*ಪಾಂಡವರಲ್ಲಿ ಕೃಷ್ಣನಿಗೇಕೆ ಅಭಿಮಾನ....??*

*ಪಾಂಡವರಲ್ಲಿ ಕೃಷ್ಣನಿಗೇಕೆ ಅಭಿಮಾನ....??*

ಮಾನ ಅಭಿಮಾನಗಳು ಸಂಸಾರಿಗಳಿಗೆ ಮಾತ್ರ. ಸಂಸಾರದ ಗಂಧವೂ ಇಲ್ಲದ ಶ್ರೀಕೃಷ್ಣನಿಗೆ ಮಾನ ಅಭಿಮಾನಗಳು ಇಲ್ಲವೇ ಇಲ್ಲ. ಕೃಷ್ಣನನ್ನು ನೆನದರೆ ಮಾನಾಭಿಮಾನಗಳು ದೂರಾಗುತ್ತವೆ, ಹೀಗಿರುವಾಗ ಕೃಷ್ಣನಿಗೆಲ್ಲಿ ಮಾನಾಭಿಮಾನಗಳು.. ?? ಸರ್ವಥಾ ಇಲ್ಲವೇ ಇಲ್ಲ. ಇದು ಒಪ್ಪುವ ಕೇಳಿದ ಮಾತೆ. ಆದರೆ ಶ್ರೀಕೃಷ್ಣ ಪಾಂಡವರಮೇಲಂತೂ ತುಂಬ ಅಭಿಮಾನ ಮಾಡಿದ. ಅದಂತೂ ಸತ್ಯ. ಆ ಅಭಿಮಾನ ಯಾವ ನಿಮಿತ್ತಕವಾಗಿ ಮಾಡಿದ... ???? 

ಸೋದರತ್ತೆಯ ಮಕ್ಕಳು ಎಂಬ ಅಭಿಮಾನವೇ... ?? ಪಾಠ ಹೇಳಿಸಿಕೊಂಡ ಶಿಷ್ಯರು ಎಂಬ ಅಭಿಮಾನವೇ...?? ಮಹಾಬಲಿಷ್ಠರು ಎಂಬ ಅಭಿಮಾನವೆ...?? ಹಸ್ತಿನಾವತಿ ಎಂಬ ದೊಡ್ಡ ರಾಜ್ಯದ ಮುಂದಿನ ಪೀಳಿಗೆಯ ರಾಜರು ಎಂಬ ಅಭಿಮಾನವೆ....?? ಪಾಂಡವರೆಲ್ಲರೂ ಕೃಷ್ಣನಿಗೇ ಜೈ ಜೈ ಅಂತಾರೆ ಎಂಬ ಕಾರಣಕ್ಕಾಗಿ ಅಭಿಮಾನವೇ...?? ಯಾವ ಕಾರಣಕ್ಕೆ ಶ್ರೀಕೃಷ್ಣನಿಗೆ ಪಾಂಡವರ ಮೇಲೆ ಇಷ್ಟು ಅಭಿಮಾನ .... ??? ಎಂಬ ಪ್ರಶ್ನೆ ಬಂದರೆ ಮಹಾಭಾರತ ತುಂಬ ಸೊಗಸಾಗಿ ಉತ್ತರಿಸುತ್ತದೆ. 

ಮಾನಾಭಿಮಾನಗಳು ಕೃಷ್ಣನಿಗೆ ಇವೆ ಅಂದರೆ ಇವೆ. ಇಲ್ಲ ಎಂದರೆ ಇಲ್ಲವೇ ಇಲ್ಲ. ಹಾಗಾದರೆ ಯಾವ ತರಹದ ಮಾನಾಭಿಮಾನವಿದೆ.. ಯಾವ ತರಹದ್ದು ಇಲ್ಲ...?? 

ಅತ್ತಿಯ ಮಕ್ಕಳು, ವಿದ್ಯಾಶಿಷ್ಯರು, ಬಲಿಷ್ಠರು, ದಾಸರು, ಮುಂದಿನ ಪೀಳಿಗೆಯ ರಾಜರು, ಎಲ್ಲ ನಿಜ. ಆದರೆ ಈ ಎಲ್ಲ ಕಾರಣಗಳನ್ನು ಇಟ್ಟು ಕೊಂಡು ಮಾನಾಭಿಮಾನವನ್ನು ಶ್ರೀಕೃಷ್ಣ ಮಾಡಲಾರ. ಈ ಎಲ್ಲ ನಿಮಿತ್ತುಗಳು ದುರಾಚಾರಿಯಮೇಲೂ, ದುಷ್ಟನಮೇಲೂ, ನೀಚನ ಮೇಲೂ, ಅಭಿಮಾನ ಹುಟ್ಟಿಸಬಹುದು. ಆದರೆ ಕೃಷ್ಣ ಮಾಡುವ ಅಭಿಮಾನ / ಅಭಿಮಾನದ ನಿಮಿತ್ತ ತುಂಬ ವಿಚಿತ್ರ...
"ಯಸ್ತಾನ್ ದ್ವೇಷ್ಟಿ ಸ ಮಾಂ ದ್ವೇಷ್ಟಿ ಯಸ್ತಾನ್ ಅನು ಸ ಮಾಂ ಅನು. ಐಕಾತ್ಮ್ಯಂ ಮಾಂ ಗತಂ ವಿದ್ಧಿ *ಪಾಂಡವೈಧರ್ಮಚಾರಿಭಿಃ* ". ಎಂದು. 

ಪಾಂಡವರನ್ನು ಯಾರು ದ್ವೇಶಿಸುತ್ತಾರೆ, ಅವರನ್ನು ನಾನು ದ್ವೇಶಿಸುವೆ, ಅವರು ನೇರವಾಗಿ ನನ್ನನ್ನೇ ನೇ ದ್ಚೇಶಿಸಿದಂತೆ. ಯಾರು ಪಾಂಡವರಿಗೆ ಅನುಕೂಲರೋ ಅವರನ್ನು ನಾನು ಅನುಸರಿಸುತ್ತೀನಿ, ಅವರು ನೇರವಾಗಿ ನನ್ನನ್ನೇ ಅನುಸರಿಸಿದಂತೆ. ಯಾಕೆಂದರೆ *ಪಾಂಡವರೆಲ್ಲರು  ನನ್ನ ಪ್ರಾಣಗಳು ನನ್ನ ಶ್ವಾಸೋಚ್ಛ್ವಾಸವಿದ್ದಂತೆ / ಅಥವಾ ನನ್ನ ಐದು ಇಂದ್ರಿಯಗಳು ಇದ್ದಂತೆ.* ಅಂತೆಯೇ ಪಾಂಡವರು  ಎಂದರೆ ನನ್ನ ಪ್ರಾಣ. ನಾನೇ ಅಂದರೂ ತಪ್ಪಾಗದು. ಇಷ್ಟು ಪ್ರೀತಿಸುತ್ತಾನೆ ಅಭಿಮಾನ ಮಾಡುತ್ತಾನೆ ಶ್ರೀಕೃಷ್ಣ. 

ಸಂಸಾರದಲ್ಲಿಯೇ ಇರುವ ನಾವೂ ಯಾರಮೇಲೇ ಮಾಡದ ಅಭಿಮಾನ ಕೃಷ್ಣ ಮಾಡುತ್ತಾನೆ ಏನಕ್ಕೆ....?? 

*ಪಾಂಡವೈರ್ಧರ್ಮಚಾರಿಭಿಃ* ಪಾಂಡವರು ಅಂದರೆ ಧರ್ಮಚಾರಿಗಳು. ಎಂಥೆಂಥಾ ಆಪತ್ತುಗಳು ಬಂದರೂ ನಿರಂತರ ಧರ್ಮವನ್ನು ಮಾಡುವವರು ಪಾಂಡವರು. ಧರ್ಮದ ಜೊತೆಗೆ ಹೊಂದಾಣಿಕೆ compromise ಇಲ್ಲವೇ ಇಲ್ಲ. ಸಣ್ಣ ಸೂಕ್ಷ್ಮ ಧರ್ಮಗಳನ್ನೂ ಬಿಡುವದಿಲ್ಲ.  ಅಂತೆಯೇ ನಾನಂದರೆ ಪಾಂಡವರೇ ಎಂದರ್ಥ. ಪಾಂಡವರಲ್ಲಿಯ ಅಭಿಮಾನ ರಕ್ಷಣೆ ಎಂದರೆ ನನ್ನ ಮೇಲೆ ನಾನು ಮಾಡಿಕೊಳ್ಳವ ಅಭಿಮಾನ / ನನ್ನನ್ನು ನಾನು ರಕ್ಷಿಸಿಕೊಂಡಂತೆಯೇ.  *ಧರ್ಮವನ್ನು ಮಾಡುವವರ ಮೇಲೆ ಅಭಿಮಾನ ನಾನು ಮಾಡದೇ ಇನ್ನಾರು ಮಾಡಬೇಕು..??  ರಕ್ಷಣೆ ನಾನು ಮಾಡದೆ ಇನ್ನಾರು ಮಾಡುಬೇಕು... ??* ಆದ್ದರಿಂದ ನಾನು ಅಷ್ಟು ಅಭಿಮಾನ ಮಾಡುತ್ತೇನೆ. ನಿರಂತರ ರಕ್ಷಿಸುತ್ತೇನೆ. ನನ್ನ ಸರ್ವಸ್ವ ತ್ಯಾಗ ಮಾಡಿ, ಪಣಕ್ಕೆ ಇಟ್ಟು ಅವರಿಗೋಸ್ಕರ ನಾನು ಮೀಸಲಾಗಿರುತ್ತೇನೆ.  ಇದು ಶ್ರೀಕೃಷ್ಣನ ವಿಚಾರ. 

ಪಾಂಡವರಲ್ಲಿ ಶ್ರೀಕೃಷ್ಣ ಮಾಡುವ ಅಭಿಮಾನ ತಿಳಿದುಕೊಂಡಾಗ, ನಮಗೊಂದು ಉತ್ಸಾಹ ಬರತ್ತೆ *ಹೋ ಹಾಗಾದರೆ ನಾವೂ ಧರ್ಮವನ್ನು ಮಾಡಿದರೆ, ಪಾಂಡವರಂತೆ ನಮ್ಮಮೇಲೂ ತನ್ನಷ್ಟೇ ಅಭಿಮಾನ ಮಾಡುತ್ತಾನೆ/  ನಮ್ಮನ್ನೂ ತನ್ನಂತೆಯೇ ರಕ್ಷಿಸುತ್ತಾನೆ* ಎಂದು. 

ಧರ್ಮ ಮಾಡಬೇಡ ಎನ್ನುವ ಕಾಲ. ಅಂತೆಯೇ ನಾವು ಬೀದಿಗೆ ಬಿದ್ದಿದ್ದೇವೆ. ಮನೆಯಲ್ಲಿ ಧರ್ಮಬೇಡ ಅಂತಾರೆ.  ಧರ್ಮಬ್ಯಾಡ ಅಂತದೆ ಮನಸದಸು.  ಸ್ಕೂಲು ಕಾಲೇಜುಗಳಲ್ಲಿ ಧರ್ಮಕ್ಕೆ ಆಸ್ಪದವಿಲ್ಲ. ಮಾರ್ಕೆಟ್ಟು ಮಾಲುಗಳಲ್ಕಿ ಧರ್ಮವಿಲ್ಲ. ಆಫಿಸನಲ್ಲಿ ಇಲ್ಲ. ರಾಜ್ಯ ರಾಷ್ಟ್ರ ರಾಜಕಾರಣದಲ್ಲಿ ಧರ್ಮವಿಲ್ಲ. ಅಂತಹ ಈ ಘೋರ ಪ್ರಸಂಗದಲ್ಲಿ ನಾನು ನನಗಾಗಿ ಧರ್ಮ ಮಾಡದಿದ್ದರೆ, ಶ್ರೀಕೃಷ್ಣ ಯಾರಿಗಾಗಿ ಬರಬೇಕು..?? ಯಾರಲ್ಲಿ ಅಭಿಮಾನ ಮಾಡಬೇಕು..?? ಯಾರನ್ನು ರಕ್ಷಿಸಬೇಕು..?? 

ಅವನಿಗೂ ಸ್ವಲ್ಪ ಕೆಲಸ ಕೊಡೋಣಲ್ವೆ.... 

*✍🏽✍🏽✍ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
9449644808

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*