*ಓ ಸ್ವರಮಣನೇ !! ನಿನ್ನ ಸ್ಮರಣೆಗಳು....*
*ಓ ಸ್ವರಮಣನೇ !! ನಿನ್ನ ಸ್ಮರಣೆಗಳು....*
ಶ್ರೀಹರಿಯ ಅನಂತ ನಾಮಗಳಲ್ಲಿ ಒಂದು ಹೆಸರು *ಸ್ವರಮಣ* ಎಂದು. "ತನ್ನಿಂದ ಭಿನ್ನವಾದ, ತನ್ನದಲ್ಲದ ಯಾವ ಪದಾರ್ಥಗಳಿಂದಲೂ ಆನಂದವನ್ನು ಸುಖವನ್ನು ಅನುಭವಿಸದೆ, ಅಪೇಕ್ಷಿಸದೇ ತನ್ನಿಂದ, ತನ್ನಕ್ರಿಯೆಗಳಿಂದ ತನ್ನಲ್ಲಿಯೇ ಆನಂದವನ್ನು ಅನುಭವಿಸುವವನು" ಎಂದು ಸ್ವರಮಣ ಶಬ್ದದ ಅರ್ಥ ಹೇಳಬಹುದು.
ಸುಖ ಆನಂದ ಇನ್ನೊಂದ ಪದಾರ್ಥಗಳಿಂದಲೇ ಲಭ್ಯವಾಗುವಾಗ, ಹಾಗೆಯೇ ಇಂದು ನಾವು ಅನುಭವಿಸುತ್ತಿರುವಾಗ, ತನ್ನಲ್ಲಿಯೇ ತಾನು ಆನಂದ ಅನುಭವಿಸುವದು ಅಂದರೆ ಹೇಗದು... ?? ಹಣಬೇಕು, ಮನೆಬೇಕು, ಕುಟುಂಬ ಬೇಕು, ಮಕ್ಕಳು ಬೇಕು, ಜ್ಙಾನ ಬೇಕು, ಭೋಗ್ಯವಸ್ತುಗಳ ನೂರಾರು ಬೇಕು ಆಗಲೇ ಆನಂದವನ್ನು ಅನುಭವಿಸುವದು ಆಗುತ್ತದೆ ಅಲ್ಲವೆ.. ?? ಒಬ್ಬನ್ನೇ ತನ್ಮಲ್ಲಿಯೇ ತಾನು ಅನುಭವಿಸುವದು ಸಾಧ್ಯವೇ.. ??
ನಾವು ಪ್ರೀತಿಸುವ ಪದಾರ್ಥ ನಮ್ಮ ಸನಿಹ ಇರುವಾಗ, ಆ ಪದಾರ್ಥಗಳಿಂದ ಆನಂದ, ಭೋಗ, ಸುಖ ಇದು ಎಲ್ಲರೂ ಒಪ್ಪಿದ ಮಾತೆ. ನಾನು ನನ್ನನ್ನು ಪ್ರೀತಿಸದೆ, ಜಗತ್ತನ್ನು ಪ್ರೀತಿಸುತ್ತೇನೆ ಆದ್ದರಿಂದ ಜಗತ್ತಿನ ನಾನಾ ಪದಾರ್ಥಗಳಿಂದ ಸುಖ ಆನಂದ ಎಂದು ನಾನು ಭಾವಿಸಿದ್ದೇನೆ. ಆ ಪಾದಾರ್ಥಗಳು ಕೈಜಾರಿ ಹೋದಾಗ ದುಃಖ. ನನ್ನ ಹೊರತು ಬೇರೆಯದಾದ ಎಲ್ಲ ಪದಾರ್ಥಗಳೂ ಕಾಲ ಕಾಲಕ್ಕೆ ಜಾರಿ ಹೋಗುವಂತಹದ್ದೇ. ಅಂತೆಯೇ ದುಃಖ ದುಃಖ ದುಃಖ.
ದೇವರ ವಿಚಾರ ಹಾಗಲ್ಲ, ತನ್ನೊಟ್ಟಿಗೆ ಇರುವವನು ತಾನೊಬ್ಬನೆ. ತನ್ನನ್ನು ತಾನು ಪ್ರೀತಿಸದೇ, ಕಂಡ ಜಗತ್ತನ್ನು ಪ್ರೀತಿಸಿದೆ ಎಂದಾದರೆ, ಆ ಜಗತ್ತು ನಾಶವಾಗುವದೇ, ಹೀಗಿರುವಾಗ ದುಃಖವೇ. ಹಾಗಾಗಿ ಮೊದಲು ನಾನು ನನ್ನನ್ನು ಚೆನ್ನಾಗಿ ಪ್ರೀತಿಸುವೆ. "ಪ್ರೀತಿ ಇರುವಲ್ಲಿ ಆನಂದ" ಹಾಗಾಗಿ ದೇವರು ಪ್ರೀತಿಸುವದೇ ತನ್ನನ್ನು, ಹಾಗಾಗಿ ತನ್ನಲ್ಲಿಯೇ ತಾನು ಆನಂದವನ್ನು ಅನುಭವಿಸುವದು. ಅಂತೆಯೇ ದೇವರು ಸ್ವರಮಣ.
ಜಗತ್ತನ್ನು ದೇವರು ಪ್ರೀತಿಸುವದಿಲ್ಲವೇ....???
ತನ್ನನ್ನು ತಾನು ಎಷ್ಟು ಪ್ರೀತಿಸುತ್ತಾನೆ, ಅಷ್ಟು ಇನ್ಯಾರನ್ನೂ ಪ್ರೀತಿಸ. ಆದರೆ ಅವರವರ ಯೋಗ್ಯತಾನುಸಾರ ತಾನು ಪ್ರೀತಿ ಮಾಡುವ. ಅಂತೆಯೇ ನಮ್ಮನ್ನು ರಕ್ಷಿಸುತ್ತಾನೆ, ಪೋಷಿಸುತ್ತಾನೆ, ನಿಜವಾದ ಪ್ರೀತಿ ಇರೋದರಿಂದಲೇ ನಮ್ಮಿಂದ ಏನನ್ನೂ ಅಪೇಕ್ಷಿಸ. ಅಂತೆಯೇ ಸ್ವರಮಣ ಶ್ರೀಹರಿ.
ಶ್ರೀಹರಿಯ ಪ್ರತಿಬಿಂಬರಾದ ನಾವು ಮೊದಲು ನಮ್ಮನ್ನು ನಾವು ಪ್ರೀತಿಸುವದು ಕಲಿಯೋಣ. ನಂತರ ಕ್ರಮವಾಗಿ ಜಗತ್ತನ್ನು ಪ್ರೀತಿಸೊಣ. ಜಗತ್ತಿನಿಂದ ಏನನ್ನೂ ಅಪೇಕ್ಷೆ ಇಟ್ಟುಕೊಳ್ಳದ ಹಾಗೆ ಪ್ರೀತಿಸೋಣ. ನನ್ನನ್ನು ನಾನು ಪ್ರೀತಿಸುವದರಿಂದ, ನನ್ನೊಟ್ಟಿಗೆ ನಾನೇ ಇರುವವನು, ಕಳೆದುಕೊಳ್ಳುವದೇನು ಇರುವದಿಲ್ಲ. ಆಗ ದುಃಖ ಸಂಕಟ ಇದ್ಯಾವದೂ ಇರುವದೂ ಇಲ್ಲ.
ನನ್ನ ಮೇಲೆ ನನಗೆ ಪ್ರೀತಿ ಇಲ್ಲದಿರುವದರಿಂದಲೇ, ನನಗಾಗಿ, ನನ್ನ ಉದ್ಧಾರಕ್ಕಾಗಿ ಸಮಯವನ್ನು ಮೀಸಲು ಇಡುವದೇ ಆಗಿಲ್ಲ. ಹಾಗಾಗಿ *ಇಂದಿನಿಂದ ನನ್ನನ್ನು ನಾನು ಅತೀ ಹೆಚ್ಚಿನಮಟ್ಟದಲ್ಲಿ ಪ್ರೀತಿಸುವೆ.* ನನ್ನನ್ನು ನಾನು ಪ್ರೀತಿಸಿದಾಗ, ನನಗಾಗಿಯೇ ಹೆಚ್ಚು ಸಮಯವಿಡಲು ಸಾಧ್ಯವಾಗುತ್ತೆ. ಆ ಹೆಚ್ಚಿನ ಸಮಯದಲ್ಲಿ ನಾನು ಆನಂದದಿಂದ ಇರುತ್ತೇನೆ. ನನ್ನ ಪ್ರತಿಕ್ರಿಯೆಗಳೂ ನನಗೆ ಆನಂದವನ್ನೇ ತಂದುಕೊಡುತ್ತದೆ. ಇದು ನೂರರಷ್ಟು ನಿಜ....
ಸ್ವರಮಣನ ಪ್ರತಿಬಿಂಬರಾದ ನಾವೂ ಸ್ವರಮಣರು ಆಗಲು ಸಾಧ್ಯ. ಆ ಸ್ವರಮಣನ ಸ್ಮರಣೆ ತಂದುಕೊಟ್ಟದ್ದಕ್ಕೆ ಶ್ರೀಹರಿಗೆ ಕೋಟಿ ಕೋಟಿ ನಮಸ್ಕಾರಗಳು, ಅನಂತಾನಂತ ವಂದನೆಗಳು 😊😊👏🏼👏🏼
*✍🏽✍🏽✍ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments