*ಪ್ರಕೃತಿ ವಿಕೋಪದಲ್ಲಿ ನೊಂದವರಿಗೆ ನಮ್ಮ ಹಸ್ತ ಮುಂದಿರಲಿ.......*




*ಪ್ರಕೃತಿ ವಿಕೋಪದಲ್ಲಿ ನೊಂದವರಿಗೆ ನಮ್ಮ ಹಸ್ತ ಮುಂದಿರಲಿ.......*

ಈ ವಾರದಲ್ಲಿ ಪ್ರಕೃತಿ ವಿಕೋಪದ ಪ್ರವಾಹದಿಂದ ಅನೆಡಕ ಊರುಗಳ ಸಾವಿಸಾವಿರ ಜನರಿಗೆ ತುಂಬ ತೊಂದರೆ ಆಗಿದೆ. ನಮ್ಮ ಸಹಾಯ ಹಸ್ತ ಮುಂದಿರಲಿ. 

ಬರುವ ವಾರ ಪ್ರತಿ ಊರು ನಗರ ಪಟ್ಟಣ ಇವುಗಳಲ್ಲಿ  "ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರ ಆರಾಧಾನಾ ಸಂಭ್ರಮ" ವಿರುತ್ತದೆ. ಆ ಸಂಭ್ರಮದಲ್ಲಿ ನಾವೆಲ್ಲರೂ ಭಾಗವಹಿಸುವವರು ಆಗಿದ್ದೇವೆ. 

ಗುರುಸಾರ್ವಭೌಮರ ಆರಾಧನೆ "ರಾಯರನ್ನು ಪ್ರೀತಿಗೊಳಿಸಲೇ ಆಗಲಿ. ಆ ರೀತಿಯಲ್ಲಿ ವೈಭವದಿಂದ ಮಾಡೋಣ. ಈ ಬಾರಿ ಹೊಸಕ್ರಮದಲ್ಲಿ ಆಚರಿಸುವ ಹೊಸ ಹೆಜ್ಜೆ ಇಡೋಣ. 

*ಪೂರ್ಣಾಯುಃ -  ಪೂರ್ಣಸಂಪತ್ತಿಃ*

ಗುರುಸಾರ್ವಭೌಮರಾದ ರಾಯರ " ಶ್ರೀರಾಘವೇಂದ್ರ ಸ್ತೋತ್ರ"ದ ಜಪ ಪಾರಾಯಣ ಪ್ರಭಾವದಿಂದ ಭಕ್ತ ಸಂಪದ್ಭರಿತನೂ ಆಯುಷ್ಯ ಪೂರ್ಣನೂ ಆಗುವ. ಆಯುಷ್ಯದ ಸಾರ್ಥಕತೆ ಸಂಪತ್ಫೂರ್ಣತೆ ರಾಯರ ಅನುಗ್ರಹಗಳಲ್ಲಿ ಒಂದಾಗಿವೆ.

ಈ ನಿಟ್ಟಿನಲ್ಲಿ ಯಾರಿಗೆ ಸಂಪತ್ತಿನ ಕೊರತೆ ಇದೆ ಅವರನ್ನು ಸಂಪದ್ಭರಿತರನ್ಬಾಗಿ ಮಾಡಿದರೆ ರಾಯರಿಗೆ ತುಂಬ ಪ್ರೀತಿ. 

ಪ್ರಕೃತ ಪ್ರಕೃತಿ ವಿಕೋಪದ ಪ್ರಭಾವದಿಂದ ಮಹರಾಷ್ಟ್ರದ ಮುಂಬಯಿ ಸಾಂಗಲಿ ಕೊಲ್ಹಾಪುರ ಮೀರಜ ಮೊದಲು ಮಾಡಿ   ಅನೇಕ ಊರುಗಳಲ್ಲಿ ಹಾಗೂ ಕರ್ನಾಟಕದ ಅಥಣಿ ಗೋಕಾಕ್ ಬೆಳಗಾವ ಜಿಲ್ಲೆ, ಧಾರವಾಡ ಜಿಲ್ಲೆ,  ಲಿಂಗಸ್ಗೂರು ಕೊಪ್ಪರ ರಾಯಚೂರು ಜಿಲ್ಲೆ ಹೀಗೆ ನೂರಾರು ಊರುಗಳಲ್ಲಿ ತುಂಬ ಹಾನಿಯಾಗಿದೆ. ಅನೇಕ ರಾಯರ ಭಕ್ತರುಗಳು ಮನೆ ಮಠ ಸೂರು ಕಳೆದುಕೊಂಡಾಗಿದೆ. ಅತ್ಯಂತ ಬೇಸರದ ಹಾಗೂ ದುಃಖದ ಸಂಗತಿ. 

*ಇಂದು ರಾಯರನ್ನು ಪ್ರೀತಿಗೊಳಿಸುವ ಸದವಕಾಶ*

ರಾಯರ ಹಾಗೂ ಶ್ರೀಮದಾಚಾರ್ಯರ ಹಾಗೂ ಶ್ರೀಮನ್ನಾರಾಯಣನ  ಭಕ್ತರಾದ ಕೋಟಿ ಕೋಟಿ ಜನರು ಪ್ರಕೃತಿ ವಿಕೋಪದ ಪ್ರಭಾವದಿಂದ ತಮ್ಮ ಮನೆ ಮಠ ಹಣ ಹೊಲ ಬೆಳೆ ಮೊದಲಾದ ಸಂಪತ್ತನ್ನು  ಕಳೆದುಕೊಂಡಿದ್ದಾರೆ. ಅವರೆಲ್ಲರಿಗೂ ನಾವೆಲ್ಲರೂ ಆಶ್ರಯ ಹಸ್ತವನ್ನು ಚಾಚಿಸಲೇಬೇಕು. 

ಆ ಎಲ್ಲ ರಾಯರ ಭಕ್ತರಿಗೆ ನಮ್ಮಿಂದಾದ *ಧನ - ಆಹಾರ- ಧಾನ್ಯ - ಬಟ್ಟೆಬರೆಗಳು - ಬೆಡ್ ಶೀಟ್ ಮೊದಲಾದವುಗಳು - ಔಷಧಿಗಳು ಹೀಗೆ ಎನೆಲ್ಲ ಸಾಧ್ಯವಿದೆ* ಅದೆಲ್ಲವನ್ನೂ ಒದಗಿಸಿಕೊಡೋಣ ದಾನಮಾಡೋಣ. ನಮ್ಮವರಿಗೆ ಪ್ರೇರಿಸೋಣ. 

ಆ ಎಲ್ಲ ರಾಯರಭಕ್ತರು ಯಾವೆಲ್ಲ ಸಂಪತ್ತನ್ನು ಕಳೆದುಕೊಂಡಿದ್ದಾರೆ ಆ ಎಲ್ಲ ಸಂಪತ್ತನ್ನು ನಮ್ಮ ಮುಖಾಂತರ ಒದಗಿಸಿ ಕೋಡೋಣ.  *ಪೂರ್ಣ ಸಂಪತ್ತಿಃ* ಪೂರ್ಣ ಸಂಪತ್ತುಗಳುಳ್ಳವರನ್ನಾಗಿ ಮಾಡೋಣ. ಹೀಗೆ ಕಷ್ಟದಲ್ಲಿ ಅಪತ್ತಿನಲ್ಲಿರುವವರಿಗೆ ಮಾಡುವ ಪ್ರತೀ  ಸಹಾಯವೂ ಶ್ರೀಗುರುಸಾರ್ವಭೌಮರ ಪ್ರೀತಿಗೆ ಕಾರಣವಾಗಿದೆ....

*ನಮ್ಮೆಲ್ಲರ ಆಪತ್ತಿಗೆ ರಾಯರು ಇದ್ದಾರೆ...*

ನಮ್ಮೆಲ್ಲರ ಆಪತ್ತಿಗೆ ಅವಿಜ್ಙಾತ ಸಖರಾಗಿ ರಾಯರು ಇದ್ದಾರೆ. ರಾಯರ ಭಕ್ತರಿಗೆ ಇಂದು ಆಪತ್ತು ಬಂದಾಗ ನಾವಿಲ್ಲದಿದ್ದರೆ ಮುಂದೆ ನಮಗೆ ಆಪತ್ತು ಬಂದಾಗ ರಾಯರ ಮುಂದೆ ಮುಖ ತೋರಿಸಲು ನಮಗೆ ಆಗದಿರಬಹುದು. ಹಾಗಾಗಿ ಆಪತ್ತಿನಲ್ಲಿ ಇರುವವರಿಗೆ  ನಮ್ಮ ಹಸ್ತ ಮುಂದಿರಲಿ. 

ಅನೇಕ ಮಠಮಾನ್ಯಗಳು, ಯತಿಗಳು, ಸಮಾಜದ ಮುಖಂಡರು, ಗಣ್ಯವ್ಯಕ್ತಿಗಳು, ಇಂದಿನ ಯುವಕ ಉತ್ಸಾಹೀ ಯುವಕರು ಹೀಗೆ ಎಲ್ಲರೂ ನಮ್ಮವರಿಗೆ  ಮಾಡುವ ಸಹಾಯವೇ ಶ್ರೀಹರಿಯ ಸೇವೆ ಎಂದು  ಈ ಮಹತ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅವರಿಗೆ ನಮ್ಮ ಅಲ್ಪ ಕಾಣಿಕೆ ಇದ್ದೇ ಇರಲಿ. ಆ ಸೇವೆಯಿಂದ ಸಮಾಜ ಗುರು ದೇವತಾ ಶ್ರೀಹರಿ ಎಲ್ಲರ ಅನುಗ್ರಹ ನಮ್ಮದಾಗಿ ಬರಲಿ. 

*✍🏽✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*