*ವರದೋ ವಾಯುವಾಹನಃ*
- *ವರದೋ ವಾಯುವಾಹನಃ*
*ವಾಯುವಾಹನನು ಆಗಿಯೇ ವರವ ಕೊಡುವ ಓ ವರದನೇ...!!! ನಿನಗೆ ಎನ್ನ ಅನಂತ ವಂದನೆಗಳು*
ಬೇಡುವವರು ನಾವು. ಬೇಡಿದವರಿಗೆ ನೀಡುವ ದೊರೆ ವರದ ನಾಮಕ ಶ್ರೀಹರಿ. ಬಳಿ ಬಂದು ಬೇಡಿದವರನ್ನು ಎಂದಿಗೂ ನಿರಾಸೆ ಮಾಡದವನು ಆದ ಕಾರಣ ಶ್ರೀಹರಿಯು ನಿಜವಾಗಿಯೂ ವರದನೇ. ಅವನೇ ಬ್ರಹ್ಮಕರಾರ್ಚಿತ ಅತ್ತೀ ವರದ.
*ಬೇಡುವವರು ಮೂರುತರಹದವರು.....*
೧) ರುದ್ರಾದಿ ದೇವತೆಗಳು... ೨) ನಮ್ಮಾದಿ ಮಾನವರುಗಳು.... ೩) ಕಲ್ಯಾದಿ ದೈತ್ಯರು...
ಶ್ರೀಹರಿಯ ಬಳಿ ಬೇಡಲು ಬಂದ ಈ ಮೂರೂ ತರಹದ ಜನರೂ ಎಂದಿಗೂ ನಿರಾಶರಾಗರು. ಹಾಗೆ ಸಮೃದ್ಧವಾಗಿಯೇ ಈಯುವವನು. ಆದ್ದರಿಂದಲೆ ನಮ್ಮ ದೊರೆ ಶ್ರೀಹರಿ *ವರದ* ಎಂದು ಕರೆಸಿಕೊಳ್ಳುವವ.
ಭಕ್ತಿಯನ್ನೇ ಮಾಡುವವರು ರುದ್ರಾದಿಗಳು .. ವ್ಯವಹಾರ ಮಾಡುವವರು ಮಾನವರು... ದ್ವೇಶವನ್ಬೇ ಮಾಡುವವರು ದೈತ್ಯರು ಈ ಮೂರೂ ಜನರಿಗೂ ವರಕೊಡುವವನು ಕೊಡುವವನು ದೇವರೊಬ್ವನೆ. ಹಾಗಾದರೆ ಭಕ್ತಿ ವ್ಯವಹಾರ ದ್ವೇಶ ಈ ಮೂರುಗಳಿಗೆ ವ್ಯತ್ಯಾಸವೇನು ಬಂತು... ??
ವಿಷ್ಣು ಸಹಸ್ರನಾಮದಲ್ಲಿ ಕೇವಲ ಕೇವಲ *ವರದಃ* ಎಂದು ಕೊಂಡಾಡದೇ *ವರದೊ ವಾಯುವಾಹನಃ* ಎಂದು ಸೇರಿಸಿಯೇ ಕೊಂಡಾಡಿದ್ದಾರೆ. ಈ ತಿಳುವಳಿಕೆಯೇ ಎಲ್ಲರಲ್ಲಿಯೂ ವ್ಯತ್ಯಾಸವನ್ನು ತಂದುಕೊಡುತ್ತದೆ.
ಮೇಲೇ ತಿಳಿದ ಮೂರೂ ಜನರಿಗೂ ಕೊಡುವದು ಸಮನಾಗಿದ್ದರೂ, ಕೊಟ್ಡ ದೇವ ಒಬ್ಬನೇ ಆಗಿದ್ದರೂ ಕೊಟ್ಟದ್ದರ ಫಲವೇನಿದೆ ವಿಷಮವೇ ಆಗಿದೆ.
ದ್ವೇಶ ಮಾಡಿದ ಕಲ್ಯಾದಿಗಳಿಗೆ ಇಂದು ಬೇಡಿದ್ದು ಬೇಡದೇ ಇರುವದು ಎಲ್ಲವೂ ಸಿಕ್ಕರೂ ಕೊನೆಗೆ ಸಿಗುವದು ಮಹಾ ದುಃಖವೇ..... ಯಾಕೆಂದರೆ ವಾಯುದೇವರನ್ನು ಪರಿಪೂರ್ಣವಾಗಿ ಬಿಟ್ಟೇ ದೇವರಡಿ ಹೋಗಿ ಬೇಡಿರುತ್ತಾರೆ...
ಭಕ್ತಿಯೂ ಇದೆ ವ್ಯವಹಾರವೂ ಸೇರಿ ಹೋಗಿದೆ ಅಂತಹ ಯಾರು ನಮ್ಮಾದಿ ಮಾನವರು ಇರುವವರೋ ಅವರಿಗೂ *ವರದ* ವರ ಕೊಡುವವನೇ... ಆದರೆ ಸ್ಥಾಯಿ ಆದದ್ದು ಸಿಗದು. ಕೆಲೊಮ್ಮೆ ಭೋಗಕ್ಕೆ ಅನುವು ಆಗಿರುತ್ತದೆ ಮತ್ತೆ ಕೆಲೊಮ್ಮೆ ಪ್ರತಿಕೂಲವೂ ಆಗಿರುತ್ತದೆ. ಅಥವಾ ಭೋಗ ಮಾಡುವ ವಯಸ್ಸಿಗೆ ಸಿಕ್ಕಿರುವದಿಲ್ಲ, ಸಿಕ್ಕಾಗ ಭೋಗ ಮಾಡುವ ಶಕ್ತಿ ಇರುವದಿಲ್ಲ ಹೀಗೆ ವ್ಯತ್ಯಸ್ತವಾದರೂ ಆಗಿರುತ್ತದೆ. ಹೀಗೆಕೆ ಎಂದರೆ ಕೆಲೊಮ್ಮೆ ವಾಯುದೇವರು ನೆನಪಾಗಿರುತ್ತಾರೆ... ಮತ್ತೆ ಕೆಲೊಮ್ಮೆ ವಾಯುದೇವರು ನೆನಪೇ ಆಗಿರುವದಿಲ್ಲ. ಹಾಗಾಗಿಯೆ ಈತರಹದ ಅಸ್ತವ್ಯಸ್ತ ಫಲ ನಮ್ಮ ಪಾಲಿಗೆ....
ರುದ್ರಾದಿಗಳು ಹಾಗಲ್ಲ ಎಂದಿಗೂ ಯಾವ ಕ್ಷಣಕ್ಕೂ ಏನು ಪಡೆಯಬೇಕಾದರೂ ವಾಯುದೇವರ ಮುಕಾಂತರವೇ ಪಡೆಯುತ್ತಾರೆ ಆದ್ದರಿಂದಲೇ ಅವರಿಗೆ ಕ್ಷಣಿಕಾಗಿರುವದೋ ಅಥವಾ ನಾಶವಾಗುವಂತಹದ್ದೋ ಸಿಗುವದೇ ಇಲ್ಲ. ದೇವರೂ ಕೊಡನು. ಅವರು ಪಡೆದದ್ದೆಲ್ಲವೂ ಅನಂತ ಆನಂದರೂಪ ಮೋಕ್ಷಕ್ಕಾಗಿಯೆ. ಅದನ್ನೇ ಪಡೆಯುತ್ತಾರೆಯೂ ಸಹ......
ಇಂದು ಮೋಕ್ಷಪ್ರದ ಕಂಚೀವರದರಾಜರ ದಿವ್ಯಸಾನ್ನಿಧ್ಯದಲ್ಲಿ ಪ್ರಾರ್ಥಿಸುವೇ ದೇವತೆಗಳ ಹಾಗೇ ಭಕ್ತಿಕೊಟ್ಟು ವಾಯುದೇವರ ಮುಖಾಂತರವೇ ಪೂಜೆಗೊಳ್ಳು. ಅವರ ಮುಖಾಂತರವೇ ಅನಂತ ಶಾಶ್ವತ ಆನಂದಕ್ಕೇ ಎಣೆಮಾಡು ಎಂದು ಪ್ರಾರ್ಥಿಸುವೆ.......
*✍🏽✍🏽✍🏽 ನ್ಯಾಸ*
ಗೋಪಾಲ ದಾಸ, ವಿಜಯಾಶರಮಮ, ಸಿರವಾರ.
Comments
It is pretty worth enough for me. In my opinion, if all web owners and bloggers made good content as
you did, the web will be much more useful than ever before.
It is perfect time to make some plans for the future and it’s
time to be happy. I have read this post and if I could
I wish to suggest you few interesting things or advice.
Perhaps you could write next articles referring to this article.
I desire to read more things about it! It is the best time to make some plans for the future and it’s time to be happy.
I have read this post and if I could I desire to suggest you
some interesting things or tips. Maybe you can write next articles referring to this article.
I wish to read more things about it! http://cspan.org