Posts

Showing posts from July, 2019

*ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ.....*

Image
*ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ.....* ಶ್ರೀಮದ್ಭಾಗವತದಲ್ಲಿ ಸಜ್ಜನರ ಸಹವಾಸದ ಲಾಭವನ್ನು ಕೊಂಡಾಡುತ್ತಾ "ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ....." ಈ ಶ್ಲೋಕವನ್ನು ಉದಾಹರಿಸುತ್ತಾ ಒಂದು ಉತ್ಕೃಷ್ಟ ಪ್ರಮೇಯವನ್ನು ತಿಳಿಸಿಕೊಡುತ್ತದೆ.  ಗುಣವಂತ ಸಜ್ಜನ. ಗುಣಗಳು ಪ್ರಕಾಶಮಾನವಾದವುಗಳು. ಪ್ರಕಾಶಮಾನ ಗುಣಗಳು ತನ್ನ ಪ್ರಕಾಶವನ್ನು ಹರಡದೇ ಬಿಡದು.  ಸಜ್ಜನನ ಸಜ್ಜನಿಕೆಯ ಗುಣಗಳ ಪ್ರಕಾಶ, ತಮ್ಮ ಸನಿಹ ಬಂದವರ ಮನಸ್ಸಿನಮೇಲೆ ಬೀಳುವದು ನಿಶ್ಚಿತ. ಅದೇರೀತಿ ದುರ್ಜನರ ದುರ್ಗಣಗಳೂ.  ಸಜ್ಜನ ಕಠೋರ. ದುರ್ಜನ ಆಹ್ಲಾದಕರ. ಸಜ್ಜನಿಕೆಗೆ ಅಡ್ವಟೇಸ್ ಕಡಿಮೆ. ದುರ್ಜನನಿಗೆ ಪ್ರಚಾರ ಹೆಚ್ಚು. "ಕಠೋರತೆಗೆ ಬೆದರಿ ಆಕರ್ಷಣೆಗೆ ಮೋಸಹೋದರೆ ಸಿಗುವದು ಪ್ರಪಾತ." ಅಂತೆಯೇ ಗುಣವಂತರಾದ ಸಜ್ಜನರ ಸಹವಾಸಕ್ಕೆ ಎಲ್ಲಿಲ್ಲದ ಮಹತ್ವ ಅಂದಿನಿಂದಲೂ ಇದೆ.  ಗುಣವಂತರಲ್ಲಿ ದೋಷಗಳು ಇವೆ. ದೋಷಗಳೇ ಇಲ್ಲದಿರುವದಕ್ಕೆ ಅವನೇನು ಋಜು ಅಲ್ಲ. ದೋಷಗಳಿವೆ ಎಂದ ಮಾತ್ರಕ್ಕೆ ಅವನು ಗುಣವಂತನೇ ಅಲ್ಲ ಎಂದೂ ಅಲ್ಲ. ಗುಣವಂತರಾದ ಸಜ್ಜರ ಗುಣವಂತಿಕೆಯಿಂದ ನಮಗೆ ಲಾಭವಾಗುತ್ತಿದ್ದರೆ ಸಾಕು. ಆ ಸಜ್ಜನನಿಂದ ನಮ್ಮ ಸಜ್ಜನಿಕೆ ಒಂದು ಸ್ಫೂರ್ತಿ ಸಿಗುತ್ತದೆ.  *ಸಜ್ಜನರ ಗುಣವಂತಿಕೆಯಿಂದ ನಮಗೇನು ಲಾಭ....* ಏನು ಲಾಭವಿಲ್ಲ ಎಂದು ಇಲ್ಲ. ಎಲ್ಲ‌ ಲಾಭಗಳೂ ಇವೆ. ಉಪನಿಷತ್ತು ಒಂದು ಮಾತನ್ನು ಹೇಳತ್ತೆ "ಯೇ ಯೇ ಗುಣಾನ್ ವಿಜಾನಂತಿ ವ...

*ಯೋಚನೆಗೆಲ್ಲಿ ಮಿತಿಯಿದೆ.....*

Image
*ಯೋಚನೆಗೆಲ್ಲಿ ಮಿತಿಯಿದೆ.....* ಅಮಿತವಾದದ್ದು ಏನೂ ಪಡೆಯಲು ಆಗಲ್ಲ. ಹಣವೋ ಅಂತಸ್ತೋ ಅಥವಾ ಯೋಗ್ಯತೆಯೋ ಇನ್ನೇನೋ ಯಾವದನ್ನೂ ಹೆಚ್ಚಾಗಿ ಪಡೆಯಲು ಆಗುವದಿಲ್ಕ. ಎಲ್ಲದಕ್ಕೂ ಒಂದು ಮಿತಿ ಇದೆ.  ಆದರೆ.... "ಯೋಚನೆಗಳಿಗೆ ಮಿತಿ ಇದೆಯಾ... ?? ಸರ್ವಥಾ ಇಲ್ಲವೇ ಇಲ್ಲ." ಉತ್ಕೃಷ್ಟ ವಿಚಾರಭರಿತ ಆರೋಗ್ಯ ಪೂರ್ಣ ಯೋಚನೆಗಳನ್ನು ರೂಢಿಸಿಕೊಂಡರೆ ಉತ್ತಮ ರೀತಿಯಲ್ಲಿ ಬೆಳವಣಿಗೆಗಳು ಆಗಬಹುದೆಂದೂ ಯೋಚಿಸಬಹುದು.  *ಇಂದಿನ ಯುವಕ ತಲೆಯಲ್ಕಿ ಕ್ಷುದ್ರ ಯೋಚನೆಗಳೇ..* ಕ್ರಿಕೇಟ್ ಪ್ಲೇಯರ್ ಆಗಬೇಕು. ಫಿಲ್ಮಸ್ಟಾರ್ ಆಗಬೇಕು.. ರೌಡಿ ಆಗಬೇಕು.. ಕರೋಡಪತಿ ಆಗಬೇಕು.. ಯಾರನ್ನೋ ಮನಸ್ಸಿನಲ್ಲಿ ಸದಾಕಾಲ ದ್ವೇಶಿಸುತ್ತಾ ಇರೋದು.. ಅವರನ್ನು ಸಾರ್ವಜನಿಕವಾಗಿ ಹೇಗೆ ಹಳಿಯಲಿ ಎಂದೆ ಯೋಚಿಸುವದು...  ಇತ್ಯಾದಿಯಾಗಿ ಅನುಪಯುಕ್ತ ಅನಾರೋಗ್ಯಭರಿತ ಅನವಶ್ಯಕ ವಿಚಾರಗಳೇ ಮೈದುಂಬಿರುತ್ತವೆ. *ಯೋಚನೆಗಳಿಲ್ಲದೇ ಮನಸ್ಸು ಇರಲಾರದು*  ಕ್ಷುದ್ರ ಯೋಚನೆಗೆ ಆಸ್ಪದ ಕೊಟ್ಟರೆ ಅವೇ ಕೊರಗುತ್ತಾ ಕೂಡುತ್ತವೆ. ಆ ಯೋಚನೆ ಗಳಿಂದ ತಾತ್ಕಾಲಿಕ ಕ್ಷುದ್ರ ನೆಮೆದಿ ಬಿಟ್ಟರೆ  ಇನ್ನ್ಯಾವ ಪರ್ಟಿನೂ ಸಿಗದು. "ಉತ್ಕೃಷ್ಟ ಆರೋಗ್ಯ ಭರಿತ ಸಾರ್ಥಕ ಯೋಚನೆಗಳಿಗೆ ಜೀವ ತುಂಬಿದರೆ ಅವುಗಳೇ  ಹೆಮ್ಮರವಾಗಿ ಬೆಳಿಯುತ್ತವೆ." ಉತ್ಕೃಷ್ಟ ಯೋಚನೆಗಳೇ ಮನುಷ್ಯನನ್ನು ಉತ್ಕೃಷ್ಟತೆಗೆ ಕರೆದೊಯ್ಯುತ್ತವೆ" ಇದು ನೂರು ಪ್ರತಿಶತಹ ಸಿದ್ಧ. ...

*ಕಾಮ ಗೆದ್ದರಾ, ಹರಿಗೆ ಪ್ರೇಮ ಪೂರ್ಣರಾ*

Image
*ಕಾಮ ಗೆದ್ದರಾ, ಹರಿಗೆ ಪ್ರೇಮ ಪೂರ್ಣರಾ* ಕಾಮ - ಇಚ್ಛೆ. ಕಾಮಗಳು ಇಚ್ಛೆಗಳು ಮನಸ್ಸಿನ ವಿಕಾರಗಳೆ.  ಸತ್ಕಾಮಗಳು ಹಾಗೂ ಸದಿಚ್ಛೆಗಳು ಬರಲು ಬೇಕು ಮನೋಭಿಮಾನಿಗಳ ಅನುಗ್ರಹ. ಮನೋಭಿಮಾನಿ ದೇವತೆಗಳನೇಕರಲ್ಲಿ ಇಂದ್ರಾವತಾರಿಗಳಾದ, ಶೇಶದೇವರಿಂದ ಆವಿಷ್ಟರಾದ, ಮಲಖೇಡ ನಿವಾಸಿಗಳೂ ಆದ,  ನಾಳೆಯಿಂದ ಮೂರುದಿನಗಳ ನಮ್ಮೆಲ್ಲರ *ಆರಾಧ್ಯ ಗುರುಗಳಾದ ಶ್ರೀಮಟ್ಟೀಕಾಕೃತ್ಪಾದರೂ* ಒಬ್ಬರು. ಎಲ್ಲರಿಗೂ ಸಮಯ ಇರುವದು ಇಪ್ಪತ್ತು ನಾಲ್ಕು ಗಂಟೆ ಮಾತ್ರ. ಆ ಇಪ್ಪತ್ತು ನಾಲ್ಕು ಗಂಟೆ ವ್ಯರ್ಥಕಾಮನೆ ವ್ಯರ್ಥ ಇಚ್ಚವೆಗಳಲ್ಲೇ ತೊಡಗಿದರೆ ದೇವರ ನೆನಪೇ ಆಗದು.  ಆ ವ್ಯರ್ಥ ಕಾಮನೆಗಳನ್ನು ವ್ಯರ್ಥ ಇಚ್ಛೆಗಳನ್ನು ಎಷ್ಟೆಲ್ಲ ಸಾಧ್ಯವೋ ಅಷ್ಟು ಯಾರು  ಮೆಟ್ಟಿನಿಂತಿದಾರೆ  ಅವರೇ *ಕಾಮ ಗೆದ್ದವರು.* ಅಂತಹವರಿಗೇ ದೇವರ ಧರ್ಮದ ಶಾಸ್ತ್ರದ ನೆನಪು. ಯಾರು ದೇವರನ್ನು ತಿಳಿತಾರೆ, ಶಾಸ್ತ್ರ ಓದುತ್ತಾರೆ ಧರ್ಮ ಮಾಡುತ್ತಾರೆ ಅವರೇ ನಿಜವಾಗಿಯೂ *ದೇವರ ಪ್ರೇಮ ಪ್ರಿಯರು.* ದುಷ್ಟಕಾಮನೆಗಳನ್ನು ಗೆಲ್ಲುವದು ಒಂದಾದರೆ. ಸತ್ಕಾಮನೆಗಳನ್ನು ಮಾಡುವದೂ ಒಂದು ದೊಡ್ಡ ಧರ್ಮ. ಯಾರು ಸತ್ಕಾಮಿಗಳೋ ಅವರು ವಿಷ್ಣು ಪ್ರಿಯರೇ.‌ *ನೇಮ ನಿಷ್ಠರಾ ನಿಷ್ಕಾಮನಾ ಪರಾ* ಸತ್ಕಾಮನೆಗಳು ಬಂದಾಗ ನೇಮಗಳು ಆರಂಭವಾಗುತ್ತವೆ. ನೇಮ ನಿತ್ಯಗಳು ಬೇಡಾದವರಿಗೆ ದುಷ್ಟಕಾಮನೆಗಳ ಬೆಳೆಯುವದು. ಸತ್ಕಾಮನೆಗಳ ಅಭಿವೃದ್ಧಿ ಧರ್ಮದ ನಾಂದಿ. ಧರ್ಮ ಬೆಳಿಯಿತೋ, ...

*ವ್ಯಾಸರಾಜೋ ವ್ಯಾಸರಾಜ ಇತಿ ಭಕ್ತ್ಯಾ ಸದಾ ಜಪನ್*

Image
*ವ್ಯಾಸರಾಜೋ ವ್ಯಾಸರಾಜ ಇತಿ ಭಕ್ತ್ಯಾ ಸದಾ ಜಪನ್* ಅತ್ಯಂತ ಸಂತೋಷದ ಮಹಾ *ವಿಜಯೋತ್ಸವದ ದಿನ* ಪ್ರಾತಃಸ್ಮರಣೀಯ ದೇವಾಂಶ ಸಂಭೂತ ಶ್ರೀಶ್ರೀ ವ್ಯಾಸರಾಜರ ವೃಂದಾವನ ಪುನಃ ಪ್ರತಿಷ್ಠಾಪಿಸಿದ ವೈಭವದ ದಿನ.  ಮೊನ್ನೆಯ ದಿನ ಕಿಡಗೇಡಿಗಳು ವೃಂದಾವನವನ್ನು ಒಡೆದು ಹೋದರು ನಿಜ. ಅಂದಿನಿಂದ ಇಂದಿನ ವರೆಗೆ ಅನೇಕ ನೆಗೆಟಿವ್ ಆದ ಮಾತುಗಳನ್ನು "ನಮ್ಮಿಂದ ನಿಮ್ಮನ್ನು ಉಳಿಸಿಕೊಳ್ಳಲಾಗಲಿಲ್ಲ" "ಕ್ಷಮಿಸಿಬಿಡಿ, ನಿಮ್ಮನ್ಮು ಉಳಿಸಿಕೊಳ್ಳುವ ಯೋಗ್ಯತೆ ನಮಗಿಲ್ಲ" "ಯಾರ್ಯಾರ್ರದೋ ಗದ್ದಲಗಳಲ್ಲಿ ನಿಮನ್ನು ಕಳೆದುಕೊಂಡು ಬಿಟ್ಟೆವು" ಹಾಗೆ ಹೀಗೆ ಮನಬಂದ ತಲೆತೋಚಿದ ನೂರಾರು ಸಾವಿರ ಸಾವಿರ ಮಾತು ಕೇಳಿ ನೋಡಿ ತುಂಬ ಬೇಸರವೂ ಆಯಿತು.  *ಶ್ರೀವ್ಯಾಸರಾಜರು* "ವ್ಯಾಸರಾಜೋ ವ್ಯಾಸರಾಜ ಇತಿ ಭಕ್ತ್ಯಾ ಸದಾ ಜಪನ್ | ಮುಚ್ಯತೇ ಸರ್ವದುಃಖ್ಯೇಭ್ಯಃ ತದಂತರ್ಯಾಮಿಣೋ ಬಲಾತ್ ||"  *ವ್ಯಾಸರಾಜೋ ವ್ಯಾಸರಾಜ ಸ್ಮರಣೆ ಮಾತ್ರದಿಂದ ಶ್ರೀವ್ಯಾಸರಾಜರ ಅಂತರ್ಯಾಮಿಯ ಮಹಾ ಶಕ್ತಿಯಿಂದ ಅಪಜಯ ಮೊದಲಾದ ಎಲ್ಲ ದುಃಖಗಳೂ ನಾಶವಾಗುತ್ತವೆ* ಎಂದು ಶ್ರೀ ಶ್ರೀ  ವಿಜಯೀಂದ್ರತೀರ್ಥರು ಮನಬಿಚ್ಚಿ ಹೇಳುತ್ತಿರುವಾಗ ಅವರನ್ನು ಉಳಿಸುವವರು ನಾವ್ಯಾರು... ?? "ವ್ಯಾಸರಾಜರಿಂದ ಶ್ರೀಮದಾಚಾರ್ಯರ ಶ್ರೀಮಟ್ಟೀಕಾಕೃತ್ಪಾದರ ದಿವ್ಯ ಸಿದ್ಧಾಂತ ಉಳಿತೋ, ಅಂತಹ ವ್ಯಾರಾಜರ ಬಗ್ಗೆ ಮಾತಾಡುವವರು ನಾವ್ಯಾರು... ?? ಅತಿಭೀಕರವಾದ ...

*ಟೀಕಾರಾಯರ ಪಾದ ಸೋಕೀದ ಕೊನೆ ಧೂಳಿ....*

Image
*ಟೀಕಾರಾಯರ ಪಾದ ಸೋಕೀದ ಕೊನೆ ಧೂಳಿ....* ಪಾಪಗಳು ಜೀವನ ಬೆಂಬಿಡದ ಭುತಗಳು. ಪಾಪ ಹೆಸರಿಗೆ ಒಂದೆ ಇದೆ. ಆದರೆ ಆ ಪಾಪದ ರೂಪಗಳು ಕೋಟಿ ಕೋಟಿ. ಪ್ರತಿಯೊಂದಕ್ಕೂ ನೂರಾರು ಪಾಪಗಳು.  ಒಂದು ಸುಖ ನೂರುಪಾಪಗಳನ್ನು ಹೊತ್ತೇ ಬಂದಿರತ್ತೆ. ಆ ಒಂದೊಂದು ಪಾಪವೂ ನಮ್ಮನ್ನು ದಿಕ್ಕುಗೆಡಿಸುತ್ತದೆ. ಕಂಗಾಲ್ ಆಗಿ ಮಾಡಿಬಿಡುತ್ತದೆ. *ಏಲ್ಲ ಇದ್ದರೂ ಏನಿಲ್ಲದವನಂತೆ ಮಾಡುತ್ತವೆ* ಪಾಪಗಳು. ಉದಾಹರಣೆಗೆ "ಒಂದು ನಿದ್ರೆ ಇದೆ. ಆ ಒಂದು ನಿದ್ರೆ ಸುಖಮಯವೇ. ಸುಖಕ್ಕಾಗಿಯೇ ನಿದ್ರೆ. ಆದರೆ ಆನಿದ್ರೆಗೆ ಪಾಪಗಳು ಮೆತ್ತಿಕೊಂಡು ಇವೆ. ನಿದ್ರೆ ಬರ್ತಾ ಇದೆ ಮಲಗಲು ಸ್ಥಳ ಸಿಗಲಿಲ್ಲ -  ಪಾಪ ಇದೆ. ಸ್ಥಳ ಸಿಕ್ಕಿತು ಘಾಳಿ ಇಲ್ಲ - ಪಾಪವಿದೆ. ದೊಡ್ಡ ದೊಡ್ಡ ವಿದ್ಯುದ್ದೀಪಗಳಿವೆ - ಪಾಪವಿದೆ.  ತುಂಬ ಶಕಿ ಆಗ್ತಿದೆ - ಪಾಪವಿದೆ. ಹುಳ ಕಚ್ತಿವೆ - ಪಾಪವಿದೆ. ಚಳಿ ಆಗ್ತಿದೆ - ಪಾಪವಿದೆ.  ಪಕ್ಕದವರು ಜೋರಾಗಿ ಘುರಿಕೆ ಹೊಡಿತಿದಾರೆ - ಪಾಪವಿದೆ. ಕೆಟ್ಟ ಕನಸ್ಸು ಬಿದ್ದಿತು - ಪಾಪವಿದೆ. ಕರೆಂಟ್ ಹೋಯ್ತು - ಪಾಪವಿದೆ. ಫ್ಯಾನ್ ಕಟಕಟ ಶಬ್ದ ಮಾಡ್ತಿದೆ - ಪಾಪವಿದೆ. ಐದೇ ಐದು ನಿಮಿಷ ನಿದ್ದೆ ಆಗತ್ತೆ ಏನೋ ಆಗಿ ಎಚ್ಚರವಾಗತ್ತೆ - ಪಾಪವಿದೆ.  ಈ ತರಹದಿಂದ  ಅನಾಯಾಸೇನ ಫ್ರೀಯಾಗಿ ಮಾಡುವ ನಮ್ಮ ಕಾರ್ಯಗಳಿಗೆ ನೂರಾರು ಪಾಪಗಳಿವೆ. ನಮ್ಮನ್ನು ಕಂಗೆಡಿಸಿಬಿಡುತ್ತವೆ. ಹೀಗಿರುವಾಗ ದೊಡ್ಡ ದೊಡ್ಡ ಸಾಧನೆ ಎಂದು... ?? ಅ...

*ನಮ್ಮ ಗುರುಗಳು....*

Image
*ನಮ್ಮ ಗುರುಗಳು....* (ಗೂರು ಪೌರ್ಣಿಮೆಯ ಸುಸಂದರ್ಭದಲ್ಲಿ ಗುರುಸ್ಮರಣೆ) ಅಲುಗಾಡದ ಗುರುಭಕ್ತಿ, ಸರ್ವ ಸಮರ್ಪಣೆ, ನಿರಂತರ ಸೇವೆ, ಉತ್ಕೃಷ್ಟ ಅಧ್ಯಯನ ಇವುಗಳು ಗುರುಪ್ರೀತಿ ಸಾಧನೆಗಳು. ಗುರು ಪ್ರೀತರಾದರೆ ಶಿಷ್ಯನ ಎಲ್ಲ ಮಾಲಿನ್ಯಕಳೆದು, ಆ ಶಿಷ್ಯನನ್ನೂ ಗುರುವಾಗುವಂತೆ ಪರಿವರ್ತಿಸಿಬಿಡುತ್ತಾರೆ. ಅಂತೆಯೇ ಗುರುಗಳ ಆರಾಧನೆ ಯಾವ ಮತಗಳಲ್ಲೂ ಇಲ್ಲದಷ್ಟು ನಮ್ಮ ಮತ ಸಂಪ್ರದಾಯಗಳಲ್ಲಿ ಹಾಸು ಹೊಕ್ಕಾಗಿದೆ.   ಗುರುಗಳಲ್ಲಿಯ ಭಕ್ತಿಯೇ ದೇವನ ಭಕ್ತಿಸೌಧದ ಮೊದಲ ಸೋಪಾನವೆನ್ನುತ್ತೆ ಶಾಸ್ತ್ರ. ಅಂತೆಯೇ "ಮುಕುಂದ ಭಕ್ತ್ಯೈ ಗುರುಭಕ್ತಿಜಾಯೈ" ಎಂದು ಸಾರಿದರು ನಾರಾಯಣ ಪಂಡಿತಾಚಾರ್ಯರು.  *ಸರ್ವ ಸಮರ್ಪಣೆ....* ಗುರು ದೇವತಾ ದೇವರಿಗೆ ನಮ್ಮನ್ನು ನಾವು ಪೂರ್ತಿ  ಅರ್ಪಿಸಿಕೊಳ್ಳುವದರಿಂದ, ಅವರು ನಮ್ಮ ಬೆನ್ನಿಗಿರುತ್ತಾರೆ. ನಮ್ಮ ಬಳೆಕೆಗೆ ಬರುತ್ತಾರೆ. ಆಪತ್ತಿಗೆ ಒದಗುತ್ತಾರೆ. ಸಮಯವರಿತು ಕಾಪಾಡುತ್ತಾರೆ.  ಎಷ್ಟು ಬಲಗಳು ಜೊತೆಗಿದ್ದರೂ ಅತಿ ಘೋರ ಆಪತ್ತಿಗೆ ಒದಗುವ ಬಲ ಗುರುಬಲ ಮಾತ್ರ.  *ಸಾರ್ಥಕತೆಗೆ ಬೇಕು ಗುರುವೆಂಬ ಆಶ್ರಯ...* ಹನಿ ಹನಿ ಸೇರಿದರೆ ಅದು ಕಡಲು. ಹನಿ ಕಡಲಿನಲ್ಲಿ ಎಷ್ಟು ಸುರಕ್ಷಿತವೋ ಅಷ್ಟೇ ಅಸುರಕ್ಷಿತ ತಾನು ಕಡಲು ಸೇರದೆ ತಾನಾಗಿ ಇದ್ದರೆ. ಹಾಗೆಯೇ ಹನಿ ಹನಿಯಂತಿರುವ ನಾವಾಗಲಿ, ಅಥವಾ ನಮ್ಮ   ಪುಣ್ಯವಾಗಲಿ ಗುರುಗಳು ಎಂಬ ಕಡಲು ಸೇರಿದ...

*ಓ ಗುರೋ.... !! ನಿನಗೆ ನಮಃ*

Image
*ಓ ಗುರೋ.... !!  ನಿನಗೆ ನಮಃ* "ಗುರುಃ ಗುರುತಮೋ" ಎಂದು ವಿಷ್ಣು ಸಹಸ್ರನಾಮದಲ್ಲಿ ಬಂದ ಒಂದು ನಾಮ.  ಮೂಲ ಗುರುವಾದ ವೇದವ್ಯಾಸ ಕೃಷ್ಣ ಕಪಿಲ ದತ್ತಾತ್ರೇಯ ಮೊದಲಾದ ಅನಂತ ಅವತಾರಾತ್ಮಕ  ಶ್ರೀ ಹರಿಗೆ "ಗುರು" ಎಂದು ವಿಷ್ಣು ಸಹಸ್ರನಾಮ ಸಂಬೋಧಿಸುತ್ತದೆ. *ಆ ಗುರುವಿನಿಂದ ಆರಂಭಿಸಿ ಇಂದಿನ ನಮ್ಮ ಗುರುಗಳ ವೆರೆಗೂ ಎಲ್ಲ ಗುರುಗಳಿಗೆ ಅನಂತ ವಂದನೆಗಳನ್ನು* ನಿತ್ಯವೂ ಜೊತೆಗೆ ನಾಳೆಯ ದಿನ ವಿಶೇಷವಾಗಿ ಸಲ್ಲಿಸೋಣ.  *ಗುರುಗಳು ಯಾರು... ??* ವಿದ್ಯೆ ಕೊಟ್ಟು, ತತ್ವಜ್ಙಾನವನ್ನು ಉಪದೇಶಿಸಿ, ಸನ್ಮಾರ್ಗದಲ್ಲಿ ಇರಿಸಿ, ಹಿತಾಹಿತಗಳನ್ನು ತಿಳಿ ಹೇಳಿ, ಮಮತಾ ಅಭಿಮಾನಗಳಿಲ್ಲದೇ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ, ದೂರದೃಷ್ಟಿಯ ವಿಚಾರಗಳನ್ನು ಒದಗಿಸುವ, ಧರ್ಮ ಮಾಡಿಸುವ, ವಿಷ್ಣು ಭಕ್ತಿ ಬೆಳಿಸುವ, ಧರ್ಮ ಗುರು ಶಾಸ್ತ್ರ ದೇವರಲ್ಲಿ ನಿಷ್ಠೆ ಒದಗಿಸುವ, ನಂಬಿ ಬಂದವರಿಗೆ ಸಮುದ್ರದಂತೆ ಏಕಾಶ್ರಯರು,  ಇತ್ಯಾದಿ ನೂರಾರು ಸಾವಿರಾರು ಗುಣಗಳುಳ್ಳವರೇ ಗುರುಗಳು. ಆ ಗುರುಗಳಿಗೆ ಕೋಟಿ ಕೋಟಿ ವಂದನೆಗಳು.  *ಗುರುಗಳು ಇರುವದೇ ಉಪದೇಶಕ್ಕೆ...* ಮೂಲ ಗುರು ಆದಿ ಗುರುವಾದ ಬ್ರಹ್ಮದೇವರಿಗೇ ಉಪದೇಶ ಮಾಡಿದರೆ. ಬ್ರಹ್ಮದೇವರು ಉಳಿದ ದೇವತೆಗಳಿಗೆ ಉಪದೇಶಿಸಿದರು. ದೇವತೆಗಳು ಋಷಿಗಳಿಗೆ. ಋಷಿಗಳು ಮುನಿಗಳಿಗೆ. ಮುನಿಗಳು ಇಂದು ನಮಗೆ ಉಪದೇಶ ಮಾಡುತ್ತಿದ್ದಾರೆ. ಈ ಪ್ರಥ ಅಂದಿನಿಂದ ಬಂದ ಅನೂಚಾನ ಪ್ರಥ. ಒಂ...

*ಲೆಕ್ಕಾಚರ ಬಂತು, ಬಲ ಇಲ್ಲವಾಯಿತು*

*ಲೆಕ್ಕಾಚರ ಬಂತು, ಬಲ ಇಲ್ಲವಾಯಿತು* ಮನಸ್ಸಿನಲ್ಲಿ ಯಾವ ಗೊಂದಲಗಳೂ ಲೆಕ್ಕಾಚಾರಗಳು ಇರುವದಿಲ್ಲವೋ ಅವನು ವಿನೋದ ಭರಿತ. ಯಾರು ವಿನೋದ ಭರಿತರೋ ಅವ ಬಲಶಾಲಿ. ಯಶಸ್ವೀ ಮನುಷ್ಯ.  ಬಿಲ್ವಿದ್ಯೆಯಲ್ಲಿಯೋ, ಗಣಿತದಲ್ಲಿಯೋ, ದೇಹದಾರ್ಢ್ಯತೆಯಲ್ಲಿಯೋ, ಕ್ರೀಡೆಯಲ್ಲಿಯೋ, ತತ್ವಜ್ಙಾನದಲ್ಲಿಯೋ ಬಹಳ ನಿಪುಣನಾಗಿರುತ್ತಾನೆ. ಆದರೆ ಸ್ನಮಾನ ಬಹುಮಾನ prize ಹೀಗೆ ತಲೆಯಲ್ಲಿ ಹೋಯಿತು ಎಂದಾದರೆ ಅವ ಟೆನ್ಶೆನ್ ಗೆ ಒಳಗಾಗುತ್ತಾನೆ ಕೈಕಾಲು ನಡಗಲು ಆರಂಭಿಸುತ್ತವೆ. ಫೇಲ್ ಆಗುವ ಸಂಭವ ಹೆಚ್ಚಾಗುತ್ತದೆ.  ಒಂದು ಸುಂದರ ಕಥೆ...  ಒಬ್ಬ ಭಿಕ್ಷುಕ. ಅವನ ಮಗ. ಭಿಕ್ಷೆಯಲ್ಲಿ ಬಂದದ್ದು ತಿನ್ನುವದು.   ಗಿಡದ ಕೆಳಗೆ ವಾಸ ಮಾಡುವದು. ಹೀಗೆ ಅವರ ಜೀವನ.  ಮಗನಲ್ಲಿ ಒಂದು ಬಲಾಢ್ಯ ಶಕ್ತಿ ಕೌಶಲ. ಆಗಾಗ ಆ ಕೇರಿಗೆ ರಾಜ ಆನೆಯ ಮೇಲೆ ಕುಳಿತು ಬರಬೇಕು. ಈ ಹುಡಗ ಆನೆಯ ಬಾಲ ಹಿಡಿದ ಎಂದಾದರೆ ಆನೆಗೆ ಮುಂದೆ ಹೋಗಲೇ ಆಗ್ತಿರಲಿಲ್ಲ. ಹೀಗೆ ಆಗಾಗ ನಡೀತಾ ಇರಬೇಕು. ಊರ ಜನ ನೋಡಿ ನಗಬೇಕು. ರಾಜನಿಗೋ ಅವಮಾನ.  ರಾಜ ತನಗೆ ಆಗುವ ಈ ಅವಮಾನ ಕಂಡು ಬೇಸತ್ತು ಮಂತ್ರಿಯ ಬಳಿ ಹೇಳಿಕೊಳ್ಳುತ್ತಾನೆ.  ಆ ಹಳ್ಳಿಗೆ ಹೋಗಲೇ ಮಾನ ಸಾಲದಾಗಿದೆ. ಹಾಗೆ ಹೀಗೆ ಅಲವತ್ತುಕೊಳ್ಳುತ್ತಾನೆ. ಹೇಗಾದರು ಮಾಡಿ ಅವನನ್ನು ದುರ್ಬಲನನ್ನಾಗಿ ಮಾಡಬೇಕು.  ಮಂತ್ರಿ ಯೋಚಿಸಿ ಹೇಳುತ್ತಾನೆ. ಏನಿಲ್ಲ. ಅವನಿಗೆ ಯಾವ ಚಿಂತೆಯಿಲ್ಲ. ...

*ನಿರ್ಧಾರಗಳು ನಿಧಾನವಾಗಿ ಇರಬೇಕು*

Image
*ನಿರ್ಧಾರಗಳು ನಿಧಾನವಾಗಿ ಇರಬೇಕು* ನಾವು ವಿದ್ಯಾಪೀಠದಲ್ಲಿ ಇರುವಾಗ ಪೂಜ್ಯ ಗುರುಗಳಲ್ಲಿ ಏನನ್ನೇ ನಿವೇದಿಸಿದರೂ "ನೋಡೋಣ - ವಿಚಾರ ಮಾಡೋಣ - ನಾಳೆ ಬಾ" ಎಂದೇ ಹೇಳಬೇಕು.  ಆಗ ಕೆಲವೊಮ್ಮೆ  "ಹೀಗ್ಯಾಕೆ ಗುರುಗಳು ಹೇಳುತ್ತಾರೆ - ಸಣ್ಣ ವಿಷಯವನ್ನೂ ಮುಂದೂಡ್ತಾರೆ" ಎಂದು ಆಗಾಗ ಅನಿಸ್ತಾ ಇತ್ತು. ಆದರೆ  " ಮುಂದೂಡಿ ಮುಂದೂಡಿದಾಗ, ಯೋಚಿಸಲು ಅವಕಾಶ ಸಿಗತ್ತೆ. ಅವಕಾಶ ಸಿಕ್ಕಾಗ ನಿರ್ಧಾರ ಸರಿಯಾಗಿ  ತೆಗೆದುಕೊಳ್ಳಬಹುದೆಂದು" ಈಗೀಗ ಅನಿಸತ್ತೆ ಮನವರಿಕೆಯೂ ಆಗತ್ತೆ. ಈ ಪ್ರಸಂಗ ಇಂದು ಅವಶ್ಯಕ ಅದಕ್ಕಾಗಿ ನೆನಪಿಸಿಕೊಂಡೆ. "ವ್ರತ ಮಾಡಬೇಕೋ ಬೇಡವೋ" "ಏಕಾದಶಿ ಆಚರಿಸಬೇಕೋ ಬೇಡ"  ಹೀಗೆ ಒಂದು ಸಣ್ಣ ಸಣ್ಣ ಸಮಸ್ಯೆಗಳು ಎದುರಾಗತ್ತೆ. ಆ ಕ್ಷಣದಲ್ಲಿ ನನ್ನಿಂದ ಅಸಾಧ್ಯ ಎಂದು ಶೀಘ್ರವಾಗಿ ನಿರ್ಧರಿಸಿತು ಎಂದಾದರೆ ವ್ರತ ಮಾಡಲು, ಏಕಾದಶಿ ಉಪವಾಸ ಮಾಡಲು ಈ ಜನುಮದಲ್ಲಿ ಆಗುವದೇ ಇಲ್ಲ. "ನೋಡೋಣ -  ಎಷ್ಟಾಗತ್ತೋ ಅಷ್ಟು ಮಾಡೋಣ" ತಿನ್ನುವ ಬಿಡುವ ನಿರ್ಧಾರವನ್ನು ಸ್ವಲ್ಪ ಮುಂದೂಡಿದರೂ ಏಕಾದಶಿ ಉಪವಾಸ ಯಶಸ್ವಿಯಾಗಿ ಆಗಿಬಿಡುತ್ತದೆ. *ಶೀಘ್ರ ನಿರ್ಧಾರ ಪಶ್ಚಾತ್ತಾಪಕ್ಕೆ ಕಾರಣವಾದೀತು...* "ನೋಡೋಣ - ವಿಚಾರಿಸೋಣ- ಮಾತಾಡಿ ನಿರ್ಧರಿಸೋಣ"  ಎಂಬ ಧಾಟಿ ಸಮಯವನ್ನು ಕೊಂದು ಹಕತ್ತೆ ಎಂದು ಆತುರರಾದ ನಮಗನಿಸಬಹುದು.  ಆದರೆ... "ಅಯ್ಯೋ ಇಷ್ಟೇ ಕ್...

*ಆಷಾಢ ಏಕಾದಶೀ*

Image
*ಆಷಾಢ ಏಕಾದಶೀ* ನಮ್ಮ ಮಾತುಗಳನ್ನು ದೇವರು ಏಕೆ ಕೇಳುವದಿಲ್ಲ... ?? ಉತ್ತರ ಸಹಜ, *ದೇವರ ಮಾತನ್ನು ನಾವು ಕೇಳುವದಿಲ್ಲ."  ನಾವು ಯಾರ ಮಾತು ಕೇಳುತ್ತೇವೆ, ಅವರು ನಮ್ಮ ಮಾತು ಕೇಳುತ್ತಿರುತ್ತಾರೆ. ದೇವರ ಮಾತು ನಾವು ಕೇಳುವದಿಲ್ಲ. ನಮ್ಮ ಮಾತು ಅವನು ಕೇಳುದಿಲ್ಲ.  *ದೇವರ ಯಾವ ಮಾತು ಕೇಳಿಲ್ಲ.... ???*  "ನಿತ್ಯ ಸಂಧ್ಯಾವಂದನೆ ಮಾಡು" ಆಗುವದಿಲ್ಲ. "ನಿತ್ಯ ದೇವರ ಪೂಜೆ ಮಾಡು" ಸಮಯವಿಲ್ಲ. "ಅರ್ಧಗಂಟೆ ಅಧ್ಯಯನ ಮಾಡು" ಓದು ನಮಗೆ ಅಗಲ್ಲ.  *ಹದಿನೈದಿ ದಿನಕ್ಕೊಮ್ಮೆ ಏಕಾದಶೀ ಮಾಡು* ಅಸಾಧ್ಯದ ಮಾತು. ಹೀಗೆ ಯಾವ ಮಾತೂ ಕೇಳಲು ಆಗುವದೇ ಇಲ್ಲ. ಎಲ್ಲ ಮಾತುಗಳನ್ನೂ ಕೇಳಿದ್ದರೆ ಇಂದು ಇಲ್ಲಿ ಇರುತ್ತಿದ್ದಿಲ್ಲ. ಒಂದಾದರೂ ಕೇಳೇಬಿಡೋಣಲ್ಲವೇ..... ವರ್ಷದ ಇಪ್ಪತ್ತು ನಾಲ್ಕು ಏಕಾದಶಿ ಉಪವಾಸ ಮಾಡಿದ ಫಲ ಬರತ್ತೆ ಆಧದರಿಂದ *ಪ್ರಥಮ ಏಕಾದಶೀ ಉಪವಾಸ ಮಾಡು* ಎಂದು ಹೇಳಿದ್ದಕ್ಕಾಗಿ ಇಂದು ಒಂದು ದಿನ ಉಪವಾಸ ಮಾಡುವ ಮುಖಾಂತರ ದೇವರ ಮಾತು ಕೇಳುವ ಪ್ರಸಂಗ ಬಂದಿದೆ. ಅದಕ್ಕೇ ನಾವು ಖುಶಿ ಪಡಬೇಕಷ್ಟೆ... *ಈ ಬಾರಿಯ ಏಕಾದಶೀ......* ದೇವರ ಅಪಾರ ಕಾರುಣ್ಯದಿಂದ  ನಾಳೆಗೆ  ಏಕಾದಶೀ ಇದೆ. ಅದೂ ಪ್ರಥಮೈಕಾದಶಿ.   ಸಂತತ ಏಕಾದಶಿ ಹರಿಯ ಸನಿಹದಲ್ಲಿ ಕುಳಿತು ಭಾಗವತಾದಿ ಗ್ರಂಥಗಳ ಶ್ರವಣ ಮಾಡುತ್ರಾ, ಹರಿನಾಮ ಸರಣೆ ಮಾಡುತ್ತಾ ಉಪವಾಸ ಮಾಡು ಎಂಬ ಮಾತನ್ನು ಪಾಲಿಸುವ ಸಮಯ ನಾಳೆಗೆ ಒದ...

*ಜ್ಙಾನ - ಹಣ ಹಾಗೂ ವಿಶ್ವಾಸ*

Image
*ಜ್ಙಾನ - ಹಣ  ಹಾಗೂ ವಿಶ್ವಾಸ*  "ಜ್ಙಾನ ಧನ ವಿಶ್ವಾಸಗಳು ತುಂಬ ಆತ್ಮೀಯ ಮಿತ್ರರು. ವರ್ಷವರ್ಷಗಳಿಂದ ಕೂಡಿಯೇ ಇರುವವರು. ಒಂದು ದಿನ ವಿಚಾರಿಸುತ್ತಾರೆ ಇಷ್ಟು ದಿನ ಕೂಡಿ ಇದ್ದೇವೆ.‌ ಕೆಲವು ದಿನ ಪ್ರತ್ಯೇಕ ಪ್ರತ್ಯೇಕವಾಗಿ ವಿಶ್ವ ಪರ್ಯಟನೆಗೆ ಹೋಗಿಬರೋಣ.  ಪ್ರತ್ಯೇಕವಾಗಿ ನಾವು ಯಾತ್ರೆಗೆ ಹೊರಟರೆ, ಪ್ರಸ್ಪರ ನಮ್ಮಭೆಟ್ಟಿ ಆಗುವದು,  ನಾವೆಲ್ಲ ಸಿಗುವದು ಯಾವಾಗ.... ???  ಧನ...) ನಾನು ಬ್ಯಾಂಕಿನಲ್ಲಿ, ಟಿಜೋರೊಯಲ್ಲಿ, ಅನೇಕರ ಜೋಬಿನಲ್ಲಿ, ಶ್ರೀಮಂತರಲ್ಲಿ, ಹೀಗೆ ಅನೇಕ ಕಡೆ ಇರುವೆ. ಆ ಕಡೆ ನೀವು ಬಂದಾಗ ಸಿಗೋಣ.  ಜ್ಙಾನ .. ) ವಿದ್ಯಾವಂತರಲ್ಲಿ, ಕಾಲೇಜಿನಲ್ಲಿ, ಆಶ್ರಮಗಳಲ್ಲಿ, ಗುರುಕುಲಗಳಲ್ಲಿ ಮತ್ತು ಪ್ರತಿಯೊಬ್ಬ ಮನುಷ್ಯನಲ್ಲಿಯೂ ನಾನಿರುತ್ತೇನೆ ಹಾಗಾದರೆ ಆಚೆ ಬಂದಾಗ ನಾವು ಪರಸ್ಪರ ಸಿಗೋಣ. ಇಬ್ಬರು ಖುಶಿಯಾದರು. *ವಿಶ್ವಾಸ* ಮಾತ್ರ ಮಾರಿ ಕೆಳಗೆ ಹಾಕಿ ಕುಳಿತಿದ್ದ... ಜ್ಙಾನ ಹಾಗೂ ಧನ  ಯಾಕೋ ಅಷ್ಟು ಬೇಸರ ಆಗಿ ಅಲಾ ಎಂದು  ಕೇಳಿದರು. ವಿಶ್ವಾಸ...) *ಒಂದು ಬಾರಿ ನಾನು ಹೋದರೆ, ತಿರುಗಿ ನಾ ಎಲ್ಲಿಯೂ ಸಿಗಲ್ಲ* ಇದೆ ನನಗೆ ದೊಡ್ಡ ಚಿಂತೆಯಾಗಿದೆ. ನಾನು ಸಿಗುವದಿಲ್ಲ ಅಷ್ಟೇ ಅಲ್ಲ. "ನೀವಿಬ್ಬರೂ ಸರಿಯಾಗಿ ಉಳಿಯಲಾರಿರಿ" ಇದುನೂ ಒಂಮದು ಚಿಂತೆ ಹಾಗಾಗಿ ಏನು ಮಾಡಲಿ ಎಂದು ಯೋಚಿಸುತ್ತಾ ಇದ್ದೆ....  ಇದೊಂದು ಪ್ರಸಿದ್ಧ ಕಥೆ. ಇದರಿಂದ ಅನೇಕ ನಿ...

*ಹೊಟ್ಟೆ ತುಂಬಿದರೂ, ಭಿಕ್ಷೆ ಬೇಡುವದು ಬಿಡಲ್ಲ.......*

Image
*ಹೊಟ್ಟೆ ತುಂಬಿದರೂ, ಭಿಕ್ಷೆ ಬೇಡುವದು ಬಿಡಲ್ಲ.......* ಭಿಕ್ಷೆ ಬೇಡುವದು ಏತಕೆ ಹೊಟ್ಟೆಗೋಸ್ಕರ. ಹೊಟ್ಟೆ ತುಂಬಿದಮೇಲೂ ಭಿಕ್ಷೆ ಬೇಡುತ್ತೇವೆ ಎಂದರೆ ಭಿಕ್ಷೆ ಬೇಡುವದು ನಮ್ಮ ಸ್ವಭಾವವಾಗಿದೆ ಎಂದೇ ಅರ್ಥ. ನಾವು  ಭಿಕ್ಷೇ ಬೇಡುವವರೆ. ಖಂಡಿತವಾಗಿಯೂ ಬೇಡೋಣ. ಅದು ಬೇಕು ಇದು ಬೇಕು, ಅದು ಸಿಕ್ಕಾದ ಮೇಲೆ ಮತ್ತೊಂದು , ಅದೂ ದೊರೆತಾದಮೇಲೆ ಮುಗದೊಂದು ಹೀಗೆ ಬೇಡ್ತಾನೆ ಕೂತರೆ ಅದು ಮಾತ್ರ ಅತೀದೊಡ್ಡ ತಪ್ಪು ಎಂದಾಗಬಹುದು.   ಹೊಟ್ಟೆ ತುಂಬಿಸಿಕೊಳ್ಳವುದು ತೃಪ್ತಿಗೋಸ್ಕರ. ಹೊಟ್ಟೆ ತುಂಬಿದಾಗ ಯಾರಿಗೆ ತೃಪ್ತಿ ಆಗುವದಿಲ್ಲವೋ ಆ ವ್ಯಕ್ತಿ ಹದಿನಾಲ್ಕು ಲೋಕದಲ್ಲಿಯ ಸಕಲ ವೈಭೋಗಗಳನ್ನು ಒಂದೊಂದಾಗಿ ಒದಗಿಸಿದಾಗಲೂ ತೃಪ್ತಿ ಆಗುವದೇ ಇಲ್ಲ. "ದೊರೆತದ್ದರಲ್ಲಿ ಸಂತೃಪ್ತನಾಗಿರು" ಈ ನೀತಿಯನ್ನು ವಾಮನರೂಪಿ ಭಗವಾನ್ ಬಹಳ ಚೆನ್ನಾಗಿ ತಿಳಿಸಿಕೊಡುತ್ತಾನೆ.  ವಾಮನ ತನಗಾಗಿ ಬಂದವನಲ್ಲ. ನಮಗೋಸ್ಕರ ಭಕ್ತರಿಗೋಸ್ಕರವೇ ಬಂದವನು. ತನ್ನ ಅನೇಕ ನಡೆ ನುಡಿಗಳಿಂದ ಭಕ್ತರಿಗೆ ನೂರಾರು ಮಾರ್ಗದರ್ಶನ ಮಾಡುವ.  ದೇವರೇ ನಿಜವಾಗಿಯೂ ಭಕ್ತರ ಗೆಳೆಯ. ದೇವರ ಗೆಳತನದ ವೈಭವ ಅತ್ಯದ್ಭುತ.  ನಮಗೂ ನೂರಾರು ಗೆಳೆಯರು ಇರುತ್ತಾರೆ. ನಾವೂ ನೂರಾರು ಮಂದಿಗೆ ಗೆಳೆಯರಾಗಿರುತ್ತೇವೆ. ಆ ಗೆಳೆಯತನ ಕೇವಲ ಸ್ವಾರ್ಥಕ್ಕಾಗಿಯೇ. ಇದ್ದರೂ ಕೆಲ ದಿನ. ಕೆಲ ವರ್ಷ. ಅಥವಾ ಅಬ್ಬಬ್ಬಾ ಅಂದರೆ ಈ ಒಂದು ಜೀವನ ಮಾತ್ರ. ಅಂತಹ ಗೆಳೆತನದ...

ತೃಪ್ತಿ (satisfaction) ಸಮಾಧಾನ ಎಲ್ಲಿ ಸಿಗತ್ತೆ... ??

ತೃಪ್ತಿ (satisfaction) ಸಮಾಧಾನ ಎಲ್ಲಿ ಸಿಗತ್ತೆ... ??  .  ತೃಪ್ತಿ (satisfaction) ಸಮಾಧಾನ ಎಲ್ಲಿ ಸಿಗತ್ತೆ... ?? ಇದು ಒಬ್ಬರ ಪ್ರಶ್ನೆ. ದುಡಿತದಲ್ಕಿ ಹಣ ಸಿಗತ್ತೆ. ಒಂದು ಹಣ ದೊರೆತರೆ ಎಲ್ಲವೂ ದೊರೆಯತ್ತೆ ಎಂಬ ಭ್ರಮೆ ಬೇರೆ.  ಮೋಬೈಲಿನಲ್ಲಿ ನೆಟ್ ಇದೆ.  ಊಳುವದರಿಂದ ಧಾನ್ಯಗಳು ಸಿಗತ್ತೆ. ಇಂದಿನ ಮಾಲ್ ಗಳಿಗೆ ಹೋದರೆ ಎಲ್ಲವೂ ಸಿಗತ್ತೆ ಹಾಗೆ *ತೃಪ್ತಿಯೂ* ಮಾರ್ಕೆಟಿನಲ್ಲಿ ಸಿಗುವದಾಗಿದ್ದರೆ ಕೊಡುಕೊಳ್ಳುತ್ತಿದ್ದೆವೆಯೋ ಏನೋ. ಕೊಂಡುಕೊಳ್ಳಲು ಎಲ್ಲಿಲ್ಲಿಯೂ ಸಿಗುವದೇ ಇಲ್ಲ. ಅಂತೆಯೇ ಏನೆಲ್ಲ ಕೊಂಡುಕೊಂಡರೂ ತೃಪ್ತಿ ಪಡೆಯಲಾಗುವದಿಲ್ಲ. ತೃಪ್ತಿಯಿಂದ ಇರಲು ಆಗುವದೇ ಇಲ್ಲ.  ಸಿಗದ ತೃಪ್ತಿಯಿಂದ, ತೃಪ್ತಿ ಪಡೆಯುವದು ಹೇಗೆ.... ??  ತೃಪ್ತಿ ಸಿಗುವ ವಸ್ತು ಅಲ್ಲ. ಅದು ಅಭಿವ್ಯಕ್ತಗೊಳಿಸುವ ವಸ್ತು. *ಯಾವದು ಅತ್ಯಮೂಲ್ಯವಾಗಿದೆ ಅದೆಲ್ಲ ನಮ್ಮಲ್ಲಿಯೇ ಇದೆ*  ಯಾವದು ಕಚಡಾ ವಸ್ತು ಇದೆ ಅದು ಮಾರ್ಕೆಟಿನಲ್ಲಿ ಇದೆ. ನಮಗೇನು ಬೇಕು ಅದನ್ನು ಅಲ್ಕಿ ಹುಡುಕೋಣ.  ಅಮೂಲ್ಯವಾದ  ತೃಪ್ತಿಯೂ ಸಹ  ನಮ್ಮಲ್ಲಿಯೇ ಇದೆ. ಅದನ್ನು ಅನುಭವಿಸುವ ಕಲೆ ತಿಳಿಯಬೇಕು. ಅಭಿವ್ಯಕ್ತಗೊಳಿಸುವ ಬಗೆ ಗೊತ್ತಿರಬೇಕು.  ಊಟ - ನಿದ್ರೆ - ವಾಕಿಂಗ್ -  ಅಧ್ಯಯನ - ಪೂಜೆ - ಸಂಧ್ಯಾವಂದನೆ - ನಮ್ಮ ನಮ್ಮ ಆಫೀಸಿನ ಕೆಲಸ - ಟಿವಿ ಮೋಬೈಲು ಇತ್ಯಾದಿಗಳಲ್ಲಿ ಬ್ಯಸಿ ...

*ಮಳೆ ಬೆಳೆಗಳು ಇಲ್ಲದೆ ಈ ಜಗವು ಎತ್ತ ಹೋಗ್ತಾ ಇದೆ.....*

Image
*ಮಳೆ ಬೆಳೆಗಳು ಇಲ್ಲದೆ ಈ ಜಗವು ಎತ್ತ ಹೋಗ್ತಾ ಇದೆ.....* "ಜನರಿಂದ ಜಗತ್ತು, ಜಗತ್ತಿನಿಂದ ಜನ" ಇದು ಸೃಷ್ಟಿಯ ನಿಯಮ. ಇಂದು ಜಗತ್ತಿನ ಪ್ರಕೃತಿಯ ವಿರುದ್ಧ ಜನ, ಜನರ ವಿರುದ್ಧ ಪ್ರಕೃತಿ ಜಗತ್ತು ಎಂಬಂತಾಗಿದೆ.  ಒಂದೋ ಪ್ರಕೃತಿಗೆ ನಾವು ಅನುಕೂಲರಾಗಬೇಕು. ಇಲ್ಲವೋ ಪ್ರಕೃತಿಯನ್ನು ನಮ್ಮ ಮೂಗಿಗೆ ಎಳೆತರಬೇಕು. ಎರಡನೇಯದು ಅಸಾಧ್ಯದ ಮಾತು.  ಪ್ರಕೃತಿ ಏನಿದ್ದರೂ ನಮಗಿಂತಲೂ ಬಲಿಷ್ಠ. ಪ್ರಕೃತಿ ವಿಕೋಪಕ್ಕೆ ಮಾನವ ನುಚ್ಚುನೂರು ಆಗುವ.  ಪ್ರಕೃತಿಗೆ ಅನುವಾಗಿ ಇರಬೇಕು. ಆದರೆ ಪ್ರಕೃತಿಗೆ ಅನುಗುಣವಾಗಿ ಇರಲು ಅಸಾಧ್ಯವಾಗುವಷ್ಟು ತುಂಬ ದೂರ ಹೋಗಿಬಿಟ್ಟಾಗಿದೆ.  *ಪ್ರಕೃತಿ ವಿಕೋಪಗಳು* "ಯಾರಿಗೇ ಆಗಲಿ ಅನುವಾಗಿದ್ದರೆ ಸುಖಿ, ಅನುವಾಗದಿದ್ದರೆ ಕಾಲ್ಗಸ" ಹೀಗಿರುವಾಗ ಪ್ರಕೃತಿಗೆ ನಾವು ಅನುವಾಗಿಲ್ಲದೇ ಇರುವದರಿಂದಲೇ ನಮ್ಮ ಮೇಲೆ ಪ್ರಕೃತಿಗೆ ವಿಕೋಪ. ವಿಕೋಪಗಳ ಅಭಿವ್ಯಕ್ತಿ ಅನೇಕವಿಧ...  ಸುನಾಮಿ ಮೊದಲಾದ ತೂಫಾನುಗಳು ಒಂದಾದರೆ, ಭೂಕಂಪನ ಮೊದಲಾದವುಗಳು ಮತ್ತೊಂದು ವಿಧ. ತಾಪಮಾನ ಹೆಚ್ಚಾಗುವದೂ ಪ್ರಕೃತಿವಿಕೋಪ. *ಕಾಲಕಾಲಕ್ಕೆ ಮಳೆಯಾಗದೆ ಪ್ರತಿವರ್ಷವೂ ಬರಗಾಲ ಬರುವದೇನಿದೆ ಇದು ಮಹಾ ವಿಕೋಪ.* ನದಿಗಳು ಬತ್ತಿ ಹೋಗಿವೆ. ಗುಡ್ಡಗಳು ಕರಗುತ್ತವೆ. ಮಣ್ಣಿನ ಭೂಮಿ ನಾಶವಾಗುತ್ತಿದೆ. ಭೂಮಿಯಲ್ಲಿ ನೀರು ಬರಿದಾಗಿದೆ. ಸ್ವಚ್ಛಘಾಳಿ ಇಲ್ಲ. ಆಹುತಿಗಾಗಿ ಬೆಂಕಿ ಕಾಣದೆ, ಅಗ್ನಿದುರಂತಗಳಿಗೇ ಬೆಂಕಿ ಕಾಣುತ್...

*ಓ ಸ್ವರಮಣ !!! ನಿನಗೆ ನಮಃ*

Image
*ಓ ಸ್ವರಮಣ !!! ನಿನಗೆ ನಮಃ* "ಸ್ವಸ್ಮಿನ್ನೇವ ರಮತಿ ಇತಿ ಸ್ವರಮಣಃ- ತನ್ನಲ್ಲಿಯೇ ತಾನು ಆನಂದದಿಂದ ಇರುತ್ತಾನೆ ಆದ್ದರಿಂದ ಸ್ವರಮಣ" ದೇವರು.  ಇದೇ ನಿಜವಾಗಿ ಆನಂದಾನುಭವ. ಹೀಗೇ ನಾವೂ ಆಗಬೇಕು.  ಸುಖಕ್ಕಾಗಿ ಆನಂದಕ್ಕಾಗಿ ಇರುವವರು ನಾವು. ಆನಂದ ಸ್ವರೂಪ ದೇವರು. ಸೌಖ್ಯ ಆನಂದ ಮೊದಲುಮಾಡಿ ಎಲ್ಲವನ್ನೂದೇವರೇ ದಯಪಾಲಿಸುತ್ತಾನೆ . ಅಭಿವ್ಯಕ್ತಗೊಳಿಸುತ್ತಾನೆ. ಇಂದು ಸುಖ ಸಿಗುವದು ಹೊರಗಿನ ಪದಾರ್ಥಗಳಿಂದ ಎಂದು ನಾವು ಭಾವಿಸಿದ ಕಾರಣ, ಎಲ್ಲವನ್ನೂ ಹೊರಗಿನಿಂದಲೇ ಪಡೆಯಲು ಹಂಬಲಿಸುತ್ತೇವೆ. ಸುಖ ಅನುಭವಿಸುವವ ನಾನು ಅಂದರೆ ಜೀವ. ಅವನೋ ಒಳಗೆ ಇದ್ದಾನೆ. ಸುಖವೋ ಹೊರಗಿನ ಪದಾರ್ಥಗಳಿಂದ ಎಂದು ಆದರೆ ಅದು ಅಸಾಧ್ಯ. "ಹೊರಗಿನ ಯಾವ ಪದಾರ್ಥವನ್ನು ದೇಹ ಮನಸ್ಸು ಒಳಗೆ ಸೇರಿಸಲು ಬಿಡಲಾರದು." ಅದು ಹೊರಗೆ ಹಾಕುವದು ನಿಶ್ಚಿತ. ಅದು ಹೇಗೆ... ?? ನಾವು ಎಷ್ಟು ಸ್ವಾರ್ಥಿಗಳೋ ಅಷ್ಟೇ ಸ್ವಾರ್ಥಿ ದೇಹ ಮತ್ತು ಮನಸ್ಸುಗಳು. ಕಣ್ಣು ಇದೆ ಹೊರಗಿನ ಯಾವ ಪದಾರ್ಥ ಸೇರಿದರೂ ಅದನ್ನು ಹೊರ ಹಾಕುವವರೆಗೆ ಅದಕ್ಕೆ ಸಮಾಧಾನವೇ ಇರುವದಿಲ್ಲ. ಹೊಟ್ಟೆ ಇದೆ, ಅದೂ ಅಷ್ಟೆ.  ತಾಯಿಯ ಉದರ ಗರ್ಭಕೋಶ ಇದೆ. ಜೀವ ಒಳ ಹೋದ ಕ್ಷಣದಿಂದ ಹೊರ ಹಾಕಲು ಶ್ರಮಿಸುತ್ತದೆ. ಒಂಭತ್ತು ತಿಂಗಳು ತರುವಾಯ ಆದರೂ ಸರಿ ಹೊರಗೆ ಹಾಕಿಯೇ ತೀರುತ್ತದೆ. ಇದು ದೇಹದ ಸ್ಥಿತಿ ಆದರೆ ...  ಮನಸ್ಸೂ ತೀರ ವಿಭಿನ್ನವೇನಲ್ಲ. ತನ್ನದು ಅಲ್ಲದ್ದು, ತನಗೆ ಸ...

