*ಅನ್ನ.....*
*ಅನ್ನ.....*
ಇಂದು ಶುಕ್ರವಾರ. ಲಕ್ಷ್ಮೀ ದೇವಿಯ ವಾರ. ಲಕ್ಷ್ಮೀ ದೇವಿಯು ಅನ್ನಕ್ಕೆ ಅಭಿಮಾನಿ. ಒಂದಿನದ ಅನ್ನ ಸಿಗುವದು ತುಂಬ ಕಠಿನ. *ಒಂದಿನ ಕವಳಕ್ಕೆ ಸಾವಿರ ಆಪತ್ತು* ಒಂದು ದಿನದ ಒಂದು ತುತ್ತಿನ ಅನ್ನಕ್ಕೆ ಸಾವಿರ ಆಪತ್ತುಗಳು ಇದು ದಾಸರ ಒಂದು ಮಾತು. ಶಾಸ್ತ್ರದ ಸಮ್ಮತವೂ ಹೌದು.
*ಅನ್ನ* ಇಂದು ನಮಗೆ ದೇವರ ಕರುಣೆಯಿಂದ ಅನಾಯಾಸೇನ ದೊರಕಿದೆ. ಅಷ್ಟೇ ಅನಾಯಾಸೇನ ಚೆಲ್ಲುತ್ತೆವೆಯೂ ಸಹ. ಒಂದು ತುತ್ತಿನ ಅನ್ನದ ಹಿಂದೆ ನೂರಾರು ಜನರ ಶ್ರಮವಿದೆ. ತಿಂಗಳು ಶ್ರಮಪಟ್ಟು ಸಂಪಾದಿಸಿದ ಹಣವನ್ನು ಘಟಾರಿಗೆ ಎಸೆದರೆ ಹೇಗೋ ಹಾಗೆಯೇ ಅನ್ನವನ್ನು ಚೆಲ್ಲವದು ಎಂದರೆ. *ತುತ್ತು ಅನ್ನವಿಲ್ಲದೇ ಬದುಕುವ ಜನ ಕೋಟಿ ಕೋಟಿ ಇದ್ದಾರೆ* ಈ ಎಚ್ಚರ ಅನ್ನ ಚೆಲ್ಲುವಾಗ ಇರಬೇಕು ಅಷ್ಟೆ....
ನಮ್ಮ ಆತ್ಮೀಯರ ಹುಟ್ಟು ಹಬ್ಬ. Celebration ಆಗಲೇ ಬೇಕು. ಒಬ್ಬ ಬ್ರಾಹ್ಮಣನಿಗೆ ಊಟಕ್ಕೆ ಹಾಕಿ. ಹಾಕುವದಿಲ್ಲ ಬಿಟ್ಟುಬಿಡಿ. ಆದರೆ ನೂರಾರು ರೂಪಾಯಿಯ *ಕೇಕ್ ಮಾರಿಗೆ ತೆಲೆಗೆ ಹಚ್ಚಿ ಆ ಕೇಕ್ ಅನ್ನು ಹಾಳು ಮಾಡುವದು ಸರ್ವಥಾ ಬೇಡ.* ತಿಂದು enjoy ಮಾಡಿ, ಇಲ್ಲವೇ ಮತ್ತೊಬ್ಬರಿಗೆ ಹಂಚಿ. ಕೇಕ್ ಇಲ್ಲದೇ ಜನ್ಮದಿನವನ್ನು ಆಚರಿಸುವ ಸಾವಿರ ಸಾವಿರ ಮಂದಿ ಇದ್ದಾರೆ. ನೂರಾರು ಜನರ ಪರಿಶ್ರಮ ಕಸದ ಪಾಲು ಆಗುವದು ಸರ್ವಥಾ ಬೇಡ.
ಮೊನ್ನೆ ಇದೇ ವ್ರತದಲ್ಲಿ ಒಂದು ಕಡೆ ಊಟಕ್ಕೆ ಹೋಗಿದ್ದೆ. ಊಟಕ್ಕೆ ಹೋಗುವದೇ ತುಂಬ ಕಡಿಮೆ. ಊಟವಾಯಿತು. ಮಜ್ಜಿಗೆ ಕುಡುದಾಯ್ತು. ಇನ್ನೇನು ಏಳಬೇಕು... ಅಷ್ಟರಲ್ಲೇ ನನ್ನ ಗಮನ ಒಂದೆಡೆ ಹರಿತು. ಎದುರಿಗೆ ಒಬ್ಬರು ಕುಳಿತಿದ್ದರು. ಅವರು ವ್ರತದ ಗುರೆಳ್ಳಿನ ಪುಡಿ ತಿಂತಾ ಇದ್ರು.
ನಾನು ಕೇಳಿದೆ ಇದೇನು...?? ವ್ರತವನ್ನೇ ಮಾಡುವದಿಲ್ಲ. ವ್ರತಮಾಡುವವರೂ ತಿನ್ನುವದಿಲ್ಲ. ನೀವು ನೋಡಿದ್ರೆ ಗುರೆಳ್ಳಿನ ಪುಡಿ ಬುಕ್ತಾ ಇದೀರಲ್ಲ... ಎಂದು ಹಾಸ್ಯ ಮಾಡಿದೆ. ಅದಕ್ಕೆ ಅವರ ಸ್ಪಷ್ಟ ನಿಲುವು ಹೀಗಿತ್ತು...
*ಅನ್ನ ಚೆಲ್ಲುವದು, ಕೆಡಿಸುವದು ಎಂದರೆ ಅದೊಂದು ಬಹು ದೊಡ್ಡ ಹಗರಣ scam ಎಂದರೆ ತಪ್ಪಾಗಲಿಕ್ಕಿಲ್ಲ* ಎಂದು ನಮ್ಮ ತಂದೆಯವರು ಹೇಳುತ್ತಿದ್ದರು. ಅಂದಿನಿಂದ ನಾನು ಇಲ್ಲಿಯವರೆಗೂ ಎಲೆಯಲ್ಲಿ ಇರುವ ಅನ್ನವನ್ನು ಚೆಲ್ಲಿಲ್ಲ. ಚೆಲ್ಲುವದೂ ಇಲ್ಲ ಎಂದು.
"ದೇವರ ಕಾರುಣ್ಯವಿದೆ ಇಂದು ಅನ್ನವಿದೆ" ದೆವರಿಗೆ ಸಮರ್ಪಿಸಿ ತಿನ್ನುವದು ನಮ್ಮ ಕರ್ತವ್ಯ. ಅದಾಗುವದಿಲ್ಲ ಎಂದಾದರೆ ಸರೆ, ಆದರೆ ಅನ್ನಕ್ಕೆ ಅಗೌರವ ಅವಮಾನ ಸರ್ವಥಾ ಸಲ್ಲ. ಅನ್ನ ಕೊಟ್ಟ ದೇವರ ಕರುಣೆ ತಪ್ಪಿದರೆ *ಕದನ್ನವೂ ಸಿಗದು* ಇದು ಇತ್ಯಂತ ನಿಶ್ಚಿತ.
ಅನ್ನ ಚೆಲ್ಲುವವರ ಮೇಲೆ ಲಕ್ಷ್ಮೀ ದೇವಿಗೆ ಮುನಿಸು. ಮುನಿಸಿಕೊಂಡಮೇಲೆ ಅನ್ನಾಭಿಮಾನಿ ಲಕ್ಷ್ಮೀ ದೇವಿ ಮನೆಯಲ್ಲಿ, ಮನದಲ್ಲಿ ಇರಳು. ಹೊರಹೋಗುತ್ತಾಳೆ.
ಅನ್ನಾಭಿಮಾನಿ ಲಕ್ಷ್ಮೀದೇವಿ ಯಾರ ಮನೆಯಿಂದ ಹೊರ ಹೋಗಿದ್ದಾಳೋ ಅಲ್ಲಿ ಅನ್ನಕೊಟ್ಟ ದೇವರಿಗೆ ಅನ್ನದ ಸಮರ್ಪಣೆ ಆಗುವದಿಲ್ಲ, ಯಾರ ಮನಸ್ಸಿನಿಂದ ಲಕ್ಷ್ಮೀ ದೇವಿ ಹೋರ ಹೋಗಿದ್ದಾಳೋ ಅವರಿಗೆ ಮನೆಯ ಅನ್ನ ರುಚಿಸುವದೇ ಇಲ್ಲ.
*ಅನ್ನಾಭಿಮಾನಿ ಲಕ್ಷ್ಮೀದೇವಿಯನ್ನು ಸರ್ವಥಾ ಹೊರಗೆ ಕಳಿಸುವದು ಬೇಡ.* ಅವಳು ಮನಿಸು ದಾರಿದ್ರ್ಯಕ್ಕೆ ಕಾರಣ. ಅವಳ ಹೊರನಡೆ ಅಧಃಪತನಕ್ಕೆ ಕಾರಣ. ಮುಂದಿನದು ನಮ್ಮ ಜವಾಬ್ದಾರಿ...
*✍🏽✍ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments