*ಚಿಣ್ಣರಿಗೆ ಕೃಷ್ಣನ ಸವಿನುಡಿಗಳು....*

*ಚಿಣ್ಣರಿಗೆ ಕೃಷ್ಣನ ಸವಿನುಡಿಗಳು....*

ಕೃಷ್ಣನಿಗೆ ಚಿಣ್ಣರೆಂದರೆ ಬಲುಪ್ರೀತಿ. ಚಿಣ್ಣರನ್ನು ಬದಲು ಮಾಡಲು ತುಂಬ ಅಭಿರುಚಿ. ಚಿಣ್ಣರಿಂದಲೇ ಹೊಸಬದುಕಿನ ಆಸಕ್ತಿ. ಸಮೃದ್ಧ ಜೀವನದ ನಿರ್ಮಾಣಕ್ಕೋಸ್ಕರವೇ ಚಿಣ್ಣರ ಅಭಿವ್ಯಕ್ತಿ. ಅಂತೆಯೇ ಕೃಷ್ಣನಿಗೆ ಚಿಣ್ಣರೂ ಎಂದರೆ ಎಲ್ಲಿಲ್ಲದ ರುಚಿ. 

*ಶ್ರೀಕೃಷ್ಣ ಪ್ರೀತಿಸುವಷ್ಟು ಚಿಣ್ಣರಲ್ಲಿ ಏನಿದೆ ...*

ಇವತ್ತು ಸೃಷ್ಟಿಗೆ ಬರುವ ಜೀರು ಅನಂತ ಅನಂತ. ಆ ಎಲ್ಲ ಜೀವರಾಶಿಗಳಿಗೂ ತಮ್ಮ ಜೀವನದ ಉದ್ದೇಶ್ಯ ಗೊತ್ತಾಗುವದರೊಳಗೇ ಜೀವನದ ಕೊನೆಯ ಉಸಿರು ಬಂದಾಗಿರುತ್ತದೆ. "ಸ್ಪಷ್ಟ ಉದ್ದೇಶ್ಯ ತಿಳಿಸಿ ಉದ್ದೇಶ್ಯ ಸಿದ್ದಿಗೆ ಕ್ರಿಯಾಶೀಲನನ್ನಾಗಿಸುವ ಸರಿಯಾದ ಸಮಯ ಎಂದರೆ ಅದು ಬಾಲ್ಯಾವಸ್ಥೆ" ಹಾಗಾಗಿ ಅರಳುವ  ಚಿಣ್ಣರೂ ಎಂದರೆ ಕೃಷ್ಣನಿಗೆ ಪ್ರೀತಿ. 

*ಶೈಶವಾವಸ್ಥೆ ಅಂತಹದ್ದೇನಾಗಿದೆ....*

ಶೈಶವ ಅವಸ್ಥೆಯಲ್ಲಿ ಏನಿಲ್ಲ. "ಹೊಟ್ಟೆ ತುಂಬ ಊಟ, ಕಣ್ಣು ತುಂಬ ನಿದ್ರೆ, ಮುಖದ ತುಂಬಿ ನಗು" ಇಷ್ಟಿದೆ ಎಂದೆ ನಮ್ಮ ತಿಳುವಳಿಕೆ. ಕೃಷ್ಣನ ವಿಚಾರವೇ ಬೇರೆ. ಹೆಮ್ಮರವಾಗಿ ಬೆಳೆಯುವ ಈ ಗಿಡವನ್ನು ಹೇಗೆ ಬೆಳಿಸಬೇಕು ಎಂದು ತಿಳಿಸುವ ಬೆಳೆಸುವ ಸಮಯ ಅಂದರೆ ಅದು ಶೈಶವ ಅವಸ್ಥೆ. 

*ಉದ್ದೇಶ್ಯಗಳ ಅರಿವು ಮೂಡಿಸುವದು ಮೊದಲ ಕಾರ್ಯ*

ಸಾಧನೆಗೋಸ್ಕರ ಬಂದವರು ನಾವು. ನಾಳೆ ಮಾಡಿದರಾಯ್ತು ಎಂದು ಸಾಧನೆಯನ್ನು ಮುಂದೂಡುವವರೂ ನಾವೇ. 

ಕೃಷ್ಣ ಭೂಮಿಗೆ ಬರುವ ಉದ್ದ್ಯೇಶ್ಯವೇನು ?? ಭೂ ಭಾರ ಹರಣೆ ಮೂಲ ಉದ್ಯೇಶ್ಯ. ಆ ಭೂಭಾರ ಹರಣೆಗೆ ಕೆಳಗೇ ಬರುವ ಅವಶ್ಯಕತೆ ಕೃಷ್ಣನಿಗೆ ಸರ್ವಥಾ ಇಲ್ಲ. ಆದರೂ ಬಂದು. ಆಟವಾಡುವ ವಯಸ್ಸು, ಮಜ ಮಾಡುವ ವಯಸ್ಸು, ಮದುವೆ ಮಾಡಿಕೊಳ್ಳಲಿ, ಮಕ್ಕಳಾಗಲಿ, ಹೀಗೆ ಮುಂದೆ ಹಾಕ್ತಾ ಹೋಗಲಿಲ್ಲ. ಮುಂದೆ ಹಾಕಿ ಕೊನೆಗೆ  "ವಯಸ್ಸಾಯ್ತು ಇನ್ನೇನು ಸಾಧನೆ" ಎಂದು ಕೊನೆಯುಸಿರೆಳೆದು ತನ್ನ ಜೀವನ ಹಾಳು ಮಾಡಲೂ ಹೋಗಲಿಲ್ಲ. 

ಹಾಗಾದರೆ "ತಾನು ಹುಟ್ಟಿದ ಕ್ಷಣದಿಂದ ಕಂಸನಿಗೆ ಹೆದುರಿಕೆ ಹುಟ್ಟಿಸಿದ, ಹತ್ತನೆಯದಿನದಿಂದ ಭೂಭಾರ ಹರಣ ಆರಂಭಿಸಿದ, ಕೃಷ್ಣ ಪರಂಧಾಮ‌ ಹೋಗುವವರೆಗೂ ಭೂಭಾರ ಹರಣ ನಡದೇ ಇತ್ತು. 

ಈ ಕಥೆಗಳನ್ನು ತಿಳಿಸಿ ಉದ್ಯೇಸ್ಯದ ಸ್ಪಷ್ಟತೆ ಮಕ್ಕಳಿಗೆ ಈಗಲೆ ತಿಳುಹಿಸಿಕೊಡಬೇಕು. ಹಾಗೆ ಅವರನ್ನು ಸಿದ್ಧಪಡಿಸಬೇಕು. ಕೇವಲ‌ ಕೃಷ್ಣ ಮಾತ್ರನು ಅಲ್ಲ. ಧೃವ ಪ್ರಲ್ಹಾದ ಮಧ್ವಾಚಾರ್ಯರು  ಶ್ರೀರಾಮ ನೂರಾರು ಕಥಾಪುರುಷರು ಸಿಗ್ತಾರೆ. ಅವರ ಕಥೆಗಳನ್ನು ಹೇಳಿ ಉದ್ಯೇಶ್ಯದ ಸ್ಪಷ್ಟ ಅರಿವು ಮೂಡಿಸಿ ಅವರನ್ನು ಸಾಧಕರನ್ನಾಗಿ ಸಿದ್ಧಪಡಿಸಬೇಕು. 

ಕೃಷ್ಣ ಆಟವಾಡಿದ, ಭೂಭಾರ ಹರಣ ಬಿಡಲಿಲ್ಲ. ಗುರುಗಳ ಸನಿಹ ಅಧ್ಯಯನ ಮಾಡಿದ ಭೂಭಾರ ಹರಣ ಬಿಡಲಿಲ್ಲ. ಮಥುರಾ ರಕ್ಷಣೆಗೆ ನಿಂತ,  ಭೂಭಾರ ಹರಣ ಬಿಡಲಿಲ್ಲ. ಮದುವೆಯಾದ ಭೂಭಾರ ಹರಣ ಬಿಡಲಿಲ್ಲ. ಮಕ್ಕಳನ್ನು ಪಡೆದ ಭೂಭಾರ ಹರಣ ಬಿಡಲಿಲ್ಲ. ಪಾಂಡವರ ಸಖ್ಯ ಬೆಳಿಸಿದ ಭೂಭಾರ ಹರಣ ಬಿಡಲಿಲ್ಲ. ಯಜ್ಙ ಯಾಗಗಳನ್ನೂ ಮಾಡಿದ ಭೂಭಾರ ಹರಣ ಬಿಡಲಿಲ್ಲ. ಕೊನೆಗೆ ಭೂಭಾರ ಹರಣ ಮಾಡ್ತಾನೆ ಪರಂಧಾಮ ಸೇರಿದ. ತನ್ನ ಉದ್ಯೇಶ್ಯ ಸಾಧಿಸಿ ತೋರಿಸಿದ. ಇದೇ ಇಂದಿನ ತಂದೆ ತಾಯಿಗಳಿಗೆ  ಚಿಣ್ಣರನ್ನು ಬೆಳಿಸುವ ಕಲೆ... 

ಇಂದಿನ ಚಿಣ್ಣರಿಗೆ ಉದ್ಯೇಶ್ಯ ಸ್ಪಷ್ಟ ಪಡಿಸದೆ ಧಾರ್ಮಿಕರನ್ನಾಗಿ ಮಾಡದಿದ್ದರೆ ಮುಂದೆ ಅವರಲ್ಲಿ ಧರ್ಮದ ವಾಸನೆಯೂ ಇರುವದಿಲ್ಲ. ಧಾಋಮಿಕರಾಗುವದಂತೂ ದೂರದ ಮಾತು. ಇಂದಿನ ಚಿಣ್ಣರು ಏನು ಮಾಡಲಿ. ಆದರೆ ಜೊತೆ ಜೊತೆಗೆ ಧರ್ಮಚರಣೆ, ಜ್ಙಾನಾರ್ಜನೆ, ಭಕ್ತಿ, ಪುಣ್ಯಸಂಪಾದನೆ, ಸಂಧ್ಯಾವಂದನೆ, ಜಪ, ದೇವರ ಪೂಜೆ, ಮೊದಲಾದ ಸಾಧನೆ ನಡೀತಾ ಇರಲಿ. ಸಾಧನೆಯ ದೇಹ. ಸಾಧಕನಾಗುವ ಉದ್ಯೇಶ್ಯ. ಉದ್ಯೇಶ್ಯ ಈಡೇರಿದಾಗ ಸಾಧನೆಯ ದೇಹ ಸಾರ್ಥಕ ಇದು *ಕೃಷ್ಣ ಜನ್ಮಾಷ್ಟಮಿಯ ಚಿಣ್ಣರಿಗೆ ಕೃಷ್ಣನ ಸಂದೇಶ* ಈ ಸಂದೇಶದ ಪಾಲನೆಯಲ್ಲಿ ತಂದೆ ತಾಯಿಗಳದೇ ಮುಖ್ಯ ಪಾಲು ಇದೆ. 

*ನನ್ನ ಎಲ್ಲ ಆತ್ಮೀಯರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭಾಷಯಗಳು...💐🌹🍁🌸*

*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*