*ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ.....*

*ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ.....*

ಶ್ರೀಮದ್ಭಾಗವತದಲ್ಲಿ ಸಜ್ಜನರ ಸಹವಾಸದ ಲಾಭವನ್ನು ಕೊಂಡಾಡುತ್ತಾ "ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ....." ಈ ಶ್ಲೋಕವನ್ನು ಉದಾಹರಿಸುತ್ತಾ ಒಂದು ಉತ್ಕೃಷ್ಟ ಪ್ರಮೇಯವನ್ನು ತಿಳಿಸಿಕೊಡುತ್ತದೆ. 

ಗುಣವಂತ ಸಜ್ಜನ. ಗುಣಗಳು ಪ್ರಕಾಶಮಾನವಾದವುಗಳು. ಪ್ರಕಾಶಮಾನ ಗುಣಗಳು ತನ್ನ ಪ್ರಕಾಶವನ್ನು ಹರಡದೇ ಬಿಡದು.  ಸಜ್ಜನನ ಸಜ್ಜನಿಕೆಯ ಗುಣಗಳ ಪ್ರಕಾಶ, ತಮ್ಮ ಸನಿಹ ಬಂದವರ ಮನಸ್ಸಿನಮೇಲೆ ಬೀಳುವದು ನಿಶ್ಚಿತ. ಅದೇರೀತಿ ದುರ್ಜನರ ದುರ್ಗಣಗಳೂ. 

ಸಜ್ಜನ ಕಠೋರ. ದುರ್ಜನ ಆಹ್ಲಾದಕರ. ಸಜ್ಜನಿಕೆಗೆ ಅಡ್ವಟೇಸ್ ಕಡಿಮೆ. ದುರ್ಜನನಿಗೆ ಪ್ರಚಾರ ಹೆಚ್ಚು. "ಕಠೋರತೆಗೆ ಬೆದರಿ ಆಕರ್ಷಣೆಗೆ ಮೋಸಹೋದರೆ ಸಿಗುವದು ಪ್ರಪಾತ." ಅಂತೆಯೇ ಗುಣವಂತರಾದ ಸಜ್ಜನರ ಸಹವಾಸಕ್ಕೆ ಎಲ್ಲಿಲ್ಲದ ಮಹತ್ವ ಅಂದಿನಿಂದಲೂ ಇದೆ. 

ಗುಣವಂತರಲ್ಲಿ ದೋಷಗಳು ಇವೆ. ದೋಷಗಳೇ ಇಲ್ಲದಿರುವದಕ್ಕೆ ಅವನೇನು ಋಜು ಅಲ್ಲ. ದೋಷಗಳಿವೆ ಎಂದ ಮಾತ್ರಕ್ಕೆ ಅವನು ಗುಣವಂತನೇ ಅಲ್ಲ ಎಂದೂ ಅಲ್ಲ. ಗುಣವಂತರಾದ ಸಜ್ಜರ ಗುಣವಂತಿಕೆಯಿಂದ ನಮಗೆ ಲಾಭವಾಗುತ್ತಿದ್ದರೆ ಸಾಕು. ಆ ಸಜ್ಜನನಿಂದ ನಮ್ಮ ಸಜ್ಜನಿಕೆ ಒಂದು ಸ್ಫೂರ್ತಿ ಸಿಗುತ್ತದೆ. 

*ಸಜ್ಜನರ ಗುಣವಂತಿಕೆಯಿಂದ ನಮಗೇನು ಲಾಭ....*

ಏನು ಲಾಭವಿಲ್ಲ ಎಂದು ಇಲ್ಲ. ಎಲ್ಲ‌ ಲಾಭಗಳೂ ಇವೆ. ಉಪನಿಷತ್ತು ಒಂದು ಮಾತನ್ನು ಹೇಳತ್ತೆ "ಯೇ ಯೇ ಗುಣಾನ್ ವಿಜಾನಂತಿ ವಾಯೋಃ ತಾನ್ ತಾನ್ ಆವಿಶನ್ ಮರುತ್ " ಗುಣವಂತರಾದ ವಾಯುದೇವರ ಯಾವೆಲ್ಲ ಗುಣಗಳನ್ನು ನಾವು ಚಿಂತನೆ ಮಾಡುತ್ತೇವೆಯೋ ಆ ಎಲ್ಲ ಗುಣಗಳಿಂದ ವಾಯುದೇವರು ನಮ್ಮಲ್ಲಿ ಪ್ರವೇಶಿಸುತ್ತಾರೆ. ಇದರರ್ಥ ನಾವೂ ಗುಣವಂತರಾಗುತ್ತೇವೆ. ಗುಣವಂತರಿಂದ ಇದಕ್ಕೂ ಮಿಗಿಲಾದ ಲಾಭ ಇನ್ನೇನಿದೆ... 

*ತಜ್ಜೋಷಣಾತ್ ಹೃತ್ಕರ್ಣ ರಸಾಯನಾಃ ಕಥಾಃ*

ಗುಣವಂತರಾದ ಶ್ರೀಶ್ರೀ ಶ್ರೀಮಟ್ಟೀಕಾಕೃತ್ಪಾದರ ವಿಜಯೀಂದ್ರರ ರಘೂತ್ತಮರ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಇಂತಹ ಮಹಾ ಮಹಾ ಜ್ಙಾನಿಗಳಿಂದ ಇಂದು ನಮಗೆ ಜ್ಙಾನವಿದೆ. ಭಕ್ತಿ ಇದೆ. ವಿರಕ್ತಿ ಇದೆ. ಐಶ್ವರ್ವಿದೆ. ಆಯುಷ್ಯವಿದೆ. ಆರೋಗ್ಯವಿದೆ. ಸುಖವಿದೆ. ನೆಮ್ಮದಿ ಇದೆ. ಜಯವಿದೆ.  ವೈಭವ ಇದೆ. ಏನು ಬೇಕೋ ಎಲ್ಲವೂ ಇದೆ. ಅಂತೆಯೇ ಶ್ರೀಮದ್ಭಾಗವತ "ಸತಾಂ ಪ್ರಸಂಗಾನ್ಮಮ ವೀರ್ಯಸಂಪದೋ....." ಒಳಗಿರುವ Inbuilt ಆದ  ಎಲ್ಲ ಗುಣಗಳ ಅಭಿವ್ಯಕ್ತಿಗೆ ಗುಣವಂತರಾದ ಸಜ್ಜನ ಸಹವಾಸ ಅನಿವಾರ್ಯ ಎಂದು ಹೇಳಿದೆ. 

"ತಜ್ಜೋಷಣಾತ್" ಸಜ್ಜರನರ ಸಹವಾಸದಿಂದಲೇ ಉತ್ತಮೋತ್ತಮವಾದ ಮನಸ್ಸಿಗೆ ಆಹ್ಲಾದದಾಯಕವಾದ, ದೇವರಲ್ಲಿ ಭಕ್ತಿ ಮೂಡಿಸುವ, ದೇರಲ್ಲಿ ಭರವಸೆ ಬೆಳಿಸುವ ದೇವರೇ ಆಶ್ರಯನು ಎಂದು ಸಾಬೀತು ಮಾಡುವ, ಇತಿಹಾಸ ಪುರಾಣಗಳಲ್ಲಿ ಬಂದ ನಾನಾವಿಧವಾದ ಕಥೆಗಳ ಉಪದೇಶಸಿಕ್ಕು ಬರುತ್ತದೆ.  ಮುಕ್ತಿ ಮಾರ್ಗ ಸಿಗತ್ತೆ. ಆ ಮಾರ್ಗದಲ್ಲಿಯೂ ವೇಗವಾಗಿ ಹೋಗುವಂತಾಗುತ್ತದೆ.   ಶುದ್ಧ ಜ್ಙಾನ ಸಿಗತ್ತೆ. ಭಕ್ತಿ ಬೆಳೆಯತ್ತೆ. ಅತ್ಯಂತ ಶೀಘ್ರದಲ್ಲಿ ಮೋಕ್ಷವೂ ಆಗುತ್ತದೆ. ಇದು ಸಜ್ಜನರ ಸಹವಾಸದ ಫಲ.

ಇಂದಿನಿಂದ ಆರಂಭವಾಗುವ ಚಾತುರ್ಮಾಸ್ಯದಲ್ಲಿ ಅನೇಕ ಯತಿಗಳ ಪಂಡಿತರ ಜ್ಙಾನಿಗಳ ಸಹವಾಸ ಲಾಭ ಎಲ್ಲ ಊರಿನವರಿಗೂ ಸಿಗುತ್ತದೆ. ಯಾರ ಊರಲ್ಲಿ ಯತಿಗಳು ವಿದ್ವಾಂಸರುಗಳು ಇಲ್ಲವೋ ಅವರ ಕೈಯಲ್ಲೇ (ಮೋಬೈಲ್ ) ಅಲ್ಲಿ ಸಿಗತ್ತೆ. ಆ ಎಲ್ಲ ಸಜ್ಜನರ ಸಹವಾಸ ಆಗಲಿ. ಸೇವೆ ಆಗಲಿ. ಉಪದೇಶ ಒದಗಿಬರಲಿ. ಅದರಿಂದ ನಾವೂ ಗುಣವಂತರಾಗಿ ಸಜ್ಜನರು ಎಂದಾಗಲಿ. 

*✍🏽ನ್ಯಾಸ....*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*