ಸಾವಧಾನದಿಂದರೂ ಮನವೇ - ರಾಯರು ಕೊಟ್ಟಾರು ಕೊಟ್ಟಾರು ಕೊಟ್ಟಾರು*

*ಸಾವಧಾನದಿಂದರೂ ಮನವೇ - ರಾಯರು ಕೊಟ್ಟಾರು ಕೊಟ್ಟಾರು ಕೊಟ್ಟಾರು*

ಬೇಡುವ ನಮಗೆ ಕೊಡುವ ರಾಯರೇ ಗತಿ. "ಕೊಡುವವರಿಗೆ ಒಂದೆಚ್ಚರ ಇರತ್ತೆ ಯಾವಾಗ ಕೊಡಬೇಕು, ಹೇಗೆ ಕೊಡಬೇಕು ಎನ್ನುವದು." ಸಮಯ ಬಂದಾಗ ಕೊಡದೇ ಇರರು. ವ್ಯಾಮೋಹಕ್ಕೆ ಬಿದ್ದು ಎಂದಿಗೂ ಕೊಡಲಾರರು. 

*ವ್ಯಾಮೋಹಕ್ಕೆ ಬಿದ್ದು ಕೊಡಬಾರದು ಏತಕೆ....???*

ಶಿಷ್ಯ ವ್ಯಾಮೋಹ, ಭಕ್ತ ವ್ಯಾಮೋಹ ರಾಯರಿಗೆ ಇದ್ದೇ ಇದೆ. ಪುತ್ರವತ್ಪರಿರಕ್ಷಿಸುವವರು ರಾಯರೇ. ಆದರೆ.... 
ತಂದೆ ತಾ ತುಂಬ ಕಠಿಣ ಪರಿಶ್ರಮದಿಂದ ಮೇಲೆದ್ದು ಬಂದಿರುತ್ತಾರೆ. ಪ್ರತಿಷ್ಠೆಯನ್ನೂ ಪಡೆದಿರುತ್ತಾರೆ. ಆದರೆ ವ್ಯಾಮೋಹಕ್ಕೆ ಬಿದ್ದು ಮಗನಿಗೇನಾದರೂ ಪ್ರತಿಷ್ಠೆಯನ್ನೋ ಪದವಿಯನ್ನೋ ಕೊಟ್ಟರೂ ಎಂದಾದರೆ ಆ ಮಗ ತಾನು ಎಂದಿಗೂ ಮೇಲೇದ್ದು ಬರಲಾರ. "ಸಿಗುವದು ಸಿಕ್ಕಾಗಿದೆ ಯಾಕೆ ಪರಿಶ್ರಮಬೇಕು..." ಎಂಬ ಭಾವದಲ್ಲಿ ಅವನಷ್ಟು ಆಲಸಿ ಮತ್ತಬ್ಬರು ಸಿಗಲಾರರು ಹಾಗೆ ದೂರ ಕ್ರಮಿಸಿಬಿಡುತ್ತಾನೆ.  ಇದಕ್ಕೆ ನೂರಾರು ಸಾವಿರಾರು ನಿದರ್ಶನಗಳು ಸಿಗುತ್ತವೆ ಹಾಗಾಗಿ ಹೆಚ್ಚು ವಿಸ್ತಾರ ಮಾಡಲಾರೆ.

*ಸಮಯವರಿತು ಪಾಲಿಪ ಪುಣ್ಯ ಪುರುಷ....*

ಆ ಆ ಯೋಗ್ಯ ಸಮಯ ನೋಡಿ ಎಲ್ಲವನ್ನೂ ಸುರಿಸುವವರು ರಾಯರು. ಎಲ್ಲವನ್ನೂ ಕೊಡಲು ಅವರೇನು ದೇವರಾ ?? ದೇವರಲ್ಲವೇ ಅಲ್ಲ. ನಿಶ್ಚಿತ ಮಾತು. ಎಲ್ಲವನ್ನು ಎಲ್ಲರಿಗೂ ಕೊಡಲು ಬೇಕಾದ ಪುಣ್ಯ ಅವರಲ್ಲಿ ಇದೆ ಅಂತೆಯೇ *ರಾಯರು ಪುಣ್ಯಪುರುಷ.*

*ಕೊಡುವ ರಾಯರು ಪುಣ್ಯವಂತರು ಇರುವಾಗ, ಪಡೆಯುವ ನಾವು ಹೇಗೆ ಪಡಿಯಬೇಕು.... ??*

ರಾಯರ ದಾರಿದ್ರ್ಯ ಊಹಾತೀತ. ರಾಯರಿಗಿಂತಲೂ ಕೋಟಿಪಟ್ಟು ಹೆಚ್ಚಿನ ಸಿರಿವಂತಿಕೆ ನಮ್ಮಲ್ಲಿ ಇದೆ. ನಿಜವಾಗಿ ಹೇಳಬೇಕು ಎಂದರೆ  "ಬೇಡುವ ಪ್ರಸಕ್ತಿಯೇ ನಮಗೆ ಬರದು." ರಾಯರಿಗಿಂತಲೂ ಕೋಟಿಪಟ್ಟು ಹೆಚ್ಚಿನ ಶ್ರೀಮಂತರಾಗಿಯೂ ಬೇಡುತ್ತೇವೆ ಎಂದರೆ ನಮ್ಮಂತಹ ದರಿದ್ರರು ಮತ್ತೊಬ್ಬರು ಇರಲಾರರು. ಹಾಗಾದರೆ ರಾಯರು ಹೇಗೆ ಪಡೆದರೋ ಹಾಗೆ ನಾವೂ ಪಡೆಯೋಣ... 

*ರಾಯರು ಹೇಗೆ ಪಡೆದರು.... ??*

"ಹರಿಪಾದ ಕಂಜ ನಿಶೇವಣಾತ್ ಲಬ್ಧ ಸಮಸ್ತ ಸಂಪತ್" ರಾಯರು ನಿರಂತರ ದೇವರ ಸೇವೆಯನ್ಬು ಕಾಯಾ ವಾಚಾ ಮನಸಾ ಚೆನ್ನಾಗಿ ಮಾಡಿ, ಎಷ್ಟು ಮಾಡುದ್ದರು ಎಂದರೆ  "ಯತ್ಪಾದಪದ್ಮಪರಿಕೀರ್ತನ ಜೀರ್ಣವಾಚಃ"  ದೇವರ ಸ್ತೋತ್ರವನ್ನು ಮಾಡಿ ಹೇಳಿ ಪಾಠ ಹೇಳಿ ವಾಕ್ಯಾರ್ಥ ಮಾಡಿ ಸಿದ್ಧಾಂತ ಸ್ಥಾಪಿಸಿ *ನಾಲಿಗೆ ಸವೆದು ಹೋಗಿತ್ತು* ಅಂತೆ ಹಾಗೆ ಸೇವೆ ಮಾಡಿದಾಗ ಅವರಂತೆ ಪಡೆಯಬಹುದು. ಅವರಿಂದ ಪಾಡೆಯಬಹುದು. ಪಡೆದದ್ದು ಉಳಿಯಬಹುದು. 

ನಿರಂತರ ರಾಯರ ಹಾಗು ರಾಮದೇವರ ಸೇವೆ ಆಗಲಿ. ರಾಯರು ಹಾಗೂ ದೇವ ಕೊಡುವವರೆಗೆ ತಾಳ್ಮೆ ಇಂದರಲಿ. ಏನು ಕೊಟ್ಟಿದಾನೆ ಸಮಯವರಿತೇ ಕೊಟ್ಟಿದ್ದಾನೆ. ವ್ಯಾಮೋಹಕ್ಕೆ ಬಿದ್ದು ಕೊಡದೆ ಎಮ್ಮನು ಅನುಗ್ರಹಿಸಿದ್ದಾರೆ. ಇದುವೇ ರಾಯರ ಕರುಣೆ. ಚೆನ್ನಾಗಿ ನೆನೆಯೋಣ. ಸ್ತುತಿಸೋಣ. ಸೇವೆ ಮಾಡೋಣ.

*✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*