*ಧರ್ಮ ಬಿಡುವ ಅನೇಕ ಪ್ರಸಂಗಗಳು.....*

*ಧರ್ಮ ಬಿಡುವ ಅನೇಕ ಪ್ರಸಂಗಗಳು.....* 


ಜೀವನ ಜೀವನದ ಮೂಲಭೂತವಾದದ್ದು ಧರ್ಮ.  ಧರ್ಮ‌ವನ್ನು ರಕ್ಷಿಸಲೇಬೇಕು, ಧರ್ಮದಿಂದಲೇ ಪಡೆಯಬೇಕು. ಏನೆಲ್ಲ ಸಿಗುತ್ತಿದೆ ಧರ್ಮವಿರುವದರಿಂದ. ಏನೆಲ್ಲ ಸಿಗುತ್ತಿಲ್ಲ ಧರ್ಮ ಇಲ್ಲದಿರುವದರಿಂದ. ಹುಟ್ಟು ಸಾವು ಕೀರ್ತಿ ಅಪಕೀರ್ತಿ ಅನ್ನ ಉಪವಾಸ ಮನೆ ಮಂದಿರ ಆಸ್ತಿ ಆಂತಸ್ತು ದೇವರು ಜ್ಙಾನ ಭಕ್ತಿ ಮುಕ್ತಿ ಹೀಗೆ ಪಡೆದ, ಪಡೆಯಬಹುದಾದ ಎಲ್ಲವೂ ಧರ್ಮದಿಂದಲೇ. ಅಷ್ಟೆ ಅಲ್ಲ ಮಳೆ ಘಾಳಿ ಬಿಸಿಲು ಇವೆಲ್ಲವೂ ಕಾಲಕ್ಕೆ ತಕ್ಕ ಹಾಗೆ ಆಗುವದೂ ಧರ್ಮದಿಂದಲೇ. ಅಂತೆಯೇ ನಮ್ಮ ಜೀವನದಲ್ಲಿ ಧರ್ಮಕ್ಕೆ ಅಷ್ಟು ಪ್ರಾಶಸ್ತ್ಯ‌ . ಅಂತೆಯೇ ಶಾಸ್ತ್ರ *ಧರ್ಮಾದ್ಭವಂತಿ ಭೂತಾನಿ......*  ಎಂದು ಹೇಳಿತು. 

ಧರ್ಮಾಚರಣೆ  ಅನಿವಾರ್ಯವಾಗಿದ್ದರೂ, ಧರ್ಮ ಮಾಡಲಾಗುವದಿಲ್ಲ. ಅನೇಕಬಾರಿ ಲೋಪಮಾಡುವ ಪ್ರಸಂಗಗಳು ಎದುರಾಗುತ್ತವೆ..

ಅವುಗಳು ಹೀಗೆ....
ಅತಿಯಾದ ಸಮೃದ್ಧಿ, ಪರಲೋಕದ ಭೀತಿ ಇಲ್ಲದಿರುವಿಕ, ಅತಿಯಾದ ಆಸೆ, ನಾಸ್ತಿಕತಾ, ಉನ್ಮತ್ತತನ, ಇತ್ಯಾದಿಗಳು ತಾಂಡವ ಆಡುತ್ತಿರುವಾಗ ಧರ್ಮ ಮೂಲೆಗುಂಪಾಗುವದು ಸಹಜ.

೧) *ಅತಿಯಾದ ಸಮೃದ್ಧಿ..*

ದಾರಿದ್ರ್ಯ ಧರ್ಮಕ್ಕೆ ಉತ್ತಮ ವೇದಿಕೆ, ಶ್ರೀಮಂತಿಕೆ ಧರ್ಮ ಕೆಡಿಸಲು ಅಥವಾ ಬಿಡಲು ವೇದಿಕೆಯಾಗುತ್ತದೆ. ಧರ್ಮ ಏನನ್ಬಾದರೂ ಪಡೆಯಲು ಬೇಕು, ಎಲ್ಲದರ ಸಮೃದ್ಧಿ ಇರುವಾಗ ಧರ್ಮದ ಅವಶ್ಯಕತೆಯಾದರೂ ಏನಿದೆ.. ?? ಧರ್ಮ ಮಾಡಿದೆ ಇದ್ದರೂ ನಡೆಯತ್ತೆ ಎಂಬ ಭಾವನೆ ಬಲವಾಗತ್ತೆ. 

*೨) ಪರಲೋಕ ಭೀತಿ ಇಲ್ಲದಿರುವಿಕೆ...*

ಬದುಕಿದಾಗ ಅಪ್ಪಳಿಸುವ ರೋಗ, ದಾರಿದ್ರ್ಯ, ಚಿಂತೆ, ರಕರಕಾ ಅನ್ನುವ ಮನಸ್ಸು, ದುಃಖ ಇತ್ಯಾದಿ ಇತ್ಯಾದಿ..  ಮರಣಹೊಂದಿದ ಮೇಲೆ ಆಗುವ ನರಕ ಯಾತನೆ, ಅಂಧಂತಮಸ್ಸಿನ ದುಃಖಗಳ ಅರಿವು, ಜನ್ಮಾಂತರದಲ್ಲಿ ನಾಯಿ ನರಿ ಆಗುವ ಭೀತಿ, ಈ ತರಹದ  ಭಯಗಳು ಬೆಂಬಟ್ಟಿದ್ದವೂ   ಎಂದಾದರೆ ಮಾಡುವ ಧರ್ಮಕ್ಕೆ ಸ್ವಲ್ಪವೂ ಚ್ಯುತಿ ಬರಲಾರದು. ಆ ಧರ್ಮ ಹೆಚ್ಚೆಚ್ಚು ಆಗುತ್ತದೆ.  ಇಂದು ನಾವು ಧರ್ಮ ಬಿಡುವದಕ್ಜೆ ಮೂಲಕಾರಣ  ಪರಲೋಕದ ಭಯವಿಲ್ಲ ಇರುವದರಿಂದಲೇ.  ಪರಲೋಕದ ಜನ್ಮಾಂತರಗಳ ಭಯ ಇಲ್ಲದಿರುವದೇ. *ಭಯ ಸರಿಯಾದ ಮಾರ್ಗದಲ್ಲಿರುಸುತ್ತದೆ.*

*೩) ಅತಿಯಾದ ಆಸೆ....*

ಬಂದದ್ದರಲ್ಲಿ ತೃಪ್ತನಾದ ಮಾನವ ಹೆಚ್ಚೆಚ್ಚು ಧರ್ಮ ಮಾಡಲು ಸಮಯ ಸಿಗುತ್ತದೆ. ಸಮಯಮಾಡಿಕೊಳ್ಳುತ್ತಾನೆ....  ಆ ತೃಪ್ತಿ ಇಲ್ಲದೇ ಹೋದಾಗ  ಆಸೆ ಹೆಚ್ಚಾಗತ್ತೆ, ಆ ಆಸೆಯನ್ನು ಈಡೇರಿಸಿಕೊಳ್ಳಲು ಸಮಯ ಸಿಗದು.  ಕುಟುಂಬ ಕಾಣದು. ಗುರು ದೇವತಾ ದೇವರು ಹೀಗೆ  ಯಾವುದರ ಕಡೆಯೂ ಲಕ್ಷ್ಯ ಗಮನ ಕೊಡಲು ಆಗುವದಿಲ್ಲ. 

ನಿರಂತರ ಕ್ಷಣಬಿಡದೆ ದುಡಿಯಲು, ದುಡಿದದ್ದನ್ನು ಎರಡುಪಟ್ಟು ಮಾಡಲು ತೊಡಗುವ. ಹೆತ್ತ ಮಕ್ಕಳನ್ನೇ day care, hostel ಗಳಿಗೆ ಕಳುಹಿಸಿ ಹಣ ಸಂಪಾದನೆಗೆ ತಾನು ತೊಡಗುವ. ಹೀಗೆ ಕುಟುಂಬದೆಡೆಗೇ ಲಕ್ಷ್ಯ ಕೊಡದ ವ್ಯಕ್ತಿ ಧರ್ಮ ಮಾಡಲು ಅಸಾಹಯಕನಾಗಿಬಿಡುತ್ತಾನೆ.  ಅಂತಹವನಿಂದ ಧರ್ಮ ಲೋಪವಾಗುವದು ಅತ್ಯಂತ ನಿಶ್ಚಿತ.

*೪) ನಾಸ್ತಿಕತಾ.......*

ದೇವರಿದ್ದಾನೆ, ದೇವರಿಂದಲೇ ಆಗುತ್ತದೆ.  ಎಂದು ನಂಬದ ನಾಸ್ತಿಕ ತಾನೂ ಧರ್ಮ ಮಾಡಲಾರ. ಮಾಡುವವರನ್ನೂ ಬಿಡಿಸುವವ. ನಾಸ್ತಿಕನಿಗೆ ಧರ್ಮ ಮೂಢವಾಗುತ್ತದೆ. 

*೫) ಉನ್ಮತ್ತತನ......*

ಅಹಂಕಾರಿ ವ್ಯಕ್ತಿಗಳಿಂದ ಧರ್ಮ ನಡೆಯುವದು ಅಸಾಧ್ಯ. ಶ್ರೀಮಂತ, ಉನ್ಮತ್ತ ಇವರುಗಳಿಂದ ಒಂದು ವೇಳೆ ಧರ್ಮ ನಡೆಯಬಹುದು. ಅದರ ಉದ್ಯೆಶ್ಯ ಮಾತ್ರ ಹೆಸರು ಕೀರ್ತಿ ಇವುಗಳೇ ಆಗಿರುತ್ತವೆ.  ವಿಷ್ಣು ವೈಷ್ಣವ ಪ್ರೀತಿಯಂತೂ ಆಗದು. ವಿಷ್ಣುಪ್ರೀತಿಯಾಗದ ಯಾವ ಕಾರ್ಯವೂ ಧರ್ಮವಾಗದು. 

*೭) ದರಿದ್ರ......*

ದರಿದ್ರನಿಂದಲೂ ಯಾವ ಧರ್ಮ ಆಗುವದಿಲ್ಲ. ಯಾಕೆಂದರೆ ಧರ್ಮ ಮಾಡಲು ಹಣವೇ ಇರುವದಿಲ್ಲ. ಎಲ್ಲರೂ ಹೀಯಾಳಿಸುವವರೇ ಆಗುತ್ತಾರೆ. ಎಲ್ಲರೂ ದುಡಿಸಿಕೊಳ್ಳುತ್ತಾರೆ. ಜೊತೆಗೆ ತಾನು ಎಷ್ಟು ಮಾಡಿದರೂ ತನ್ನ ದಾರಿದ್ರ್ಯ ಕರಗಿಲ್ಲ ಎಂದಾದರೆ ಧರ್ಮ ಯಾಕೆ ಮಾಡಬೆಕು ಎಂದು ಉದಾಸೀನನಾಗಿಬಿಡುತ್ತಾನೆ. 

೬).ಇದೆಲ್ಲದರ ಮೇಲೆ ಇನ್ನೊಬ್ಬ ಧರ್ಮ ಬಿಡುತ್ತಾನೆ.  ಅವನದು ಮಹಾನ್ ದುರ್ದೈವ. ಆ ವ್ಯಕ್ತಿಯಿಂದ ಮಹಾನ್ ಧಾರ್ಮಿಕರಿಗೂ ಅಪಾಯ ತಪ್ಪಿದ್ದಲ್ಲ. ಅವನು ಯಾರೆಂದರೆ *ಪರಿಶುದ್ಧ ದಾರ್ಮಿಕನಾಗಿದ್ದು, ಧರ್ಮದ ಏನೂ ಫಲಪಡೆಯದವ.*  ಫಲಸಿಗುವವರೆಗೆ ಧರ್ಮವನ್ನು ಮಾಡುವದು ಧಾರ್ಮಿಕನ ಜವಾಬ್ದಾರಿ. ಧಾರ್ಮಿಕ ಧರ್ಮದ ಫಲ ಪಡೆದಿಲ್ಲ ಎಂದಾದರೆ, ಅವವನ್ನು ಅನುಸರಿಸುವ ಯಾರೂ ಧರ್ಮ ಮಾಡರು. *ಮೂರು ಹೊತ್ತು ಮೂಗು ಹಿಡಕೊಂಡ ಕೂತ- ಏನು ಪಡೆದ.....* ಎಂದು ಎಲ್ಲರೂ ಧರ್ಮವನ್ನು ಬಿಡುತ್ತಾರೆ, ಹೀಯಾಳಿಸುತ್ತಾರೆ. ದ್ವೇಶಕ್ಕೂ ಇಳಿಯುತ್ತಾರೆ. ತಾನು ಕೆಡುತ್ತಾನೆ, ತನ್ನವರನ್ನೂ ಕೆಡಿಸುತ್ತಾನೆ. ಆದ್ದರಿಂದಲೇ *ಧರ್ಮ ಮಾಡಿ ಫಲ ಪಡೆಯದ ವ್ಯಕ್ತಿ ಮಾತ್ರ ಮಹಾ ಅಪಾಯಕಾರಿ...* ಹೀಗೆ ಇವರೆಲ್ಲ ಧರ್ಮವನ್ನು ಲೋಪಮಾಡಲು ಸಮರ್ಥರಾಗುತ್ತಾರೆ. ಈ ಪ್ರಸಂಗಗಳು ಧರ್ಮವನ್ನು ಲೋಪಮಾಡಿಸುತ್ತದೆ.......
(ಮೇಲೆ ಹೇಳಿದ ಗುಣವಂತರು ಧರ್ಮಬಿಡುತ್ತಾರೆ ಎಂದಲ್ಲ, ಹಾಗೆ ತಪ್ಪು ಭಾವನೆ ಬೇಡ. ಧರ್ಮಬಿಟ್ಟುವರಲ್ಲಿ ಆ ಗುಣಧರ್ಮಗಳು ಇರುತ್ತವೆ ಅಷ್ಟು ಮಾತ್ರ ಸೀಮಿತ.)

 ದಾರಿದ್ರ್ಯ  ಕಳೆದುಕೊಂಡವನಾಗಿ  ಸಮೃದ್ಧನಾಗಿರಬೇಕು.  ನಸ್ತಿಕತೆಯನ್ನು ಹೋಗಲಾಡಿಸಿ ಆಸ್ತಿಕತಾ ಬೆಳಿಸಿಕೊಂಡವಾನಾಗಿರಬೇಕು. ಆಸೆ ಪಡದೆ,  ತೃಪ್ತನಾಗಿರಬೇಕು. ಉನ್ಮತ್ತನಾಗದೆ ವಿಷ್ಣು ದಾಸನಾಗಿರಬೇಕು. ಆಚರಿಸಿದ ಧರ್ಮದ ಫಲ ಪಡೆದಿರಬೇಕು... 
ಕದಾಚಿತ್ ಇವುಗಳು ವಿಪರೀತವಾಗಿ  ಬೆಳೆದಿದ್ದರೆ ಧರ್ಮ ಲೋಪ ಅನಿವಾರ್ಯ.

ಈ ತರಹದ  ಪ್ರಸಂಗಳು ಎಲ್ಲರ ಜೀವನದಲ್ಲೂ ಎದುರಾಗುತ್ತವೆ.  ಎದುರಾದಾಗ ಸ್ವಲ್ಪ ಜಾಗೂರೂಕತೆ ಹಾಗೂ ತಾಳ್ಮೆ ಮತ್ತು ಭರವಸೆ ಇವಗಳಿಂದ ಕೂಡಿಕೊಂಡುವನಾಗಿದ್ದರೆ ಸಾಕು ಧರ್ಮ ಲೋಪವಾಗುವ ಪ್ರಸಂಗವನ್ನೂ ತಪ್ಪಿಸಿಕೊಳ್ಳಬಹುದು, ಧಾರ್ಮಿಕನಾಗಿ ಬೆಳಿಯಲೂ ಬಹುದು....... 

*✍🏻✍🏻✍🏻ನ್ಯಾಸ*
(ಗೋಪಾಲ ದಾಸ.
ವಿಜಯಾಶ್ರಮ. ಸಿರವಾರ)

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*