*ನಿಷ್ಕಲಷ ಪ್ರೀತಿಯೊಂದೇ ಅಭ್ಯುದಯದ ರಾಜಮಾರ್ಗ*
*ನಿಷ್ಕಲಷ ಪ್ರೀತಿಯೊಂದೇ ಅಭ್ಯುದಯದ ರಾಜಮಾರ್ಗ* ಅಭ್ಯುದಯ ಎಲ್ಲರಿಗೂ ಬೇಕು. ಆದರೆ ನಿಷ್ಕಲ್ಮಷ ಪ್ರೀತಿ ಯಾರಿಗೂ ಬೇಡ. ಇದು ಇಂದಿನ ಅವಸ್ಥೆ. ಪ್ರೀತಿಯಿಲ್ಲದೆ ಅಭ್ಯುದಯ ಆಗದು. ಅಭ್ಯುದಯಕ್ಕೆ ಪ್ರೀತಿ ಸ್ನೇಹ ಭಕ್ತಿ ಇವುಗಳು ಅನಿವಾರ್ಯ. *ಮಹಾಶಕ್ತಿಗಳ ನಡುವೆ ನಾನಿದ್ದೇನೆ* ನನ್ನಷ್ಟು ಸುಭದ್ರಸ್ಥಿತಿಯಲ್ಲಿ ಯಾರಿರಲಿಕ್ಕಿಲ್ಲ. ಸುಭದ್ರಸ್ಥಿಯನ್ನು ಹಾಳುಮಾಡಿಕೊಂಡತಹ ಮೂರ್ಖನೂ ಯಾರಿರಲಿಕ್ಕಿಲ್ಲ. *ಅಣುವಿಕಿಂತಲೂ ಅಣುವಾದ ದೇವ ಒಂದೆಡೆ ಇದ್ದಾನೆ, ಮಹತ್ತಿಗಿಂತಲೂ ಮಹಾನ್ ಆದ ಅದೇ ದೇವ ಮತ್ತೊಂದೆಡೆ ಇದ್ದಾನೆ- ಇವರೀರ್ವರ ಮಧ್ಯದಲ್ಲಿ ನಾನು ಇದ್ದರೂ ಇಲ್ಲದಂತೆ ಇದ್ದೇನೆ* ತುಂಬ ವಿಚಿತ್ರ ಅನಿಸತ್ತೆ. *ಹಿತೈಷಿ ಪ್ರಬಲ ಶಕ್ತಿಗಳು ಅಕ್ಕಪಕ್ಕದಲ್ಲಿ ಇರುವಾಗ ನಾನೇಕೆ ದುರ್ಬಲ* ಆ ಪ್ರಬಲಶಕ್ತಿಗಳನ್ನು ಪ್ರೀತಿಸದೇ ಇರುವದೇ ಎನ್ನ ದೌರ್ಬಲ್ಯಕ್ಕೆ ಕಾರಣ. "ಒಂದೆಡೆ ಅಂತರಾತ್ಮ. ಮತ್ತೊಂದೆಡೆ ಪರಮಾತ್ಮ" ಈಬ್ಬರನ್ನೂ ಪ್ರೀತಿಸದೇ ಇರುವದರಿಂದಲೇ ನನ್ನ ಅವಸ್ಥೆ ಆಚೆಯೂ ಇಲ್ಲ, ಈಚೆಯೂ ಇಲ್ಲ. ಅಂತರಪಿಶಾಚಿಯ ಅವಸ್ಥೆಯಾಗಿದೆ. ನಾವು ದೇವರನ್ನು ಪ್ರೀತಿಸಿದರೂ ದೇವರು ನನ್ನನ್ನು ಪ್ರೀತಿಸಬೇಕು ಅಲ್ಲವೆ.. ದೇವರು ನನ್ನನ್ನು ಪ್ರೀತಿಸುವದೇ ಇಲ್ಲ... ನಾನೆಂದರೆ ಅವನಿಗೆ ತಾತ್ಸಾರ.... ದೇವರು ನನ್ನನ್ನು ಪ್ರೀತಿಸುವದಿಲ್ಲ ಎಂಬುವದು ಸಾಧ್ಯವೇ ಇಲ್ಲ. ದೇವರಲ್ಲಿ ಎನ್ನ ಬಗ್ಗೆ ಪ್ರೀತಿ ...