*ಹಾಲಿನ ಅಂಗಡಿಯಲ್ಲಿ ಹೆಂಡವಿಟ್ಟಂತೆ - "ಗಣಪತಿ" ಉತ್ಸವ ಆಗಲೇಬಾರದು....*
*ಹಾಲಿನ ಅಂಗಡಿಯಲ್ಲಿ ಹೆಂಡವಿಟ್ಟಂತೆ - "ಗಣಪತಿ" ಉತ್ಸವ ಆಗಲೇಬಾರದು....*
*ಗಣಪತಿ ದೇವತೆ ಎನ್ನುವದನ್ನು ನಾವೆಲ್ಲಿ ಮರೆತಿದ್ದೇವೆ... ??*
ಗಣಪತಿ ದೇವತೆ ಎನ್ನುವದನ್ನು ನಾವು ಮರೆತಿಲ್ಲ ನಿಜ. ನಮ್ಮ ವೃತ್ತಿ ಮಾತ್ರ ಮರೆತಂತೆ ತೋರಿಸುತ್ತದೆ. ದೇವತೆ ಎಂಬ ಭಾವ ನೆನಪಿದ್ದರೆ ದೇವತೆಗೆ ಅವಮಾನವಾಗುವ ಯಾವ ಕ್ರಿಯೆಯೂ ಆಗುತ್ತಿರಲಿಲ್ಲ.
*ಹಾಲಿನ ಅಂಗಡಿಯಲ್ಲಿ ಹೆಂಡವಿಟ್ಟಂತೆ - "ಗಣಪತಿ" ಉತ್ಸವ ಆಗಲೇಬಾರದು....*
ಹಾಲಿನ ಅಂಗಡಿಯಲ್ಲಿ ಮೊಸರು ಇಟ್ಟರೆ ಶೋಭೆ. ಶ್ರೀಖಂಡ ಬಾಸುಂದಿ ಫೇಡೆ ಮೊದಲಾದ ಹಾಲಿನ ಪದಾರ್ಥಗಳನ್ನೇ ಇಟ್ಟರೆ ಆ ಅಂಗಡಿಗೂ ಯಜಮಾನನಿಗೂ ಕೀರ್ತಿ ಜೊತೆಗೆ ತೃಪ್ತಿ. ಜೊತೆಗೆ ಹಾಲಿನ ಅಂಗಡಿಯಲ್ಲಿ "ಹೆಂಡವನ್ನೂ ಇಟ್ಟರೆ" ಹಾಲಿನ ಅಂಗಡಿಗೇ ಅವಮಾನ. ಹಾಗೆಯೆ ಇಂದು ಮಹಾನ್ ದೊಡ್ಡ ದೇವತೆಯಾದ, ವಿಷ್ಣುಪ್ರಿಯನೂ ಆದ, ನಮ್ಮೆಲ್ಲರ ನೆಚ್ಚಿನ ದೊರೆಯಾದ ಗಣಪತಿಯ ಎದರು ವೇದಮಂತ್ರಗಳನ್ನು ಅಂದರೆ ಮಹಾ ತೃಪ್ತಿ. ಪುರಂದರ ವಿಜಯ ಕನಕದಾಸರುಗಳು - ಮೀರಾಬಾಯಿ - ಕಬೀರದಾಸ - ಅನ್ನಮಯ್ಯ - ಮುಂತಾದ ಭಕ್ತ ದಾಸರುಗಳು ಹಾಡುಗಳನ್ನು ಹಾಡಿ ಕುಣಿದು ಆರಾಧಿಸಿದರೆ ಗಣಪತಿ ದೇವನಿಗೆ ತೃಪ್ತಿ. ಅದೆಲ್ಲವನ್ನೂ ಬಿಟ್ಟು *ಸಿನೆಮಾ ಹಾಡುಗಳನ್ನು ಹಾಡುವದೇನಿದೆ - ಹೆಂಡ ಕುಡಿದು ಕುಣಿಯುವದೇನಿದೆ *ಗಣಪತಿ ದೇವನಿಗೆ ಮಾಡುವ ದೊಡ್ಡ ಅವಮಾನವೇ ಸರಿ.*
*ಪೂಜಿಸುವ ಭರದಲ್ಲಿ ಅವಮಾನ ಸೂಕ್ತವಲ್ಲ*
ವೇದೋಕ್ತ ಸ್ಮೃತ್ಯುಕ್ತ ಕ್ರಮದಲ್ಲಿ ಪೂಜಿಸೋಣ. ಪೂಜೆ ಮಾಡುವಾಗ ಶುದ್ಧವಸ್ತ್ರಗಳನ್ನು ಉಡೋಣ. ಆಫೀಸಿಗೆ ಹೋಗುವಾಗ ಅಲ್ಲಿಯ ನೀತಿ ನಿಯಮಗಳನ್ನು ಹೇಗೆ ಪಾಲಿಸುತ್ತೇವೆ ಹಾಗೆಯೇ ಗಣಪತಿಯ ಪೂಜೆಯ ಪ್ರಸಂಗದಲ್ಲಿ ಪೂಜೆಗೋಸ್ಕರವೇ ಇರುವ ನೀತಿ ನಿಯಮಗಳನ್ನು ಪಾಲಿಸೋಣ. "ಪೂಜೆ ಸಂತುಷ್ಟಿಕೋಸ್ಕರವೇ ಹೊರತು, ನಿಗ್ರಹಕ್ಕೋಸ್ಕರ" ಅಂತಾಗುವದು ಸರ್ವಥಾ ಬೇಡ.
ನಾವು ಮಾಡುವ ಪೂಜೆ ಸರಿಯಾದ ಕ್ರಮದಲ್ಲಿ ಆಗಬಾರದು ಎಂದು ಭಾವಿಸಿಯೇ , ವ್ಯವಸ್ಥಿತವಾಗಿ ಮಾಡಿದ ಹುನ್ನಾರ *ಕಂಡದ್ದು ಕುಡಿದು ತಿಂದು ಕುಣಿದು ಮಾಡುವ ಗಣಪತಿ ಪೂಜೆ* ಹಾಗಾಗಲೇಬಾರದು. ಈ ಉತ್ಸವ ಪರಿಶುದ್ಧಕ್ರಮದಲ್ಲಿ ಆಗುವಂತೆ ಇಂದಿನ ಹಿಂದೂ ಯುವಕರು ಗಮನ ಕೊಡಲೇಬೇಕಾದ ಅಂಶ. ಆ ಎಲ್ಲ ಯುವಕರಿಂದ ಶುದ್ಧರೀತಿಯಲ್ಲಿ ಪೂಜೆ ಆಗಲೇಬೆಕು.
ಊರು ಬೀದಿ ಕೆರೆ ಇವುಗಳಲ್ಲಿ ವೈಭವದಿಂದ ಆಗುವ, ಗಣಪತಿ ದೇವನ ಪೂಜೆಯನ್ನು ಮಾಡುವ ಪ್ರತೀ ಯುವಕರಿಗೂ ಈ ಸಂದೇಶ ಮುಟ್ಟುವಂತಾಗಲಿ. *ಗಣಪತಿ ಪೂಜೆ ಬಿಟ್ಟರೆ ತಪ್ಪಿಲ್ಲ ಅವಮಾನ ಆದರೆ ಅನರ್ಥವಂತೂ ಇದ್ದೇ ಇದೆ.* ಇದು ಲೆಖಕನ ಕಳಕಳಿಯ ವಿಚಾರ. ಪೂಜಕನಾದ ಯುವಕನ ರುಚಿಗೆ ಮುಂದಿನ ವಿಚಾರ......
*✍🏽ನ್ಯಾಸ...*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.
Comments