*ಅಂಗುಲಿಗೆ ಉಂಗುರದಂತೆ, ಎನ್ನನು ಧರಿಸೋ ಪುರಂದರ ವಿಠಲ*
*ಅಂಗುಲಿಗೆ ಉಂಗುರದಂತೆ, ಎನ್ನನು ಧರಿಸೋ ಪುರಂದರ ವಿಠಲ*
ಪುರಂದರ ದಾಸರ ಒಂದು ಸುಂದರ ಮಾತು "ಅಂಗುಲಿಯಲಿ ಉಂಗುರದಂದಂತೆ ಎನ್ನನು ಧರಿಸೋ" ಎಂದು ಪ್ರಾರ್ಥಿಸುತ್ತಾ "ನೀನು ಏನಗೆ ಆಶ್ರಯ, ನಾನು ನಿನ್ನಲ್ಲಿ ಆಶ್ರಿತ" ಎಂಬ ಭಾವ ಇಲ್ಲಿ ಮೂಡಿಸುತ್ತಾರೆ ದಾಸರು.
ನನ್ನ ಕೈ ಬೆರಳುಗಳಿಗೆ ಶೋಭೆ ಬರುವದು ಉಂಗುರದಿಂದ ಎಂದು ನಾ ಭಾಬಿಸಿದ್ದೇವೆ. ಅಂತೆಯೇ ಭಂಗಾರದಮೇಲೆ ತುಂಬ ಪ್ರೀತಿ. ಭಂಗಾರದ ಉಗುರಕ್ಕೆ ಅಷ್ಟು ಮಹತ್ವ. ಆದರೆ ಇಲ್ಲಿ ಸ್ವಲ್ಪ ವಿಭಿನ್ನ ನಮಗೆ ಮಹತ್ವ ಬರುವದು ಎಮ್ಮನು ತನ್ನ ಬೆರಳಿಗೆ ಉಂಗುರದಂತೆ ಧರಿಸಿದರೆ ಮಾತ್ರ.
ಉಂಗುರವನ್ನು ಧರಿಸಬೇಕು ಎಂದಾದರೆ, ಉಂಗುರ ನನಗೆ ಇಷ್ಟವಾಗಿರಬೇಕು. ಇಲ್ಲಿ ದೇವರು ಎಮ್ಮನು ಧರಿಸಬೇಕು ಎಂದಾದರೆ ನಾವು ಮೊದಲು ದೇವರನ್ನು ಪ್ರೀತಿಸಬೇಕು. ನಾವು ದೇವರಿಗೆ ಪ್ರಿಯರಾಗಿರಬೇಕು.
ದೇವರ ಬೆರಳಲ್ಲಿ ಆಶ್ರಯಿಸಬೇಕು ಎಂಬ ಆಸೆ ಇರುವದಾದರೆ ದೇವರನ್ನು ಪ್ರೀತಿಸಬೇಕು. ಹಾಗಾದರೆ ಪ್ರಿಯವಾದ ಉಂಗುರದಂತೆ ಇರುವ ಎಮ್ಮನು ಆ ದೇವ ಧರಿಸುವ.
ಪ್ರಿಯರಾಗುವದು, ಪ್ರೀತಿ ಬರುವದು, ಪ್ರೀತಿಮಾಡುವದು ಕೇವಲ ತ್ಯಾಗ ಮತ್ತು ಸಮರ್ಪಣೆಗಳಿಂದ. ಸಮಗ್ರವನ್ನೂ ಸಮರ್ಪಿಸುವವರು ಪ್ರೀತ್ಯಾಸ್ಪದರು. ಪ್ರೀತ್ಯಾಸ್ಪದರು ಯಾರೂ, ಅವರು ತಮ್ಮನ್ನು ಪರಿಪೂರ್ಣ ಸಮರ್ಪಿಸಿಕೊಂಡಿರುತ್ತಾರೆ.
ತಮ್ಮನ್ನು ತಾವು ಸಮರ್ಪಿಸಿಕೊಳ್ಳುವದು ಎಂದರೆ ದೇಶ ಕಾಲ ಮನಸ್ಸು ದೇಹ ಇಂದ್ರಿಯ ಮಾತು ಬುದ್ಧಿ ಹಣ ದ್ರವ್ಯ ಸಂತತಿ ಮೊದಲು ಮಾಡಿ ಎಲ್ಲವೂ ನಿನ್ನದೇ ನಿನಗಾಗಿ ಮೀಸಲು ಎಂಬ ತ್ಯಾಗದ ಬುದ್ಧಿಯೇ ಸಮರ್ಪಣೆ.
ತ್ಯಾಗ ಹಾಗೂ ತ್ಯಾಗದ ಮುಖಾಂತರ ಭಗವತ್ಸಮರ್ಪಣೆ ಸಮರ್ಪಣೆ , ತನ್ಮುಖಾಂತರ ದೇವರಿಗೆ ಇಷ್ಟರು ಎಂದಾಗುವದು.. ಇಂದು ಬಾರಿ ದೇವರಿಗೆ ಇಷ್ಟರೂ ಪ್ರೀತಿಪಾತ್ರರು ಎಂದಾದರೆ, ಶ್ರೀಹರಿಯು ನಮನ್ನು ಉಂಗುರದಂತೆ ಧರಿಸಲು ನಾವು ಯೋಗ್ಯರಾಗುತ್ತೇವೆ. ಅತ್ಯಂತ ಪ್ರೀತಿಪಾತ್ರರಾದರೆ ನಿರಂತರ ಎಮ್ಮನು ತನ್ನ ಕೈಬೆರಳಿನ ಉಂಗುರವನ್ನಾಗಿ ಧರಿಸುತ್ತಾನೆ. ಅಥವಾ ಕಾಲಿನ ಧೂಳಿಯಾಗಿಯಾದರೂ ಧರಿಸುತ್ತಾನೆ. ಆಗ *ನಾನು ದೇವರಲ್ಲಿ ಆಶ್ರಿತ, ದೇವರ ಕೈ ಬೆರಳಿನ ಉಂಗುರ* ಎಂಬ ಶೋಭೆ ವೈಭವ ನಮ್ಮದಾಗುತ್ತದೆ.
*✍🏽✍🏽✍🏽ನ್ಯಾಸ.....*
ಗೋಪಲದಾಸ.
ವಿಜಯಾಶ್ರಮ, ಸಿರವಾರ.
Comments