*ತಪಸ್ಸು* (ಭಾರತವಾಣೀ....)
*ತಪಸ್ಸು*
(ಭಾರತವಾಣೀ....)
*ತಪಸೋ ಹಿ ಪರಂ ನಾಸ್ತಿ ತಪಸಾ ವಿಂದ್ಯತೇ ಮಹತ್*
*ಮಂದಭಾಗ್ಯೋಲ್ಪಭಾಗ್ಯಾನಂ ತಪ ಏಕಂ ಸಮಾಸ್ಥಿತಮ್*
ತಪಸ್ಸಿನಿಗಿಂತಲೂ ಉತ್ತಮ ವಾದದ್ದು ಯಾವದಿಲ್ಲ. ತಪಸ್ಸಿಗೆ ದೇವರೂ ಒಲೆದು ಬರುತ್ತಾನೆ.
ಮಂದಭಾಗ್ಯ ಅಲ್ಪಭಾಗ್ಯರಾದ ದೌರ್ಭಾಗ್ಯವಂತರಾದ ನಮಗೆ, ಅಸಾಧ್ಯವಾದದ್ದನ್ನು ಪಡೆಯ ಬೇಕಾದರೆ ತಪಸ್ಸೇ ಮೂಲ ಎಂದು ಮಹಾಭಾರತ ಸೊಗಸಾಗಿ ಸಾರುತ್ತದೆ.
ಸ್ವರ್ಗದಲ್ಲಿ ಇರುವ ಅರ್ಜುನ, ವನದಲ್ಲಿ ಇರುವ ಧರ್ಮರಾಜನಿಗೆ ತಿಳಿಸುವ ಸುಂದರ ಮಾತು. ನನಗೆ ಒಂದು ದೈವ ಕಾರ್ಯವಿದೆ (ನಿವಾತಕವಚರ ಸಂಹಾರ) ಆ ಕೆಲಸ ಮುಗಿಸಿ ನಾನು ನಿಮ್ಮನ್ನು ಸೇರುವೆ. ಕರ್ಣಾದಿಗಳನ್ನು ಹೇಗೆ ಎದುರಿಸಬೇಕು ಎಂಬ ಭಯವನ್ನೂ ಪರಿಹರಿಸುವೆ. ಅಲ್ಲಿಯ ವರೆಗೆ ನೀವು ತಪಸ್ಸನ್ನು ಮಾಡಿ ಎಂದು.....
ತಪಸ್ಸು ಇದ್ದರೆ ಎಲ್ಲವಿದೆ ತಪಸ್ಸು ಇಲ್ಲವೆಂದಾದರೆ ಏನೂ ಇರುವದಿಲ್ಲ. ತಪಸ್ಸಿನಿಂದಲೇ ಎಲ್ಲವನ್ನೂ ಸಾಧಿಸ ಬಹುದು. ಆದ್ದರಿಂದ ನೀವೆಲ್ಲರೂ ತಪಸ್ಸಿನಲ್ಲಿ ತೊಡಗಿರಿ ಎಂದು ಸಂದೇಶವನ್ನು ಕಳುಹಿಸುತ್ತಾನೆ ಅರ್ಜುನ. ಅದನ್ನು ಪಾಲಿಸುತ್ತಾರೆ ಧರ್ಮ ಭೀಮಾದಿಗಳು. ಕಾಲಾಂತರದಲ್ಲಿ ತಪಸ್ಸಿನ ಫಲವನ್ನೂ ಪಡೆಯುತ್ತಾರೆ. ಇದು ತಪಸ್ಸಿನ ಫಲ.
ಇಂದು ನಮಗೆ ತಪಸ್ಸು ಬೇಡವಾಗಿದೆ. ತಪಸ್ಸು ಮಾಡಯ್ಯಾ ಅಂದರೆ ಮೂಗು ಮುರಿಯುತ್ತಾನೆ ಇಂದಿನ ಯುವಕ. ಇದಕ್ಕೆ ಮೂಲ ತಪಸ್ಸು, ತಪಸ್ಸಿನ ಶಕ್ತಿ, ತಪಸ್ಸಿನ ಫಲ ಮೂರ ಪಡೆಯದ ಹಿರಿಯರ, ತಪಸ್ಸಿನ ಬಗ್ಗೆ ಇರುವ ತಾತ್ಸಾರದಿಂದ ಮಾತೇ...
ತಪಸ್ಸಿನ ಮರ್ಮವನ್ನು ನಿಜವಾಗಿ ಅರಿತವರು ದೈತ್ಯರು. ದೈತ್ಯರು ಸ್ವಯಂ ದುರ್ಬಲತಮರು. ದೌರ್ಬಲ್ಯದ ಜ್ಙಾನ ಅವರಿಗೆ ಇರುವದರಿಂದ, ದೌರ್ಬಲ್ಯವನ್ನು ಮೆಟ್ಟಿ ಬಲಿಷ್ಠರಾಗಲು ಅವರ ಕಣ್ಣಿಗೆ ಕಂಡದ್ದು ತಪಸ್ಸು. ತಪಸ್ಸು ಮಾಡುವದೇ ಕಾಯಕವಾಗಿ ಇಟ್ಟುಕೊಂಡರು.
ತಪಸ್ಸಿನ ಬಲದಿಂದ ರುದ್ರ, ಉಮಾ, ಷಣ್ಮುಖ, ಸೂರ್ಯ, ಗಣಪತಿ, ಬ್ರಹ್ಮಾ ಮೊದಲಾದ ದೇವತೆಗಳನ್ನು ಒಲಿಸಿಕೊಂಡರು, ಇಂದ್ರ ಪದವಿಯನ್ನೇ ಪಡೆದರು. ಎಂಥೆಂಥ ಸಾಮರ್ಥ್ಯವನ್ನು ತಮ್ಮದಾಗಿಸಿಕೊಂಡರು. ಒಂದೊಂದೂ ಊಹಾತೀತ. ಅವರ ಆ ಸಾಮರ್ಥ್ಯವನ್ನು ಪುನಃ ಕಸಿದುಕೊಳ್ಳಲು ದೇವರೇ ನಾನಾರೂಪಗಳಿಂದ ಭುವಿಗಿಳಿದು ಬರಬೇಕಾಯಿತು.
ಆ ದೈತ್ಯರಿಗಿಂತಲೂ ಕೋಟಿಮಟ್ಟದಲ್ಲಿ ಉತ್ತಮರಾದ ಮಾನವ, ದೇವರನ್ನೇ ಕುರಿತು ಭಕ್ತಿ ಶ್ರದ್ಧೆ ವಿಶ್ವಾಸ ಪ್ರಾಮಾಣಿಕತೆ ಭರವಸೆ ಇತ್ಯಾದಿಗಳಿಂದ ತಪಸ್ಸು ಮಾಡಿದರೆ ಪ್ರತಿಯೊಬ್ಬ ಮಾನವನ ಉನ್ನತಿ ಹೇಗಿರಬಹುದು ಎಂದು ತಪಸ್ಸಿನಿಂದ ದೂರವಿರುವ ನಾವು ಕನಸದಸಿನಲ್ಲಿಯೂ ಊಹಿಸಲೂ ಅಸಾಧ್ಯ.
*ತಪಸ್ಸಿಗೆ ನಿಲುಕದ್ದು ಇಲ್ಲ, ತಪಸ್ಸಿಗೆ ಒಲಿಯದೇ ಇರುವದು ಇಲ್ಲ, ಎಂತಹದ್ದೂ ಸುಲಭ, ದೇವರ ಕರುಣೆಯ ಬಲವಿದ್ದರೆ ಸುರಕ್ಷಿತವೂ ಸಹ*
ಇಂದಿನ ನಮ್ಮ ವೈಭವ ನಮ್ಮಿಂದಲೇ ಎಂಬ ಭ್ರಮೆಯಲ್ಲಿ ನಾವಿರುವದರಿಂದ ತಪಸ್ಸು ದೂರಾಗಿದೆ. *ಎಮಗೆ ಪುಣ್ಯ ಎಲ್ಲಿದೆ, ತಪವು ತಾನೇ ಸಾಗಿದೆ* ಎಂಬ ಹಿರಿಯರ ಮಾತು ನೆನೆಸಿದಾಗ ಅರಿವಿಗೆ ಬರುತ್ತದೆ. ನಮ್ಮ ವೈಭವ ನಮ್ಮಿಂದಲ್ಲ. ನಮ್ಮ ಹಿರಿಯರ ಗುರುಗಳ ತಪಸ್ಸಿನಿಂದಲೇ ಎನ್ನುವದು.
"ತನಗೆ ಮಾತ್ರವಲ್ಲದೆ ತನ್ನ ನಂಬಿದವರಿಗೂ ಫಲ ಕೊಡುವದು ತಪಸ್ಸಿನ ಗರಿಮೆ" ಅಂತಹ ತಪಸ್ವಿಗಳ ಸಂಗವಾಗಲಿ, ಏನು ದೊರೆತರೂ ತಪಸ್ಸಿಂದಲೇ ದೊರೆಯುವಂತೆ ಗುರು ದೇವತಾ ದೇವರುಗಳು ಕರುಣಿಸಲಿ ಎಂದು ಪ್ರಾರ್ಥಿಸೋಣ. ದಿನಕ್ಕೆ ಹತ್ತು ನಿಮಿಷವಾದರೂ ತಪ್ಪದೇ ತಪಸ್ಸು ಮಾಡೋಣ.
*✍🏽✍🏽ನ್ಯಾಸ...... 😊*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments