*ದುರುಪಯೋಗದಿಂದಲೇ ದುರಂತಗಳು*
*ದುರುಪಯೋಗದಿಂದಲೇ ದುರಂತಗಳು*
ಪರಮೋಪಕಾರಿ ಶ್ರೀಹರಿ. ಕೊಟ್ಟದ್ದನ್ನು ಉಪಯೋಗಿಸಿಕೊಳ್ಳದ ಬೇಜವಾಬ್ದಾರಿ ಮನುಷ್ಯ ನಾನು. ಉಪಯೋಗಿಸಿಕೊಳ್ಳದಿದ್ದರೆ ಸಾಮಸ್ಯೆ ಇರುತ್ತಿರಲಿಲ್ಲವೋ ಏನೋ, ಆದರೆ ದುರುಪಯೋಗ ಮಾಡ್ತಾ ಇದ್ದೇನಲ್ಲ, ಇದು ಮಾತ್ರ ಅತ್ಯಂತ ಘೋರ ದುರಂತಗಳಿಗೆ ನಾಂದಿ.
ಬೇಡಿದ್ದು ಕೆಲವು. ಬೇಡದೇ ಕೊಟ್ಟದ್ದು ಅಪಾರ. "ಕೊಟ್ಟದ್ದು ಅಥವಾ ಕೊಡವದು ಏನಿದೆ ಸಾಧಿಸಿಕೊಳ್ಳಲೇ ಹೊರತು, ದುರುಪಯೋಗ ಮಾಡಿಕೊಳ್ಳಲು ಅಲ್ಲವೇ ಅಲ್ಲ." ಆದರೆ ಇಂದು ಹಾಗಾಗದೆ "ಕೊಟ್ಟದ್ದೆಲ್ಲವನ್ನೂ ದುರುಪಯೋಗ ಮಾಡಿಕೊಳ್ಳುವಂತಾಗಿದೆ."
ಶ್ರೀ ಕೃಷ್ಣ ಮತ್ತು ಅರ್ಜುನರು ರಥದಲ್ಲಿ ಕುಳಿತು ವಿಹಾರಕ್ಕಾಗಿ ತೆರಳಿರುತ್ತಾರೆ. ರಾಜ ಮಾರ್ಗದಲ್ಲಿ ಸಾಗುತ್ತಿರುವಾಗ, ಪಕ್ಕದ ಮೋರೆಯಲ್ಲಿ ಒಬ್ಬ ವ್ಯಕ್ತಿ ಬಿದ್ದಿರುತ್ತಾನೆ. ಅರ್ಜುನ ತುಂಬ ಕರುಣಾಳು. ಪಕ್ಕ ಹೋಗಿ ನೋಡುತ್ತಾನೆ ತುಂಬ ಕುಡಿದು ಘಟಾರಿನಲ್ಲಿ ಬಿದ್ದಿದಾನೆ. ಅವನನ್ನು ನೋಡಿ ಅರ್ಜುನ ಕೇಳಿದ 'ಕುಡಿತಕ್ಕೆ ಬಲಿಯಾಗಿ ಇಲ್ಯಾಕ ಬಿದ್ದಿದೀಯಾ..' ಎಂದು. ಘಟಾರಿ ಮಾನವನ ಸಹಜ ಉತ್ತರ, ಕಳೆದ ತಿಂಗಳಿನ ವರೆಗೂ ನಾನೊಬ್ಬ ಕುಷ್ಠರೋಗಿ, ನನ್ನ ಈ ರೋಗವನ್ನು ಗುಣ ಮಾಡಿದ ದಯಾಮಯ ಶ್ರೀಕೃಷ್ಣ. ನಾನಿನ್ನೇನು ಮಾಡಲಿ... ಹೀಗೆ ಉತ್ತರಿಸಿದ. ಅಲ್ಲಿಯೇ ಕುಸಿದು ಬೀಳುವ ಸರತಿ ಅರ್ಜುನಂದು ಆಗಿರಬಹುದು.
ಅಷ್ಟರಲ್ಲಿಯೇ ಒಬ್ಬ ಕಳ್ಳ ಓಡಿಬಂದ. ಅರ್ಜುನ ಅವನನ್ನು ಬಂಧಿಸಿದ. ಯಾಕೆ ಕಳ್ಳತನ ಮಾಡುವದು.. ?? ಎಂದು ಝಬರಿಸಿದ. ಕರುಣಾಮಯಿ ದೇವರು. ನನಗೆ ಕಾಲು ಇರಲಿಲ್ಲ, ಕಾಲು ಕೊಟ್ಟ. ನಾನು ಇನ್ನೇನು ಮಾಡಲಿ.. ಎಂದ. ಆಗ ಶ್ರೀಕೃಷ್ಣನ ಅವಸ್ಥೇ ಏನಾಗಿರಬಹುದು....
ನನ್ನವಸ್ಥೆಯೂ ಇದಕ್ಕೆ ವಿಪರೀತವೇನಿಲ್ಲ. *ದೇವರ ಕರುಣೆಯಿಂದ ಸಂಪತ್ತಿದೆ, ವಿದ್ವತ್ತೂ ಇದೆ, ವಿಜ್ಙಾನ ಕೈಯಲ್ಲಿ ಇದೆ, ಗುಣವಂತಿಕೆಯೂ ಇದೆ, ಅದ್ಭುತವಾದ ಪಾಟವ ಇದೆ, ಪ್ರಚಂಡವಾದ ಇಂದ್ರಿಯ ಮನಸ್ಸು ಬುದ್ಧಿಗಳಿವೆ, ಆದರೆ ಸುಖದಾಸೆಯಿಂದ ವಿಷಯಾಗ್ನಿಯಲ್ಲಿ ಬಿದ್ದಿದ್ದೇನೆ, ಬೆಂದು ಹೋಗ್ತಾ ಇದ್ದೇನೆ...*
ದೇವರು ಕರುಣೆ ಮಾಡಿ ಕೊಟ್ಟದ್ದು *ದುಶ್ಚಟಗಳಿಗೆ ಬಲಿಯಾಗಲು ಅಲ್ಲ, ದುಶ್ಚಟ ದುರಭ್ಯಾಸಗಳಿಂದ ಮೇಲೇಳಲು ಕೊಟ್ಟಿದ್ದಾನೆ.* ಈ ತಿಳುವಳಿಕೆ ಇಲ್ಲದೆ ಇರುವದೇ ಇಂದಿನ ದೊಡ್ಡ ದೊಡ್ಡ ದುರಂತಗಳಿಗೆ ಕಾರಣವಾಗಿದೆ.
ಆತ್ಮ ಶಕ್ತಿಗೆ, ದೆವರ ಕಾರುಣ್ಯಕ್ಕೆ ಬೇಕಾದವುಗಳ ಅಭಿವೃದ್ಧಿಗೆ ಏನು ಬೇಕೋ ಅವುಗಳನ್ನು ಅಭಿವೃದ್ಧಿಸಿಕೊಳ್ಳದೆ, ಅವುಗಳನ್ನು ನೆಚ್ಚದೆ, ಆ ಕಡೆ ಗಮನವೇ ಕೊಡದೆ ಕೇವಲ ಇಂದ್ರಿಪರಾಯಣನಾಗಿ, ದೊರೆತ ನೂರಾರು ಅವಕಾಶಗಳನ್ನೆಲ್ಲ ದುರುಪಯೋಗಗೊಳಿಸುತ್ತಾ ಹೋದರೆ ಮುಂದಿರುವದು ದುರಂತವಲ್ಲದೇ ಇನ್ಬೇನಿರಲು ಸಾಧ್ಯ.........
ಇಂದಿನ ಯುವಕರಿಗೆ ದೇವರು ಕರುಣೆ ಮಾಡಿ ಕೊಟ್ಟಷ್ಟು ಹಿಂದಿನ ವೃದ್ಧರಿಗೆ ಕೊಟ್ಟಿಲ್ಲ. ಇದು ನೂರಕ್ಕೆ ನೂರರಷ್ಟು ನಿಶ್ಚಿತ. ವಿಜ್ಙಾನದ ಮುಖಾಂತರ ಮಾಡಿದ ಕರುಣೆಯಂತೂ ಊಹಿಸಲಸಾಧ್ಯ.
ಅಂದು ಕಣ್ಣು ಹೋದರೆ ಹೋಗಿ ಬಿಡ್ತಿತ್ತು, ರೋಗಗಳು ಬಂದದ್ದೇ ಗೊತ್ತಾಗ್ತಿರ್ಲಿಲ್ಲ. ಹಣವಂತೂ ಇರ್ತಾನೇ ಇರಲಿಲ್ಲ. ಹೊಟ್ಟೆ ತುಂಬಿ ಇಂದು ಚೆಲ್ಲಿದೆ ಎಂದಾಗ್ತಿರ್ಲಿಲ್ಲ. ಇಂದು ಹಾಗಿಲ್ಲ. ಸಮೃದ್ಧಿ ಇದೆ. ಸಮೃದ್ಧವಾಗಿಯೇ ಕೊಟ್ಟಿದ್ದಾನೆ. ದುರುಪಯೋಗವೂ ತುಂಬ ಆಗ್ತಿದೆ.
ದುರುಪಯೋಗ ಆಗದಿರಲು ಬೇಕು ಆತ್ಮಸಂಯಮ, ದಯೆ, ಕರುಣೆ, ನಿಃಸ್ವಾರ್ಥತೆ, ಪರೊಪಕಾರ, ವಿನಯ, ನಿಸ್ಪೃಹತೆ, ಜ್ಙಾನ, ತಿಳುವಳಿಕೆ, ಬುದ್ಧಿಶಕ್ತಿ, ದೂರದೃಷ್ಟಿ, ಆಧ್ಯಾತ್ಮಿಕತೆ, ಗುರುಭಕ್ತಿ, ಮಾತಾ ಪಿತೃಭಕ್ತಿ, ಇವರೆಲ್ಲರ ಅನುಗ್ರಹ ಇತ್ಯಾದಿ ಇತ್ಯಾದಿಗುಣಗಳ ಅಭಿವೃದ್ಧಿ. ಈ ಎಲ್ಲದರ ಮೇಲೆ ದೇವರ ಅಪಾರ ಕಾರುಣ್ಯ. *ದೇವರ ಕಾರುಣ್ಯದ ದುರುಪಯೋಗ ದುರಂತದ ಹಾದಿಯಾಗಬಾರದು* ಅಷ್ಟೆ.
*✍🏽✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments