*ಯೋಚನೆಗೆಲ್ಲಿ ಮಿತಿಯಿದೆ.....*
*ಯೋಚನೆಗೆಲ್ಲಿ ಮಿತಿಯಿದೆ.....*
ಅಮಿತವಾದದ್ದು ಏನೂ ಪಡೆಯಲು ಆಗಲ್ಲ. ಹಣವೋ ಅಂತಸ್ತೋ ಅಥವಾ ಯೋಗ್ಯತೆಯೋ ಇನ್ನೇನೋ ಯಾವದನ್ನೂ ಹೆಚ್ಚಾಗಿ ಪಡೆಯಲು ಆಗುವದಿಲ್ಕ. ಎಲ್ಲದಕ್ಕೂ ಒಂದು ಮಿತಿ ಇದೆ. ಆದರೆ....
"ಯೋಚನೆಗಳಿಗೆ ಮಿತಿ ಇದೆಯಾ... ?? ಸರ್ವಥಾ ಇಲ್ಲವೇ ಇಲ್ಲ." ಉತ್ಕೃಷ್ಟ ವಿಚಾರಭರಿತ ಆರೋಗ್ಯ ಪೂರ್ಣ ಯೋಚನೆಗಳನ್ನು ರೂಢಿಸಿಕೊಂಡರೆ ಉತ್ತಮ ರೀತಿಯಲ್ಲಿ ಬೆಳವಣಿಗೆಗಳು ಆಗಬಹುದೆಂದೂ ಯೋಚಿಸಬಹುದು.
*ಇಂದಿನ ಯುವಕ ತಲೆಯಲ್ಕಿ ಕ್ಷುದ್ರ ಯೋಚನೆಗಳೇ..*
ಕ್ರಿಕೇಟ್ ಪ್ಲೇಯರ್ ಆಗಬೇಕು. ಫಿಲ್ಮಸ್ಟಾರ್ ಆಗಬೇಕು.. ರೌಡಿ ಆಗಬೇಕು.. ಕರೋಡಪತಿ ಆಗಬೇಕು.. ಯಾರನ್ನೋ ಮನಸ್ಸಿನಲ್ಲಿ ಸದಾಕಾಲ ದ್ವೇಶಿಸುತ್ತಾ ಇರೋದು.. ಅವರನ್ನು ಸಾರ್ವಜನಿಕವಾಗಿ ಹೇಗೆ ಹಳಿಯಲಿ ಎಂದೆ ಯೋಚಿಸುವದು... ಇತ್ಯಾದಿಯಾಗಿ ಅನುಪಯುಕ್ತ ಅನಾರೋಗ್ಯಭರಿತ ಅನವಶ್ಯಕ ವಿಚಾರಗಳೇ ಮೈದುಂಬಿರುತ್ತವೆ.
*ಯೋಚನೆಗಳಿಲ್ಲದೇ ಮನಸ್ಸು ಇರಲಾರದು*
ಕ್ಷುದ್ರ ಯೋಚನೆಗೆ ಆಸ್ಪದ ಕೊಟ್ಟರೆ ಅವೇ ಕೊರಗುತ್ತಾ ಕೂಡುತ್ತವೆ. ಆ ಯೋಚನೆ ಗಳಿಂದ ತಾತ್ಕಾಲಿಕ ಕ್ಷುದ್ರ ನೆಮೆದಿ ಬಿಟ್ಟರೆ ಇನ್ನ್ಯಾವ ಪರ್ಟಿನೂ ಸಿಗದು. "ಉತ್ಕೃಷ್ಟ ಆರೋಗ್ಯ ಭರಿತ ಸಾರ್ಥಕ ಯೋಚನೆಗಳಿಗೆ ಜೀವ ತುಂಬಿದರೆ ಅವುಗಳೇ ಹೆಮ್ಮರವಾಗಿ ಬೆಳಿಯುತ್ತವೆ." ಉತ್ಕೃಷ್ಟ ಯೋಚನೆಗಳೇ ಮನುಷ್ಯನನ್ನು ಉತ್ಕೃಷ್ಟತೆಗೆ ಕರೆದೊಯ್ಯುತ್ತವೆ" ಇದು ನೂರು ಪ್ರತಿಶತಹ ಸಿದ್ಧ.
*ಖಾಲೀ ಮನುಷ್ಯನಿಗೆ ಯೋಚನೆಗಳೇ.....*
ಸಾರ್ಥಕ ಯೋಚನೆಗಳು ಬರುವದು ನಿರಂತರ ಕೆಲಸಗಳಲ್ಲಿ ಉದ್ಯುಕ್ತನಾದವನಿಗೆ. ತನ್ನ ಕೆಲಸ ಪೂರ್ಣಗೊಳಸಬೇಕಾಗಿದೆ. ತನ್ನ ಗುರಿ ಮುಟ್ಟಬೇಕಾಗಿದೆ ಹಾಗಾಗಿ ಅವನಿಗೆ ಗುರಿಮುಟ್ಟುವವರೆಗೂ ಬೇರೆ ಯಾವ ಯೋಚನೆಗೂ ದಾರಿಮಾಡಿಕೊಡಲ್ಲ. ಯಾವ ಯೋಚನೆಯಿದ್ದರೂ ತಾನಾರಿಸಿಕೊಂಡ ಗುರಿ ಮುಟ್ಟಲೇ ಆಗಿರುತ್ತದೆ. ಒಂದರಮೇಲೆ ಒಂದು ಗುರಿ ಮುಟ್ಟುತ್ತಾ ಸಾಗುವವ ಮೆಲೆ ಮೇಲೆ ಸಾಗ್ತಾ ಹೋಗುವ.
ಯಾರಿಗೆ ಗುರಿ ಗೋಲುಗಳು ಇಲ್ಲ ಅವನಿಗೆ ಯೋಚನೆಗಳು ಬಿಟ್ಟು ಇನ್ನೇನೂ ಇರುವದಿಲ್ಲ. ಕ್ಷುದ್ರ ಬಾಲಿಶ ಯೋಚನೆಯ ತಕ್ಕಂತೆ ಮಾತುಗಳು. ಅವುಗಳಿಂದ ನಾಲಕು ಜನರಿಗೆ ಮನರಂಜನೆ. ಇಷ್ಟು ಮಾತ್ರ.
*ಯೋಚನೆಗಳಿಗೆ ಬರವಿಲ್ಲ.....*
ಒಂದಿಲ್ಲ ಒಂದು ಯೋಚನೆ. ಒಂದರನಂತರ ಒಂದು ಯೋಚನೆ ಇರುವದೇ. ಆ ಯೋಚನೆಗಳಿಗೆ ಸಾಧ್ಯಾಸಾಧ್ಯತೆಯ ಹಿನ್ನಲೆ ಇರದು. ಹಿತಾಹಿತಗಳ ತಳಹದಿ ಇರದು. ಗುರಿ ಗೋಲು ಮುಟ್ಟುವ ಯಾವ ಲಕ್ಷಣಗಳೂ ಇರದು. ಆ ತರಹದ ಕ್ಷುದ್ರ ಯೋಚನೆಗಳಿಗೆ ಆಸ್ಪದ ಕೊಡದೇ ಉತ್ಕೃಷ್ಟ ಆರೋಗ್ಯಪೂರ್ಣ. ಹಿತಕಾರಿ. ಸಾಧಿಸಲು ಯೋಗ್ಯವಾದ. ಗುರಿ ಗೋಲು ಮುಟ್ಟುವ. ಸಕಾರಾತ್ಮಕವಾದ ಸಹಸ್ರ ಸಹಸ್ರ ಯೋಚನೆಗಳು ಬಂದರೂ ಉಪಯುಕ್ತವೆ. ಸಹಸ್ರ ಸಹಸ್ರ ಮೆಟ್ಟಲು ಮೇಲೇರಿರುತ್ತವೆ. ಅತ್ಯುತ್ತಮ ಯೋಚನೆಗಳೇ ನಮ್ಮದಾಗಲಿ.
*ಯೋಚನೆಗಳಿಗೆ ನಾಂದಿ ಏನು...*
ಯೋಚನೆಗಳಿಗೆ ಸಾಮಾನ್ಯವಾಗಿ ಒಂದು ಆದರ್ಶವಿರುತ್ತದೆ. ಅದು ಹಗೆ ಆಗಬಹುದು, ಪ್ರೀತಿಯಾಗಬಹುದು, ಸಂಬಂಧವಾಗಿರಬಹುದು, ವ್ಯಕ್ತಿ ಆಗಿರಬಹುದು. ಮುಂದಿನ ಜೀವನ ಆಗಿರಬಹುದು. ಹಣ ಅಂತಸ್ತು ಮೊದಲದವೂ ಆಗಿರಬಹುದು. ಹೀಗೆ ಒಂದಿಲ್ಲ ಒಂದು ಆದರ್ಶ rod model ಒಂದು ಸಿಕ್ಕಿರುತ್ತದೆ. ಅದಕ್ಕೆ ಅನುಗುಣ ಯೋಚನೆ ಸುಳಿತಾ ಇರುತ್ತವೆ.
ಶಾಸ್ತ್ರಗಳ ಸಂಪರ್ಕ - ಧರ್ಮದ ಪರಿಚಯ - ದೇವರ ಸಂಬಂಧ - ತನ್ನ ಹಿತ - ಇವುಗಳ ಪರಿಚಯ ಇರುವವರಿಗೆ ಶಾಸ್ತ್ರದ ಸಂರ್ಕ ಇರುವವನಿಗೆ - ಜ್ಙಾನ, ಧರ್ಮದ ಪರಿಚಯ ಇರುವವನಿಗೆ - ಪುಣ್ಯ, ದೇವರ ಸಂಬಂಧ ಬೆಳಿಸಿಕೊಂಡವನಿಗೆ - ಭಕ್ತಿ, ತನ್ನ ಹಿತ ಯೋಚಿಸುವವನಿಗೆ - ಸುಖ ಸಮೃದ್ಧಿ ಶಾಂತಿ ಇವುಗಳ ವಿಷಯದಲ್ಲಿ ಯೋಚನೆಗಳು ಸಾಗುತ್ತವೆ. ಈ ಯೋಚನೆಗೆಳೆ ಮುಕ್ತಿಮಾರ್ಗದ ಮೆಟ್ಟಲುಗಳು ಎಂದರೆ ತಪ್ಪಾಗದು. ಈ ಯೋಚನೆಗಳೇ ಅಧ್ಯಾತ್ಮದ ಒಳಗಿನ ವಿಕಾಸಕ್ಕೆ ಕಾರಣವಾಗುತ್ತದೆ. ಒಳಗಿನ ಒಂದು ವಿಕಾಸವೂ ಹೊರಗಿನ ಸಾವಿರ ವಿಕಾಸಗಳಿಗಿಂತಲೂ ಕೋಟಿಪಟ್ಟು ಮಿಗಿಲು.
ಯಾವ ವಿಚಾರ, ಹೇಗೆ ವಿಚಾರ, ಯಾವ ಯೋಚನೆ ಹೊರಗಟ್ಟುವದು, ಇನ್ಯಾವ ಯೋಚನೆ ಬಿಗಿದಪ್ಪುವದು, ನಮನಮಗೆ ಬಿಟ್ಟಿರುವದು.
*ಅವ್ಯಾಹತವಾದ ಯೋಚನೆಗಳನ್ನು ಬಡಿದೆಬ್ಬಿಸುವ ದೇವನಿಗೆ ಶರಣು ಹೋಗುವೆ. ಉತ್ತಮ ಆರೋಗ್ಯಭರಿತ ಗುರಿ ಗೋಲು ಮುಟ್ಟುವ, ಮೇಲ್ಸ್ತರಕ್ಕೆ ಕರೆದೊಯ್ಯುವ ಯೋಚನೆಗಳೇ ಅಮಿತವಾಗಿ ಪುಂಖಾನುಪುಂಖವಾಗಿ ಬರಲಿ - ನಿನಗೆ ಅನಂತ ನಮಗಳು.*
*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ. ಸಿರವಾರ.
Comments