರೆ ಅದನ್ನೂ ಅತ್ಯಂತ ಅನಾಯಾಸೇನ ಜೀರ್ಣ ಮಾಡಿಕೊಳ್ಳುತ್ತಾರೆ. ಇದು ಹೇಗೆ.. ?? ಎಂದು ಕೇಳಿದರೆ *ಅಂಗುಷ್ಠಮಾತ್ರಂ ಜಠರೇ ಪ್ರತಿಷ್ಠಿತಂ* ಎಂದು ತಿಳಿಸಿದಂತೆ ಶ್ರೀಮದಾಚಾರ್ಯರೇ ಹೇಳುತ್ತಾರೆ *ಎನ್ನ ಉದರದಲ್ಲೊ ಅಂಗುಷ್ಠ ಪರಿಮಿತ ಜಠರಾಗ್ನಿ ಇದೆ, ಬ್ರಹ್ಮಾಂಡವನ್ನೇ ಉಂಡರೂ ಜೀರ್ಣಿಸಿಕೊಳ್ಳುವ ಸಾಮರ್ಥ್ಯವಿದೆ* ಎಂದು ತಿಳಿಸುತ್ತಾರೆ. ಇತ್ಯಾದಿ ಕಥೆಗಳ ಚಿಂತನೆ ನಮಗೆ ದಾರಿದೀಪವಾಗಿವೆ. ಆ ತರಹದ ಸಾಮರ್ಥ್ಯ ಒದಗಿ ಬರುತ್ತುದೆ.
ಇಂದು ಕಾರ್ತೀಕ ಮಾಘ ಸ್ನಾನ ಮಾಡುವದು ತುಂಬ ಕಷ್ಟವಾಗತ್ತೆ. ಮೌನವಾಗಿ ಕೆಲಹೊತ್ತೂ ಇರಲು ಆಗುವದಿಲ್ಲ. ವ್ರತೋಪವಾಸವನ್ನು ಮಾಡಲೂ ಆಗುವದಿಲ್ಲ. ಅದಕ್ಕೂ ಶ್ರೀಮದಾಚಾರ್ಯರ ಕಥೆಗಳ ಚಿಂತನೆ ನಮಗೆ ದಾರಿದೀಪವಾಗುತ್ತದೆ.
*ಮಜ್ಜನಂ ವ್ಯಧಿತ ಶಿತಲಗಂಗಾವಾರಿ ನಿತ್ಯಮೆಉಣೋದಯಕಾಲೇ* ನಿತ್ಯದಲ್ಲೂ ಅತಿ ತಂಪಾದ ಗಂಗಾನದಿಯಲ್ಲಿ, ಸೂರ್ಯೋದಯಕ್ಕೆ ಸ್ನಾನ ಆಚರಿಸುವವರು ಶ್ರೀಮದಾಚಾರ್ಯರು. *ಕಾಷ್ಠಮೌನಮದಧಾದುಪವಾಸಃ* ನಾಲವತ್ತೆಂಟು ದಿನಗಳವರೆಗೆ ಕಾಷ್ಠಮೌನ ವ್ರತವನ್ನು ಶ್ರೀಮದಾಚಾರ್ಯರು ಆಚರಿಸಿದರು. ಈ ತರಹದ ಅನೇಕ ಕಥೆಗಳನ್ನು ಕೇಳಿ ಮೆಚ್ಚಿ ನಮಸ್ಕಾರ, ಧ್ಯಾನ ಚಿಂತನೆ ಇವುಗಳನ್ನು ಮಾಡಿದಾಗ ಸಾಧನೆಗೆ ಅನುಕೂಲವೂ ಆಗುತ್ತದೆ. ಶ್ರೀಮದಾಚಾರ್ಯರ ಅನುಗ್ರಹವೂ ದೊರೆಯುತ್ತದೆ. ಮೋಕ್ಷಾದಿ ಪುರುಷಾರ್ಥಗಳೂ ಒಲೆದು ಬರುತ್ತದೆ.
*ಇಂದಿನಿಂದ ಯಾರೆಲ್ಲರಿಗೆ ಸಾಧ್ಯವಿದೆಯೋ ಅವರೆಲ್ಲರೂ "ಶ್ರೀ ಸುಮಧ್ವವಿಜಯ"* ಉಪನ್ಯಾಸ ಪಾಠಗಳಿಗೆ ತೊಡಗಿಸಿಕೊಳ್ಳೋಣ. ಶ್ರೀಮದಾಚಾರ್ಯ ಅತಿದಿವ್ಯ ಮಹಿಮೆಗಳನ್ನು ಸ್ವಾರ್ಥಕ್ಕೋಸ್ಕರವಾದರೂ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.....
*✍🏽✍🏽✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments