*ಹೊಟ್ಟೆಯಲ್ಲಿ ಜ್ವಾಲಾಮುಖಿ....*

*ಹೊಟ್ಟೆಯಲ್ಲಿ ಜ್ವಾಲಾಮುಖಿ....*

ದ್ವೇಶರಾಯರ ಹೆಂಡತಿ ಮತ್ಸರಮ್ಮ. ದ್ವೇಶವಿರುವಲ್ಲಿ ಮತ್ಸರ ಇರುವದೇ. ಮತ್ಸರವಿದ್ದವ ಹೊಟ್ಟೆಯಲ್ಲಿ ಜ್ವಾಲಾಮುಖಿಯನ್ನು ಹೊತ್ತುಂಡಂತೆಯೇ...

*ಮತ್ಸರ ಅಂದರೆ ಏನು... ??*

ಕನ್ನಡದಲ್ಲಿ ಮತ್ಸರ ಶಬ್ದಕ್ಕೆ ತುಂಬ ಸೊಗಸಾದ ಅರ್ಥಪೂರ್ಣ ಅರ್ಥವಿದೆ "ಹೊಟ್ಟೆಕಿಚ್ಚು" "ಹೊಟ್ಟಯುರಿ" ಇತ್ಯಾದಿ ಇತ್ಯಾದಿ. ಈ ಕಿಚ್ಚು ಆರೋಗ್ಯಕರವಾದದ್ದು ಅಲ್ಲ. ಈ  ಹೊಟ್ಟೆಯುರಿ ಪರರ ಅಭ್ಯುದಯ ಕಂಡೇ ಹುಟ್ಟಿಕೊಳ್ಳುವ ಕಿಚ್ಚು.

ತನ್ನನ್ನು ಸುಖವಾಗಿ ಇಡದ, ತನ್ನವರನ್ನೂ ಸುಖವಾಗಿ ಇಡದ ಒಂದು ಘೋರ ವಸ್ತು ಎಂದರೆ ಅದುವೇ ಮತ್ಸರ. ಮತ್ಸರ ಇದು ಸಾಮಾನ್ಯವಾಗಿ ಗುಣವಂತರನ್ನು ನೋಡಿಯೇ ಬರುವಂತಹದ್ದು. *ಗುಣೀ ಗುಣಿಷು ಮತ್ಸರೀ* ಎಂಬುವದಾಗಿ ಮಹಾಭಾರತ ಹೇಳುತ್ತದೆ.   ಇರುವ ಗುಣ ಕಳೆದುಕೊಳ್ಳುಲು ಸುಲಭ‌ವಾಗಿಸುವದೇ *ಮಾತ್ಸರ್ಯ.*

*ಮಾತ್ಸರ್ಯ ಸುಖದ ಮಹಾಶತ್ರು*

ಮಾತ್ಸರ್ಯ ಎಂದಿಗೂ ನೆಮ್ಮದಿಯಿಂದ ಬಾಳಲು ಬಿಡದು. ತಾನು ದ್ವೇಶಿಸುವ, ಅಥವಾ ದೂರಮಾಡಿದ, ತನ್ನಿಂದ ದೂರಹೋದ ಯಾವ ವ್ಯಕ್ತಿಯೂ ಸುಖದಿಂದ ಇದ್ದರೆ ಇವನಿಗೆ ಹೊಟ್ಟೆಯುರಿ.

ತಮ್ಮ ಸುಖ, ಭೋಗ, ಐಶ್ವರ್ಯ, ಭಾಗ್ಯ ಇವಗಳನ್ನು ಭೋಗಿಸುವ ಕಡೆ ಹೆಚ್ಚು ಚಿತ್ತ ಹರಿಸದೇ, ಪರರ ಅಭ್ಯುದಯವನ್ನು ಕಂಡು ಕರುಬುತ್ತಾರೆ. *ಇತರರ ಅಶುಭವನ್ನು ಮನದಲ್ಲಿ ಚಿತ್ರಿಸುತ್ತಾ, ಅವರ ನಾಶವನ್ನು ಹಾರೈಸುತ್ತಾ, ತಮ್ಮ ಕೆಡುಕುಗಳಿಗೆ ಬೀಜವನ್ನು ತಾವೇ ಬಿತ್ತಿರುತ್ತಾರೆ.*  ಇದಂತೂ ತುಂಬ ವಿಚಿತ್ರ....

*ಮತ್ಸರ ಇಬ್ಬರಿಗೂ ಹಾನಿಯುಂಟು ಮಾಡುತ್ತದೆ....*

ಗಂಗಾನದಿ. ಇಬ್ಬರು ಅಂತರಂಗದ ಆತ್ಮೀಯ ಗೆಳೆಯರು. ಕ್ಷುದ್ರಕಾರಣಕ್ಕೆ ದ್ವೇಶ ಚಿಗುರಿತು. ದ್ವೇಶದ ಹಿಂಡತಿ ಮತ್ಸರ ಸೇರಿ ಕೊಂಡಿತು. ಇಬ್ಬರೂ ತಪಸ್ಸಿಗೆ ಗಂಗಾ ನದಿಯ ತಟಕ್ಕೆ ತೆರಳುತ್ತಾರೆ. ಆ ದಡಕ್ಕೆ ಒಬ್ಬವ ಈ ದಡಕ್ಕೆ ಮತ್ತೊಬ್ಬ.  ಘೋರವಾದ ತಪಸ್ಸು. ಕೆಲವೇ ದಿನಕ್ಕೆ ದೇವರು ಒಲಿದ.

ಗೋಪಾಲ !!!! ನಿನ್ನ ತಪಸ್ಸಿಗೆ ನಾನು ಮೆಚ್ಚಿ ಸಂತುಷ್ಟನಾಗಿದ್ದೇನೆ ನಿನಗೇನು ಬೇಕು ವರ... ?? ನ್ಯಾಸ ಆ ದಡದಲ್ಲಿ ತಪಸ್ಸಿಗೆ ಕುಳಿತಿದಾನೆ ಅವನೇನು ವರ ಕೇಳುತ್ತಾನೆ ಅದರ ಎರಡು ಪಟ್ಟು ವರ ನನಗೆ ಕೊಡು. ನೀನು ನಿಜವಾಗಿಯೂ ಸಂತುಷ್ಟನೇ ಆಗಿದ್ದರೆ.....  ಆಯ್ತು ಎಂದು ದೇಎವರು ನ್ಯಾಸನ ಬಳಿ ತೆರಳಿದ.

ಓ ನ್ಯಾಸ... !! ಏಳು ಎದ್ದೇಳು... ನಿನ್ನ ತಪಸ್ಸಿಗೆ ಮೆಚ್ಚಿದೆ. ವರ ಕೊಡುತ್ತೇನೆ ಕೇಳು... ?? ನ್ಯಾಸ.. ನೀನು ಸಂತುಷ್ಟನೇ ಆಗಿದ್ದರೆ ಒಂದು ವರ ಕೊಡು. ಮೊದಲಿಗೆ ಗೋಪಾಲ ಏನು ವರವನ್ನು ಕೇಳಿದ ಮೊದಲು ಹೇಳು....

ನ್ಯಾಸನಿಗೆ ಕೊಟ್ಡವರದ ಎರಡುಪಟ್ಟು ಹೆಚ್ಚಿನ ವರವನ್ನು ಕೇಳಿದ್ದಾನೆ. ಹೌದಾ... ಹಾಗಾದರೆ *ನನ್ನ ಒಂದು ಕಣ್ಣನ್ನು ಕಿತ್ತಿಬಿಡು.* ಇದುವೇ ನಾನು ಬೇಡುವ ವರ.

ದೇವ... ಓ ನ್ಯಾಸ .. ಇದೇನು ಹೇಗೆ ವರ ಬೇಡುತ್ತಿದ್ದೀಯಾ... ?? ನ್ಯಾಸ ಉತ್ತರ..) ನಾನು ಮೇಡುವ ವರದ ಎರಡುಪಟ್ಟು ಹೆಚ್ಚಿನ ವರ ಅವನು ಬೇಡಿದ್ದಾನೆ ಎಂದರೆ, "ನನ್ನ ಇಂದು ಕಣ್ಣು ತಗಿ" ಎಂಬ ವರ ನನ್ನದಾದರೆ ಅವನದು "ಎರಡೂ ಕಣ್ಣುಗಳನ್ನು ತಗಿ" ಎಂದರ್ಥವೇ ತಾನೆ.......  ಹೀಗೆ ದೇವರೇ ಎದರು ಬಂದಾಗಲೂ ಮಾತ್ಸರ್ಯ ತನ್ನದೇ ತಾಂಡವವನ್ನೇ ಮಾಡುತ್ತದೆ. ಇದೆಲ್ಲರ ಮೂಲ *ದ್ವೆಶ.....* ಯಾರನ್ನೂ ದ್ವೇಶಿಸುವದು ಬೇಡ. ಕನಿಷ್ಠ ನಮ್ಮವರಾದ ಯಾರನ್ನೂ ನಾವು ದ್ವೇಶಿಸುವದು ಬೇಡವೇ ಬೇಡ.

*ಪ್ರೀತಿ ದ್ವೇಶ ಕಡೆಗಾಣಿಸುವಿಕೆ ಮುಂತಾದ ಯಾವ  ಭಾವನೆಗಳೂ ನಮ್ಮ ಮನದಲ್ಲಿ ಮೂಡಿದರೂ ಸಾಕು, ನಮ್ಮವರ ಮನಸ್ಸಿಗೆ ಗೊತ್ತು ಮಾಡಿಸಿಬಿಡುತ್ತದೆ.* ಈ ಎಚ್ಚರ ಅನಿವಾರ್ಯ.

*ಮತ್ಸರದಿಂದ ಪಾರಾಗಲು ಉಪಾಯಗಳು ಇವೆಯೆ...??*

ಮಾತ್ಸರ್ಯದ ದುಷ್ಪರಿಣಾಮಗಳ ತಿಳುವಳಿಕೆ ಖಂಡಿತವಾಗಿಯೂ ಬೇಕು. ಮೇಲೆ ಹೇಳಿದ ಹಾಗೆ ನಮ್ಮ ಸುಖ ಕಳೆದುಕೊಳ್ಳಬೇಕಾಗುತ್ತದೆ, ಯಾವ ಗುಣದ ಬಗ್ಗೆ ಮಾತ್ಸರ್ಯವಿದೆ ಅದೂ ನಶಿಸಿಹೋಗುತ್ತದೆ.  ಇವುಗಳು ಅಡ್ಡ ಪರಿಣಾಮಗಳಾದರೆ... ಇನ್ನೊಬ್ಬರ ಸದ್ಗುಣಗಳನ್ನು ಕಾಣಲು ಆರಂಭಿಸಬೇಕು.  ಸದ್ಗುಣಗಳನ್ನು ಕಂಡಾಗ ಅನಂದಿಸಲು ಕಲಿಯಬೇಕು. ಗುಣವಂತರನ್ನು ಮನಸ್ಸಿನಲ್ಲಿ ಅಥವಾ ಎದುರಿಗೆ  ಮನಃಪೂರ್ವಕ ಪ್ರಶಂಸಿಸಬೇಕು. ಭಕ್ತಿ ಶ್ರದ್ಧೆಗಳಿಂದ ದೇವರಲ್ಲಿ ಅತ್ಯಂತ ಕಳಕಳಿಯಿಂದ, ಈ ಮನಸ್ಸಿನ ಕೊಳೆಯನ್ನು ಕಳೆ ಎಂದು ಪ್ರಾರ್ಥಿಸಬೇಕು. *ಇಬ್ಬರೂ ಪರಸ್ಪರ ಪ್ರೀತಿಯ, ಸಕಾರಾತ್ಮಕ ಮಾತುಗಳನ್ನಾಡಿ ಪ್ರೀತಿಯನ್ನು ಬೆಳಿಸಿಕೊಳ್ಳಬೇಕು* ಇವುಗಳೇ ಮಾತ್ಸರ್ಯ ಕಳೆಯುವೆಕೆಯಲ್ಲಿ ಮುಖ್ಯಪಾತ್ರವೆಂದೆನಿಸುತ್ತದೆ...... ಪ್ರೀತಿ ಬೆಳದಲ್ಲಿ ದ್ವೇಶವೇ ಇರದು. ದ್ವೇಶರಾಯರು ಹೋಗುವಾಗ ತಮ್ಮ ಹೆಂಡತಿಯಾದ ಮತ್ಸರಮ್ಮನನ್ನೂ ಕರೆದೊಯ್ಲೇ ಬೇಕು ಅಲ್ಲವೇ..

*✍🏽✍ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*