*ಗೋವತ್ಸ ಏಕಾದಶೀ ದ್ವಾದಶೀ ವ್ರತೋಪವಾಸ.....*

*ಗೋವತ್ಸ ಏಕಾದಶೀ ದ್ವಾದಶೀ ವ್ರತೋಪವಾಸ.....*

ದೇವರ ಕಾರುಣ್ಯದ ಬಗ್ಗೆ ಹೇಳಿ... ಎಂದು ಇಂದು ಆತ್ಮೀಯರೊಬ್ಬರು ಕೇಳಿದರು.

ದೇವರ ಕಾರುಣ್ಯ ಎಷ್ಟಿದೆ ಎಂದು ಹೇಳಲು ದೇವ ತಾನೊಬ್ಬನೇ ಸಮರ್ಥ. ಸ್ವಲ್ಪ  ನನ್ನ ತಲಿಗೆ ಬಂದ *ತಲೆಹರಟೆ* ಹೊಡಿಯಲು ಪ್ರಯತ್ನ ಮಾಡುವೆ.

ಇಂದು ನಾವು ಇಂದಿಗೂ ಉಪವಾಸ ಬೀಳಲ್ಲ, ಬಿದ್ದಿಲ್ಲ. ಮುಂದೂ ಬೀಳುವದಿಲ್ಲ. ಉಪವಾಸ ಬಿದ್ದ, ಅನ್ನವಿಲ್ಲದ ಅವಸ್ಥೆ ಬಂದದ್ದೇ ನನಗೇ ನೆನಪಿಲ್ಲ. ಮುಂದೂ ಉಪವಾಸ ಬೀಳಬಹುದು ಎಂಬ ವಿಚಾರ ನನ್ನ ಕನಸಲ್ಲಿಯೂ ಊಹೆ ಮಾಡಲು ಸಾಧ್ಯವಿಲ್ಲ. ಈ ಅವಸ್ಥೆ ಏನಿದೆ ಅಲ್ವೆ ಅದುವೇ ದೇವರ ಒಂದದ್ಭುತ ಕರುಣೆ.‌ ನಮ್ಮ  ಹಿಂದಿನ ತಲೆಮಾರು ಎಷ್ಟು ದಿನ ಉಪವಾಸ ಇರುತ್ತಿದ್ದರೋ ತಿಳಿಯದು. ನವಂತೂ ಉಪವಾಸ ಬೀಳುವದಿಲ್ಲ.  ಹಿಂದಿನವರು ಅತಿಥಿ ಬ್ರಾಹ್ಮಣರಿಗೆ ಅನ್ನದಾನ ಮಾಡಿಯಾದರೂ ಉಪವಾಸ ಇರುತ್ತಿದ್ದರೂ, ನಾವು ಇಂದು ಅನ್ನಾದಾನ ಮಾಡದೇ  ಉಪವಾಸ ಬೀಳುವದಿಲ್ಲ. ದೇವರ ಕಾರುಣ್ಯವಲ್ಲದೇ ಇನ್ನೆನೇನಿದೆ. 

ಇಂದು ನಮಗೆ ಮಕ್ಕಳು ಆದಮೇಲೆ ವಿಚಾರ ಮಾಡುತ್ತೆವೆ, ಎಷ್ಟು ಮಕ್ಕಳ ಸಲವಾಗಿ deposit ಎಷ್ಟು ಇಡಬಹುದು ಎಂದು ವಿಚಾರಿಸುತ್ತೇವೆ. ಹೆಣ್ಣು ಹುಟ್ಟಿದರೆ ಎಷ್ಟು, ಗಂಡು ಹುಟ್ಟಿದ್ದರೆ ಎಷ್ಟು ಎಂದು... ಇಂದಿನ ಊಟವಾಗಿಂದ, ನಾಳೆ ಅಡಗಿ ಏನು ಮಾಡಬೇಕು.. ?? ಏನು ಪದಾರ್ಥವಿದೆ... ?? ಹೀಗೆಲ್ಲ ನೂರಾರು ವಿಚಾರಮಾಡುತ್ತೇವೆ.
ನಾನು ೩೫ ವರ್ಷದವನಾದ ಮೇಲೆ ನನ್ನ ಚಿಂತೆ ಆರಂಭ ನಾ ಎಂಥ ಮನಿ ಮಾಡಬೇಕು... ಎಷ್ಟು ಹಣ ಮಾಡಬೇಕು, ... ಇತ್ಯಾದಿ ಇತ್ಯಾದಿ ಯೋಚನೆ ಆರಂಭಿಸುತ್ತೇವೆ ನಿಜ ನಾ....  ವಿಚಾರ ಮಾಡಿದ ಮೇಲೆ ಆ ಎಲ್ಲ ಪಟ್ಟಿಗಳನ್ನು ಸಾಧಿಸಲು ಆರಂಭ......

ಈ ನಮ್ಮ ವಿಚಾರಗಳು ಎಷ್ಟು ಸಫಲವಾಗುತ್ತವೆ ಮುಂದಿನದು.....

ನಮ್ಮನ್ನು ಸೃಷ್ಟಿಮಾಡಿ, ಸಾಕಿ, ಸಲಹುವ ದೇವರು, ನಮ್ಮ ಹಾಗೆಯೇ ಯೋಚಿಸಿದ್ದರೆ ನಮ್ಮವಸ್ಥೇ ಏನಾಗ್ತಿತ್ತು‌.. ???

ಇಂದು ಒಂದು ಕೂಸು ಹುಟ್ಟಿದೆ, ಆ ಕೂಸು ಹುಟ್ಟಿದ ನಂತರ, ಈ ಕೂಸನ್ನು ಬದುಕಿಸಲು ದೇವರು ಯೋಚಿಸಿದ್ದರೆ ಏನಾಗಬಹುದಿತ್ತು... ?? ಕೂಸೇ ಇರುತ್ತಿರಲಿಲ್ಲ. ಆ ಕೂಸನ್ನು ಬದುಕಿಸುವ ವಿಚಾರ ಆ ಕೂಸು ಈ ಭೂಮಿಗೆ ಬರುವದಕ್ಕಿಂತಲೂ ಮೊದಲೆ,  ತಾಯಿಯಲ್ಲಿ ಹಾಲು ಸೃಷ್ಟಿ ಮಾಡಿಟ್ಟಿರುತ್ತಾನೆ.

ಇಂದು ನಾನು ಬೆಂಗಳೂರಿಗೆ ಹೋದೆ... ನಾನು ಬೆಂಗಳೂರು ಹೋದಮೇಲೆ,  ಈ ನ್ಯಾಸನ ಊಟದ ವ್ಯವಸ್ಥೆ ಏನೆಂದು ಯೋಚಿಸಿದ್ದರೆ... ??? ಇಂದು ಭತ್ತ ಬೆಳೆಯುವ ಭೂಮಿ ತೊಗೊಂಡು, ಭತ್ತ ಬಿತ್ತಿ, ಬೆಳೆದು, ಅಕ್ಕಿ ಮಾಡಿ, ಆ ಅಕ್ಕಿ ಹಳೆಯದಾಗಿ, ಅವು ಮಾರ್ಕೆಟಿಗೆ ಬಂದು, ನಂತರ ದೇವರು ನನಗೊದಗಿಸಿ, ನಂತರ ಆ ಅಕ್ಕಿಯಿಂದ ಅನ್ನ ಮಾಡಿ ತಿನ್ನುವದರಲ್ಲಿ ಈ ನ್ಯಾಸ ಇಂದು *ಈ ತಲೆ ಹರಟೆ ಹೊಡೆಯಲು ಇರುತ್ತರಲೇ ಇಲ್ಲ*  ಹೌದಲ್ಲವೆ....
ನಾನು ಬೆಂಗಳೂರು ಮುಟ್ಟುವದರಲ್ಲಿಯೇ, ಅಂದು ನನಗೆ ಸಿಗಬೇಕಾದ, ನನ್ನ ಪಾಲಿನ ಅಕ್ಕಿ ಬೇಳೆ ಪಲ್ಯೆ ಮೊದಲಾದ ಎಲ್ಲವನ್ನೂ ಆರಾರು ತಿಂಗಳು, ವರ್ಷ ವರ್ಷ ಮೊದಲೇ  ಸೃಷ್ಟಿಸಿ ಅಂದು ಆ ಮನೆಯಲ್ಲಿ ಒದಗಿಸಿ, ಸಿದ್ಧ ಮಾಡಿಸಿ ಇಟ್ಟಿರುತ್ತಾನೆ. ನೀರೂ ಯಾವ ಬೋರ್ವೆಲ್ ಅಲ್ಲಿ ಇಡಬೇಕು ಎನ್ಮುವದನ್ನೂ ಇಟ್ಟಿರುತ್ತಾನೆ. ನಾನು ಹೋದೆ, ಊಟ ಮಾಡಿದೆ, ಅಷ್ಟೆ ನನ್ನ ಕೆಲಸ *ಇದೇ ದೇವರ ಒಂದು ಅದ್ಭುತ ಕರುಣೆಯಲ್ಲವೇ...* ಈ ತರಹದ ಕರುಣೆ ನನಗೊಬ್ಬನಿಗಲ್ಲ,  ಭೂಮಿಗೆ ಬಂದ ಅನಂತ ಜೀವರಾಶಿಗಳಿಗೆ, ಒಬ್ಬ ಒಬ್ಬ ಜೀವರಿಗೆ ಒಂದೊಂದು ಆಹಾರ ಬೇಕು, ಒಬ್ಬೊಬ್ಬರಿಗೆ ಒಂದೊಂದು ಸಮಯಕ್ಕೆ ಬೇಕು. ಎಲ್ಲವೂ ಅಚ್ಚುಕಟ್ಟಾದ ಸುವ್ಯಸ್ಥೆ ಮಾಡಿಟ್ಟಿದ್ದಾನೆ.

ಹುಟ್ಟಿಸಿದ ತರುವಾಯ, ಹುಟ್ಟಿಸಿದವರಿಗೆ ಊಟದ ಚಿಂತೆ ಆದರೆ, ಹುಟ್ಟುವಕ್ಕಿಂತಲೂ ಅನೇಕ ಅನೇಕವರ್ಷಗಳ ಮೊದಲೇ  ಎಲ್ಲದರ ವ್ಯವಸ್ಥೆ ದೇವರು ಮಾಡಿಟ್ಟಿದ್ದಾನೆ ಅಂತೆಯೇ *ಜಗವ ರಕ್ಷಿಸುವ ಹೊಣೆ ಜಗದೀಶನಿಗಿರುವಾಗ ನಿನಗೇಕಪ್ಪ ಚಿಂತೆ ಕ್ಷುದ್ರ ಜಂತುವೆ* ಎಂದರು .

ಇಂತಹ ನೂರಾರು, ಸಾವಿರಾರು, ಕೋಟಿ ಕೋಟಿ, ಅನಂತಾನಂತ ಉಪಕಾರವನ್ನು ಮಾಡುವ, ಮಾಡುತ್ತಿರುವ, ಮುಂದೆಯೂ ಮಾಡುವ *ಆ ದೊರೆ ಒಂದು ಆದೇಶವನ್ನು ಮಾಡಿದ್ದಾನೆ....*

ಏನದು ಅಂತಹ ದೊಡ್ಡ ಆದೇಶ...??

*ಹರಿದಿನವಾದ ಏಕಾದಶೀ ದಿನ ನಿರಾಹಾರ ಉಪವಾಸ ಮಾಡು....* ಎಂದು. ಅನಂತಾನಂತ ನಮಸ್ಕಾರಗಳೊಂದಿಗೆ ಈ ಆದೇಶವನ್ನು ಪಾಲನೆ ಮಾಡುವದೇ.  ಆದೇಶ ಪಾಲಿಸದಿದ್ದರೆ ಅನರ್ಥಮಾತ್ರ ತಪ್ಪಿದ್ದಲ್ಲ. *ದೇವರ ಕರುಣೆ ತಪ್ಪೀತು ಎಚ್ಚರ....*

ಕರುಣೆ ತಪ್ಪಿದರೆ ಏನಾದೀತು....??

ಶ್ರೀಮದಾಚಾರ್ಯರು ಒಂದು ಮಾತನ್ನು ಹೇಳುತ್ತಾರೆ *ಶ್ವಪಚಾದಪಿ ಕಷ್ಟತ್ವಂ* ಎಂದು.  ದೆವರ ಕರುಣೆ ತಪ್ಪಿದರೆ ಎಂತಹವರಾಗಿದ್ದರೂ ಅವರವಸ್ಥೆ   ಚಾಂಡಾಲನಿಗೊಂತಲೂ ಅತ್ಯಂತ ಘೋರ ಅವಸ್ಥೆ ಬರಬಹುದೆಂದು....

ದಾಸರಾಯರು ಹೇಳುತ್ತಾರೆ....
*ಕರುಣಾನಿಧೆ ನಿನ್ನ ಕರುಣೆ ತಪ್ಪಲು ಕದನ್ನಕೆಣಕೆ ಬಾಯ ಬಿಡಿಸೂವಿ*  *ಕೌಪೀನ ದೊರೆಯದು ಪೀನಾಕಿವಂದ್ಯನೆ* ಭಿಕ್ಷೆ ಬೇಡುವಸ್ಥೆ ಬಂದೀತು, ಅಥವಾ ಕೌಪೀನವೂ ದೊರೆಯದ ಅವಸ್ಥೆ ಎದುರಾಗಬಹುದು ಎಂದು......

ಕರುಣಾಮಯಿ ಆ ಸ್ವಾಮಿಯ ಕರುಣೆ ಜನುಮ ಜುನುಮಕ್ಕೂ, ಮೋಕ್ಷವಾಗುವವರೆಗೂ, ಮೋಕ್ಷದಲ್ಲಿಯೂ ಇರುವ ಬಯಕೆ ಇದ್ದ ನಾವೆಲ್ಲರೂ ನಾಳೆಯ ದಿನ ಉಪವಾಸ ಮಾಡಿಯೇ ತೀರೋಣ. ಬಿಟ್ಟರೆ ನಾಳೆ ಅನ್ನ, ಬಟ್ಟೆ, ಮನೆ, ಮಕ್ಕಳು, ಹಣ, ಕನಕ, ತಂದೆ ತಾಯಿ, ಗುರು, ಜ್ಙಾನ,  ಗುಣವಂತಿಕೆ, ಬುದ್ಧಿವಂತಿಕೆ, ಧಾರ್ಮಿಕತೆ  ಮನಸ್ಸು, ಕಣ್ಣು, ಕಿವಿ, ಇತ್ಯಾದಿ ಇತ್ಯಾದಿಗಳನ್ನು  ಕೊಡದಿದ್ದರೆ... ??

ಅದೇಶಪಾಲನೆ ಕರುಣೆಗೆ ಪಾತ್ರತೆಯನ್ನು ಒದಗಿಸುತ್ತದೆ. ಕರುಣೆಗೆ ಪಾತ್ರನಾದರೆ, ಆಕಳು ತನ್ನ ಕರುವನ್ನು ಹೇಗೆ ರಕ್ಷಿಸಬೇಕೋ ಹಾಗೆ ಪ್ರೀತಿಯಿಂದ ರಕ್ಷಿಸುತ್ತಾನೆ ನಮ್ಮ ಕರುಣಾಮಯಿ ಶ್ರೀಹರಿ....

ಗೋವತ್ಸ ದ್ವಾದಶೀ 

ಈ ಶುಭದಿನದಲ್ಲಿ ಕರುವಿನಿಂದ ಸಹಿತವಾದ ಆಕಳಿನ ಪೂಜೆಯನ್ನು  ಮಾಡಬೇಕು. ಆ ಆಕಳಿಗೆ ಊಟಕ್ಕೆ ಹಾಕಬೇಕು. ಅವಶ್ಯವಾಗಿ ಗೋ  ಕ್ಷೀರ, ಗೋದಧಿ, ಗೋಘೃತ ಇವುಗಳನ್ನು ದೇವರಿಗೆ ನಿವೇದಿಸಬೇಕು. ಪಂಚಗವ್ಯವನ್ನು ಸ್ವೀಕರಿಸಲೇಬೇಕು. 

ಗೋತ್ಸರೂಪದಿಂದ ನಮ್ಮ ಬಲಗಣ್ಣಲ್ಲಿ ಸ್ವಯಂ ವಾಯುದೇವರು‌ ನೆಲೆನಿಂತಿದ್ದಾರೆ ಎಂದು ಕನಿಷ್ಢ ನಾಳೆಯ ದಿನವಾದರೂ ಚಿಂತಿಸಬೇಕು. 
ಕನಿಷ್ಟ ಗುರುಗಳಿಗೆ ಹನ್ನೆರಡು ಆಕಳುಗಳನ್ನು ದಾನವಾಗಿ ಕೊಡಬೇಕು. ಆಕಳಿನ ಪೂಜೆ ಸಮಗ್ರ ದೇವತೆಗಳ ಪೂಜೆ. ಆಕಳಿಇಗೆ ಹಾಕುವ ಗೋಗ್ರಾಸ ಸಮಗ್ರ ದೇವತೆಗಳಿಗೆ ಅರ್ಪಿಸುವ ನೈವೇದ್ಯ. ಗೋದಾನ ಭೂಮಿಷ್ಟಿರುವ/ ಮೀರಿರುವ ಸರ್ವ ವಿಧದ  ಪಾಪಗಳ ನಾಶ. 

*✍🏽✍ನ್ಯಾಸ....*
ಗೋಪಾಲದಾಸ
ವಿಜಯಾಶ್ರಮ, ಸಿರವಾರ.

Comments

Anonymous said…
ಉತ್ತಮ ನೀತಿಯನ್ನು ಕೊಡುವ ಮುಖಾಂತರ ಗೋವತ್ಸ ದ್ವಾದಶಿಯ ಮಹತಿಯನ್ನು ತಿಳಿಸಿಕೊಟ್ಟ ನಿಮಗಿದೋ ನಮನಗಳು

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*