*ಮೂಗು ಮುರುದೀತು......*

*ಮೂಗು ಮುರುದೀತು......*

ಮೊನ್ನೆ ಬೆಂಗಳೂರಿನಲ್ಲಿ ಜನರಿಲ್ಲದ ಪ್ರದೇಶದಲ್ಲಿ ಆಟೋಗೋಸ್ಕರ ನಿಂತಿದ್ದೆ. ಎಷ್ಟೋ ಹೊತ್ತು ಕಾಯ್ದಮೇಲೆ ಒಂದು ರಿಕ್ಷಾ ಬಂದಿತ್ತು ಮಾತಾಡ್ತಿದ್ದೆ, ಅಷ್ಟರಲ್ಲಿಯೇ ಒಬ್ಬರು ಗಾಡಿಯಮೇಲೆ ಬಂದು ಬನ್ನಿ ನಾ ಕರೆದೊಯ್ತೇನೆ ಎಂದು ನನ್ನನ್ನು ಹತ್ತಿಸಿಕೊಂಡೇ ಬಿಟ್ಟರು.  ಸರಿ ಎಂದು ನಾ ಹತ್ತಿದೆ ರಿಕ್ಷಾ ಹೋಯಿತು. ನಡಿಯರಿ ಹೊರಡೋನಾ ಎಂದೆ. ಉತ್ತರಾದಿಮಠಕ್ಕೇ ಅಲ್ಲವೆ ಹೊರಡೋಣ ಅಂದರು. ನಾನು  "ನನಗೆ ಚಿಕ್ಕಲಸಂದ್ರ ಹೋಗುವದಿದೆ" ಎಂದು ಹೇಳಿದೆ. ಅವರು "ಬಸವನ ಗುಡಿ ಹೋಗ್ತಿದೀರಾ ಅಂತ ಅಂದುಕೊಂಡೆ, ಸಾರಿ ಆಚಾರ್ಯರೇ ... " ಎಂದು ಹೇಳಿ ಹೊರಟು ಹೋದರು. ಅಂದು ಏಕಾದಶಿ ಬೇರೆ..  ತುಂಬ ಸುಸ್ತು ನನಗೆ ಮುಂದೆ ಆಟೋ ಸಿಗಲು ಸರಿಯಾಗಿ ಅರ್ಧಗಂಟೆ ಆಯ್ತು. ಈ ತರಹದ ಅನುಭವ ನಿಮಗೂ ಆಗಿರಬಹುದು, ನಿಮ್ಮ ಅಗತ್ಯ ಅರಿಯದೇ ಸಮಯ ಹಾಳು ಮಾಡಿರಬಹುದು, ಇಲ್ಲ ಆ ತರಹದ ಕೆಲಸ ನಾವೇ ಮಾಡಿರಲೂ ಬಹುದು. 

ಅವರ ಮನೋಭಾವ ನನಗೆ ಉಪಕಾರ ಮಾಡುವದೇ ಆಗಿತ್ತು. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಸ್ವಲ್ಪ ಗಡಿಬಿಡಿ ಮಾಡದೆ ಯೋಚಿಸಿ ಮಾತಾಡಿದ್ದರೆ ಇಬ್ಬರಿಗೂ ಹಿತವೇ ಆಗುತ್ತಿತ್ತು. 

*ಕಷ್ಟದಲ್ಲಿ ಇರುವವರಿಗೆ ನೆರವಾಗುವದು ಒಳ್ಳೆಯ ಗುಣವೆ..*

ಅವರಿಗೆ ನಿಮ್ಮ ನೆರವು ಇದೆಯೆ, ಇದ್ದರೆ ಯಾವ ತರಹದ್ದು ಎಂದು ಅರಿಯದೇ,  ಕಷ್ಟಕ್ಕೆ ನೆರವಾದರೆ ವಿನಾಕಾರಣ ಅವರ ಸಿಟ್ಟಿಗೆ ಗುರಿಯಾಗಬಹುದು. ಅವರ ಕೆಲಸವನ್ನು ಕೆಡಸಬಹುದು. ಇದರಿಂದ ಅವರಿಗೆ ತುಂಬ ತೊಂದರೆಯೂ ಆಗಬಹುದು. ಈ ತರಹದ ನಮ್ಮ ಉಪಕಾರ ಕೆಲವೊಮ್ಮೆ ನಿರುತ್ಪಾದಕ (unproductive)  ಸಂಪತ್ತಾಗಿ ಉಳಿಯಬಹುದು. ಈ ತರಹದ ಮೂಗು ತೂರುಸುವಿಕೆ ಮುಂದೊರೆದರೆ  ಅನತಿ ಕಾಲದಲ್ಲಿಯೇ ನಿಷ್ಪ್ರಯೋಜಕ (not performing asset)  ಸಂಪತ್ತಾಗಿ ಬಿಡುತ್ತದೆ. 

"ನಾವು ಕೊಡುವ ನೆರವು ಮತ್ತೊಬ್ಬರ ಸಮಯವನ್ನೂ ಹಾಳು ಮಾಡಬಾರದು, ಜೊತೆಗೆ ಅವರ ಬೆಳವಣಿಕೆಯನ್ನೂ ಕುಂಠಿತಗೊಳಿಸಬಾರದು." ಅಷ್ಟೇ ಅಲ್ಲದೆ  "ನಮ್ಮ ಉಪಕಾರದ ಸಮಯ ನಿರುಪಯುಕ್ತ ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು. ಅದೇ ಸಮಯ ಉಪಯುಕ್ತ ಕೆಲಸದಲ್ಲಿ ತೊಡಗಿಸ ಬಹುದಾಗಿತ್ತು ಎಂದು ನಮಗೆ ಅನ್ನಿಸಲೂ ಬಹುದು." 

ಅನಪೇಕ್ಷಿತವಾಗಿ ನೀವು ನೆರವು ನೀಡಲು ಧಾವಿಸಿದ ವ್ಯಕ್ತಿ ಮುಂಗೋಪಿಯಾಗಿದ್ದರೆ, ಅವರು ಆ ಸಿಟ್ಟನ್ನು ನಿಮ್ಮ ಮೇಲೇರೆಚಬಹುದು. ಅದರಿಂದ ನಿಮಗೂ ತೊಂದರೆ ಆಗಬಹುದು. 

*ಸಹೃದಯಿಗಳಾಗಿರುವದು ತಪ್ಪೆ....*

ಸಹೃದಯಿಗಳೇ ಆಗಿರಬೇಕು. "ಪರೋಪಕಾರಃ ಪುಣ್ಯಾಯ" ಪರೋಪಕಾರ ಮಾಹಾಪುಣ್ಯದ ಹಾದಿಯೇ. ಆದರೆ ಪೂರ್ವಾಪರ ಯೋಚಿಸದೆ, ಉಪಕಾರ ಮಾಡಲು ಹೊರಟರೆ ಉಪಕಾರಕ್ಕಿಂತು ಅಪಕಾರವೇ ಹೆಚ್ಚಾದೀತು. ಇದರಿಂದ ಅಪಹಾಸಕ್ಕೆ ಗುರಿಯಾಗಬಹುದು. 

*ಕುಂತಿ ಸೌಹಾರ್ದ...*

ಕುಂತಿಯ ಸೌಹಾರ್ದದ ಉಪಕಾರ ನಮಗೆ ಮಾದರಿ. ಏಕ ಚಕ್ರನರದಲ್ಲಿ ಇರುವಾಗ ಮನೆಯ ಬಾಡಗಿಕೊಟ್ಡ ಯಜಮಾನ ಮನೆಯಲ್ಲಿ ಏನೋ ದುಃಖದ ಆಕ್ರಂದನ ಕೇಳಿಸಿತು. ಭೀಮನ ಪ್ರಚೋದನೆಯಂತೆ ಆ ಮನೆಗೆ ಹೊರಟಳು. ಆದರೆ ಕೆಲಹೊತ್ತು ಬಾಗಿಲಲ್ಲಿ ನಿಂತು, ಏನಿದೆ.. ಏನಕ್ಕೆ ದುಃಖ.. ಯಾವ ವಿಷಯ.. ಏನು ಕಷ್ಟ.. ಈ ಕಷ್ಟಕ್ಕೆ ನಾನೇನು ಪರಿಹಾರ ಮಾಡಬಲ್ಲೆ... ನಾ ಹೇಗೆ ಯಶಸ್ವಿಯಾಗಬಲ್ಲೆ... ಹೀಗೆಲ್ಲ ಯೋಚಿಸಿಯೇ ಕಾಲಿಟ್ಟಲು. ಇವಳ ಉಪಕಾರದ ಹೆಜ್ಜೆ  ಬಕಾಸುರನ ಸಂಹಾರಕ್ಕೆ ಕಾರಣವಾಯಿತು. ಉಪಕೃತರಾದವರ ಮನಸ್ಸಿನ ಸಂತೋಷಕ್ಕೂ ಕಾರಣವಾಯಿತು. ಹೀಗೆ ಪೂರ್ವಾಪರ ಯೋಚಿಸಿಯೇ ಇನ್ನೊಬ್ಬರ ಉಪಕಾರದ ವಿಷಯದಲ್ಲಿ ಕಾಲಿಟ್ಟಲು, ಅತ್ಯಂತ ಯಶಸ್ವಿಯೂ ಆದಳು. ಇಲ್ಲವಾದಲ್ಲಿ ನಮ್ಮ ಮೂಗು ಮುರಿಯೋದು ನಿಶ್ಚಿತ 😅😅😂😂

*✍🏽ನ್ಯಾಸ...*
ಗೋಪಾಲದಾಸ.
ವಿಜಯಾಶ್ರಮ, ಸಿರವಾರ.

Comments

Anonymous said…
Your method of telling all in this piece of writing is really nice,
every one be able to easily know it, Thanks a lot. I am sure this piece of writing has touched all
the internet people, its really really fastidious paragraph on building up new web site.
Hello, i read your blog from time to time and i own a similar one and
i was just wondering if you get a lot of spam feedback?
If so how do you stop it, any plugin or anything you can recommend?

I get so much lately it's driving me mad so any help is very much appreciated.
http://www.cspan.net/

Popular posts from this blog

ನಾಗ ಸ್ತೋತ್ರಮ್

ಸತ್ಯಧ್ಯಾನ ವಿದ್ಯಾಪೀಠದ ವಿನೂತನ ಹೆಜ್ಜೆ -Madhwa Idol*

*ಚಾತುರ್ಮಾಸ್ಯ ಮಹೋತ್ಸವ - ಮುಂಬಯಿ*