*ಮನ ಮನೆಯಲ್ಲಿ ಹುಟ್ಟಿ ಮತ್ತೆ ಹುಟ್ಟಿ ಬಾ ಕೃಷ್ಣ...!!*
*ಮನ ಮನೆಯಲ್ಲಿ ಹುಟ್ಟಿ ಮತ್ತೆ ಹುಟ್ಟಿ ಬಾ ಕೃಷ್ಣ...!!*
ಐದು ಸಾವಿರ ವರ್ಷದ ಹಿಂದೆ ಧರ್ಮ ರಕ್ಷಣೆ ಹಾಗೂ ದುಷ್ಟ ಶಿಕ್ಷೆಗೆ ಹುಟ್ಟಿ ಬಂದ ಕೃಷ್ಣ, ಇಂದು ಪುನಃ ನಮ್ಮ ಮನೆ ಮನಗಳಲ್ಲಿ ಹುಟ್ಟಿ ಬರಬೇಕಾಗಿದೆ. ಅದಕ್ಕೋಸ್ಕರ ನಾಳೆಯ ಕೃಷ್ಣಾಷ್ಟಮಿ ಆಚರಣೆ...
ಕಲಿಯ ರಾಜ್ಯದಲ್ಲಿ ಮನಸ್ಸಿಗೆ ಅಭಿಮಾನಿ ಕಾಲನೇಮಿ. ಒಂದರ್ಥದಲ್ಲಿ ಗೃಹ ಮಂತ್ರಿ ಇದ್ದ ಹಾಗೆ. ಈ ಕಾಲನೇಮಿ ಮನೆಯಲ್ಲೋ ಅಥವಾ ಮನದಲ್ಲಿಯೋ ಕೃಷ್ಣ ನಿದ್ದಾಗ ಇರಲಾರ. ಕೃಷ್ಣ ಬಂದರೆ ಸಂಹಾರ ಮಾಡಿಯೇ ಬಿಡುವ.
*ಮನೆ ಹಾಗೂ ಮನದಲ್ಲಿ ಕೃಷ್ಣನಿಲ್ಲವೆ...*
ಮನೆ ವಿಸ್ತಾರವಿದೆ. ಮನಸ್ಸು ತುಂಬ ವಿಶಾಲವಿದೆ. ಆದರೆ ಕೃಷ್ಣನಿಗೆ ಮಾತ್ರ ಸ್ಥಳಾವಕಾಶ ಇಲ್ಲವೇ ಇಲ್ಲ. ಆದ್ದರಿಂದಲೇ ಮನೆ ಒಂದು ದಿಕ್ಕಿಗೆ ಮನ ಮತ್ತೊಂದು ದಿಕ್ಕಿಗೆ ಹೊಗುತ್ತಿವೆ. ಹೀಗಾಗಿ ಮನೋಭಿಮಾನಿ ಕಾಲನೇಮಿ ಕಂಸ ಮನೆಯಲ್ಲೆಲ್ಲ ಮನಸ್ಸಿನಲ್ಲೆಲ್ಲ ವ್ಯಾಪಿಸಿ ಕುಳಿತುಕೊಂಡಿದ್ದಾನೆ. ಈ ಕಾಲನೇಮಿ ಕಂಸ ಹೆಚ್ಚು ಸಮಯ ಧರ್ಮದಿಂದ ದೂರ ಇರುವಂತೆ ನೋಡಿಕೊಳ್ಳುತ್ತಾನೆ. ಅಧರ್ಮದಲ್ಲಿ ರುಚಿ ಹಚ್ಚಿಸುತ್ತಾನೆ. ಅಧರ್ಮದಲ್ಲಿ ಪ್ರೇರೇಪಿಸುತ್ತಾ ಇರುತ್ತಾನೆ.
*ಕೃಷ್ಣನನ್ನು ಮನೆ ಮನಕ್ಕೆ ಕರದಿಲ್ಲವೆ....*
ಮನೆಗೆ ನೂರಾರು ಬಂಧು ಬಾಂಧವರನ್ನು ಗೆಳೆಯರನ್ನು ಕರೆತರುತ್ತವೆ ಹಾಗೆ "ಕೃಷ್ಣ ನೀ ಬೇಗನೇ ಬಾರೋ" ಎಂದು ಕರಿಲಿಕ್ಕೆ ಸಾಧ್ಯವಿಲ್ಲ. ತಪ್ಪಿ ಕೃಷ್ಣನನ್ನು ಕರದರೆ ಮೈಮೇಲೆ ಬರತ್ತೆ....
ದೇವರ ಮನಿಗೋಸ್ಕರ ಒಂದು ರೂಮು ಮೀಸಲು ಇಡಬೇಕು. ಮಡಿ ಸ್ನಾನಕ್ಕಾಗಿ ಬೋರ್ವೆಲ್ಲಿನ ವ್ಯವಸ್ಥೆ ಮಾಡಿಕೊಳ್ಳಬೇಕು. ಮಡಿ ಮಾಡಿದರೆ ನಡೆಯಲ್ಲ ಅಲ್ಪಸ್ವಲ್ಪ ಮಂತ್ರಗಳನ್ನು ಕಲಿಬೇಕು. ಇದ್ಲಿವಲಿ ಮೇಲೆ ನೈವೇದ್ಯ ಆಗಬೇಕು. ಎರಡು ಗಂಟೆ ಮೂಗುಹಿಡಕೊಂಡು ಕೂಡಬೇಕು. ಹೊರಗ ತಿನ್ನೋದು ನಿಲ್ಲಿಸಬೇಕು ಹೀಗೆ ಎಷ್ಟು ಸಮಸ್ಯೆಗಳು ಅಬ್ಬಬ್ಬಾ... ಇದು ಮನೆಗೆ ಕರೆದರೆ ಸಮಸ್ಯೆ..
ಇನ್ನು ಮನಸ್ಸಿಗೆ ಕರದರಂತೂ ೨ ಹೊತ್ತು ಸಂಧ್ಯಾವಂದನ, ಕನಿಷ್ಠ ಕೆಲ ಮಂತ್ರಗಳ ಜಪ, ಧ್ಯಾನ, ಒಂದು ಗಂಟೆಯ ಅಧ್ಯಯನ, ಧರ್ಮ, ಇಂತಹ ಸಾವಿರ ಸಾವಿರ ಸಮಸ್ಯೆಗಳಿಗೆ ಒಳಗಾಗದ ಬದಲು ಕೃಷ್ನನನ್ನು ಕರೆಯದೇ ಬಿಟ್ಟುಬಿಟ್ರೆ ಆಯ್ತಲ್ಲವೆ.. ಎಂಬ ಮನೋಭಾವನೆಯೋ ಏನೋ ಅಂತೂ ಕೃಷ್ಣನನ್ನಂತೂ ಮನೆಗೆ ಕರೆಯುವದಿಲ್ಲ. ಕರೆದಿಲ್ಲ.
*ಕೃಷ್ಣನನ್ನು ಕರಿಯಲೇ ಬೇಕಾದ ಅನಿವಾರ್ಯತೆ ಇಂದಿದೆ....*
ಅಧಾರ್ಮಿಕ ಮನೋಭಿಮಾನಿ ಕಾಲನೇಮಿ ಕಂಸನನ್ನು ಸಂಹರಿಸಲು, ಕಂಸನ ದೂತರನ್ನು ಹೊರದಬ್ಬಲು, ಧರ್ಮ ಜ್ಙಾನ ಬೆಳಿಸಿಕೊಳ್ಳಲು, ಮನಸ್ಸಮಾಧಾನ, ಶಾಂತಿ ಅರಳಿಸಲು, ಸುಖ ಸಮೃದ್ಧಿ ಬೆಳಗಿಸಿಕೊಳ್ಳಲು, "ಕೃಷ್ಣನನ್ನು ಇಂದು ನಮ್ಮಮನೆಗೆ ಬಾ ಮನಸದಸಿಗೆ ಬಾ" ಎಂದು ಕೂಗಿ ಕರೆಯುವದು ಅಗತ್ಯವಾಗಿದೆ, ಅನಿವಾರ್ಯವೂ ಆಗಿದೆ.
ನಾಳೆ ಕೃಷ್ಣ ಅಂತೂ ಬರುತ್ತಾನೆ. ಬಂದವನನ್ನು ಕರೆದೊಯ್ಯೋಣ. ಸ್ವಾಗತ ಮಾಡೋಣ. ಪ್ರೀತಿ ಭಕ್ತಿಗಳಿಂದ ಪೂಜಿಸೋಣ. ಮನೆಮನಸ್ಸಿನಲ್ಲಿ ಸ್ಥಿರವಾಗಿ ನಿಲ್ಲು ಎಂದೂ ಬೇಡಿಕೊಳ್ಳೋಣ.......
*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments