*ದೇವ ತನ್ನ ಇರುವಿನ ಅರಿವು ಆಗಾಗ ಮೂಡಿಸುತ್ತಾ ಇರುತ್ತಾನೆ......*
*ದೇವ ತನ್ನ ಇರುವಿನ ಅರಿವು ಆಗಾಗ ಮೂಡಿಸುತ್ತಾ ಇರುತ್ತಾನೆ......*
ಸೃಷ್ಟಿಯಿಂದ ಆರಂಭಿಸಿ ಮುಕ್ತಿಯ ವರೆಗೆ ಎಲ್ಲವೂ ಈಶನ ಅಧೀನ. ಈಶನಿಲ್ಲದೆ ಒಂದು ಕಾರ್ಯವೂ ಆಗದು. ಕಣ ಕಣಗಳಲ್ಲಿ ಪ್ರೇರಕ. ಜೀವವೀಜರ ಕರ್ಮಪ್ರೇರಕ. ಕರ್ಮ ಸಾಕ್ಷಿ. ಅದಕ್ಕನುಗುಣವೇ ಸಕಲ ಕಾರ್ಯ. ಅಂತೂ ದೇವನಿಲ್ಲದೇ ಒಂದು ಪದಾರ್ಥದ ಅಸ್ತಿತ್ವವೂ ಇರದು.
*ತತ್ತತ್ ಶಕ್ತೀ ಪ್ರಬೋಧಯನ್....*
ಸೂರ್ಯ ಪರ್ಜನ್ಯ ವರುಣ ಇಂದ್ರ ಮೊದಲಾದ ಎಲ್ಲ ದೇವತೆಗಳಿಂದ ಆರಂಭಿಸಿ ಪಂಚ ಮಹಾಭೂತ ಪಂಚಜ್ಙಾನೇಂದ್ರಿಯ ಪ್ರಕೃತಿ ಎಲ್ಲದರ ಶಕ್ತಿ ಪ್ರೇರಕ ವಿಷ್ಣುವೇ. ವಿಷ್ಣುವಿನ ನಿತರಾಂ ಅಧೀನ ಎಲ್ಲವೂ...
*ಏಕ ಏವ ಮಹಾಶಕ್ತಿಃ ಕುರುತೇ ಸರ್ವಮಂಜಸಾ...*
ಪ್ರಕೃತಿ ಮಹತ್ ಅಹಂಕಾರ ಮನಸ್ಸು ಇವುಗಳಿಂದ ಆರಂಭಿಸಿ ಎಲ್ಲ ಪದಾರ್ಥಗಳ ಶಕ್ತಿ ದೇವರ ಶಕ್ತಿಯ ಪ್ರತಿಬಿಂಬವೇ. ದೇವರಲ್ಲಿಯೇ ಎಲ್ಲ ಶಕ್ತಿಗಳೂ ಅಡಗಿವೆ. ಅಂತೆಯೇ ಅವನೊಬ್ಬನೇ ನಿಜ ಶಕ್ತಿಮಾನ್.
*ಇಂದಿನ ದುರವಸ್ಥೇ.....*
ಎಲ್ಲ ಪದಾರ್ಥಗಳನ್ನು ತನ್ಮೊಶದಲ್ಲಿ ಇಟ್ಟುಕೊಂಡು, ತಾನೇ ಸಕಲ ಪದಾರ್ಥಹಳನ್ಮೂ ಪ್ರೇರಿಸಿ ಪ್ರಚೋದಿಸುವ ದೇವನನ್ನು ಮರೆತಿದ್ದೇವೆ. ಅಂತೆಯೇ ನಮ್ಮ ಅತಿಘೋರ ದುರವಸ್ಥೆ ಆಗಾಗ ತಪ್ಪದೇ ಬಂದೊದಗುತ್ತದೆ.
*ಪ್ರಕೃತಿ ವಿಕೋಪ....*
ನಮ್ಮ ಸಮೃದ್ಧಿಯ ಅಭಿವೃದ್ಧಿಯ ಸಮಾಜಕ್ಕೆ "ಪ್ರತಿ ಅಭಿವೃದ್ಧಿಯೂ ನಾನೇ ಮಾಡುತ್ತೇನೆ" ಎಂಬ ಭಾವ ಘಟಗಟ್ಟಿಯಾಗಿ ತಳವೂರಿದ ಕಾರಣ" "ಧರ್ಮ ಬಿಟ್ಟ ಕಾರಣ" "ಕಾಲಕಾಲದ ಸಂಧ್ಯೆ ಬಿಟ್ಟ ಕಾರಣ" "ಗಾಯತ್ರೀ ಮೊದಲಾದ ಜಪದಿಂದ ದೂರವಿರುವ ಕಾರಣ" "ದೇವರ ಪೂಜೆ ಬಿಟ್ಟ ಕಾರಣ" ಇಂದು ಈಶನಿಂದ ನಿಯಮಿತವಾದ ಪ್ರಕೃತಿ ಆಗಾಗ ತುಂಬ ಕೋಪಿಸಿಕೊಳ್ಳುತ್ತಾ ಇರುತ್ತಾಳೆ. *ಪ್ರಕೃತಿ ಕೋಪಿಸಿಕೊಳ್ಳುವದು ಎಂದರೆ ದೇವರ ಇರುವಿನ ನೆನಪು ಎಂದೇ ಅರ್ಥ.*
ವೃಷ್ಟಿಯೋ ಸುವೃಷ್ಟಿಯೋ ಅತಿವೃಷ್ಟಿಯೋ ಅನಾವೃಷ್ಟಿಯೋ ಏನು ಆದರೂ ದೇವರಿಂದಲೇ. ಈ ತತ್ವ ಮರೆಯುವ ಹಾಗೆ ಇಲ್ಲವೇ ಇಲ್ಲ. ಮರೆತರೆ ಅನರ್ಥ. ನೆನಪಿಟ್ಟುಕೊಂಡು ಚಿಂತಿಸಿದರೆ ಕಾಲಕಾಲಕ್ಕೆ ಸುಭಿಕ್ಷೆ.
ವೃಷ್ಟಿ ಸುವೃಷ್ಟಿ ಗಳು ಕಾಲಕಾಕ್ಕೆ ಆಗಿ, ಅನಾವೃಷ್ಟಿ ಅತಿವೃಷ್ಟಿ ಆಗದೆ ಇರಲು ಬೇಕು ಈಶನ ಚಿಂತನೆ.
ಇಂದು ಮಹಾರಾಷ್ಟ್ರ, ಬಿಹಾರ, ಕರ್ನಾಟಕ ಅಸ್ಸಾಂ ಈ ಎಲ್ಲ ಪ್ರಾಂತಗಳಲ್ಲಿ ಅತಿವೃಷ್ಟಿ. ಕರ್ನಾಟಕ ತಮಿಳುಮಾಡು ಈ ಎಲ್ಲ ಪ್ರಾಂತಗಳಲ್ಲಿ ಅನಾವೃಷ್ಟಿ. ವೃಷ್ಟಿ ಸುವೃಷ್ಟಿಗಳು ಇಲ್ಲವಾಗಿವೆ.
*ಈಶನ ಅರಿವು ಇರಲಿ....*
ಕಾಲಕಾಕ್ಕೆ ವೃಷ್ಟಿ ಸುವೃಷ್ಟಿಗಳು ಆಗುವದಕ್ಕಾಗಿ, ಅನಾವೃಷ್ಟಿ ಅತಿವೃಷ್ಟಿಗಳು ಆಗದಿರುವದಕ್ಕಾಗಿ ಈಶನ ನೆನಪು ಸದಾ ನೆನಿಸಿಕೊಳ್ಳುತ್ತಾ, ಈ ಲೇಖನ ಓದಿದ ಎಲ್ಲರಲ್ಲಿಯೂ ಕಳಕಳಿಯ ವಿಜ್ಙಾಪನೆ ಮಾಡುವೆ. ನೀವೂ ನಿಮ್ಮವರಿಗೆ ವಿಜ್ಙಾಪಿಸಿ. ನಿತ್ಯವೂ *ಎಲ್ಲ ಪುರುಷರೂ "ಒಂದು ಬಾರಿ ವಿಷ್ಣು ಸಹಸ್ರನಾಮ. ಮೂರು ಸಲ ವೆಂಕಟೇಶ ಸ್ತೋತ್ರ. ದುರ್ಗಾ ಸ್ತುತಿ. ಸುಂದರಕಾಂಡ. ರಾಯರಸ್ತೋತ್ರ- ಎಲ್ಲ ಸ್ತ್ರೀಯರೂ " ನರಸಿಂಹ ಸುಳಾದಿ ದುರ್ಗಾಸುಳಾದಿ ಹಾಗೂ ಮುಖ್ಯಪ್ರಾಣ ಸುಳಾದಿ"* ಇವುಗಳನ್ನು ತಪ್ಪದೇ ಪಾರಾಯಣ ಮಾಡಿ. ಜಗತ್ತಿಗೆ ಕ್ಷೇಮವಾಗಲಿ. ಕಾಲಕಾಲಕ್ಕೆ ಸುವೃಷ್ಟಿ ಆಗಲಿ. ಈಶನ ಅಡದಾವರೆಗಳಲ್ಲಿ ಅನಂತ ವಂದನೆಗಳು. ಕೋಟಿ ಕೋಟಿ ಪ್ರಣಾಮಗಳು.
*✍🏽✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments