*ವೈದ್ಯೋ ನಾರಾಯಣೋ ಹರಿಃ*
*ವೈದ್ಯೋ ನಾರಾಯಣೋ ಹರಿಃ*
ಅಂತರರಾಷ್ಟ್ರೀಯ ವೈದ್ಯರ ದಿನಾಚರಣೆ ಇಂದಿದೆ. ವೈದ್ಯರನ್ನು ಇಂದು ನೆನೆಸಿ ಶುಭಹಾರೈಸುವದೂ ಅನಿವಾರ್ಯವಾಗಿದೆ. "ಇಂದು ನಮಗೆ ವೈದ್ಯರು, ವೈದ್ಯರಿಗೆ ನಾವು" ಹೀಗರ ಪರಸ್ಪರ ಉಪಕಾರ ಭಾವ ಇದೆ.
ರೋಗಗಳು ಮಾನಸಿಕ ದೈಹಿಕ ಈ ಕ್ರಮದಲ್ಲಿ ಅನೇಕವಿಧ. ರೋಗಾಭಿಮಾನಿಗಳು ದೈತ್ಯರುಗಳು. ರೋಗಾಭಿಮಾನಿ ದೈತ್ಯರು ಇರಬಾರದು ಎಂದಾದರೆ ಆರೋಗ್ಯ ಒದಗಿಸಿದ ಕಾಲದಲ್ಲಿ ಆರೋಗ್ಯ ಕೊಟ್ಟ ದೇವರ ಕೃತಜ್ಙತಾರೂಪವಾಗಿ ಧರ್ಮ ಜಪ ಪೂಜೆ ಇವು ಅನಿವಾರ್ಯ.
ಒಳ್ಳೆಯ ದಿನಗಳಿಗೋಸ್ಕರ ಕೆಟ್ಟದಿನಗಳ ಜೊತೆಗೆ ಹೋರಾಡುವಂತೆ, ಆರೋಗ್ಯಕ್ಕೋಸ್ಕರ ರೋಗಗಳ ಜೊತೆ ಹೋರಾಡುವದು ಅನಿವಾರ್ಯ. ಹೋರಾಡುತ್ತೇವೆಯೂ ಸಹ. ಗೆಲುವು ಬರಬೇಕಾದರೆ, ಆರೋಗ್ಯ ಒದಗಿ ಬರಬೇಕೇದಾರೆ ದೇವರ ದೈವೀ ಬಲವಿದ್ದರೆ ಸಾಧ್ಯ. ಇದು ಇಂದಿನ ವೈದ್ಯರೆಲ್ಲರಿಗೂ ವಿದಿತವಾದ ವಿಷಯವೇ.
ಇತಿಹಾಸದ ಕಾಲದಿಂದ ಗಮನಿಸಿದಾಗ, ಇತಿಹಾಸ ಪ್ರವರ್ತಕವಾದ ಮಹಾಭಾರತ ಭಾಗವತ ಮೊದಲಾದ ಯಾವ ಗ್ರಂಥಗಳಲ್ಲಿಯೂ *ತಲೆ ಶೂಲಿಯಿತ್ತು, ಹೊಟ್ಟೆನೊವ್ವು, ಮೊಣಕಾಲು ನೊವು ಮೊದಲಮಾಡಿ ಕ್ಯಾನ್ಸರ್ ವರೆಗೆ ಮಾಹಾ ಮಹಾ ರೋಗಗಳಿಗೆ ಬಲಿಯಾದರು* ಎಂಬ ಒಂದು ಕಥೆಯನ್ನೂ ಕೇಳುವದಿಲ್ಲ. ಇಂದು ಒಬ್ಬನೂ ರೋಗವಿಲ್ಲದ ನಿರೋಗಿಯಾಗಿ ಪರಿಪೂರ್ಣ ಆರೋಗ್ಯವಂತನಿದ್ದಾನೆ ಎಂದೂ ಕೇಳುವದಿಲ್ಲ. ಇದು ಕೇವಲ ಐದು ಸಾವಿರ ವರ್ಷದಲ್ಲಿ ಆದ ಬದಲಾವಣೆ.
*ದಶ ವೈದ್ಯಸಮೋ ವಹ್ನಿಃ ಶತವೈದ್ಯಸಮೋ ರವಿಃ*
ಹತ್ತು ವೈದ್ಯರಿಗೆ ಸಮ ಅಗ್ನಿಯಾದರೆ ನೂರು ವೈದ್ಯರಿಗೆ ಸಮ ಸೂರ್ಯನು ಆಗಿರುವ. ಅಂತೆಯೇ ನಿತ್ಯ ವೈಸ್ವದೇವ ಮೊದಲು ಹೋಮ ಹವನ ಮಾಡುವ ರಾಜ ಮುನಿ ಋಷಿಗಳ್ಯಾರೂ ರೋಗಕ್ಕೆ ಬಲಿಯಾಗುತ್ತಿರಲಿಲ್ಲ. ದೇವರ ನೈವೇದ್ಯಕ್ಕೆ ಅಡಗೆ ಮಾಡುವ ಯಾವ ಸ್ತ್ರೀಯೂ ರೋಗಕ್ಕೆ ಬಲಿಬೀಳುತ್ತಿರಲಿಲ್ಲ. ಬಿಸಲಲ್ಲಿ ಅಗ್ನಿಯಮುಂದೆ ಸಮಯಕಳಿಯುವ ಯಾವ ವ್ಯಕ್ತಿಉಲ್ಲಿಯೂ ರೋಗಾಣುಗಳು ಹುಟ್ಟುತ್ತಾನೇ ಇರಲಿಲ್ಲ. ಹುಟ್ಟಿದ ರೋಗಾಣು ಸತ್ತೇ ಹೋಗುತ್ತಿದ್ದವು. ಇಂದು ಸೂರ್ಯ ಹಾಗೂ ಸೂರ್ಯೋಪಾಸನೆ - ಅಗ್ನಿ ಹಾಗೂ ಅಗ್ನ್ಯುಪಾಸನೆ ಯಾರಿಗೂ ಬೇಡವಾದ ಕಾರಣ ಪ್ರತಿಯೊಬ್ಬರೂ ರೋಗಗಳ ತವರು ಆಗಿದ್ದಾರೆ.
ಉತ್ತಮವಾದ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಇವುಗಳಿಗೋಸ್ಕರ, ರೋಗಾಭಿಮಾನಿ ದೈತ್ಯರನ್ನು ಓಡಿಸುವ ಸಲವಾಗಿ ಉತ್ತಮೋತ್ತಮ ಧರ್ಮವನ್ನು ಮಾಡೋಣ. ಜಪ ಪೂಜೆಗಳನ್ನು ತಪ್ಪಿಸುವದೇ ಬೇಡ. ಮಹಾ ವೈದ್ಯ ಸ್ವರೂಪಿಯಾದ, ಸ್ವಯಂ ಆರೋಗ್ಯಪೂರ್ಣನಾದ ಶ್ರೀ ಧನ್ವಂತ್ರಿನಾಮಕ ಶ್ರೀಹರಿಯನ್ನು ನಿತ್ಯ ಸ್ಮರಿಸೊಣ. ಮಹಾಲಕ್ಷ್ಮೀ ವಾಯುದೇವರು ಅಶ್ವಿನಿದೇವತೆಗಳಿಂದಾರಂಭಿಸಿ ಇಂದಿನ ಎಲ್ಲ ದೇವತಾ ವೈದ್ಯರನ್ನೂ ನಿತ್ಯ ಸ್ಮರಿಸೋಣ. ಈ ಎಲ್ಲ ದೇವತೆಗಳೇ ಇಂದಿನ ವೈದ್ಯರಲ್ಲಿ ನಿಂತು ಪ್ರೇರಿಸಿ ಔಷಧಿ ಒದಗಿಸಿ ಗುಣಪಡಿಸುವವರು. ಹಾಗಾಗಿ ಮೊದಲಿಗೆ ಮತ್ತು ನಿತ್ಯ ಈ ದೇವತೆಗಳ ಸ್ಮರಣೆಯೊಂದಿಗೆ ಆರಂಭಿಸೋಣ.
ಧನ್ವಂತ್ರಿ ಮೊದಲಾದ ದೇವತಾ ದೇವರುಗಳ ಅಧಿಷ್ಠಾನರಾದ ಇಂದಿನ ನಮ್ಮ ಆತ್ಮೀಯ ವೈದ್ಯರನ್ನೂ ನೆನಿಸೋಣ. ಆ ಎಲ್ಲ ವೈದ್ಯರ ಬಳಿ ಬಂದ ಯಾವೆಲ್ಲ ರೋಗಿಗಳೂ ನಿರೋಗಿಗಳಾಗಿ ಆರೋಗ್ಯವಂತರಾಗಿ ನಗುನಗುತಾ ಮನೆಗೆ ಹೋಗುವಂತಾಗಲಿ ಎಂದೂ ಹರಿಸೋಣ.
ಇಂದಿಗೆ ನಮ್ಮ ಪಾಲಿಗೆ ಪ್ರತಿಯೊಂದಕ್ಕೂ ವೈದ್ಯರ ಆವಶ್ಯಕತೆ ತುಂಬ ಇದೆ. ಆ ವೈದ್ಯರಲ್ಲಿ ದೇವನೇ ಇದ್ದು ಪ್ರೇರಣೆ ಮಾಡಬೇಕು. ಮಾಡುತ್ತಾನೆಯೂ ಸಹ. ಆ ಎಲ್ಲ ವೈದ್ಯರಿಗೂ ದೇವನ ಅನುಗ್ರಹ ಎಷ್ಟಿದೆ ಅನ್ನುವದು ಪ್ರತಿಕಗಷಣಕ್ಕೂ ಅನುಭವಕ್ಕೆ ಬಂದಿರುತ್ತದೆ. ತಮ್ಮ ಬುದ್ಧಿಶಕ್ತಿ, ಇಂದ್ರಿಯ ಕೌಶಲ, ಮನಸ್ಸಿನಚಾಕಚಕ್ಯತೆ, ದೇಹದ ಬಲ ಎಲ್ಲವನ್ನೂ ನಮಗಾಗಿ ಮೀಸಲಿಟ್ಟುರುವ. ಆ ಎಲ್ಲ ನಮ್ಮ ಹಿತೈಷೀ ವೈದ್ಯುರುಗಳಿಗೆಲ್ಲ ಹೃತ್ಪೂರ್ವಕ ಅಭಿನಂದನೆಗಳು.
ನಿರೋಗಿಗಳಾಗಿ ಮನೆಗೆ ಹೋದ ಆರೋಗ್ಯವಂತರೆಲ್ಲರೂ ನಿತ್ಯ ಸಂಧ್ಯಾವಂದನೆ ಜಪ ಪೂಜೆ ಇವುಗಳಲ್ಲಿ ತೊಡುಗುವಂತಾದರೆ ವೈದ್ಯರ ಶ್ರಮ - ನಮ್ಮ ಆರೋಗ್ಯ ಹಾಗೂ ಹಣ - ದೇವರ ಕರುಣೆ ಎಲ್ಲವೂ ಸಾರ್ಥಕ....🌹🌹💐💐
*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.
Comments