*ಮಳೆ ಬೆಳೆಗಳು ಇಲ್ಲದೆ ಈ ಜಗವು ಎತ್ತ ಹೋಗ್ತಾ ಇದೆ.....*

*ಮಳೆ ಬೆಳೆಗಳು ಇಲ್ಲದೆ ಈ ಜಗವು ಎತ್ತ ಹೋಗ್ತಾ ಇದೆ.....*

"ಜನರಿಂದ ಜಗತ್ತು, ಜಗತ್ತಿನಿಂದ ಜನ" ಇದು ಸೃಷ್ಟಿಯ ನಿಯಮ. ಇಂದು ಜಗತ್ತಿನ ಪ್ರಕೃತಿಯ ವಿರುದ್ಧ ಜನ, ಜನರ ವಿರುದ್ಧ ಪ್ರಕೃತಿ ಜಗತ್ತು ಎಂಬಂತಾಗಿದೆ.  ಒಂದೋ ಪ್ರಕೃತಿಗೆ ನಾವು ಅನುಕೂಲರಾಗಬೇಕು. ಇಲ್ಲವೋ ಪ್ರಕೃತಿಯನ್ನು ನಮ್ಮ ಮೂಗಿಗೆ ಎಳೆತರಬೇಕು. ಎರಡನೇಯದು ಅಸಾಧ್ಯದ ಮಾತು.  ಪ್ರಕೃತಿ ಏನಿದ್ದರೂ ನಮಗಿಂತಲೂ ಬಲಿಷ್ಠ. ಪ್ರಕೃತಿ ವಿಕೋಪಕ್ಕೆ ಮಾನವ ನುಚ್ಚುನೂರು ಆಗುವ.  ಪ್ರಕೃತಿಗೆ ಅನುವಾಗಿ ಇರಬೇಕು. ಆದರೆ ಪ್ರಕೃತಿಗೆ ಅನುಗುಣವಾಗಿ ಇರಲು ಅಸಾಧ್ಯವಾಗುವಷ್ಟು ತುಂಬ ದೂರ ಹೋಗಿಬಿಟ್ಟಾಗಿದೆ. 

*ಪ್ರಕೃತಿ ವಿಕೋಪಗಳು*

"ಯಾರಿಗೇ ಆಗಲಿ ಅನುವಾಗಿದ್ದರೆ ಸುಖಿ, ಅನುವಾಗದಿದ್ದರೆ ಕಾಲ್ಗಸ" ಹೀಗಿರುವಾಗ ಪ್ರಕೃತಿಗೆ ನಾವು ಅನುವಾಗಿಲ್ಲದೇ ಇರುವದರಿಂದಲೇ ನಮ್ಮ ಮೇಲೆ ಪ್ರಕೃತಿಗೆ ವಿಕೋಪ. ವಿಕೋಪಗಳ ಅಭಿವ್ಯಕ್ತಿ ಅನೇಕವಿಧ... 

ಸುನಾಮಿ ಮೊದಲಾದ ತೂಫಾನುಗಳು ಒಂದಾದರೆ, ಭೂಕಂಪನ ಮೊದಲಾದವುಗಳು ಮತ್ತೊಂದು ವಿಧ. ತಾಪಮಾನ ಹೆಚ್ಚಾಗುವದೂ ಪ್ರಕೃತಿವಿಕೋಪ. *ಕಾಲಕಾಲಕ್ಕೆ ಮಳೆಯಾಗದೆ ಪ್ರತಿವರ್ಷವೂ ಬರಗಾಲ ಬರುವದೇನಿದೆ ಇದು ಮಹಾ ವಿಕೋಪ.* ನದಿಗಳು ಬತ್ತಿ ಹೋಗಿವೆ. ಗುಡ್ಡಗಳು ಕರಗುತ್ತವೆ. ಮಣ್ಣಿನ ಭೂಮಿ ನಾಶವಾಗುತ್ತಿದೆ. ಭೂಮಿಯಲ್ಲಿ ನೀರು ಬರಿದಾಗಿದೆ. ಸ್ವಚ್ಛಘಾಳಿ ಇಲ್ಲ. ಆಹುತಿಗಾಗಿ ಬೆಂಕಿ ಕಾಣದೆ, ಅಗ್ನಿದುರಂತಗಳಿಗೇ ಬೆಂಕಿ ಕಾಣುತ್ತಿದೆ.   ಮೈಲು ಮೈಲುವರೆಗೆ ಆಕಾಶ ಕಾಣದಾಗಿದೆ. ಇವೆಲ್ಲವೂ ಒಂದರ್ಥದಲ್ಲಿ ಪ್ರಕೃತಿವಿಕೋಪದ ಪರಿಣಾಮವೇ. 

*ಹಣದ ದರ್ಬಾರು...*

ಏನಿದ್ದರೇನು ಏನಿಲ್ಲದಿದ್ದರೆನು ಹಣದಿಂದ ನಾನು ಎಲ್ಲವನ್ನೂ ಪಡೆಯುವೆ. ಅಂತೆಯೇ ಹಣಕ್ಕಾಗಿ ಹೆಚ್ಚಿನ ಸಮಯ ಹಾಗೂ ಶಕ್ತಿ ಮೀಸಲು. "ಆರವತ್ತರವರೆಗೆ ಸಂಪಾದನೆ ಸಾಕು, ಇನ್ನುಮುಂದೆ ಎಪ್ಪತ್ತರವರೆಗೂ ಸಂಪಾದನೆಯಾಗಲಿ" ಎಂಬ ಕೂಗು ಹುಟ್ಟಿಕೊಂಡಿದೆ. ಕೊನೆಗೊಂದು ದಿನ ಉಸಿರುರುವವರೆಗೂ ಸಂಪಾದನೆ ಅನಿವಾರ್ಯ ಎಂಬ ಸ್ಥಿತಿಗೆ ತಲಪುತ್ತೇವೆ. 

ಹಣ ಎಲ್ಲವನ್ನೂ ತಂದು ಕೊಡತ್ತೆ ನಿಜ. ಏನು ತಂದು ಕೊಡತ್ತೆ ಅದು ಪ್ರಕೃತಿಯ ಒಡಲಿನಲ್ಲಿ ಇರಬೇಕಷ್ಟೆ. ಇವತ್ತು ನಾವು ಭೂಮಿಯನ್ನೋ, ನೀರನ್ನೋ, ಅಗ್ನಿಯನ್ನೋ ಹಣ ಕೊಟ್ಟು ತೆಗೆದುಕೊಳ್ಳುತ್ತಿದ್ದೇವೆ ನಿಜ. ಆದರೆ ಪ್ರಕೃತಿಯ ಒಡಲಿನಲ್ಲಿ ನೀರೇ ಇಲ್ಲವಾದಲ್ಲಿ ಹಣದಿಂದ ಹೆಂಡ ತಂದು ಕುಡಿಯುವ ಪ್ರಸಂಗವೂ ಬಂದೀತು.... 

*ಬೆಕ್ಕು ಹಾಲು ಕುಡಿಯುವದರಿಂದಲೂ ದೂರಾಗಿದೆ* 

ಬೆಕ್ಕು ಹಾಲು ಕುಡಿಯದೇ ಇರುವದೇನಿದೆ ಹಣ ಘಳಿಸುವ ನಮಗೆ ಖುಶಿಯೇ.  ಹಾಲಿನಿಂದಲೇ ಜೀವಿಸುವ ಬೆಕ್ಕು,  ಹಾಲು ಮುಂದಿಟ್ಟರೆ ಕುಡಿಯದೇ ಓಡಿ ಹೋಗ್ತಿದೆ. ಅಂದರೆ "ಸಾಮಾನ್ಯ ಪ್ರಾಣಿಯಾದ ಬೆಕ್ಕೇ ತನ್ನತನವನ್ನು ಬಿಟ್ಟು ಹೋದಾಗ ಅಥವಾ ತನ್ನತನವನ್ನು ಕಳೆದುಕೊಂಡಾಗ, "ಪ್ರಗತಿಪಥದಲ್ಕಿ  ವಿಶಿಷ್ಟರಾದ ನಾವು ನಮ್ಮತನವನ್ನು ಉಳಿಸಿಕೊಂಡಿಲ್ಲ ಕಳೆದುಕೊಂಡಿದ್ದೇವೆ" ಎಂದು ಹೇಳಿದರೆ ಆಸ್ಚರ್ಯವೇನಿಲ್ಲ. 

*ಪ್ರಕೃತಿಗೆ ನಾವು ಅನುವಾದರೆ, ಪ್ರಕೃತಿ ನಮಗೆ ಅನುವಾಗಿರುತ್ತದೆ*

ಪ್ರಕೃತಿಗೆ ನಾವು ಅನುವಾಗಿರುವದು ಎಂದರೆ *ಸಾಧ್ಯವಿದ್ದಷ್ಟು ಉತ್ಕೃಷ್ಟ ಮಟ್ಟದಲ್ಲಿ ಧರ್ಮ ಮಾಡುವದೇ.*  ಉತ್ತಮ ಮಳೆ ಬೆಳೆ ಇವುಗಳಿಗೋಸ್ಕರ ಹಣ ಉಪಯೋಗಕ್ಕೆ ಬಾರದು. ಧರ್ಮವೇ ಬೇಕು ಧರ್ಮವೇ ಅನಿವಾರ್ಯ. ಆಗ ಮಾತ್ರ "ಜಗತ್ತು ಎತ್ತೋ ಸಾಗದೆ, ನಮಗೆ ಅನುವಾಗಿಯೇ ಸಾಗುತ್ತದೆ, ಇರುತ್ತದೆ."

ಮಳೆಗೋಸ್ಕರ ಇರುವ ಧರ್ಮ *ಕಾಲಕಾಲಕ್ಕೆ ಸಂಧ್ಯಾವಂದನೆ/ ಜಪ/ ದೇವರ ಪೂಜೆ* ಇವು ಅತ್ಯಂತ ಅನಿವಾರ್ಯ. ಜೊತೆಗೆ *ವಿರಾಟ ಪರ್ವದ ಉಪನ್ಯಾಸ* ಅತ್ಯಂತ ಉಪಯುಕ್ತ. ಊರೂರಲ್ಕಿ ಐದಾರು ಪಂಡಿತರುಗಳ ವಾಸವಿದೆ. ಯಾರೆಲ್ಲರಿಗೆ ಸಾಧ್ಯವಿದೆ ಆ ಎಲ್ಕರಿಂದಲೂ *ವಿರಾಟ ಪರ್ವದ ಉಪನ್ಯಾಸ - ಕನಿಷ್ಠ ಎರಡು ಸಲವಾದರೂ* ವೈಭವದಿಂದ ಹೇಳಿಸಿ. ಎರಡು ಸಲ ಹಹೇಳಿಸುವವರು ಕನಿಷ್ಞ ಐದುನೂರು ಜನಸಿಕ್ಕರೂ ಸಾವಿರಬಾರಿ ಅನಾಯಾಸೇನ ಆಗಿಬಿಡುತ್ತದೆ. ವಿದ್ವಾಂಸರುಗಳನ್ನು ಕರೆದು, ಕರಿಸಿ ಪಾರಾಯಣ ಉಪನ್ಯಾಸಗಳನ್ನು ಮಾಡಿಸಿ. 

ಎಲ್ಲ ಪುರುಷ ಸ್ತ್ರೀಯರೂ....
*"ಅನ್ಯಂ ವೇಷಮುಪಾಗತಾಃ ಪೃಥಗಿತೋ ಗತ್ವಾ ವಿರಾಟಾಲಯಂ |ತದ್ದೇಹಸ್ಥಹರೇರ್ನಿಷೇವಣಪರಾ ಮಲ್ಲಂ ತಥಾ ಕೀಚಕಾನ್ | ಹತ್ವಾ ಗೋಗ್ರಹಣೋದ್ಯತಾನಪಿ ಕುರೂನ್ ಜಿತ್ವಾ ವಿರಾಟಾರ್ಚಿತಾಃ | ಪಾರ್ಥಾ: ಸ್ವಾಂತಿಕಮಾಗತಂ ಯಮಜಿತಂ ಭೇಜುಸ್ತಮೀಡೇಚ್ಯುತಮ್ ||"*
ವಿರಾಟ ಪರ್ವವ ಸಂಗ್ರಹರೂಪವಾದ ಈ ಶ್ಲೋಕವನ್ನು ಲೇಖನ  ಓದಿದ ಎಲ್ಲರೂ ಕನಿಷ್ಠ ನಿತ್ಯ ಹನ್ನೊಂದು ಸಲವಾದರೂ ಪಾರಾಯಣ ಮಾಡಲೇಬೇಕು ಎಂದು ಆಗ್ರಹಿಸುತ್ತೇನೆ. ಮಕ್ಕಳಿಗೂ ಕಲಿಸಿಕೊಡಿ. ಅವರೂ ನಿತ್ಯ ಹೇಳುವಂತಾಗಲಿ. ಈ ತರಹದ ಸಣ್ಣ ಧರ್ಮದಿಂದಲಾದರೂ ನಮ್ಮ ನಾಡಿನಲ್ಲಿ ಸಮೃದ್ಧ ಮಳೆ ಬೆಳೆ ಉಂಟಾಗಲಿ......

*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
It’s the best time to make some plans for the future and it is time to be happy.
I’ve read this post and if I could I wish to suggest you few
interesting things or tips. Perhaps you could write next articles referring to this article.

I desire to read more things about it! Hi would you mind stating which blog platform you're using?
I'm going to start my own blog in the near future but I'm having a difficult time choosing between BlogEngine/Wordpress/B2evolution and
Drupal. The reason I ask is because your design seems different then most blogs and I'm looking for something completely unique.
P.S Apologies for being off-topic but I had to ask! Way cool!
Some extremely valid points! I appreciate you writing this article and also the rest of the
site is extremely good. http://alienware.com/
Anonymous said…
Then, commence washer, add detergent, then add garments.
Anonymous said…
Other strategies to cheat in my singing monsters:.
Anonymous said…
Our hack tool has 9 more cheats that you can use.

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*