*ಭಗಿನೀ ತೃತೀಯಾ-- ಅಕ್ಕನ ತದಿಗಿಯ ಶುಭಾಷಯಗಳು*

*ಭಗಿನೀ ತೃತೀಯಾ-- ಅಕ್ಕನ ತದಿಗಿಯ ಶುಭಾಷಯಗಳು*

 ನನ್ನ ನಿಜವಾದ  ಅಕ್ಕ, ತಂಗಿ, ವೈನಿ, ಸ್ನೇಹಿತೆ, ಗೆಳತಿ,  ಎಲ್ಲವೂ ಆದವಳು ಮಹಾಲಕ್ಷ್ಮೀದೇವಿಯೇ. ಅವಲಿಗೆ ಅನಂತಕೋಟಿ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತಾ ಆ ವರ ಮಹಾಲಕ್ಷ್ಮೀದೇವಿಯಿಂದ ಅಧಿಷ್ಠಿತರಾದ, ಮೇಲೆ ಹೇಳಿದ ಎಲ್ಲರಿಗೂ "ಅಕ್ಕನ ತದಗಿಯ" ಹೃತ್ಪೂರ್ವಕ ಶುಭಾಷಯಗಳನ್ನು ಹೇಳುತ್ತಾ, ಆ ಎಲ್ಲರಲ್ಲಿಯೂ  ಇನ್ನೂ ಹೆಚ್ಚಿನಮಟ್ಟದಲ್ಲಿ ಲಕ್ಷ್ಮೀದೇವಿಯ ಸನ್ನಿಧಾನ ಬೆಳೆಯಲಿ ಎಂದು ಹೃತ್ಪೂರ್ವಕ ಆಶಿಸುತ್ತೇನೆ... 

ಲಕ್ಷ್ಮೀದೇವಿಯ ವಾಸವಿಲ್ಲಿ...

ನಿತ್ಯಮುಕ್ತಳಾದ ಲಕ್ಷ್ಮೀದೇವಿಗೂ ಹಾಗೂ ಲಕ್ಷ್ಮೀದೇಯ ಅವತಾರಳಾದ ದಕ್ಷಿಣಾರೂಪದಿಂದ ಭುವಿಗಿಳಿದು ಬಂದ ರುಕ್ಮಿಣೀ ದೇವಯರ ಸುಂದರ ಸಂವಾದದ ಒಂದೆರಡು ಅಂಶಗಳನ್ನು ಈ ಪ್ರಸಂಗದಲ್ಲಿ ತಿಳಿಯುವ ಪುಟ್ಟ ಪ್ರಯತ್ನ.  ರುಕ್ಮಿಣೀದೇವಿಯು "ನಿನ್ನ ಸನ್ನಿಧಾನವಿಶೇಷ ಎಲ್ಲಿರುತ್ತದೆ" ಎಂದು  ಲಕ್ಷ್ಮೀದೇವಿಯನ್ನು ಕೇಳಿದಾಗ, ಲಕ್ಷ್ಮೀ ದೇವಿಯು ಈ ರೀತಿಯಾಗಿ ಉತ್ತರಿಸುತ್ತಾಳೆ..

ವಸಾಮಿ ಧರ್ಮಶೀಲೇಷು,
ಧರ್ಮಜ್ಙೇಷು ಮಹಾತ್ಮಸು
ವೃದ್ಧಸೇವಿಷು ದಾಂತೇಷು
ಸತ್ವಜ್ಙೇಷು ಮಹಾತ್ಮಸು..

ಧರ್ಮವನ್ನು ಚೆನ್ನಾಗಿ ತಿಳಿದು, ಧರವನ್ನು ಪಾಲಿಸುವವರಲ್ಲಿ ನನ್ನ ವಾಸವಿರುತ್ತದೆ. ತಂದೆ ತಾಯಿ ಗುರು ಅತ್ತೆ ಮಾವ ಇವರುಗಳ ಸೇವೆಯನ್ನು ಯಾರು ಚೆನ್ನಾಗಿ ಮಾಡುತ್ತಾರೆ ಅವರಲ್ಲಿ ಸರ್ವಥಾ ನನ್ನ ಸನ್ನಿಧಾನ ಇರುತ್ತದೆ. ಯಾರಲ್ಲಿ ಜ್ಙಾನ ತಿಳುವಳಿಕೆ ಸತ್ವ ಇವುಗಳಿವೆಯೋ ಅವರಲ್ಲಿ ನಾನು ನಿರಂತರ ವಾಸುಮಾಡುತ್ತೇನೆ.

ಸ್ತ್ರೀಷು ಕಾಂತಾಸು ಶಾಂತಾಸು
ದೇವದ್ವಿಜಪರಾಸು ಚ
ವಿಶುದ್ಧಗೃಹ ಭಾಂಡಾಸು
ಗೋಧಾನ್ಯಾಭಿರತಾಸು ಚ
ದಾನ ಶೌಚರತೇಷು ಚ

ಶಾಂತವಾದ ದೇವರಲ್ಲೇ ಮನಸ್ಸಿಟ್ಟಿರುವ, ಪರಮಶಾಂತಿಯನ್ನೇ ಸ್ವಭಾವವನ್ನಾಗಿ ಮಾಡಿಕೊಂಡ,  ದೇವತೆಗಳ ಬ್ರಾಹ್ಮಣರ ಅತಿಥಿ ಗೋ ಇವರುಗಳ ಸತ್ಕಾರದಲ್ಲಿ ಸ್ವಯಂ ತೊಡಗಿ, ಪತಿಗೆ ಅನುಕೂಲಳಾದ,  ದಾನಶೀಲ, ಮಡೆ ಮೈಲಿಗಿ ಆಚಾರ ವಿಚಾರಗಳಲ್ಲಿ ತೊಡಗಿದ ಸೌಮಾಂಗಲ್ಯ ಚಿಹ್ನೆಗಳಿಂದ ಕಂಗೊಳಿಸುವ , ಮನೆಯನ್ನು ಮನೆಯ ಪಾತ್ರೆಗಳನ್ನು, ಮನೆಯಲ್ಲಿಯವರ ಮನಸ್ಸನ್ನು ಪರಿಶುದ್ಧವಾಗಿ ಇಟ್ಟಿರುವ ಎಲ್ಲ ಧಾರ್ಮಿಕ ಸಜ್ಜನ ಸ್ತ್ರೀಯರಲ್ಲಿ ನಾನು ವಾಸ ಮಾಡುತ್ತೇನೆ.

ನನ್ನಿಂದ ಸನ್ನಿಹಿತಳಾದ ಸ್ತ್ರೀ ಯಾವ ಮನೆ ಮನದಲ್ಲಿ ವಾಸುಮಾಡುತ್ತಿರುತ್ತಾಳೆ, ಅವಳ ಮನೆಯಲ್ಲಿ, ಅವಳನ್ನು ಮನಸ್ಸಿನಲ್ಲಿ ಹೊತ್ತವರಲ್ಲಿ ಚಿಂತೆ, ಸಂತಾಪ, ಶೋಕ, ಜರಾ, ಅಪಮೃತ್ಯು, ಶೋಕ, ದುಃಖ, ದಾರಿದ್ರ್ಯ, ರೋಗ, ರುಜಿನಗಳ ಬಾಧೆ ಸರ್ವಥಾ ಇರುವದಿಲ್ಲ. ಶಾಂತಿ ಸಮೃದ್ಧಿ ನೆಮ್ಮದಿ ಐಶ್ವರ್ಯ ಜ್ಙಾನ, ಭಕ್ತಿ, ವಿಷ್ಣುಪ್ರೀತಿ, ಇತ್ಯಾದಿ ಗುಣಗಳೆಲ್ಲ  ಸಮೃದ್ಧವಾಗಿ ಬೆಳೆಯುತ್ತವೆ. ಗುಣಗಳು ಬೆಳದಂತೆ ನನ್ನ ಸನ್ನಿಧಾನವೂ ಬೆಳೆಯುತ್ತದೆ. ಎಂದು ರುಕ್ಮಿಣೀದೇವಿಗೆ ತಿಳಿಸಿ ಲಕ್ಷ್ಮೀದೇವಿ ಉಪರತಳು ಆಗುತ್ತಾಳೆ.

ದೇವರ ಅರ್ಧದೇಹದಲ್ಲಿ ಇರುವ, ವರಕ್ಷಸ್ಥಳದಲ್ಲಿ ಇರುವ,  ತೊಡೆಯಮೇಲೆ ಕುಳಿತ, ಅಕ್ಕಪಕ್ಕದಲ್ಲಿ ವಾಸಿಸುವ ಲಕ್ಷ್ಮೀದೇವಿಯ ಸನ್ನಿಧಾನ  *ನನ್ನ ಅತ್ಯಂತ ಆತ್ಮೀಯರಾದ ಪ್ರೀತಿಯ ಅಕ್ಕತಂಗಿಯರಾದ ತಮ್ಮೆಲ್ಲರಲ್ಲಿ ನಿರಂತರ ಅಭಿವೃದ್ಧಿಸಲಿ-* ಎಂದು ಮನಃಪೂರ್ವಕ ಗುರು ದೇವತಾ ಲಕ್ಷ್ಮೀ ನಾರಯಣರಲ್ಲಿ ಪ್ರಾರ್ಥಿಸುತ್ತೇನೆ.

*✍🏽✍🏽✍ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*