*ಬಲಿ ಪ್ರತಿಪದಾ....*
*ಬಲಿ ಪ್ರತಿಪದಾ....*
ಬಲಿಚಕ್ರವರ್ತಿ ಸಾತ್ವಿಕ, ವಿಷ್ಣುಭಕ್ತ, ಸಜ್ಜನ, ಅಪರೋಕ್ಷ ಜ್ಙಾನಿ, ಮುಕ್ತಿಯೋಗ್ಯರಾದ ಜೀವರಾಶಿಗಳಲ್ಲಿ ಹತ್ತೊಂಭತ್ತನೇಯ ಕಕ್ಷೆಯಲ್ಲಿ ಬರುವ ದೊಡ್ಡ ದೇವತೆ. ಮುಂದಿನ ಕಲ್ಪದಲ್ಲಿ ಇಂದ್ರಪದವಿಯನ್ನಾಳುವ ದೊರೆ.
ಪ್ರಾರಬ್ಧವಶಾತ್ ದುಷ್ಟರಲ್ಲಿ ಜನನ, ದುಷ್ಟರ ಸಹವಾಸ, ದುಷ್ಟರ ಅನ್ನ ಇತ್ಯಾದಿ ದೋಷಗಳಿಂದ ಉನ್ಮತ್ತನಾಗಿದ್ದ, ಅಹಂಕಾರಿಯಾಗಿದ್ದ, ದುಷ್ಟನೂ ಆಗಿದ್ದ. ಸ್ವಭಾವತಃ ಗುಣವಂತನೇ.
*ದೆವರ ನೀತಿ..,*
ದುಷ್ಟರು ತಪ್ಪೆಸಗಿದ್ದರೆ, ಆ ತಪ್ಪನ್ನು ಹಾಗೇ ಇಡುವ. ಆ ತಪ್ಪು ಬಹಳೇ ಆದಾಗ ತಮಸ್ಸಿಗೆ ಅಟ್ಟುವ. ಭಕ್ತರು ತಪ್ಪೆಸಗಿದರೆ ತತ್ಕ್ಷಣಕ್ಕೆ ಫಲ ಕೊಟ್ಟು ಬಿಡುವ. ಆ ಶಿಕ್ಷೆಯೂ ಅನುಗ್ರಹಪರವೇ ಆಗಿರುತ್ತದೆ. ಮೋಕ್ಷಕ್ಕೆ ಸಾಧನೆಯೇ ಆಗಿರುತ್ತದೆ. ಇದುವೇ ದೇವರ ನೀತಿ, ಮಹಾನ್ ಅನುಗ್ರಹ.
*ಶಿಷ್ಟಪಾಲಕ....*
ಶಿಷ್ಟರಿಕೆ ಪಾಠಕಲಿಸಿ ಶಿಕ್ಷೆಕೊಡುವ ದೇವ, ಮಹಾನ್ ಭಕ್ತನಾದ, ಸಹವಾಸದೋಷದಿಂದ ದುಷ್ಟನಾದ ಬಲಿಚಕ್ರವರ್ತಿಗೆ ಸ್ವಯಂ ದೇವರು ತಾನೇ, ಬಲಿಚಕ್ರವರ್ತಿಗೋಸ್ಕರವೆ ಒಂದದ್ಭುತ ರೂಪವಾದ ವಾಮನಾವತಾರ ವನ್ನು ತಾಳಿ ಬಲಿಚಕ್ರವರ್ತಿಯಿಂದ ಭೂ ದಾನವನ್ನು ಬೇಡುವ ಮುಖಾಂತರ ಸಮಗ್ರ ಭೂಮಿ, ಮೇಲಿನ ಕೆಳಗಿನ ಎಲ್ಲ ಲೋಕಗಳನ್ನೂ ದಾನ ಪಡೆದು, ಅವನಿಗೆ ತಕ್ಕ ಶಾಸ್ತಿಯನ್ನೂ ಮಾಡಿ, ತನ್ನ ವಾಮನ ತ್ರಿವಿಕ್ರಮ ರೂಪಗಳಿಂದ ದಿವ್ಯ ಅದ್ಭುತತೆಯನ್ನೂ ತೋರಿ, ಬಲಿಚಕ್ರವರ್ತಿಯ ಮೇಲೂ ಅನುಗ್ರಹ ಮಾಡಿ ತನ್ನ ಕಾಲನ್ನೇ ಇರಿಸಿದ. ಎಂಥ ಕರುಣೆ ಅಲ್ವೇ ಆ ದೇವನದು... ಅಂತೆಯೇ *ಇಂದಿನ ದಿನ ಬಲಿ ಪ್ರತಿಪದಾ* ಎಂದು ಪ್ರಸಿದ್ದಿಗೆ ಬಂತು.
ನಾವೂ ವಿಷ್ಣು ಭಕ್ತರು, ಗುರುಭಕ್ತರು, ಸಜ್ಜನರು, ಮುಕ್ತಿಯೋಗ್ಯರೂ ಆಗಿದ್ದೇವೆ ಇದರಲ್ಲಿ ಸಂಶಯವಿಲ್ಲ. ಪ್ರಾರಬ್ಧವಶಾತ್ ದುಷ್ಟರ ಸಹವಾಸಗಳಿಂದ ಅನೇಕ ದುರ್ಗುಣಗಳೂ ಸೇರಿಕೊಂಡಿವೆ. ಅಂತೆಯೇ ಇಂದು ದುಷ್ಟರೆಂದಾಗಿದ್ದೇವೆ.
ಹೇ ವಾಮನ !!! ಆ ಎಲ್ಲ ದುರ್ಗುಣಗಳನ್ನೂ ತುಳಿದು ಹಾಕು. ಬಲಿಚಕ್ರವರ್ತಿ ಎಂತೆ ಮಹಾನ್ ಭಕ್ತರಲ್ಲ, ಆದ್ದರಿಂದ ನೀನಂತೂ ಬರಲ್ಲ. ನನಗೇ ಆ ದುರ್ಗುಣಗಳನ್ನು ಮೆಟ್ಟಿನಿಲ್ಲವ ಶಕ್ತಿಯನ್ನಾದರೂ ಕೊಡು. ನನ್ನ ಬಿಂಬನು ನೀನು. ನೀ ಯಾವ ತರಹದ ಶಕ್ತಿ ಕೊಡುತ್ತೀಯೋ ಅಂತಹವನು ನಾನು ಆಗುತ್ತೇನೆ.
ಕೋಟಿ ಕೋಟಿ ಪ್ರಣಾಗಳನ್ನು ಸಲ್ಲಿಸುತ್ತೇನೆ. ದಯೆತೋರು, ಕರುಣೆ ಮಾಡು, ಅನುಗ್ರಹ ಮಾಡು. ನನ್ನ ತಪ್ಪುಗಳಿಗೆ ಶಿಕ್ಷೆಕೊಡು. ಎನ್ನ ತಪ್ಪುಗಳನ್ಮು ಮನ್ನಿಸು. ದುರ್ಗುಣಗಳನ್ನು ಮೆಟ್ಟಿನಿಲ್ಲಿಸು. ತ್ರಿವಿಕ್ರಮನಂತೆ ಸದ್ಗುಣಗಳನ್ನು ಆಕಾಶದೆತ್ತರಕ್ಕೆ ಬೆಳಿಸು. ನಿನಗೆ ಅನಂತಾನಂತ ವಂದನೆಗಳು.
*ದೀಪವಾಳೀ ಹಬ್ಬದ ಶುಭಾಷಯಗಳು*
*✍🏽✍🏽✍ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments