*ಜ್ಙಾನ - ಹಣ ಹಾಗೂ ವಿಶ್ವಾಸ*

*ಜ್ಙಾನ - ಹಣ  ಹಾಗೂ ವಿಶ್ವಾಸ* 

"ಜ್ಙಾನ ಧನ ವಿಶ್ವಾಸಗಳು ತುಂಬ ಆತ್ಮೀಯ ಮಿತ್ರರು. ವರ್ಷವರ್ಷಗಳಿಂದ ಕೂಡಿಯೇ ಇರುವವರು. ಒಂದು ದಿನ ವಿಚಾರಿಸುತ್ತಾರೆ ಇಷ್ಟು ದಿನ ಕೂಡಿ ಇದ್ದೇವೆ.‌ ಕೆಲವು ದಿನ ಪ್ರತ್ಯೇಕ ಪ್ರತ್ಯೇಕವಾಗಿ ವಿಶ್ವ ಪರ್ಯಟನೆಗೆ ಹೋಗಿಬರೋಣ. 

ಪ್ರತ್ಯೇಕವಾಗಿ ನಾವು ಯಾತ್ರೆಗೆ ಹೊರಟರೆ, ಪ್ರಸ್ಪರ ನಮ್ಮಭೆಟ್ಟಿ ಆಗುವದು,  ನಾವೆಲ್ಲ ಸಿಗುವದು ಯಾವಾಗ.... ??? 

ಧನ...) ನಾನು ಬ್ಯಾಂಕಿನಲ್ಲಿ, ಟಿಜೋರೊಯಲ್ಲಿ, ಅನೇಕರ ಜೋಬಿನಲ್ಲಿ, ಶ್ರೀಮಂತರಲ್ಲಿ, ಹೀಗೆ ಅನೇಕ ಕಡೆ ಇರುವೆ. ಆ ಕಡೆ ನೀವು ಬಂದಾಗ ಸಿಗೋಣ. 

ಜ್ಙಾನ .. ) ವಿದ್ಯಾವಂತರಲ್ಲಿ, ಕಾಲೇಜಿನಲ್ಲಿ, ಆಶ್ರಮಗಳಲ್ಲಿ, ಗುರುಕುಲಗಳಲ್ಲಿ ಮತ್ತು ಪ್ರತಿಯೊಬ್ಬ ಮನುಷ್ಯನಲ್ಲಿಯೂ ನಾನಿರುತ್ತೇನೆ ಹಾಗಾದರೆ ಆಚೆ ಬಂದಾಗ ನಾವು ಪರಸ್ಪರ ಸಿಗೋಣ. ಇಬ್ಬರು ಖುಶಿಯಾದರು. *ವಿಶ್ವಾಸ* ಮಾತ್ರ ಮಾರಿ ಕೆಳಗೆ ಹಾಕಿ ಕುಳಿತಿದ್ದ... ಜ್ಙಾನ ಹಾಗೂ ಧನ  ಯಾಕೋ ಅಷ್ಟು ಬೇಸರ ಆಗಿ ಅಲಾ ಎಂದು  ಕೇಳಿದರು.

ವಿಶ್ವಾಸ...) *ಒಂದು ಬಾರಿ ನಾನು ಹೋದರೆ, ತಿರುಗಿ ನಾ ಎಲ್ಲಿಯೂ ಸಿಗಲ್ಲ* ಇದೆ ನನಗೆ ದೊಡ್ಡ ಚಿಂತೆಯಾಗಿದೆ. ನಾನು ಸಿಗುವದಿಲ್ಲ ಅಷ್ಟೇ ಅಲ್ಲ. "ನೀವಿಬ್ಬರೂ ಸರಿಯಾಗಿ ಉಳಿಯಲಾರಿರಿ" ಇದುನೂ ಒಂಮದು ಚಿಂತೆ ಹಾಗಾಗಿ ಏನು ಮಾಡಲಿ ಎಂದು ಯೋಚಿಸುತ್ತಾ ಇದ್ದೆ.... 

ಇದೊಂದು ಪ್ರಸಿದ್ಧ ಕಥೆ. ಇದರಿಂದ ಅನೇಕ ನಿದರ್ಶನಗಳು ಮಾರ್ಗದರ್ಶನಗಳು ಸಿಕ್ಕು ಬರತ್ತುವೆ. "ಹಣದಿಂದ ಭರವಸೆ ಬರದು, ಜ್ಙಾನದಿಂದಲೂ ಈ ಕಾಲಕ್ಕೆ ಭರವಸೆ ಬರದು. ವಿಶ್ವಾಸವಿರುವಲ್ಲಿಯೇ ಭರವಸೆ ಇರುವದು." 

ಆಫೀಸಿಗೆ ಹೋಗ್ತೇವೆ, ದೇವರ ಗುಡಿಗೆ ಹೋಗ್ತೇವೆ, ಪಾರ್ಕಿಗೆ ಹೋಗ್ತೇವೆ,  ಪಾಠ ಪ್ರವಚನಗಳಲ್ಲಿಯೂ ತೊಡಗಿಕೊಳ್ಳುತ್ತೇವೆ, ಅಡಿಗಿಯನ್ನೂ ಮಾಡುತ್ತೇವೆ, ಅನೇಕರ ಗೆಳೆತನ ಸಂಪಾದಿಸ್ತೇವೆ,  ಹಣವನ್ನೂ ಸಂಪಾದಿಸ್ತೇವೆ, ಅತ್ಯುತ್ತಮ ಜ್ಙಾನವನ್ನೂ ಸಂಪಾದಿಸ್ತೇವೆ ಇನ್ನೇನೋ ನೂರು ಕಾರ್ಯಗಳನ್ನು ಮಾಡುತ್ತೇವೆ. ಯಾಕೆ ಮಾಡುತ್ತೇವೆ.. ?? ಇವುಗಳಿಂದ ನನಗೆ ಸಾರ್ಥಕವಾಗುತ್ತದೆ  ಎಂಬ *ಪೂರ್ಣ ವಿಶ್ವಾಸ ಇರುವದರಿಂದಲೇ*  ವಿಶ್ವಾಸವಿರಲಿಲ್ಲ ಎಂದಾಗಿದ್ದರೆ ನಾವು ಯಾವದನ್ನೂ ಅರಿಸಿ ಹೋಗುತ್ತಿರಲಿಲ್ಲ. ಆದ್ದರಿಂದ ನಾನು ಎಲ್ಲಿಯೂ ಹೋಗುವದಿಲ್ಲ. 

"ವಿಶ್ವಾಸ" ಹೇಳಿತು ನಾ ಇಲ್ಲದಿದ್ದರೆ ನಿಮ್ಮ ಅಸ್ತಿತ್ವವೇ ಇಲ್ಲ. ಓ ಜ್ಙಾನ ಧನ ಮಿತ್ರರೇ!! "ನಾನು ಇವನಲ್ಲಿ ಇದ್ದರೆ ನನ್ನನ್ನು ಜಗತ್ತಿಗೆ ಹರಡಿಸುತ್ತಾನೆ" ಎಂಬ ವಿಶ್ವಾಸ ಇದ್ದರೆನೇ ನೀನು ಯಾರಲ್ಲಾದರೂ ಹೋಗಿ ಸೇರಿಕೊಳ್ಳುತ್ತಿರಿ. ಆ ವಿಶ್ವಾಸವೇ ಇಲ್ಲವಾದರೆ ಕಳೆದುಕೊಂಡಿರೀ ಎಂದಾದರೆ ಕುಡಕರ ಕಳ್ಳರ ದ್ರೋಹಿಗಳ ಪಾಲಾಗೀರಿ ಎಚ್ಚರ... ಆದ್ದರಿಂದ ನಾನು ಎಂದಿಗೂ ನಿಮ್ಮನ್ನು ಬಿಟ್ಟು ಎಲ್ಲಿಗೂ ಹೋಗಲಾರೆ. 

ಬೆಟ್ಟವೇರಲು ಅನೇಕ ಗಂಟೆಗಳು ಬೇಕು. ಜಾರಲು ಎರಡು ಸೆಕೆಂದು ಸಾಕು. ಜಾರಿದ ಮೇಲೆ ಕೆಳಬೀಳಲು ಒಂದೇ ಸೆಕೆಂದು ಬಹಳೇ ಆಯ್ತು. ಹಾಗೆಯೇ ವಿಶ್ವಾಸ ಘಳಿಸಲು ಅನೇಕ ವರ್ಷಗಳ ನಿರಂತರ ತ್ಯಾಗದಿಂದ ಸಾಧ್ಯ. ತುಂಬ ಕಷ್ಟಸಾಧ್ಯ.  ಆದರೆ ಕಳೆದು ಕೊಳ್ಳುವದು ಮಾತ್ರ ಕ್ಷಣದ ಒಂದೇ ಒಂದು ಮಾತು ಸಾಕು. ಹಾಗಾಗಿ ನನ್ನನ್ನು ಯಾರು ಪಡೆದಿದ್ದರೆ ಅವರಿಂದ  "ನಾ ಅಂತೂ ಎಂದಿಗೂ ಬಿಟ್ಟು ಹೋಗಲಾರೆ, ನೀವು ಕಳೆದುಕೊಳ್ಳುವದಾದರೆ ನಿಮ್ಮಿಷ್ಟ."  ಹೊರಗೆ ತಿರುಗುವ ರುಚಿ ಹಚ್ಚಿಸಿಕೊಂಡ ಧನ ಜ್ಙಾನಗಳು ಹೇಳಿದವು ಅಂತೆ ಹಾಗಾದರೆ ನೀನಿರು ನಾವು ಹೊರಡುತ್ತೇವೆ ಎಂದು. ಆದ್ದರಿಂದಲೇ ಏನೋ ಜ್ಙಾನ ಧನಗಳು ಎಲ್ಲರಲ್ಲಿಯೂ ಇವೆ. *ಸಾರ್ಥಕತೆ ಮಾತ್ರ ವಿಶ್ವಾಸ ಇರುವಲ್ಲಿಯೇ* ಹಾಗಾಗಿ ಗುರು ದೇವತಾ ಧರ್ಮ ಶಾಸ್ತ್ರ ಮೊದಲು ಮಾಡಿ ಯಾವುದರಲ್ಲಿಯೂ  ವಿಶ್ವಾಸ ಕಳೆದುಕೊಳ್ಳುವದು ಬೇಡವೇ ಬೇಡ.....  ಕಳೆದು ಕೊಂಡರೆ ಮತ್ತೆ ಸಿಗುವದೇ ಇಲ್ಲ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*