*ಓ ಗುರೋ.... !! ನಿನಗೆ ನಮಃ*

*ಓ ಗುರೋ.... !!  ನಿನಗೆ ನಮಃ*

"ಗುರುಃ ಗುರುತಮೋ" ಎಂದು ವಿಷ್ಣು ಸಹಸ್ರನಾಮದಲ್ಲಿ ಬಂದ ಒಂದು ನಾಮ.  ಮೂಲ ಗುರುವಾದ ವೇದವ್ಯಾಸ ಕೃಷ್ಣ ಕಪಿಲ ದತ್ತಾತ್ರೇಯ ಮೊದಲಾದ ಅನಂತ ಅವತಾರಾತ್ಮಕ  ಶ್ರೀ ಹರಿಗೆ "ಗುರು" ಎಂದು ವಿಷ್ಣು ಸಹಸ್ರನಾಮ ಸಂಬೋಧಿಸುತ್ತದೆ. *ಆ ಗುರುವಿನಿಂದ ಆರಂಭಿಸಿ ಇಂದಿನ ನಮ್ಮ ಗುರುಗಳ ವೆರೆಗೂ ಎಲ್ಲ ಗುರುಗಳಿಗೆ ಅನಂತ ವಂದನೆಗಳನ್ನು* ನಿತ್ಯವೂ ಜೊತೆಗೆ ನಾಳೆಯ ದಿನ ವಿಶೇಷವಾಗಿ ಸಲ್ಲಿಸೋಣ. 

*ಗುರುಗಳು ಯಾರು... ??*

ವಿದ್ಯೆ ಕೊಟ್ಟು, ತತ್ವಜ್ಙಾನವನ್ನು ಉಪದೇಶಿಸಿ, ಸನ್ಮಾರ್ಗದಲ್ಲಿ ಇರಿಸಿ, ಹಿತಾಹಿತಗಳನ್ನು ತಿಳಿ ಹೇಳಿ, ಮಮತಾ ಅಭಿಮಾನಗಳಿಲ್ಲದೇ ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ, ದೂರದೃಷ್ಟಿಯ ವಿಚಾರಗಳನ್ನು ಒದಗಿಸುವ, ಧರ್ಮ ಮಾಡಿಸುವ, ವಿಷ್ಣು ಭಕ್ತಿ ಬೆಳಿಸುವ, ಧರ್ಮ ಗುರು ಶಾಸ್ತ್ರ ದೇವರಲ್ಲಿ ನಿಷ್ಠೆ ಒದಗಿಸುವ, ನಂಬಿ ಬಂದವರಿಗೆ ಸಮುದ್ರದಂತೆ ಏಕಾಶ್ರಯರು,  ಇತ್ಯಾದಿ ನೂರಾರು ಸಾವಿರಾರು ಗುಣಗಳುಳ್ಳವರೇ ಗುರುಗಳು. ಆ ಗುರುಗಳಿಗೆ ಕೋಟಿ ಕೋಟಿ ವಂದನೆಗಳು. 

*ಗುರುಗಳು ಇರುವದೇ ಉಪದೇಶಕ್ಕೆ...*

ಮೂಲ ಗುರು ಆದಿ ಗುರುವಾದ ಬ್ರಹ್ಮದೇವರಿಗೇ ಉಪದೇಶ ಮಾಡಿದರೆ. ಬ್ರಹ್ಮದೇವರು ಉಳಿದ ದೇವತೆಗಳಿಗೆ ಉಪದೇಶಿಸಿದರು. ದೇವತೆಗಳು ಋಷಿಗಳಿಗೆ. ಋಷಿಗಳು ಮುನಿಗಳಿಗೆ. ಮುನಿಗಳು ಇಂದು ನಮಗೆ ಉಪದೇಶ ಮಾಡುತ್ತಿದ್ದಾರೆ. ಈ ಪ್ರಥ ಅಂದಿನಿಂದ ಬಂದ ಅನೂಚಾನ ಪ್ರಥ. ಒಂದು ಖಂಬದಿಂದ ಇನ್ನೊಂದು ಖಂಬ ಬದಲಾದರೂ ಕರೆಂಟು ಹೇಗೇ ಒಂದೇ ಇರತ್ತದೆಯೋ ಹಾಗೆ ಗುರುಗಳಿಂದ ಗುರುಗಳು ಬದಲಾದರೂ ತತ್ವಜ್ಙಾನ ಮಾತ್ರ ಒಂದೇ ಇದೆ. ಅದು ಆದಿ ಗುರುವಾದ ದೇವನನ್ನು ತಿಳಿಯುವದೇ. ಗುರೂಪದೇಶ ಎಷ್ಟಾದರೂ ಆ ವಿಷಯ ತತ್ವ ಶಿಶ್ಯನ ತಲೆಯಲಿ ಬೇರೂರಬೆಕಾದರೆ ಶಿಶ್ಯನೂ ಸಹ ಹಲವಾರು ಗುಣಗಳಿಂದ ಹದನಾಗಿರಬೇಕು. 

ಇಂದು ಹಣ ಕೊಟ್ಟರೆ ಅನ್ನ ಸಿಕ್ಕೀತು ಆದರೆ ತೃಪ್ತಿ ಸಿಗದು ಹಾಗೆಯೇ ಹಣ ತೆತ್ತರೆ  ವಿದ್ಯೆ ಬಂದೀರು.‌ ಆದರೆ ತತ್ವಜ್ಙಾನ ಬರಲಾರದು. ತತ್ವಜ್ಙಾನಕ್ಕೋಸ್ಕರ ಗುರು ಶುಶ್ರೂಷೆ, ಭಕ್ತಿ, ವೈಷ್ಣವದೀಕ್ಷೆ, ಅಸೂಯ ಮೊದಲಾದ ದೋಷವರ್ಜನ, ವಿರಕ್ತಿ ಇವಗಳಿಂದ ಹದನಾದವನಿಗೆ ತತ್ವಜ್ಙಾನದ ಬೀಜ ಬಿತ್ತಲು ಸುಗವಾಗತ್ತೆ. ಆ ಭೂಮಿಯಲ್ಲಿ ತತ್ವಜ್ಙಾನದ ಫಸಲು ಹಸವಾಗಿ ಬೆಳೆಯತ್ತೆ. 

*ಅರ್ಜುನ - ದುರ್ಯೋಧನ*

ದುರ್ಯೋಧನನಿಗೆ ಸುಮಾರು ನೂರುಜನ "ವೇದವ್ಯಾಸ, ಕೃಷ್ಣ, ಮೈತ್ರೇಯರು, ವಿದುರ, ಭೀಷ್ಮ, ದ್ರೋಣ, ಧೃತರಾಷ್ಟ್ರ, ಗಾಂಧಾರಿ ಹೀಗೆ ನೂರು ಜನ ನೂರಾರು ಸಾವಿರಾರು ಅಧ್ಯಾಯಗಳನ್ನು ಉಪದೇಶ ಮಾಡಿರಬಹುದು" ಆದರೆ ಆ ಯಾವ ಉಪದೇಶವೂ ದುರ್ಯೋಧನನ ತಲೆಗೆ ನಾಟಲೇ ಇಲ್ಲ. 

ಅರ್ಜುನನಿಗೆ ಕೃಷ್ಣನೊಬ್ಬ ಹದಿನೆಂಟೇ ಅಧ್ಯಾಗಳ ಉಪದೇಶ ಮಾಡಿ "ತಸ್ಮಾದುತ್ತಿಷ್ಠ ಭಾರತ" ಎಂದು ಆದೇಶಿಸಿದ. ಆ ಕ್ಷಣಕ್ಕೇನೆ ವಿಸರ್ಜಿಸಿದ ಬಿಲ್ಲು ಬಾಣಗಳನ್ನು ಹಿಡಿದು ಯುದ್ಧಕ್ಕೆ ಸಿದ್ಧನಾದ. ಹದಿನಾರು ದಿನ ಕಳೆಯುವದರಲ್ಲಿಯೇ ಯುದ್ಧಗೆದ್ದು ಸಿದ್ಧಪುರುಷನಾದ.

 ಇಂದು ಉಪದೇಶ ಮಾಡಲು ನೂರು ಜನ ಸಿಗಬಹುದು. ಹಣ ಕೊಟ್ಟರೆ ವಿದ್ಯೆ ಬಂದೀತು. ಆದರೆ *ಗುರುಶುಶ್ರೂಷೆ ಮೊದಲಾದ ಗುಣಗಳಿಂದ  ಹದನಾದವನಿಗೆ, ಉಪದೇಶದ ಪರಿಣಾಮ ಹಾಗೂ ಆಗುವ ಉಪದೇಶದ ಲಾಭ ಇನ್ಯಾರಿಗೂ ಆಗದು* ಇದು ದುರ್ಯೋಧನ ಅರ್ಜುನರಿಂದ ತಿಳಿದು ಬರತ್ತೆ. 

ಹೇ ಗುರೋ !!! ಜಗತ್ತಿಗೆ ಗುರುವಾದ ನಿನಗೆ ಅನಂತ ವಂದನೆಗಳು. ನಿನ್ನನ್ನು *ಗುರು* ಎಂದು ಚಿಂತಿಸಿದ ಕಾರಣವೇ ನಮ್ಮೆಲ್ಲ ಗುರುಗಳು ಗುರುಗಳು ಆಗಿದ್ದಾರೆ. 

*ತಿಳಿಸುವವ ನೀನೇ ಉಪದೇಶಕರೊಳಿದ್ದು*

ಶೃತಿ ತತಿಗಳಲ್ಲಿ ಇದ್ದು ತಿಳಿಸಿಕೊಂಬುವವನು ನೀನೆ. *ಗುರುಗಳಲಿದ್ದು ಉಪದೇಶಿಸುವವ ನೀನು* ನನ್ನಲ್ಲಿ ಇದ್ದು ತಿಳಿಯುವವನೂ ನೀನೆ. ಆದ್ದರಿಂದ ಗುರು ನೀನೇ. ಅಂತಹ ಆದಿ ಗುರುವಾದ ನಿನಗೆ,  ಮೂಲು ಗುರುವಾದ ವಾಯುದೇವರಿಗೆ, ನಮ್ಮ ಉದ್ಧಾರಕ ಗುರುಗಳಾದ ನಮ್ಮ ಗುರುಗಳಿಗೂ ಕೋಟಿ ಕೋಟಿ ವಂದನೆಗಳು. ಅನಂತಾನಂತ ನಮಸ್ಕಾರಗಳು.

*✍🏽ನ್ಯಾಸ..*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
Appreciation to my father who told me on the topic of this
website, this web site is really amazing.
Anonymous said…
I am actually grateful to the holder of this web page who has shared this great piece of writing at at this time.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*