*ದಾರಿಯಲ್ಲಿ ಸಿಗುವಂತಹದ್ದು ಅಲ್ಲ ಗೆಳೆತನ ....*

*ದಾರಿಯಲ್ಲಿ ಸಿಗುವಂತಹದ್ದು ಅಲ್ಲ ಗೆಳೆತನ ....*

ಅತ್ಯಂತ ಅಪರೂಪದ, ಸಕಾರಾತ್ಮಕಶಕ್ತಿ ಬೆಳೆಸುವ, ಉತ್ಸಾಹಭರಿತನನ್ನಾಗಿಸುವ, ಆಪತ್ತಿಗೊದಗುವ, ಹತಾಶೆಯಲ್ಲಿ ಸ್ಪೂರ್ತಿಯನ್ನೊದಗಿಸುವ, ಸಮಾಧಾನದ ಅನುಬಂಧವನ್ನುಂಟು ಮಾಡುವ,  ಮಾರ್ಕೆಟ್ ಅಲ್ಲಿ ಸಿಗದ,  ಹಣತೆತ್ತರೂ ದೊರೆಯದ, ವರ್ಷ ವರ್ಷ ಜೊತೆಗೆ ಕಳೆದರೂ ಬರದ , ಆಸ್ತಿ ಅಂತಸ್ತುಗಳಿಂದ ದೂರಾದ ಪದಾರ್ಥ ವೆಂದರೆ ಅದು ಕೇವಲ ಗೆಳೆತನ. 

*ಗೆಳೆತನಕ್ಕೆ ಮೂಲ ಯಾವುದು.. ??*

ಸರ್ವ ಸಮರ್ಪಣಾಭಾವ ಪೂರ್ಣ ಭರವಸೆಯೇ ಗೆಳೆತನದ ಮೂಲ. ಗೆಳೆತನ  ಚಿಗರೊಡಿಯುವದು, ಅಭಿವೃದ್ಧಿಯಾಗುವದು ಕೇವಲ  ಸಮರ್ಪಣೆ ಇಂದ ಮಾತ್ರ. ಸಕಾರಾತ್ಮಕ ಯೋಚನೆಗಳಿಂದಲೇ ಬೆಳಿಯುವದು. 

*ಪ್ರೀತಿಯೂ ಒಂದು ಗೆಳೆತನಕ್ಕೆ ಕಾರಣ....*

 ಆಕರ್ಷಣೆಯಿಂದ ಉಂಟಾದ ಪ್ರೀತಿ , ಆಕರ್ಷಣೆ ಹೋಯಿತು ಎಂದಾದರೆ ಪ್ರೀತಿ ಮೂಲೆಗುಂಪಾಗುತ್ತೆ ಅಲ್ಲಿ ಗೆಳತನ ಕಷ್ಟ. ಈ ಪ್ರೀತಿ ಸಮರ್ಪಣಾ ಮೂಲಕವಾಗಿದ್ದರೆ ಮಾತ್ರ ದೃಢವಾಗಿ ಬೇರೂರಿ ಶಾಶ್ವತವಾಗಿ ನಿಲ್ಲತ್ತದೆ.  ಆದ್ದರಿಂದ ಗೆಳೆತನಕ್ಕೆ ನಿಷ್ಕಲ್ಮಷ ಪ್ರೀತಿಯೂ ಒಂದು ಮೂಲವೇ. 

*ಯಾರಲ್ಲಿ ಸಮರ್ಪಣಾಭಾವ ಉಚಿತ ....*


ಸಮರ್ಪಣಾಭಾವ ದೇವರಿಂದ ಮೊದಲು ಮಾಡಿ ತನ್ನ ವರೆಗೆ ಇರಲೇಬಾಕಾಗಿ ಇರುವಂತಹದ್ದು  ಸಮರ್ಪಣಾಭಾವ. "ಎಷ್ಟು ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ ಅಷ್ಟು ದೃಢವಾಗುತ್ತದೆ ಗೆಳೆತನ."

 ನಾನು ಇತರರಿಗಾಗಿ ಎಷ್ಟು "ವಾಕ್ ಮನ ಇಂದ್ರಿಯಗಳನ್ನು ಸಮರ್ಪಿಸುತ್ತೇನೆ ಅದೇ ಪ್ರಮಾಣದಲ್ಲಿ ಇತರರು ನನಗೆ ಸಮರ್ಪಿಸಿದ್ದರೆ ದೃಢವಾದ ಗೆಳೆತನ ಉಳಿಯುತ್ತದೆ." ಇದಕ್ಕೆ ವಿಪರೀತವಾದಲ್ಲಿ ಎಷ್ಟೇ ದೃಢವಾಗಿದ್ದರೂ ಶಿಥಿಲವಾಗುತ್ತದೆ.

ಸೃಷ್ಟ್ಯಾದಿ ಸರ್ವವನ್ನೂ ಮಾಡುವ ಸಾಮರ್ಥ್ಯವಿರುವ, ಕೇವಲ ನನಗಾಗಿ ಒಂದುರೂಪವನ್ನು ತೆಗೆದುಕೊಂಡು, ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿ, ಅನಾದಿ ಇಂದ ನನ್ನೊಟ್ಟಿಗೆ ಇದ್ದು, ತನ್ನನ್ನು ನನಗೆ ಪರಿಪೂರ್ಣ ಸಮರ್ಪಣೆ ಮಾಡಿಕೊಂಡ  ನಿಜವಾದ ಮಹಾ ಗೆಳಯ "ಶ್ರೀಹರಿ ಪ್ರಾಜ್ಙ" ಎಂಬ ಭಗವಂತನ  ನನಗಾಗಿಯೇ ಮೀಸಲು ಇಟ್ಟ ನಾರಾಯಣನ ರೂಪ. ಆದರೆ ನಾ ಸಮಯ ಮೊದಲು ಮಾಡಿ ಯಾವದನ್ನೂ ಆ ಗೆಳೆಯನಿಗೆ ಸಮರ್ಪಿಸಿಲ್ಲ. ಅಂತೆಯೇ ದಿನಕಳೆದ ಹಾಗೆ ನನ್ನ ಶ್ರೀಹರಿಯ ಗೆಳೆತನದ ಗೋಪುರ ಕುಸಿತಾ ಹೋಗ್ತಾ ಇದೆ. ಶಿಥಿಲವಾಗ್ತಾ ಇದೆ. 

ನನಗೆ ನಾನು ಮಹಾ ಗೆಳೆಯ. ಆದರೆ ಈ ಗೆಳೆತನ ಉಳಿಸಿಕೊಳ್ಳಲು ನಾನು ನನಗಾಗಿ ಅತ್ಯಲ್ಪವೂ ಸಮರ್ಪಣಾಭಾವದಿಂದ ತೊಡಗಿಲ್ಲ. ನನಗಾಗಿ ನನ್ನ ದೇಹ ಇಂದ್ರಿಯ ಮನಸ್ಸುಗಳನ್ನು ಸಮರ್ಪಿಸಿಕೊಂಡಿಲ್ಲ. "ನನ್ನ ಹಿತ ಬಯಸುವ ನಾನೆ ನನ್ನ ಶತ್ರು ಸ್ಥಾನದಲ್ಲಿ ಇದ್ದೇನೆ. ನನ್ನ ಹಿತ ನನಗೆ ತಳಿಯದಾಗಿದೆ" ಹೀಗಾಗಿ ನನ್ನ ಗೆಳೆತನವನ್ನೂ ಕಳೆದು ಕೊಂಡಿದ್ದೇನೆ.

ನನ್ನ ಗೆಳೆಯರೆಂದು ಜಗತ್ತಿನಲ್ಲಿ ಯಾರೆಲ್ಲರಿಗೆ ನಾ ನನ್ನ ವಾಕ್ ಮನಸ್ಸು ಇಂದ್ರಿಯಗಳನ್ನು ಸಮರ್ಪಿಸಿದ್ದೇನೆ, ಸ್ವಹಿತ ಇದೆ, ಪರಹಿತವಿಲ್ಲ ಆದ್ದರಿಂದ ಅವರಿಂದ ಪರಿಪೂರ್ಣಮಟ್ಟದಲ್ಲಿ ಸಮರ್ಪಣಾಭಾವ ಇಲ್ಲ. ಆದ್ದರಿಂದ ಆ ಗೆಳೆತನವೂ ಅಸ್ಥಿರವಾಗಿದೆ.  ಈಗೆನು ಪ್ರೀತಿ ಗೆಳೆತನ ತೋರ್ತಾ ಇದೆ ಅದು ಸಮರ್ಪಣಾ ಮೂಲವಲ್ಲ, ಕೇವಲ ಆಕರ್ಷಣಾ ಮೂಲ. ಆದ್ದರಿಂದ ಅದು ಅಸ್ಥಿರ. ಸ್ಥಿರ ಶಾಶ್ವತ ಗೆಳತನ ವಿಲ್ಲದ  ಅತಂತ್ರ ಜೀವನ ನಮ್ಮದಾಗಿದೆ. ದಿಕ್ಕು ತೋಚದಾಗಿದೆ.... 

ಕಂಚಿ ಅತ್ತೀ ವರದರಾಜ ವರ ಕೊಡುವದಾದರೆ ಮೊದಲು ಅಂತರ್ಯಾಮಿ ದೇವರಲ್ಲಿ ಎರಡನೆಯದಾಗಿ ನನ್ನಲ್ಲಿ ಮೂರನೆಯದಾಗಿ ಪರ (ವಾಯುದೇವರು ಮೊದಲು ಮಾಡಿ ಸಕಲ ದೇವತಾ, ಗುರು, ಬಂಧು ಬಾಂಧವರಲ್ಲಿ,) ರಲ್ಲಿ  ಸಮರ್ಪಣಾಭಾವ ಬೆಳೆಯಿತೂ  ಎಂದಾದರೆ ಶಾಶ್ವತ ಗೆಳೆತನ ಚಿಗುರೊಡೆಯುತ್ತದೆ, ಬೆಳೆಯುತ್ತದೆ, ಸ್ಥಿರವಾಗಿ ಉಳಿಯುತ್ತದೆ.  ಆ ಗೆಳತನವೇ ನಿಜವಾದ ಗೆಳೆತನ. 

ಗೆಳೆತನ ದಿನದ ಶುಭಾಷಯಗಳೊಂದಿಗೆ  ಹಿರಿಯರಿಗೆ ನಮಸ್ಕಾರ ಕಿರಿಯರಿಗೆ ಹಾರೈಕೆ ಇವುಗಳನ್ನು ಅರ್ಪಿಸುತ್ತಾ ದೊರೆತ ಗೆಳೆತನವನ್ನು ಕಳೆದುಕೊಳ್ಳದಿರುವಂತೆ ನೋಡಿಕೊಳ್ಳೋಣ...... 

*✍🏽ನ್ಯಾಸ....*
ಗೋಪಾಲ ದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*