*ಶ್ರೀ ವೇದೇಶತೀರ್ಥರ ಆರಾಧನೆ*

*ಶ್ರೀ ವೇದೇಶತೀರ್ಥರ ಆರಾಧನೆ*

ವಿರಕ್ತ ಶಿಖಾಮಣಿಗಳು, ಜ್ಙಾನಿಗಳೂ, ತಪಸ್ವಿಗಳೂ, ಸಾಧಕರೂ, ರಘೂತ್ತಮತೀರ್ಥ ಶ್ರೀಪಾದಂಗಳವರ ಹಾಗೂ ಶ್ರೀವೇದವ್ಯಾಸತೀರ್ಥ ಶ್ರೀದರ ಶಿಷ್ಯರೂ, ಯಾದವಾರ್ಯರಂಥ ಮಹಾಜ್ಙಾನಿಗಳ  ಗುರುಗಳೂ ಆದ *ಶ್ರೀವೇದೇಶತೀರ್ಥರ ಆರಾಧನಾ ಮಹೋತ್ಸವ* ಇಂದು.

ಶ್ರೀಮದಾಚಾರ್ಯರ ಸರ್ವಮೂಲಗಳಲ್ಲಿ ಬರುವ ಹತ್ತೂ ಪ್ರಮೇಯ ಗ್ರಂಥಗಳಿಗೆ ಇರುವ ಟೀಕೆಗೆ *ವೇದೇಶತೀರ್ಥೀಯಾ* ಎಂಬ ಟಿಪ್ಪಣಿ ಬರೆದವರು ಶ್ರೀ ವೇದೇಶತೀರ್ಥರು.  ಹತ್ತು ಉಪನಿಷತ್ತುಗಳಲ್ಲಿ ಕಠಿಣವಾದ ಉಪನಿಷತ್ತು ಛಾಂದೊಗ್ಯ ಉಪನಿಷತ್ತು. ಉಪನಿಷದ್ಭಾಷ್ಯವೂ ಅಷ್ಟೇ. ಉಪನಿಷದ್ಭಾಷ್ಯಕ್ಕೆ ಟೀಕೆ, ಹಾಗೂ ಉಪನಿಷತ್ತಿಗೆ ಖಂಡಾರ್ಥಗಳನ್ನು ರಚಿಸಿ ಮಹಾನ್ ಅನುಗ್ರಹ ಮಾಡಿದ ಮಹಾತ್ಮರು ಶ್ರೀವೇದೇಶತೀರ್ಥರು. ಅಂತೆಯೆ ಅವರೆಲ್ಲ ಗ್ರಂಥಗಳಿಗೆ *ವೇದೇಶತೀರ್ಥೀಯ* ಎಂಬುವದಾಗಿಯೇ ಪ್ರಸಿದ್ಧಿಗೆ ತಂದ ಮಹಾಜ್ಙಾನಿ ಶ್ರೀವೇದೇಶತೀರ್ಥರು.

*ವಿರಕ್ತ ಶಿಖಾಮಣಿ*

ವೈರಾಗ್ಯದ ಪರಾಕಾಷ್ಠೆ ಶ್ರೀವೇದಶತೀರ್ಥರದ್ದು. ನುಚ್ಚು ಸೇವಿಸಿಯೇ ಜೀವನ. ತ್ಯಾಗಮಯೀ ಸ್ವರೂಪ. "ಅನುಜೋದಯಮಾಶಾಸೇ"ತತಮ್ಮನೆಂಬ ಸೂರ್ಯನ ಉದಯಕ್ಕಾಗಿ ನಾನು ಎಲ್ಲವನ್ನೂ ತ್ಯಜಿಸುವೆ ಎಂಬ ತ್ಯಾಗದ ಫಲವಾಗಿಯೇ ಈ ಮಹಾ ಜ್ಙಾನಸೂರ್ಯರಾದ *ಶ್ರೀಯಾದವಾರ್ಯರ*  ಉದಯವಾಯಿತು.

*ವೇದಶತೀರ್ಥರ ಸಂದೇಶ*

ಇಂದಿನ ಘೋರ ಕಲಿಕಾಲ ಶ್ರೀಮದಾಚಾರ್ಯರ ತತ್ವಜ್ಙಾನದಿಂ ವಿಮುಖರಾದವರದ್ದೇ ಕಾಲ. ಅಧಾರ್ಮಿಕರಾದ, ವಿಷ್ಣುಭಕ್ತರಾಗದವರದ್ದೇ ತಾಂಡವವಾಡುವ ದುರ್ಧರ ಕಾಲ. ವಿಷ್ಣುಭಕ್ತ್ಯಾದಿ ಗುಣಗಳು ಇಲ್ಲ. ಗುಣವಂತರು ಇಲ್ಲ. ಗುಣಗಳನ್ನೋ ಗುಣವಂತರನ್ನೋ ಗುರುತಿಸುವವರಂತೂ ಇಲ್ಲವೇ ಇಲ್ಲ. ಆದ್ದರಿಂದ *ಇಂದಿನಿಂದ, ಈ ಕ್ಷಣದಿಂದ, ಒಂದೂ ಕ್ಷಣ ಬಿಡದೆ, ಜಗತ್ತಿನ ಉದ್ಧಾರಕ್ಕೆ, ಶ್ರೀವಿಷ್ಣುಪ್ರೀತಿಗೆ ನಿರಂತರ ಶ್ರೀಮದಾಚಾರ್ಯರ ಶಾಸ್ತ್ರಗಳಿಗೆ ವ್ಯಾನ ಮಾಡುವಂತಹವರಾಗಿ*  ಎಂದು ಯಾದವಾರ್ಯರಿಗೆ ಆದೇಶವನ್ನು ಸಂದೇಶವನ್ನು ಕೊಡುತ್ತಾರೆ.

*ಚರಮಶ್ಲೋಕ*

ವೇದೇಶಯೋಗಿನಂ ವಂದೇ
ಯಾದವಾರ್ಯ ಗುರೋರ್ಗುರುಮ್.
ಛಾಂದೋಗ್ಯ ಭಾಷ್ಯ ಸಟ್ಟೀಕಾ
ಕರ್ತಾರಮಹಮಾದರಾತ್ ||

ಇಂದಿಗೂ ಶ್ರೀಮದಾಚಾರ್ಯರ ಸಾಕ್ಷಾತ್ ಶಿಶ್ಯರಾದ *ಶ್ರೀಮಾಧವತೀರ್ಥರ* ದಿವ್ಯಸನ್ನಿಧಾನದ (ಮಣ್ಣೂರು) ಯಲ್ಲಿಯೇ ವಾಸವಾಗಿದ್ದಾರೆ. ಈ ಶ್ಲೋಕದಿಂದ ಹೆಚ್ಚುಬಾರಿ ೧೦೮ ೧೦೦೮ ಬಾರಿ ಪಾರಾಯಣ ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.

*ಪ್ರಾರ್ಥನೆ*

ಮಹಾಮಹಿಮೋತರಾದ ಶ್ರೀವೇದಶತೀರ್ಥರಲ್ಲಿ *ತಮ್ಮ ಜ್ಙಾನ, ವೈರಾಗ್ಯ, ಶಾಸ್ತ್ರನಿಷ್ಠೆ, ಸಾಮಾಜಿಕ ಕಳಕಳಿ ಇವುಗಳಲ್ಲಿಯ ಕೋಟ್ಯಂಶವಾದರೂ ನನಗೆ ಬರಲಿ* ಎಂದು ಅನಂತ ಪ್ರಣಾಮಗಳನ್ನು ಸಲ್ಲಿ ಸುತ್ತಾ ಪ್ರಾರ್ಥಿಸುವೆ. ಜೊತೆಗೆ *ನಿಮ್ಮ ಸಂದೇಶವನ್ನು ಆಜ್ಙೆಯಂತೆ ಧರಿಸಿ ಪಾಲಿಸುವಂತಾಗಲಿ*  ಎಂದೂ ಪ್ರಾರ್ಥಿಸುತ್ತೇನೆ. ನಿಮ್ಮ ಅನುಗ್ರಹ ದಯೆ ಕರುಣೆ ಎಂದಿಗೂ ಇರಲಿ. ಎಂದಿಗೂ ನಿಮ್ಮ ದಾಸನೇ ನಾನು.

*✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Unknown said…
There's so much treasure , one life time is not enough even to glanze or hear about our great lineage of Yaris, gurus, n matadipathis of past. So much knowledge, so much sacrifice, so much devotion ..... feel blessed to read .Thanks for sharing . 🙏🏻
NYASADAS said…
ಧನ್ಯವಾದಗಳು

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*