*ಭಾಗ್ಯದಾ ಲಕ್ಷ್ಮೀ ಬಾರಮ್ಮ....*


*ಭಾಗ್ಯದಾ ಲಕ್ಷ್ಮೀ ಬಾರಮ್ಮ....*

ನಾರಾಯಣ ಲಕ್ಷ್ಮೀದೇವಿಯಿಂದ ಆರಂಭಿಸಿ ಅನೇಕ ದೇವತೆಗಳ ಹಾಗೂ ಗುರುಗಳ ಆರಾಧಿಸುವ ಮಾಸ ಶ್ರಾವಣ ಮಾಸ. ಈ ಸಲದ ಶ್ರಾವಣ ಶುಕ್ರವಾರದಿಂದಲೇ ಆರಂಭಿಸಿದ ಕಾರಣ ಮೊದಲು ಲಕ್ಷ್ಮೀದೇವಿಯನ್ನೇ ಕರೆಯೋಣ. ಆರಾಧಿಸೋಣ ನಂತರ ಎಲ್ಲ ದೇವತಾ ದೇವರುಗಳ ಆರಾಧನೆಯಲ್ಲಿ ತೊಡಗಿಕೊಳ್ಳೋಣ. 

*ಸೌಭಾಗ್ಯದ ಲಕ್ಷ್ಮೀ ಬಾರಮ್ಮ*

ಅನಾದಿ ಕಾಲದಿಂದ ಅನಂತಜೀವರಾಶಿಗಳಿಗೆ ಐಶ್ವರ್ದಿಂದ ಆರಂಭಿಸಿ ಮೋಕ್ಷದ ವರೆಗೆ ಇರುವ ಎಲ್ಲ ಭಾಗ್ಯಗಳೂ ಲಕ್ಷ್ಮೀದೆವಿಯ ಅಧೀನ.  ಅಂತೆಯರೆ "ಸೌಭಾಗ್ಯದ ದೇವತೆ ಲಕ್ಷ್ಮೀದೇವಿ." ಲಕ್ಷ್ಮೀದೇವಿಯ ಕೃಪಾಕಟಾಕ್ಷವಿದ್ದರೆ ಸೌಭಾಗ್ಯ. ಇಲ್ಲದಿರೆ ದೌರ್ಭಾಗ್ಯ. 

*ಶುಕ್ರವಾರದ ಪೂಜೆಯ ವೇಳೆಗೆ..*

ನಿತ್ಯವೂ ನೀನು ಬರಬೇಕು ಅಲ್ಲ ನಿತ್ಯವೂ ನೀನಿರಬೇಕು. ಮನಸ್ಸಿನಲ್ಲಿ ಮನೆಯಲ್ಲಿ ನಿನ್ನ ಪಾದಪದ್ಮಗಳನ್ನು ತಳವೂರಿ ಇಟ್ಟು ಇಲ್ಲೇ ನಿಂತಿರಬೇಕು. "ನಿಲ್ಲೆ ನಿಲ್ಲೇ ಕೊಲ್ಹಾಪುರ ದೇವಿ ಇಲ್ಲೆ ಬಾರೆ ಗೆಜ್ಜೆ ಘಲ್ಲೆನುತ" ಎಂದು ದಾಸರು ಕೊಂಡಾಡಿದಂತೆ ಇಲ್ಲೇ ಬಂದು ವಾಸ ಮಾಡಲಿ ಬೇಕು. ನೀನು ಎನ್ನಲ್ಲಿ ವಾಸಮಾಡಲಿಕ್ಕಾಗಿಯೇ *ಶುಕ್ರವಾರದ ಪೂಜೆ* ಇಟ್ಟುಕೊಂಡಿದ್ದೇನೆ. ಆದ್ದರಿಂದ ನೀನು ಎನ್ನ ಪೂಜೆಯ ವೇಳೆಗೆ ಬಾ. 

*ಯಾರ ಮನ ಮನೆಗೆ ಬರುತ್ತಾಳೆ - ಯಾರ ಮನ ಮನೆಯಲ್ಲಿ ನಿಲ್ಲುತ್ತಾಳೆ*

ಯಾರು ಮನೆಗೆ ಬರುವವರು ಇರುತ್ತಾರೆ ಅವರು ಇರಲು ಯೋಗ್ಯ ವಾತಾವರಣ ನಿರ್ಮಿಸಿದರೆ ಅವರು ನಮ್ಮ ಮನೆಗೆ ಬರುತ್ತಾರೆ ಮನೆಯಲ್ಕಿ ಉಳಿಯುತ್ತಾರೆ. 

ಮಡಿ ಮಾಡುವವರು ಇದ್ದರೆ ಭಾವಿ ಮೊದಲಾದ ಅನುಕೂಲ. ಟೇಬಲ್ಲಿನಮೇಲೆಯೇ ಊಟಮಾಡುವವರಿದ್ದರೆ ಡೈನಿಂಗ್ ಟೇಬಲ್. ಹೀಗೆ ಬರುವವರ ರುಚಿಗರ ತಕ್ಕ ಹಾಗೆ ಅನುಕೂಲವಿದ್ದರೆ ಅವರು ಓಡಿ ಬರುತ್ತಾರೆ. 