*ಮೂಗು ಮುರುದೀತು......*

*ಮೂಗು ಮುರುದೀತು......* ಮೊನ್ನೆ ಬೆಂಗಳೂರಿನಲ್ಲಿ ಜನರಿಲ್ಲದ ಪ್ರದೇಶದಲ್ಲಿ ಆಟೋಗೋಸ್ಕರ ನಿಂತಿದ್ದೆ. ಎಷ್ಟೋ ಹೊತ್ತು ಕಾಯ್ದಮೇಲೆ ಒಂದು ರಿಕ್ಷಾ ಬಂದಿತ್ತು ಮಾತಾಡ್ತಿದ್ದೆ, ಅಷ್ಟರಲ್ಲಿಯೇ ಒಬ್ಬರು ಗಾಡಿಯಮೇಲೆ ಬಂದು ಬನ್ನಿ ನಾ ಕರೆದೊಯ್ತೇನೆ ಎಂದು ನನ್ನನ್ನು ಹತ್ತಿಸಿಕೊಂಡೇ ಬಿಟ್ಟರು.  ಸರಿ ಎಂದು ನಾ ಹತ್ತಿದೆ ರಿಕ್ಷಾ ಹೋಯಿತು. ನಡಿಯರಿ ಹೊರಡೋನಾ ಎಂದೆ. ಉತ್ತರಾದಿಮಠಕ್ಕೇ ಅಲ್ಲವೆ ಹೊರಡೋಣ ಅಂದರು. ನಾನು  "ನನಗೆ ಚಿಕ್ಕಲಸಂದ್ರ ಹೋಗುವದಿದೆ" ಎಂದು ಹೇಳಿದೆ. ಅವರು "ಬಸವನ ಗುಡಿ ಹೋಗ್ತಿದೀರಾ ಅಂತ ಅಂದುಕೊಂಡೆ, ಸಾರಿ ಆಚಾರ್ಯರೇ ... " ಎಂದು ಹೇಳಿ ಹೊರಟು ಹೋದರು. ಅಂದು ಏಕಾದಶಿ ಬೇರೆ..  ತುಂಬ ಸುಸ್ತು ನನಗೆ ಮುಂದೆ ಆಟೋ ಸಿಗಲು ಸರಿಯಾಗಿ ಅರ್ಧಗಂಟೆ ಆಯ್ತು. ಈ ತರಹದ ಅನುಭವ ನಿಮಗೂ ಆಗಿರಬಹುದು, ನಿಮ್ಮ ಅಗತ್ಯ ಅರಿಯದೇ ಸಮಯ ಹಾಳು ಮಾಡಿರಬಹುದು, ಇಲ್ಲ ಆ ತರಹದ ಕೆಲಸ ನಾವೇ ಮಾಡಿರಲೂ ಬಹುದು.  ಅವರ ಮನೋಭಾವ ನನಗೆ ಉಪಕಾರ ಮಾಡುವದೇ ಆಗಿತ್ತು. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಸ್ವಲ್ಪ ಗಡಿಬಿಡಿ ಮಾಡದೆ ಯೋಚಿಸಿ ಮಾತಾಡಿದ್ದರೆ ಇಬ್ಬರಿಗೂ ಹಿತವೇ ಆಗುತ್ತಿತ್ತು.  *ಕಷ್ಟದಲ್ಲಿ ಇರುವವರಿಗೆ ನೆರವಾಗುವದು ಒಳ್ಳೆಯ ಗುಣವೆ..* ಅವರಿಗೆ ನಿಮ್ಮ ನೆರವು ಇದೆಯೆ, ಇದ್ದರೆ ಯಾವ ತರಹದ್ದು ಎಂದು ಅರಿಯದೇ,  ಕಷ್ಟಕ್ಕೆ ನೆರವಾದರೆ ವಿನಾಕಾರಣ ಅವರ ಸಿಟ್ಟಿಗೆ ಗುರಿಯಾಗಬಹುದು. ಅವರ ಕೆಲಸ...

*ವೈದ್ಯೋ ನಾರಾಯಣೋ ಹರಿಃ*

Image
*ವೈದ್ಯೋ ನಾರಾಯಣೋ ಹರಿಃ* ಅಂತರರಾಷ್ಟ್ರೀಯ ವೈದ್ಯರ ದಿನಾಚರಣೆ ಇಂದಿದೆ. ವೈದ್ಯರನ್ನು ಇಂದು ನೆನೆಸಿ ಶುಭಹಾರೈಸುವದೂ ಅನಿವಾರ್ಯವಾಗಿದೆ. "ಇಂದು ನಮಗೆ ವೈದ್ಯರು, ವೈದ್ಯರಿಗೆ ನಾವು" ಹೀಗರ ಪರಸ್ಪರ ಉಪಕಾರ ಭಾವ ಇದೆ.  ರೋಗಗಳು  ಮಾನಸಿಕ ದೈಹಿಕ ಈ ಕ್ರಮದಲ್ಲಿ ಅನೇಕವಿಧ. ರೋಗಾಭಿಮಾನಿಗಳು ದೈತ್ಯರುಗಳು. ರೋಗಾಭಿಮಾನಿ ದೈತ್ಯರು ಇರಬಾರದು ಎಂದಾದರೆ ಆರೋಗ್ಯ ಒದಗಿಸಿದ ಕಾಲದಲ್ಲಿ ಆರೋಗ್ಯ ಕೊಟ್ಟ ದೇವರ ಕೃತಜ್ಙತಾರೂಪವಾಗಿ  ಧರ್ಮ ಜಪ ಪೂಜೆ  ಇವು ಅನಿವಾರ್ಯ.  ಒಳ್ಳೆಯ ದಿನಗಳಿಗೋಸ್ಕರ ಕೆಟ್ಟದಿನಗಳ ಜೊತೆಗೆ ಹೋರಾಡುವಂತೆ, ಆರೋಗ್ಯಕ್ಕೋಸ್ಕರ ರೋಗಗಳ ಜೊತೆ ಹೋರಾಡುವದು ಅನಿವಾರ್ಯ. ಹೋರಾಡುತ್ತೇವೆಯೂ ಸಹ. ಗೆಲುವು ಬರಬೇಕಾದರೆ, ಆರೋಗ್ಯ ಒದಗಿ ಬರಬೇಕೇದಾರೆ ದೇವರ ದೈವೀ ಬಲವಿದ್ದರೆ ಸಾಧ್ಯ. ಇದು ಇಂದಿನ ವೈದ್ಯರೆಲ್ಲರಿಗೂ ವಿದಿತವಾದ ವಿಷಯವೇ.  ಇತಿಹಾಸದ ಕಾಲದಿಂದ ಗಮನಿಸಿದಾಗ, ಇತಿಹಾಸ ಪ್ರವರ್ತಕವಾದ ಮಹಾಭಾರತ ಭಾಗವತ ಮೊದಲಾದ ಯಾವ ಗ್ರಂಥಗಳಲ್ಲಿಯೂ *ತಲೆ ಶೂಲಿಯಿತ್ತು, ಹೊಟ್ಟೆನೊವ್ವು, ಮೊಣಕಾಲು ನೊವು ಮೊದಲಮಾಡಿ ಕ್ಯಾನ್ಸರ್ ವರೆಗೆ ಮಾಹಾ ಮಹಾ ರೋಗಗಳಿಗೆ ಬಲಿಯಾದರು* ಎಂಬ ಒಂದು ಕಥೆಯನ್ನೂ ಕೇಳುವದಿಲ್ಲ.  ಇಂದು ಒಬ್ಬನೂ ರೋಗವಿಲ್ಲದ ನಿರೋಗಿಯಾಗಿ ಪರಿಪೂರ್ಣ ಆರೋಗ್ಯವಂತನಿದ್ದಾನೆ ಎಂದೂ ಕೇಳುವದಿಲ್ಲ. ಇದು ಕೇವಲ ಐದು  ಸಾವಿರ ವರ್ಷದಲ್ಲಿ ಆದ ಬದಲಾವಣೆ.  *ದಶ ವೈ...