ಲಕ್ಷ್ಮೀ ದೇವಿಯೆಲ್ಲಿರುತ್ತಾಳೆ....  ??
ಹಣದಲ್ಲಿ ಇರುತ್ತಾಳೆ ಹಣ ಬ್ಯಾಂಕಿನಲ್ಲಿ ಇದೆ. ಭಂಗಾರದಲ್ಲಿ ಲಕ್ಷ್ಮೀದೇವಿರುತ್ತಾಳ. ಭಂಗಾರವೂ ಬ್ಯಾಂಕಿನಪಾಲು. ಹೀಗಾಗಿ "ಬ್ಯಾಂಕುಗಳಿಗೆ ನಿವ್ವಳ ಲಾಭ" ಎಂದು ಆಗಾಗ ಕೇಲುತ್ತಿರುತ್ತೇವೆ. ಅರಿಷಿಣ ಕುಂಕುಮಗಳಲ್ಲಿ ಇರುತ್ತಾಳೆ. ಅರಿಶಿಣ ಕುಂಕುಮ ಹಚ್ಚಿಕೊಳ್ಳುವವರೆ ಕಡಿಮೆಯಾಗಿದೆ. ಜ್ಙಾನದಲ್ಲಿ ಲಕ್ಷ್ಮೀ ಇರುತ್ತಾಳೆ. ಪಾಠ ಉಪನ್ಯಾಸ ಅಂದರೆ ಅಲರ್ಜಿ. ಧರ್ಮದಲ್ಲಿ ಲಕ್ಷ್ಮಿ ಇರುತ್ತಾಳೆ.‌ ಧರ್ಮವಿರೋಧಿಗಳು ನಾವು. ಇವು ಒಂದಾದರೆ ಇದಕ್ಕೆ ವಿಪರೀತ..... 

ಎಲಿರುವದಿಲ್ಲ ಲಕ್ಷ್ಮೀ... ?? 
ಪ್ಲ್ಯಾಸ್ಟೀಕು ಸಾಮಾನುಗಳಲ್ಲಿ ಇರುವದಿಲ್ಲ. ಆದರೆ ಫ್ಯಾನು ಲೈಟು ಫ್ರಿಜ್ ವಾಶಿಂಗ್ ಮಶೀನು, ಚೇರು, ಸೋಫಾ, ಕಾಟು, ಟೀವಿ ಹೀಗೆ ಮನೆತುಂಬ  ಪ್ಲ್ಯಾಸ್ಟೀಕ ಸಾಮಾನುಗಳು.  ಹೀಗಾದಲ್ಲಿ ಲಕ್ಷ್ಮೀದೇವಿ ಬರುತ್ತಾಳೆ ಯಾಕೆ ಇರುತ್ತಾಳೆ ಯಾಕೆ..... 

*ಇಂದಿನ ಈ ಶುಕ್ರವಾರದ ನಿರ್ಧಾರ....*

ಲಕ್ಷ್ಮೀ ದೇವಿ ಮನೆಯಲ್ಲಿ ಇರುವದಕ್ಕೋಸ್ಕರ ಅವಳು ಹೇಗೆ ಇರಲು ಮನಸ್ಸು ಮಾಡುವವಳೋ, ಹಾಗೆ ನಾವು ನಮ್ಮ ಮನೆಯಲ್ಲಿ ವಾತಾವರಣ ನಿರ್ಮಾಣ ಮಾಡೋಣ. 

*ಇಂದಿನ ಯುವಕರಿಗೆ ತಿಳಿಮಾತು...*

ಪುರುಷರು ನಿತ್ಯ ಎರಡು ಹೊತ್ತು ಸಂಧ್ಯಾವಂದನೆ ತಪ್ಪಿಸಬೇಡಿ. ೨೦ ನಿಮಿಷ ಪಾಠ ಓದಿ ಜ್ಙಾನ ಸಂಪಾದಿಸಿ. ಯುವತಿಯರು ಹೊರಗೆ ಹೇಗಾದರೂ ಇರಿ ಮನೆಯಲ್ಲಿ ಅರಿಷಿಣ ಕುಂಕುಮ ಹಚ್ಚಿಕೊಂಡೇ ಇರಿ. ಪುರುಷ ಹಾಗೂ ಸ್ತ್ರೀಯರಿಬ್ಬರೂ ಕನಿಷ್ಠ ೩೦ ನಿಮಿಷ ಉಪನ್ಯಾಸ ಕೇಳುವ ವ್ರತ ಮಾಡಿ. ಪಾರಾಯಣ ಹಾಡು ಮನೆಯಲ್ಲಿ ಮನದಲ್ಲಿ ಝಗಝಗಮಿಸುತ್ತಿರಲಿ. ಹಿರಿಯರು ಪ್ರಾಣ ಹೋಗಲಿ ಪೂಜೆ ಪಾಠ ತಪ್ಪಿಸುವದು ಬೇಡವೇ ಬೇಡ. ಹೀಗಾದಲ್ಲಿ  *ಲಕ್ಷ್ಮೀ ಓಡಿ ಬಂದು ನಮ್ಮ‌ ಮನೆ ಮನದಲ್ಲಿ ವಾಸ ಮಾಡಿಯೇ ತೀರುತ್ತಾಳೆ.*  ಹೀಗೆ ಲಕ್ಷ್ಮಿ ದೇವಿ ಇರುವಂತಹ ವಾತಾವರಣ ನಿರ್ಮಾಣ ಮಾಡಿದರೆ  *ಭಾಗ್ಯದಾ ಲಕ್ಷ್ಮೀ  ಬಾರಮ್ಮಾ* ಎಂದು ಇನ್ವೈಟ್ ಮಾಡಲು ಮುಖವಾದರೂ ಇರತ್ತೆ..... 

*✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*